ಡಂಬುಲ್ಲಾ(ಶ್ರೀಲಂಕಾ): ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ-20 ಏಷ್ಯಾಕಪ್ ಟೂರ್ನಿಯ ಪಂದ್ಯ ವೀಕ್ಷಣೆಗೆ ವ್ಹೀಲ್ಚೇರ್ನಲ್ಲಿ ಬಂದಿದ್ದ ದಿವ್ಯಾಂಗ ಬಾಲಕಿಯೊಬ್ಬಳಿಗೆ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದರು.
ಇಲ್ಲಿನ ಡಂಬುಲ್ಲಾ ಸ್ಟೇಡಿಯಂನಲ್ಲಿ ಶುಕ್ರವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಿತು. ಈ ಪಂದ್ಯ ನೋಡಲು ಗಾಲಿಕುರ್ಚಿಯಲ್ಲಿ ದಿವ್ಯಾಂಗ ಬಾಲಕಿ ಆದೀಶಾ ಹೆರಾತ್ ತನ್ನ ತಾಯಿಯೊಂದಿಗೆ ಬಂದಿದ್ದಳು. ಪಂದ್ಯ ಮುಗಿದ ಬಾಲಕಿಯನ್ನು ಭೇಟಿಯಾದ ಮಂಧಾನ, ಮೊಬೈಲ್ ಫೋನ್ ಉಡುಗೊರೆಯಾಗಿ ಕೊಟ್ಟರು. ಮೊಬೈಲ್ ನೀಡುತ್ತಿದ್ದಂತೆ ಬಾಲಕಿ ಮೊಗದಲ್ಲಿ ಮಂದಹಾಸ ಮೂಡಿತು. ಈ ವಿಶೇಷ ಕ್ಷಣದ ವಿಡಿಯೋವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದೆ.
Adeesha Herath's love for cricket brought her to the stadium, despite all the challenges. The highlight of her day? A surprise encounter with her favorite cricketer, Smriti Mandhana, who handed her a mobile phone as a token of appreciation 🥺
— Sri Lanka Cricket 🇱🇰 (@OfficialSLC) July 20, 2024
𝐌𝐨𝐦𝐞𝐧𝐭𝐬 𝐥𝐢𝐤𝐞 𝐭𝐡𝐞𝐬𝐞… pic.twitter.com/iqgL2RNE9v
''ಆದೀಶಾ ಹೆರಾತ್ ಕ್ರಿಕೆಟ್ ಪ್ರೀತಿ ಎಲ್ಲ ದೈಹಿಕ ಸವಾಲುಗಳ ನಡುವೆಯೂ ಆಕೆಯನ್ನು ಕ್ರೀಡಾಂಗಣಕ್ಕೆ ಕರೆತಂದಿದೆ'' ಎಂದು ಶ್ರೀಲಂಕಾ ಕ್ರಿಕೆಟ್ ತನ್ನ ಟ್ವೀಟ್ ಜೊತೆಗೆ ವಿಡಿಯೋ ಪೋಸ್ಟ್ ಮಾಡಿದೆ.
ಈ ವಿಡಿಯೋದಲ್ಲಿ ಮಂಧಾನ ಸಂತೋಷದಿಂದ ಬಾಲಕಿಯೊಂದಿಗೆ ಮಾತನಾಡುವುದನ್ನು ನೋಡಬಹುದು. ''ನಿಮ್ಮ ಹೆಸರೇನು?, ಕ್ರಿಕೆಟ್ ಇಷ್ಟನಾ?. ನೀವು ಇಂದಿನ ಪಂದ್ಯವನ್ನು ಆನಂದಿಸಿದ್ದೀರಾ?. ನಾನು ನಿಮಗಾಗಿ ಉಡುಗೊರೆ ತಂದಿದ್ದೇನೆ'' ಎಂದು ಹೇಳಿ, ಹೈ-ಫೈವ್ ಮಾಡಿ, ಫೋಟೋಗೆ ಪೋಸ್ ಕೊಟ್ಟರು.
ಇದರಿಂದ ಬಾಲಕಿ ಹಾಗೂ ಆಕೆಯ ತಾಯಿ ಹರ್ಷಗೊಂಡರು. ''ಮಗಳು ಪಂದ್ಯ ನೋಡಲು ಇಚ್ಛಿಸಿದ್ದರಿಂದ ಅನಿರೀಕ್ಷಿತವಾಗಿ ನಾವು ಇಲ್ಲಿಗೆ ಬಂದೆವು. ನಾವು ಭಾರತ ತಂಡದ ಮಂಧಾನ ಮೇಡಂ ಅವರನ್ನು ಭೇಟಿ ಮಾಡಿದ್ದೇವೆ. ನನ್ನ ಮಗಳು ಅವರಿಂದ ಫೋನ್ ಪಡೆದಳು. ಇದು ನಿಜಕ್ಕೂ ಅನಿರೀಕ್ಷಿತ ಕ್ಷಣ. ಈ ಉಡುಗೊರೆ ಸ್ವೀಕರಿಸಿದ ನನ್ನ ಮಗಳು ತುಂಬಾ ಅದೃಷ್ಟಶಾಲಿ'' ಎಂದು ತಾಯಿ ಹೇಳಿದರು.
ಶುಕ್ರವಾರದ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಇಂದು ಎರಡನೇ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ಸೆಣಸಲಿದೆ. ಈ ಪಂದ್ಯ ಗೆದ್ದರೆ, ಸೆಮಿಫೈನಲ್ ಪ್ರವೇಶಿಸಲಿದೆ.
ಇದನ್ನೂ ಓದಿ: ಮಹಿಳಾ ಏಷ್ಯಾಕಪ್‌ನಲ್ಲಿಂದು ಇಂಡಿಯಾ vs 'ಮಿನಿ ಇಂಡಿಯಾ'; ಗಾಯಾಳು ಶ್ರೇಯಾಂಕಾ ಔಟ್