ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲಿ '500 ವಿಕೆಟ್​' ಶಿಖರವೇರಿದ ಸ್ಪಿನ್​ ಮಾಂತ್ರಿಕ ಆರ್‌.ಅಶ್ವಿನ್ - ಸ್ಪಿನ್​ ಮಾಂತ್ರಿಕ​ ಅಶ್ವಿನ್

ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತ ತಂಡದ ಸ್ಪಿನ್​ ಮಾಂತ್ರಿಕ ರವಿಚಂದ್ರನ್​ ಅಶ್ವಿನ್ ಅವರು 500 ವಿಕೆಟ್​ ಪಡೆದ ಸಾಧನೆ ಮಾಡಿದ್ಧಾರೆ.

off-spinner-r-ashwin-scales-mount-500
ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ಗಳ ಶಿಖರವೇರಿದ ಸ್ಪಿನ್​ ಮಾಂತ್ರಿಕ​ ಅಶ್ವಿನ್
author img

By ETV Bharat Karnataka Team

Published : Feb 16, 2024, 5:23 PM IST

ರಾಜ್​ಕೋಟ್(ಗುಜರಾತ್​): ಭಾರತ ತಂಡದ ಸ್ಪಿನ್​ ಮಾಂತ್ರಿಕ ರವಿಚಂದ್ರನ್​ ಅಶ್ವಿನ್ ಟೆಸ್ಟ್​ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. 500 ವಿಕೆಟ್​ಗಳನ್ನು ಕಿತ್ತು ವಿಶ್ವದಾಖಲೆ ನಿರ್ಮಿಸಿದ್ದಾರೆ. ಅತೀ ಕಡಿಮೆ ಪಂದ್ಯ ಮತ್ತು ಎಸೆತ​ಗಳಲ್ಲಿ 500 ವಿಕೆಟ್​ಗಳ ಶಿಖರವೇರಿದ ವಿಶ್ವದ ಎರಡನೇ ಬೌಲರ್​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೂರನೇ ಪಂದ್ಯದಲ್ಲಿ ಬ್ಯಾಟರ್ ಝಾಕ್ ಕ್ರಾಲಿ ಅವರ ವಿಕೆಟ್​ ಪಡೆಯುವ ಮೂಲಕ ಅನುಭವಿ ಸ್ಪಿನ್ನರ್​ ಅಶ್ವಿನ್ 500 ವಿಕೆಟ್​ಗಳ ಗುರಿ ಮುಟ್ಟಿದರು. ಟೆಸ್ಟ್​ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ವಿಶ್ವದ 9ನೇ ಬೌಲರ್​ ಆಗಿದ್ದಾರೆ. ಭಾರತದ ಪರ ಅನಿಲ್​ ಕುಂಬ್ಳೆ ನಂತರ 500ರ ಗಡಿದಾಟಿದ ಎರಡನೇ 'ಸ್ಪಿನ್' ಜಾದೂಗಾರ ಅಶ್ವಿನ್. ಅದರಲ್ಲೂ, ಅತೀ ಕಡಿಮೆ ಪಂದ್ಯ ಹಾಗೂ ಎಸೆತ​ಗಳಲ್ಲಿ ಈ ಮೈಲಿಗಲ್ಲು ಸ್ಥಾಪಿಸಿದ ಜಗತ್ತಿನ ಎರಡನೇ ಬೌಲರ್​ ಎಂಬ ವಿಶೇಷ ಶ್ರೇಯಸ್ಸಿಗೂ ರವಿಚಂದ್ರನ್ ಭಾಜನರಾಗಿದ್ದಾರೆ.

ಆಸ್ಟ್ರೇಲಿಯಾದ ವೇಗಿ ಗ್ರೆನ್ ಮೆಕ್‌ಗ್ರಾತ್ ಟೆಸ್ಟ್​ ಕ್ರಿಕೆಟ್​ನಲ್ಲಿ 25,528 ಎಸೆತಗಳನ್ನು ಎಸೆದು 500 ವಿಕೆಟ್‌ಗಳನ್ನು ಪಡೆದು ಅಗ್ರ ಸ್ಥಾನದಲ್ಲಿದ್ಧಾರೆ. ಈಗ ಆರ್.ಅಶ್ವಿನ್ 25,714 ಬಾಲ್​ಗಳಲ್ಲಿ 500 ವಿಕೆಟ್​ ಕಿತ್ತು ಅತೀ ಕಡಿಮೆ ಎಸೆತಗಳಲ್ಲಿ ಈ ಸಾಧನೆ ತೋರಿದ ಎರಡನೇ ಬೌರಲ್​ ಆಗಿ ಹೊರಹೊಮ್ಮಿದ್ದಾರೆ. ನಂತರದಲ್ಲಿ ಇಂಗ್ಲೆಂಡ್​ನ ಮಧ್ಯಮ ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ (28,150 ಎಸೆತ), ಸ್ಟುವರ್ಟ್ ಬ್ರಾಡ್ (28,430 ಎಸೆತ) ಹಾಗೂ ವೆಸ್ಟ್​ ಇಂಡೀಸ್​ನ ಕರ್ಟ್ನಿ ವಾಲ್ಶ್ (28,833 ಎಸೆತ) ಸ್ಥಾನ ಹೊಂದಿದ್ದಾರೆ.

ಅದೇ ರೀತಿ ಅತೀ ಕಡಿಮೆ ಪಂದ್ಯಗಳಲ್ಲಿ 500 ವಿಕೆಟ್​ಗಳನ್ನು ಜಗತ್ತಿನ ಬೌಲರ್​ಗಳಲ್ಲಿ ಅಶ್ವಿನ್ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಶ್ರೀಲಂಕಾದ ಸ್ಪಿನ್​ ಮಾಂತ್ರಿಕ ಮುತ್ತಯ್ಯ ಮುರಳೀಧರನ್ 87 ಟೆಸ್ಟ್​ ಪಂದ್ಯಗಳಲ್ಲಿ ಐದುನೂರು ವಿಕೆಟ್​ ಪಡೆದು ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ಧಾರೆ. ಈಗ ಆರ್.ಅಶ್ವಿನ್ 98 ಪಂದ್ಯದಲ್ಲಿ ಈ ದಾಖಲೆ ಬರೆದಿದ್ದಾರೆ.

ಭಾರತದ ಮತ್ತೊಬ್ಬ ಬೌಲರ್​ ಕುಂಬ್ಳೆ 105 ಪಂದ್ಯಗಳಲ್ಲಿ 500 ವಿಕೆಟ್​ಗಳ ಸಾಧನೆ ಪೂರೈಸಿದ್ದರು. ಇದರ ನಂತರದ ಸ್ಥಾನಗಳನ್ನು ಕ್ರಮವಾಗಿ ಆಸ್ಟ್ರೇಲಿಯಾದ ದಿಗ್ಗಜ ಬೌಲರ್​ಗಳಾದ ಶೇನ್ ವಾರ್ನ್ (108 ಪಂದ್ಯ) ಮತ್ತು ಮೆಕ್‌ಗ್ರಾತ್ (110 ಪಂದ್ಯ) ಹೊಂದಿದ್ದಾರೆ. ಆರ್​.ಅಶ್ವಿನ್​ ತಮ್ಮ ಮೊದಲ 16 ಟೆಸ್ಟ್ ಪಂದ್ಯಗಳಲ್ಲಿ ಒಂಬತ್ತು ಬಾರಿ ಐದು ವಿಕೆಟ್​ಗಳ ಗೊಂಚಲು ಪಡೆದ ಸಾಧನೆ ಹೊಂದಿದ್ಧಾರೆ. ಅಲ್ಲದೇ, ವೇಗವಾಗಿ ಎಂದರೆ 54 ಪಂದ್ಯದಲ್ಲೇ 300 ವಿಕೆಟ್‌ಗಳ ಕ್ಲಬ್​ಗೆ ಸೇರಿದ್ದರು.

ಇದನ್ನೂ ಓದಿ: 3ನೇ ಟೆಸ್ಟ್​: ರೋಹಿತ್​ ಆಕರ್ಷಕ ಶತಕ, ಸಿಕ್ಸರ್​ನಲ್ಲಿ ಧೋನಿ ಹಿಂದಿಕ್ಕಿದ ಹಿಟ್​ಮ್ಯಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.