ಹೈದರಾಬಾದ್: ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ತೊರೆದು ಮುಂದಿನ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗೆ ಸೇರುತ್ತಾರೆ ಎಂಬ ವದಂತಿಗಳು ಸಮಾಜಿಕ ಜಾಲತಾಣಗಳಲ್ಲಿ ಕಳೆದ ಹಲವು ದಿನಗಳಿಂದ ಹರಿದಾಡುತ್ತಿದೆ. ಈ ವಿಷಯ ರಾಹುಲ್ ಗಮನಕ್ಕೂ ಬಂದಿದ್ದೂ ಇದಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಅಭಿಮಾನಿಯೊಬ್ಬರು ರಾಹುಲ್ರೊಂದಿಗೆ ಮಾತನಾಡಿರುವ ವಿಡಿಯೋವೊಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಆರ್‌ಸಿಬಿ ಅಭಿಮಾನಿಯೊಬ್ಬ ರಾಹುಲ್ ಜೊತೆ ಮಾತನಾಡುತ್ತ, ಮುಂದಿನ ಸೀಸನ್ನಲ್ಲಿ ಆರ್‌ಸಿಬಿ ಪರ ಆಡುತ್ತಿರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ರಾಹುಲ್ ಕೂಡ ನಗುತ್ತಲೇ ಉತ್ತರಿಸಿದ್ದಾರೆ. ಮೊದಲಿಗೆ ಆ ಯುವಕ 'ನಾನು ಆರ್‌ಸಿಬಿ ತಂಡದ ದೊಡ್ಡ ಅಭಿಮಾನಿಯಾಗಿದ್ದೇನೆ. ಬಹಳ ದಿನಗಳಿಂದ ಆರ್‌ಸಿಬಿಯನ್ನು ಅನುಸರಿಸುತ್ತಿದ್ದೇನೆ. ಈ ಹಿಂದೆ ನೀವೂ ಆರ್‌ಸಿಬಿ ಪರ ಆಡಿದ್ದೀರಿ. ಈಗ ವೈರಲ್ ಆಗುತ್ತಿರುವ ವದಂತಿಗಳ ಬಗ್ಗೆ ನಾನು ಏನನ್ನು ಮಾತನಾಡುವುದಿಲ್ಲ. ಆದರೆ, ನೀವು ಆರ್‌ಸಿಬಿ ಪರ ಆಡಲು ಬಯಸುತ್ತಿರಾ ಎಂದು ಬೆಂಗಳೂರಿನ ಅಭಿಮಾನಿ ರಾಹುಲ್‌ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ರಾಹುಲ್ ಕೂಡ ‘ಆಶಿಸೋಣ’ ಎಂದು ಉತ್ತರಿಸಿದ್ದಾರೆ. ಇದೀಗ ಈ ವಿಡಿಯೋ ಆರ್‌ಸಿಬಿ ಅಭಿಮಾನಿಗಳಿಂದ ವೈರಲ್ ಆಗಿದೆ. 'ರಾಹುಲ್‌ಗೆ ಆರ್‌ಸಿಬಿ ಫ್ರಾಂಚೈಸಿ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ' ಮತ್ತು 'ರಾಹುಲ್ ದಯವಿಟ್ಟು ಆರ್‌ಸಿಬಿಗೆ ಬನ್ನಿ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.
I'm happy that KL Rahul knows about the rumours that are going around for him & RCB.
— Kunal Yadav (@Kunal_KLR) September 14, 2024
Please boss change your IPL team! 🙏❤️ pic.twitter.com/Os06Uj39gQ
ಏತನ್ಮಧ್ಯೆ, 2013ರಲ್ಲಿ, ರಾಹುಲ್ ಆರ್‌ಸಿಬಿ ತಂಡದೊಂದಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಅದರ ನಂತರ ಅವರು 2014 ಮತ್ತು 2015ರ ಋತುಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು. ಬಳಿಕ 2016ರಲ್ಲಿ ಮತ್ತೆ ಆರ್‌ಸಿಬಿಗೆ ಸೇರ್ಪಡೆಗೊಂಡಿದ್ದರು, ಆದರೆ ಗಾಯದ ಕಾರಣ 2017 ಆವೃತ್ತಿಯಲ್ಲಿ ಆಡಿರಲಿಲ್ಲ. ಇದಾದ ಬಳಿಕ 2018ರಲ್ಲಿ ಆರ್‌ಸಿಬಿ ಅವರನ್ನು ತಂಡದಿಂದ ಕೈಬಿಟ್ಟಿತ್ತು. ನಂತರ ಪಂಜಾಬ್ ಕಿಂಗ್ಸ್ ಖರೀದಿಸಿತ್ತು. 2021ರ ವರೆಗೂ ಪಂಜಾಬ್ನಲ್ಲಿದ್ದ ರಾಹುಲ್ ನಂತರ ಲಕ್ನೋ ಫ್ರಾಂಚೈಸಿಗೆ ಸೇರಿದ್ದರು.
Sanjiv Goenka trashed KL Rahul on live stream, he is the same guy who insulted and sacked MSD mid season!!
— Rajiv (@Rajiv1841) May 8, 2024
Good, KL Rahul deserves it..... pic.twitter.com/RFCpnWCsJp
ಆದಾಗ್ಯೂ, 2024ರಲ್ಲಿ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ನಂತರ, ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಅವರು ಕ್ಯಾಪ್ಟನ್ ರಾಹುಲ್ ವಿರುದ್ಧ ಕ್ಯಾಮರಾಗಳ ಮುಂದೆ ಅಸಮಾಧಾನ ಹೊರಹಾಕಿದ್ದರು. ಎಲ್ಲರ ಸಮ್ಮುಖದಲ್ಲಿಯೇ ರಾಹುಲ್ನೊಂದಿಗೆ ಸಿಟ್ಟಿನಿಂದ ಮಾತನಾಡಿದ್ದರು. ಅಂದಿನಿಂದ ರಾಹುಲ್ ತಂಡವನ್ನು ಬದಲಾಯಿಸಲಿದ್ದಾರೆ ಎಂಬ ವದಂತಿಗಳು ಹರಿದಾಡಲಾರಂಭಿಸಿವೆ.