ETV Bharat / sports

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನೇತ್ರಾ ಕುಮನನ್ - Paris Olympics

author img

By ANI

Published : Apr 27, 2024, 5:14 PM IST

2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದ ಎರಡನೇ ಸೇಲಿಂಗ್ ಕೋಟಾವನ್ನು ನೇತ್ರಾ ಕುಮನನ್ ಅವರು ಪಡೆದುಕೊಂಡಿದ್ದಾರೆ

SAILING QUOTA  NETHRA KUMANAN SECURES  OLYMPICS
ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನೇತ್ರಾ ಕುಮನನ್

ಹಿರೆಸ್​ (ಫ್ರಾನ್ಸ್​): ಇಲ್ಲಿ ನಡೆದ ‘ಲಾಸ್ಟ್ ಚಾನ್ಸ್ ರೆಗಟ್ಟಾ’ ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ ನೇತ್ರಾ ಕುಮನನ್ ಪ್ಯಾರಿಸ್ ಒಲಿಂಪಿಕ್ ಕೋಟಾವನ್ನು ಪಡೆದುಕೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ನೇತ್ರಾ, ಮಹಿಳೆಯರ ಡಿಂಗಿ (ಐಎಲ್‌ಸಿಎ 6) ನಲ್ಲಿ ಭಾಗವಹಿಸುವ ಮೂಲಕ ‘ಎಮರ್ಜಿಂಗ್ ನೇಷನ್ಸ್ ಪ್ರೋಗ್ರಾಂ’ ಬ್ಯಾನರ್ ಅಡಿಯಲ್ಲಿ ಈ ಕೋಟಾವನ್ನು ಸಾಧಿಸಿದ್ದಾರೆ.

ಶುಕ್ರವಾರ ಫ್ರಾನ್ಸ್‌ನ ಹಿರೆಸ್‌ನಲ್ಲಿ ನಡೆದ ‘ಲಾಸ್ಟ್ ಚಾನ್ಸ್ ರೆಗಟ್ಟಾ’ ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ನೇತ್ರಾ ಕುಮನನ್ ಅವರು ಭಾರತಕ್ಕೆ ಎರಡನೇ ಪ್ಯಾರಿಸ್ ಒಲಿಂಪಿಕ್ಸ್ ಕೋಟಾವನ್ನು ಪಡೆದರು. ಮೂರು ವರ್ಷಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ನೇತ್ರಾ, ಮಹಿಳೆಯರ ಡಿಂಗಿ (ಐಎಲ್‌ಸಿಎ 6) ನಲ್ಲಿ ಭಾಗವಹಿಸುವಾಗ ‘ಎಮರ್ಜಿಂಗ್ ನೇಷನ್ಸ್ ಪ್ರೋಗ್ರಾಂ’ ಬ್ಯಾನರ್ ಅಡಿಯಲ್ಲಿ ಈ ಕೋಟಾವನ್ನು ಸಾಧಿಸಿದರು. ನೇತ್ರಾ 67 ನೆಟ್​ ಪಾಯಿಂಟ್‌ಗಳೊಂದಿಗೆ ಲೀಡರ್‌ಬೋರ್ಡ್‌ನಲ್ಲಿ ಐದನೇ ಸ್ಥಾನ ಪಡೆದರು.

ಈ ಕಾರ್ಯಕ್ರಮದ ಮೂಲಕ ಈ ಕ್ರೀಡೆಯಲ್ಲಿ ಹೆಚ್ಚು ಆಡದ ಆ ದೇಶಗಳ ನಾವಿಕರಿಗೆ ಸಹಾಯ ಮಾಡುವುದು ಕ್ರೀಡಾ ಆಡಳಿತ ಮಂಡಳಿ 'ವರ್ಲ್ಡ್ ಸೇಲಿಂಗ್' ಉದ್ದೇಶವಾಗಿದೆ. ಮಹಿಳೆಯರ ಡಿಂಗಿಯಲ್ಲಿ ರೊಮೇನಿಯಾದ ಎಬ್ರು ಬೊಲಾಟ್ (36 ನೆಟ್ ಪಾಯಿಂಟ್‌ಗಳು), ಸೈಪ್ರಸ್‌ನ ಮರಿಲೆನಾ ಮಕ್ರಿ (37 ನೆಟ್ ಪಾಯಿಂಟ್‌ಗಳು) ಮತ್ತು ಸ್ಲೊವೇನಿಯಾದ ಲಿನ್ ಪ್ಲಾಟಿಕೋಸ್ (54 ನೆಟ್ ಪಾಯಿಂಟ್‌ಗಳು) ಒಲಿಂಪಿಕ್ ಕೋಟಾವನ್ನು ಮೊದಲು ಪಡೆದುಕೊಂಡ ಅಗ್ರ ಮೂರು ಆಟಗಾರರು ಆಗಿದ್ದಾರೆ. ಆರು ಬಾರಿ ಒಲಿಂಪಿಯನ್ ಟಟಿಯಾನಾ ಡ್ರೊಜ್ಡೊವ್ಸ್ಕಯಾ (59 ನಿವ್ವಳ ಅಂಕಗಳು), ವೈಯಕ್ತಿಕ ಅಥ್ಲೀಟ್ ಆಗಿ ಸ್ಪರ್ಧಿಸಿದರು. ಇವರು ಲೀಡರ್‌ಬೋರ್ಡ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ್ರೂ ಸಹ ಪ್ಯಾರಿಸ್​ ಒಲಿಂಪಿಕ್​ ಕೋಟಾವನ್ನು ಕಳೆದುಕೊಂಡರು. ಪ್ಯಾರಿಸ್ 2024 ರ ಒಲಿಂಪಿಕ್ಸ್‌ಗಾಗಿ ನೌಕಾಯಾನದಲ್ಲಿ 'ಲಾಸ್ಟ್ ಚಾನ್ಸ್ ರೆಗಟ್ಟಾ' ಅಂತಿಮ ಅರ್ಹತಾ ಪಂದ್ಯಾವಳಿ ಇದಾಗಿದೆ.

ಓದಿ: ಝಲನಾ ಚಿರತೆ ಸಫಾರಿಗೆ ಭೇಟಿ ನೀಡಿದ ರಾಹುಲ್ ದ್ರಾವಿಡ್ ದಂಪತಿ - RAHUL DRAVID In JHALANA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.