ETV Bharat / sports

ಐಪಿಎಲ್​ ಸೂಪರ್​ ಸಂಡೆ: ಆರ್​ಸಿಬಿ vs ಗುಜರಾತ್​ ಟೈಟಾನ್ಸ್​, ಸಿಎಸ್​ಕೆ vs ಎಸ್​ಆರ್​ಹೆಚ್​ ಸೆಣಸು - IPL Super Sunday - IPL SUPER SUNDAY

ಐಪಿಎಲ್​ನಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿವೆ. ಗುಜರಾತ್​ನ ಮೋದಿ ಕ್ರೀಡಾಂಗಣದಲ್ಲಿ ಆರ್​ಸಿಬಿ-ಜಿಟಿ, ಚೆನ್ನೈನ ಚೆಪಾಕ್​ನಲ್ಲಿ ಸಿಎಸ್​ಕೆ ಮತ್ತು ಎಸ್‌ಆರ್​ಹೆಚ್​ ಎದುರಾಗಲಿವೆ.

ಐಪಿಎಲ್​
ಐಪಿಎಲ್​
author img

By ETV Bharat Karnataka Team

Published : Apr 28, 2024, 11:38 AM IST

ಚೆನ್ನೈ/ಅಹಮದಾಬಾದ್​: ಐಪಿಎಲ್​ನಲ್ಲಿ ಇಂದು ಸೂಪರ್​ ಸಂಡೆ ಧಮಾಕಾ. ಎರಡು ಪಂದ್ಯಗಳು ನಡೆಯಲಿದ್ದು, ಕ್ರಿಕೆಟ್​​ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಎದುರಾದರೆ, ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಸೆಣಸಾಡಲಿವೆ.

ಸೋಲು-ಗೆಲುವಿನ ಸುಳಿಯಲ್ಲಿ ಗುಜರಾತ್​: ಶುಭ್​​ಮನ್​ ಗಿಲ್​ ನಾಯಕತ್ವದ ಗುಜರಾತ್​ ಟೈಟಾನ್ಸ್​ ತಂಡ ಸೋಲು ಗೆಲುವಿನ ಸುಳಿಯಲ್ಲಿದೆ. ಒಂದು ಪಂದ್ಯ ಗೆದ್ದರೆ, ಇನ್ನೊಂದು ಸೋತಿದೆ. ಆಡಿರುವ 9 ಪಂದ್ಯಗಳಲ್ಲಿ 4 ರಲ್ಲಿ ಗೆದ್ದಿದೆ. 5 ಪಂದ್ಯಗಳನ್ನು ಕೈಚೆಲ್ಲಿದೆ. ತಂಡದಲ್ಲಿ ಶುಭ್​ಮನ್​ ಗಿಲ್​, ಡೇವಿಡ್​ ಮಿಲ್ಲರ್​, ಅಜ್ಮತುಲ್ಲಾ ಓಮರ್ಝಾಯಿ, ರಶೀದ್​ ಖಾನ್​, ಮೋಹಿತ್​ ಶರ್ಮಾರಂತಹ ಆಟಗಾರರಿದ್ದರೂ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ.

ಅದರಲ್ಲೂ ಕಳೆದ ವರ್ಷ ರನ್​ ಶಿಖರವನ್ನೇ ಕಟ್ಟಿದ್ದ ಶುಭ್​​ಮನ್​​ಗಿಲ್ ಈ ಋತುವಿನಲ್ಲಿ 2 ಅರ್ಧಶತಕ ಮಾತ್ರ ಬಾರಿಸಿದ್ದಾರೆ. ಮೂರು ಬಾರಿ ಒಂದಂಕಿಗೆ ಔಟ್​ ಆಗಿದ್ದಾರೆ. ನಾಯಕನ ವೈಫಲ್ಯದ ಜೊತೆಗೆ ಉಳಿದ ಆಟಗಾರರೂ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಆಫ್ಘಾನಿಸ್ತಾನ ಸೆನ್ಸೇಷನ್​ ರಶೀದ್​ ಖಾನ್​ ಸ್ಪಿನ್​ ಜಾದೂ ಕೂಡ ಕೆಲಸ ಮಾಡುತ್ತಿಲ್ಲ. ಮಿಲ್ಲರ್​ ಕಿಲ್ಲರ್​ ಆಗಿ ಪರಿಣಾಮ ಬೀರಿಲ್ಲ. ಮಾಜಿ ಚಾಂಪಿಯನ್​ ತಂಡ ಪ್ಲೇಆಫ್​ಗೇರಲು ಮುಂದಿನ ಎಲ್ಲ ಪಂದ್ಯಗಳಲ್ಲಿ ಗೆಲ್ಲಬೇಕಿದೆ.

ಇನ್ನೂ, ಕಳೆದ ಪಂದ್ಯದಲ್ಲಿ ದೈತ್ಯ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಂಡಿರುವ ಆರ್​ಸಿಬಿ ಗುಜರಾತ್​ ವಿರುದ್ಧ ಅಹಮದಾಬಾದ್​ನಲ್ಲಿ ಗೆಲ್ಲುವ ಉತ್ಸಾಹದಲ್ಲಿದೆ. ಇದು ಇತ್ತಂಡಗಳ ಮೊದಲ ಪೈಪೋಟಿಯಾಗಿದೆ. ವಿರಾಟ್ ಕೊಹ್ಲಿ, ರಜತ್​ ಪಾಟೀದಾರ್​, ವಿಲ್​ ಜಾಕ್ಸ್​ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ.

ಸನ್​- ಕಿಂಗ್​ ಚಾಲೆಂಜ್​: ಎರಡನೇ ಪಂದ್ಯದಲ್ಲಿ, ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಈ ಋತುವಿನ ಡೇಂಜರಸ್​ ತಂಡವಾಗಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು ಚೆನ್ನೈನಲ್ಲಿ ಎದುರಿಸಲಿದೆ. ಟ್ರಾವಿಸ್​ ಹೆಡ್​, ಅಭಿಷೇಕ್​ ಶರ್ಮಾ ಪವರ್​ಪ್ಲೇನಲ್ಲಿ ಅಬ್ಬರಿಸುತ್ತಿದ್ದಾರೆ. ಹೆನ್ರಿಕ್​ ಕ್ಲಾಸಿನ್​, ನಿತೀಶ್​ರೆಡ್ಡಿ, ಆ್ಯಡಂ ಮಾರ್ಕ್ರಮ್​, ಶಹಬಾಜ್​ ಅಹ್ಮದ್​ ಮಧ್ಯಮ ಕ್ರಮಾಂಕದಲ್ಲಿ ನೆಲೆಯೂರಿದ್ದಾರೆ. ಬೌಲಿಂಗ್​ನಲ್ಲಿ ನಟರಾಜನ್​, ನಾಯಕ ಪ್ಯಾಟ್​ ಕಮಿನ್ಸ್​, ಮಯಾಂಕ್​ ಮಾರ್ಕಂಡೆ ರನ್​ ಬಿಟ್ಟುಕೊಡುತ್ತಿಲ್ಲ. ತಂಡ ಆಡಿರುವ 8 ಪಂದ್ಯಗಳಲ್ಲಿ 5 ರಲ್ಲಿ ಗೆದ್ದು, ಮೂರನೇ ಕ್ರಮಾಂಕದಲ್ಲಿದೆ.

ಆರಂಭದಲ್ಲಿ ಉತ್ತಮ ಆಟವಾಡಿದ ಚೆನ್ನೈ ಬಳಿಕ ಲಯ ಕಳೆದುಕೊಂಡು ಪಾಯಿಂಟ್​ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ. ನಾಯಕ ಋತುರಾಜ್​ ಗಾಯಕ್ವಾಡ್​, ಶಿವಂ ದುಬೆ, ರವೀಂದ್ರ ಜಡೇಜಾ, ಎಂ.ಎಸ್.ಧೋನಿ ಮಿಂಚುತ್ತಿದ್ದಾರೆ. ಬೌಲಿಂಗ್​ನಲ್ಲಿ ಮುಸ್ತಾಫಿಜರ್​ ರೆಹಮಾನ್​, ಮತೀಶ್​ ಪತಿರಾನ, ತುಷಾರ್​ ದೇಶಪಾಂಡೆ ಮತ್ತಷ್ಟು ಪ್ರಭಾವಿಯಾಗಬೇಕಿದೆ. ತಂಡ ಆಡಿರುವ 8 ರಲ್ಲಿ 4 ಗೆದ್ದು, 4 ಸೋತಿದೆ.

ಪಂದ್ಯ ಎಲ್ಲಿ, ಯಾವಾಗ: ಆರ್​ಸಿಬಿ ಮತ್ತು ಗುಜರಾತ್​, ಮಧ್ಯಾಹ್ನ 3.30ಕ್ಕೆ, ಅಹಮದಾಬಾದ್​

ಸಿಎಸ್​ಕೆ ಮತ್ತು ಎಸ್​ಆರ್​ಹೆಚ್​, ಸಂಜೆ 7.30ಕ್ಕೆ, ಚೆನ್ನೈ

ಇದನ್ನೂ ಓದಿ: ಸಂಜು ಸ್ಯಾಮ್ಸನ್, ಧ್ರುವ್ ಜುರೆಲ್ ಜೊತೆಯಾಟದಿಂದ ರಾಜಸ್ಥಾನಕ್ಕೆ ಗೆಲುವು - IPL 2024 RR Beat LSG

ETV Bharat Logo

Copyright © 2024 Ushodaya Enterprises Pvt. Ltd., All Rights Reserved.