ETV Bharat / sports

ಐಪಿಎಲ್​: ಮುಂಬೈ ಇಂಡಿಯನ್ಸ್​ಗೆ 158 ರನ್​ಗಳ ಗುರಿ ನೀಡಿದ ನೈಟ್​ ರೈಡರ್ಸ್​ - KKR vs MI

ಇಂದಿನ ಐಪಿಎಲ್​​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವು ಮುಂಬೈ ಇಂಡಿಯನ್ಸ್​ಗೆ 158 ರನ್​​ಗಳ​ ಗೆಲುವಿನ ಗುರಿ ನೀಡಿದೆ.

ipl
ಕೋಲ್ಕತ್ತಾ ನೈಟ್​ ರೈಡರ್ಸ್ (IANS)
author img

By ETV Bharat Karnataka Team

Published : May 11, 2024, 11:03 PM IST

ಕೋಲ್ಕತ್ತಾ: ಇಲ್ಲಿನ ಈಡನ್​ ಗಾರ್ಡನ್ಸ್​ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್​ 2024ರ 60ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವು ಮುಂಬೈ ಇಂಡಿಯನ್ಸ್​ಗೆ 158 ರನ್​ ಗೆಲುವಿನ ಗುರಿ ನೀಡಿದೆ. ಆಟಕ್ಕೆ ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪಂದ್ಯವನ್ನು ತಲಾ 16 ಓವರ್​​ಗಳಿಗೆ ಸೀಮಿತಗೊಳಿಸಲಾಗಿದೆ.

ಟಾಸ್​ ಗೆದ್ದ ಮುಂಬೈ ತಂಡ ನೈಟ್​ ರೈಡರ್ಸ್​ನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಮೈದಾನಕ್ಕಿಳಿದ ಕೋಲ್ಕತ್ತಾ ಆರಂಭದಲ್ಲೇ ಆಘಾತ ಎದುರಿಸಿತು. ಕೇವಲ 10 ರನ್​​ ಗಳಿಸುವಷ್ಟರಲ್ಲೇ ಸ್ಫೋಟಕ ಆರಂಭಿಕರ ವಿಕೆಟ್​ ಕಳೆದುಕೊಂಡಿತು. ಫಿಲಿಪ್​ ಸಾಲ್ಟ್​​ 6 ರನ್​ಗೆ ಔಟಾದರೆ, ಸುನೀಲ್​ ನರೈನ್​ ಶೂನ್ಯಕ್ಕೆ ಪೆವಿಲಿಯನ್​ಗೆ ಮರಳಿದರು. ಇವರಿಬ್ಬರ ಬೆನ್ನಲ್ಲೇ ನಾಯಕ ಶ್ರೇಯಸ್​ ಅಯ್ಯರ್​ ಕೂಡ 7 ರನ್​ಗೆ ಔಟಾದರು. 40 ರನ್​ಗೆ ಮೂರು ವಿಕೆಟ್​ ಪತನವಾಗಿದ್ದವು.

ಬಳಿಕ ಒಂದಾದ ವೆಂಕಟೇಶ್​ ಅಯ್ಯರ್ (42)​ ಹಾಗೂ ನಿತೀಶ್​ ರಾಣಾ (33) ಸಮಯೋಚಿತ ಬ್ಯಾಟಿಂಗ್​ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ತಂಡವು 77 ರನ್​ ಗಳಿಸಿದ್ದಾಗ ವೆಂಕಟೇಶ್​ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್​ ಕಳೆದುಕೊಂಡರು. ಬಳಿಕ ಬಂದ ಬಿಗ್​ ಹಿಟ್ಟರ್​ ಅಂಡ್ರೆ ರಸೆಲ್​ 14 ಎಸೆತಗಳಲ್ಲಿ 24 ರನ್​ ಬಾರಿಸಿ ತಂಡಕ್ಕೆ ನೆರವಾದರು.

ಕೊನೆಯಲ್ಲಿ ಫಿನಿಶರ್​ ರಿಂಕು ಸಿಂಗ್​ 12 ಎಸೆತಗಳಲ್ಲಿ 20 ಹಾಗೂ ರಮಣದೀಪ್​ ಸಿಂಗ್ 8 ಬಾಲ್​ಗಳಲ್ಲಿ ಅಜೇಯ 17 ರನ್​​ಗಳ ಅಬ್ಬರದ ಬ್ಯಾಟಿಂಗ್​ ನೆರವಿನಿಂದ ನೈಟ್​ ರೈಡರ್ಸ್​ ತಂಡ ನಿಗದಿತ 16 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 157 ರನ್ ಬಾರಿಸಿದೆ. ಮುಂಬೈ ಇಂಡಿಯನ್ಸ್​ ಪರ ಪಿಯೂಷ್​ ಚಾವ್ಲಾ 28 ರನ್​ಗೆ 2 ಹಾಗೂ ಬುಮ್ರಾ 39ಕ್ಕೆ 2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್​ ಎನಿಸಿಕೊಂಡರು. ಇನ್ನುಳಿದಂತೆ ನುವಾನ್​ ತುಷಾರಾ ಹಾಗೂ ಅನ್ಸುಲ್​ ಕಂಬೋಜ್​ ತಲಾ ಒಂದು ವಿಕೆಟ್​ ಕಿತ್ತರು.

ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್​ಗೆ ಇದೊಂದು ಔಪಚಾರಿಕ ಪಂದ್ಯವಾಗಿದೆ. ಇನ್ನೊಂದೆಡೆ, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಕೋಲ್ಕತ್ತಾಗೆ ಪ್ಲೇ ಆಪ್​ಗೆ ಲಗ್ಗೆ ಇಡಲು ಗೆಲುವು ಪ್ರಮುಖವಾಗಿದೆ.

ಇದನ್ನೂ ಓದಿ: ಸ್ಲೋ ಓವರ್ ರೇಟ್: ಆರ್​ಸಿಬಿ ವಿರುದ್ಧ ನಾಳೆ ನಡೆಯಲಿರುವ ಪಂದ್ಯದಿಂದ ರಿಷಭ್​​ ಔಟ್​, 30 ಲಕ್ಷ ರೂ. ದಂಡ - Rishabh Pant Suspend

ETV Bharat Logo

Copyright © 2024 Ushodaya Enterprises Pvt. Ltd., All Rights Reserved.