ETV Bharat / sports

ಮತ್ತೊಂದು 'ಸನ್​'ಸ್ಟ್ರೋಕ್​ ತಪ್ಪಿಸಿಕೊಳ್ಳುತ್ತಾ ಆರ್​ಸಿಬಿ?: ಹೈದರಾಬಾದ್​​ಗೆ ಗೆದ್ದು ಪ್ಲೇಆಫ್​ ತಲುಪುವ ಗುರಿ - RCB vs SRH Match - RCB VS SRH MATCH

ಉಪ್ಪಳದ ರಾಜೀವ್​ ಗಾಂಧಿ ಕ್ರೀಡಾಂಗಣದಲ್ಲಿ ಇಂದು ಸಂಜೆ ಹೈದರಾಬಾದ್​ ಮತ್ತು ಬೆಂಗಳೂರು ತಂಡಗಳು ಎದುರಾಗಲಿದ್ದು, ಮತ್ತೊಂದು ಹೈವೋಲ್ಟೇಜ್​ ಪಂದ್ಯ ನಿರೀಕ್ಷೆ ಇದೆ.

ಮತ್ತೊಂದು 'ಸನ್​'ಸ್ಟ್ರೋಕ್​ ತಪ್ಪಿಸಿಕೊಳ್ಳುತ್ತಾ ಆರ್​ಸಿಬಿ

author img

By ETV Bharat Karnataka Team

Published : Apr 25, 2024, 4:18 PM IST

ಹೈದರಾಬಾದ್: ಹೈದರಾಬಾದ್​ನಲ್ಲಿ ಬಿಸಿಲ ತಾಪ ನೆತ್ತಿ ಸುಡುತ್ತಿದ್ದರೆ, ಇನ್ನೊಂದೆಡೆ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡ ರನ್​ ಮಳೆಯನ್ನೇ ಹರಿಸುತ್ತಿದೆ. ಇಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಮತ್ತು ಸನ್​ರೈಸರ್ಸ್​ ಎರಡನೇ ಬಾರಿಗೆ ಎದುರಾಗಲಿದ್ದು ಮತ್ತೊಂದು ಹೈವೋಲ್ಟೇಜ್​ ಪಂದ್ಯವನ್ನು ಕ್ರಿಕೆಟ್​ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್​ಸಿಬಿಯನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆಂಡಾಡಿದ್ದ ಹೈದರಾಬಾದ್​, ಐಪಿಎಲ್​ ಇತಿಹಾಸದಲ್ಲಿಯೇ ಸರ್ವಾಧಿಕ ರನ್​ ದಾಖಲೆ ನಿರ್ಮಿಸಿತ್ತು. ಇಂದು ತನ್ನ ತವರು ಮೈದಾನವಾದ ರಾಜೀವ್​ ಗಾಂಧಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಎಲ್ಲರ ಕಣ್ಣು ಹೈದರಾಬಾದ್​ ತಂಡದ ಮೇಲಿದೆ.

ಬ್ಯಾಟರ್ಸ್​​ vs​ ಬ್ಯಾಟರ್ಸ್​: ಹೈದರಾಬಾದ್​ ಮತ್ತು ಬೆಂಗಳೂರು ತಂಡಗಳು ಬ್ಯಾಟರ್​ಗಳನ್ನೇ ನೆಚ್ಚಿಕೊಂಡಿವೆ. ಅದರಲ್ಲೂ ಎಸ್​ಆರ್​ಹೆಚ್​​ ತಂಡದ ಅಭಿಷೇಕ್​ ಶರ್ಮಾ, ಟ್ರಾವಿಸ್​ ಹೆಡ್​, ಹೆನ್ರಿಕ್​ ಕ್ಲಾಸಿನ್​ ಈ ಋತುವಿನಲ್ಲಿ ಅದ್ಭುತವಾಗಿ ಬ್ಯಾಟ್​ ಬೀಸುತ್ತಿದ್ದಾರೆ. ಒಬ್ಬರು ತಪ್ಪಿದರೆ ಮತ್ತೊಬ್ಬರು ಅಬ್ಬರಿಸುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಐಪಿಎಲ್​ನ ಅತ್ಯಧಿಕ ರನ್​ ದಾಖಲೆ ನಿರ್ಮಿಸಿದ್ದಾರೆ. ಮೊದಲು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸಿಡಿದಿದ್ದರೆ, ಬಳಿಕ ಆರ್​ಸಿಬಿ ವಿರುದ್ಧ ಗುಡುಗಿ ತನ್ನದೇ ದಾಖಲೆಯನ್ನು ಮುರಿದಿತ್ತು.

ಹೈದರಾಬಾದ್​ ತಂಡದಲ್ಲೂ ಬೌಲಿಂಗ್​ ನೀರಸವಾಗಿದೆ. ಮೊದಲ ಮುಖಾಮುಖಿಯಲ್ಲಿ 287 ರನ್​ ಗಳಿಸಿದ್ದರೂ, ಆರ್​ಸಿಬಿ ಗುರಿ ಬೆನ್ನತ್ತಿ 262 ರನ್​ ಬಾರಿಸಿತ್ತು. ಹೀಗಾಗಿ ಭುವನೇಶ್ವರ್​ ಕುಮಾರ್​, ನಟರಾಜನ್​, ನಾಯಕ ಪ್ಯಾಟ್​​ ಕಮಿನ್ಸ್​ ಬೌಲಿಂಗ್​ ಮೇಲೆ ದೊಡ್ಡ ಜವಾಬ್ದಾರಿ ಇದೆ.

ಬೌಲಿಂಗ್​ ಪಡೆಯನ್ನೇ ಮರೆತ ಆರ್​ಸಿಬಿ: ಈ ಸೀಸನ್​ನಲ್ಲಿ ಅತಿ ಕಳಪೆ ಆಟವಾಡುತ್ತಿರುವ ಆರ್​ಸಿಬಿ ತನ್ನ ಬೌಲಿಂಗ್​ ಪಡೆಯನ್ನು ಸಂಪೂರ್ಣವಾಗಿ ಮರೆತಂತಿದೆ. ಎಷ್ಟೇ ಗುರಿ ನೀಡಿದರೂ ಅದನ್ನು ಬೌಲರ್‌ಗಳು ಉಳಿಸಿಕೊಳ್ಳುತ್ತಿಲ್ಲ. ಮೊದಲು ಫೀಲ್ಡಿಂಗ್​ ಮಾಡಿದರೂ, ಕನಿಷ್ಠ 200 ಕ್ಕೂ ಕಡಿಮೆ ರನ್​ ಬಿಟ್ಟು ಕೊಡುತ್ತಿದ್ದಾರೆ. ಹೀಗಾಗಿ ಆರ್​ಸಿಬಿ ಪೂರ್ಣವಾಗಿ ಬ್ಯಾಟಿಂಗ್​ ಅವಲಂಬಿಸಿದೆ. ಸದ್ಯ ಟೂರ್ನಿಯ ಅತಿಹೆಚ್ಚು ಗಳಿಸಿದವರಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್​ ಕೊಹ್ಲಿ, ನಾಯಕ ಡು ಪ್ಲೆಸಿಸ್​, ಕಳೆದ ಪಂದ್ಯದಲ್ಲಿ ಮಿಂಚಿದ್ದ ರಜತ್​ ಪಾಟೀದಾರ್​ ಜವಾಬ್ದಾರಿ ಹೊರಬೇಕಿದೆ.

ಆರ್​ಸಿಬಿ ಮುಂದಿನ ಸ್ಟಾರ್​ ಎನಿಸಿಕೊಂಡಿರುವ ವಿಲ್​ ಜಾಕ್ಸ್​ ಮಿಂಚುತ್ತಿದ್ದಾರೆ. ದಿನೇಶ್​ ಕಾರ್ತಿಕ್​ ತಮ್ಮ ಖದರ್​ ಮುಂದುವರಿಸಬೇಕು. ತಂಡ ಆಡಿರುವ 8 ಪಂದ್ಯಗಳಲ್ಲಿ ಸತತ 6 ಸೇರಿ 7 ರಲ್ಲಿ ಸೋಲು ಕಂಡು ಪಾಯಿಂಟ್ ಪಟ್ಟಿಯಲ್ಲಿ ಕೊನೆಯಲ್ಲಿದೆ. ಬಹುತೇಕ ಪ್ಲೇಆಫ್​ನಿಂದ ಹೊರಬಿದ್ದಿರುವ ತಂಡ ಉಳಿದ ಪಂದ್ಯಗಳನ್ನು ಮುಂದಿನ ವರ್ಷದ ಮೆಗಾ ಹರಾಜಿಗೂ ಮುನ್ನ ಆಟಗಾರರ ಸತ್ವ ಪರೀಕ್ಷೆಗಾಗಿ ಆಡಬೇಕಿದೆ.

ಮುಖಾಮುಖಿ: ಇತ್ತಂಡಗಳು ಈವರೆಗೂ 24 ಬಾರಿ ಎದುರಾಗಿದ್ದು, ಅದರಲ್ಲಿ ಆರ್​ಸಿಬಿ 10 ರಲ್ಲಿ ಗೆದ್ದರೆ, ಹೈದರಾಬಾದ್​ 13 ರಲ್ಲಿ ಜಯಿಸಿದೆ. 1 ಪಂದ್ಯ ಫಲಿತಾಂಶ ಬಂದಿಲ್ಲ.

ಪಿಚ್​ ಹೇಗಿದೆ?: ಈ ಪಿಚ್​​ನಲ್ಲಿ ಹೈದರಾಬಾದ್​ ಅಬ್ಬರಿಸಿ ಬೊಬ್ಬಿರಿದಿದೆ. ಮುಂಬೈ ಇಂಡಿಯನ್ಸ್​ ವಿರುದ್ಧ 277 ರನ್​ ದಾಖಲಿಸಿತ್ತು. ಮುಂಬೈ ಕೂಡ ಸಿಡಿದು 246 ರನ್​ ಗಳಿಸಿತ್ತು. ಪಿಚ್​ ಸಂಪೂರ್ಣವಾಗಿ ಬ್ಯಾಟರ್​ಗಳಿಗೆ ಹೇಳಿ ಮಾಡಿಸಿದಂತಿದೆ. ನಗರದಲ್ಲಿ ಬಿಸಿಲ ತಾಪದ ನಡುವೆ ರನ್​ ಮಳೆ ಸುರಿಯುವ ಕುತೂಹಲ ಅಭಿಮಾನಿಗಳಲ್ಲಿದೆ.

ಸಮಯ: ಸಂಜೆ 7.30 ಕ್ಕೆ, ರಾಜೀವ್​ ಗಾಂಧಿ ಕ್ರೀಡಾಂಗಣ, ಹೈದರಾಬಾದ್

ಇದನ್ನೂ ಓದಿ: ಅಕ್ಷರ್​, ಪಂತ್​ ಜೋಡಿ ಆಟಕ್ಕೆ ಮಂಕಾದ ಗುಜರಾತ್:​ ಡೆಲ್ಲಿಗೆ ರೋಚಕ ಗೆಲುವು - DC Beat GT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.