ಹೈದರಾಬಾದ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ಅಭಿನಂದಿಸಿದ್ದಾರೆ. ಈ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗಿ ಆಯ್ಕೆ ಆಗಿರುವ ಜಯ್ ಶಾಗೆ ಗುಡ್ ಲಕ್ ಹೇಳಿದ್ದಾರೆ, ಈ ಸಂಬಂಧ ಮಮತಾ ಬ್ಯಾನರ್ಜಿ ಎಕ್ಸ್ ಹ್ಯಾಂಡಲ್‌ನಲ್ಲಿ ಭಾರತದ ಗೃಹ ಸಚಿವ ಅಮಿತ್ ಶಾಗೆ ರಹಸ್ಯ ಅಭಿನಂದನೆಯ ಪೋಸ್ಟ್ ಮಾಡಿದ್ದಾರೆ. ಈ ವಿಚಾರ ಈಗ ಭಾರಿ ಸದ್ದು ಮಾಡುತ್ತಿದೆ.
Congratulations, Union Home Minister!!
— Mamata Banerjee (@MamataOfficial) August 29, 2024
Your son has not become a politician, but has become the ICC Chairman - a post much much more important than most politicians'!! Your son has indeed become very very powerful and I congratulate you on his this most elevated achievement…
ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಮೂರನೇ ಅವಧಿಗೆ ನಿಲ್ಲದಿರಲು ನಿರ್ಧರಿಸಿದ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಕಾರ್ಯದರ್ಶಿಯೂ ಆಗಿದ್ದ 35 ವರ್ಷದ ಜಯ್ ಶಾ ಅವರು ಏಕೈಕ ಅರ್ಜಿದಾರರಾಗಿ ಉಳಿದಿದ್ದರು. ಹೀಗಾಗಿ ಅವರು ಐಸಿಸಿ ಹೊಸ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಶರದ್ ಪವಾರ್, ಜಗಮೋಹನ್ ದಾಲ್ಮಿಯಾ, ಶಶಾಂಕ್ ಮನೋಹರ್ ಮತ್ತು ಎನ್. ಶ್ರೀನಿವಾಸನ್ ನಂತರ ಜಯ್ ಶಾ ಐಸಿಸಿ ಅಧ್ಯಕ್ಷರಾದ ಕಿರಿಯ ಮತ್ತು ಐದನೇ ಭಾರತೀಯ ವ್ಯಕ್ತಿಯಾಗಿದ್ದಾರೆ.
ಮಮತಾ ಎಕ್ಸ್ ಹ್ಯಾಂಡಲ್ ಪೋಸ್ಟ್ನಲ್ಲೇನಿದೆ?: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ಕ್ರಿಪ್ಟಿಕ್ ಎಕ್ಸ್ ಪೋಸ್ಟ್, ರಾಜಕೀಯ ಪ್ರೇರಿತ ಚರ್ಚೆಗಳನ್ನು ಹುಟ್ಟುಹಾಕಿದೆ. "ಅಭಿನಂದನೆಗಳು, ಕೇಂದ್ರ ಗೃಹ ಸಚಿವರೇ!! ನಿಮ್ಮ ಮಗ ರಾಜಕಾರಣಿಯಾಗಲಿಲ್ಲ, ಆದರೆ ಐಸಿಸಿ ಅಧ್ಯಕ್ಷನಾಗಿದ್ದಾನೆ - ರಾಜಕಾರಣಿಗಳಿಗಿಂತ ಹೆಚ್ಚು ಮುಖ್ಯವಾದ ಪೋಸ್ಟ್!! ನಿಮ್ಮ ಮಗ ನಿಜವಾಗಿಯೂ ತುಂಬಾ ಶಕ್ತಿಶಾಲಿಯಾಗಿದ್ದಾನೆ ಮತ್ತು ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನಿಜಕ್ಕೂ ಉನ್ನತ ಸಾಧನೆ! ತಮ್ಮ X ಹ್ಯಾಂಡಲ್‌ನಲ್ಲಿ ಮಮತಾ ಬ್ಯಾನರ್ಜಿ ಈ ಪೋಸ್ಟ್ ಮಾಡಿದ್ದಾರೆ.
ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿಯು ನವೆಂಬರ್ 30 ರಂದು ಕೊನೆಗೊಳ್ಳಲಿದ್ದು, ಡಿಸೆಂಬರ್ 1ರಿಂದ ಜಯ್ ಶಾ ಐಸಿಸಿಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆ ಆದ ಬಳಿಕ BCCI ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಜಯ್ "T20 ಸ್ವಾಭಾವಿಕವಾಗಿ ರೋಮಾಂಚನಕಾರಿ ಸ್ವರೂಪವಾಗಿದ್ದರೂ, ಟೆಸ್ಟ್ ಕ್ರಿಕೆಟ್ ಉಳಿಯುವುದು ಅಷ್ಟೇ ಮುಖ್ಯವಾಗಿದೆ. ಇದು ನಮ್ಮ ಆಟದ ತಳಹದಿಯನ್ನು ರೂಪಿಸುವುದರಿಂದ ಪ್ರತಿಯೊಬ್ಬರಿಗೂ ಇದು ಆದ್ಯತೆಯಾಗಬೇಕಿದೆ "ಕ್ರಿಕೆಟಿಗರನ್ನು ದೀರ್ಘ ಸ್ವರೂಪದಲ್ಲಿ ಆಡುವಂತೆ ನಾವು ನೋಡಿಕೊಳ್ಳಬೇಕು ಮತ್ತು ನಮ್ಮ ಪ್ರಯತ್ನಗಳು ಈ ಗುರಿಯತ್ತ ಸಾಗುತ್ತವೆ ಎಂಬ ನಂಬಿಕೆಯಲ್ಲಿದ್ದೇವೆ ಎಂದು ಬಿಸಿಸಿಐ ತನ್ನ ಸಂದೇಶದಲ್ಲಿ ಹೇಳಿದೆ.