ETV Bharat / sports

IPL: ಆರ್​​ಸಿಬಿಗೆ ಡು ಪ್ಲೆಸಿಸ್, ಪಾಟಿದಾರ್, ಕಾರ್ತಿಕ್ ಫಿಫ್ಟಿ ಬಲ; ಮುಂಬೈ ಗೆಲುವಿಗೆ 197 ರನ್ ಟಾರ್ಗೆಟ್​ - MI vs RCB

author img

By ETV Bharat Karnataka Team

Published : Apr 11, 2024, 7:43 PM IST

Updated : Apr 11, 2024, 10:15 PM IST

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್​ನ 25ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು 197 ರನ್​ಗಳ ಟಾರ್ಗೆಟ್‌ ನೀಡಿದೆ.

Etv Bharat
Etv Bharat

ಮುಂಬೈ(ಮಹಾರಾಷ್ಟ್ರ): ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್ ಹಾಗೂ ದಿನೇಶ್ ಕಾರ್ತಿಕ್ ಅವರ ಅರ್ಧಶತಕದ ನೆರವಿನಿಂದ ಆರ್​ಸಿಬಿ ತಂಡ ಮುಂಬೈ ವಿರುದ್ಧ 196 ರನ್​ಗಳನ್ನು ಕಲೆ ಹಾಕಿತು. ಮುಂಬೈ ಪರ ಜಸ್ಪೀತ್​ ಬೂಮ್ರಾ 5 ವಿಕೆಟ್​ ಪಡೆದು ಮಿಂಚಿದರೂ, ಕೊನೆಯಲ್ಲಿ ಕಾರ್ತಿಕ್​ ಅಬ್ಬರದಿಂದಾಗಿ ಸವಾಲಿನ ಮೊತ್ತ ಪೇರಿಸುವಲ್ಲಿ ಬೆಂಗಳೂರು ಯಶಸ್ವಿಯಾಯಿತು. ಮುಂಬೈ ತನ್ನ ಗೆಲುವಿಗಾಗಿ 197 ರನ್​ಗಳನ್ನು ಚೇಸ್​ ಮಾಡಬೇಕಿದೆ.

ಇದಕ್ಕೂ ಮುನ್ನ, ಟಾಸ್​ ಗೆದ್ದ ಹಾರ್ದಿಕ್​ ಪಾಂಡ್ಯ ನೇತೃತ್ವದ ಮುಂಬೈ ತಂಡ ಫೀಲ್ಡಿಂಗ್​ ಆಯ್ದುಕೊಂಡಿತು. ಇದರಿಂದ ಮೊದಲು ಬ್ಯಾಟಿಂಗ್​ಗಿಳಿದ ಆರ್​ಸಿಬಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭದಲ್ಲೇ ಮುಂಬೈ ವೇಗಿ ಜಸ್ಪೀತ್​ ಬೂಮ್ರಾ ಎದುರಾಳಿ ತಂಡಕ್ಕೆ ಶಾಕ್​ ನೀಡಿದರು. ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಕೇವಲ ಮೂರು ರನ್​ಗೆ ವಿಕೆಟ್​ ಒಪ್ಪಿಸಿದರು. ನಂತರದಲ್ಲಿ ಬಂದ ವಿಲ್​ ಜಾಕ್ಸ್​ ತಮ್ಮ ಪಾದಾರ್ಪಣೆ ಪಂದ್ಯದಲ್ಲೇ ನಿರಾಸೆ ಮೂಡಿಸಿದರು. ಎಂಟು ರನ್​ ಕಲೆ ಹಾಕಿ ನಿರ್ಗಮಿಸಿದರು. ಈ ಇಬ್ಬರು ಬೂಮ್ರಾ ಬೌಲಿಂಗ್​ನಲ್ಲಿ ಕ್ಯಾಚಿತ್ತರು.

ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಫಾಫ್ ಡು ಪ್ಲೆಸಿಸ್ ಮತ್ತು ರಜತ್ ಪಾಟಿದಾರ್ ಆಸರೆಯಾದರು. ಮೂರನೇ ವಿಕೆಟ್​ಗೆ ಈ ಜೋಡಿ 82 ರನ್​ಗಳ ಜತೆಯಾಟ ನೀಡಿ ತಂಡವನ್ನು ಆಘಾತದಿಂದ ಮೇಲೆತ್ತಿದರು. ಆದರೆ, ಉತ್ತಮವಾಗಿ ಬ್ಯಾಟರ್ ಬೀಸುತ್ತಿದ್ದ ಪಾಟಿದಾರ್ ತಮ್ಮ ಅರ್ಧಶತಕ (50) ಪೂರೈಸುತ್ತಿದ್ದಂತೆ ವಿಕೆಟ್​ ಒಪ್ಪಿಸಿ ನಿರ್ಮಿಸಿದರು. ನಂತರ ಬಂದ ಮ್ಯಾಕ್ಸ್​ವೆಲ್​ ಶೂನ್ಯ ಸುತ್ತಿದರು. ಮತ್ತೊಂದೆಡೆ, ಆರಂಭಿಕ ಡು ಪ್ಲೆಸಿಸ್ 61 ರನ್​ ಬಾರಿಸಿ ಔಟಾದರು.

ಮ್ಯಾಕ್ಸ್​ವೆಲ್​ ನಂತರ ಬಂದ ದಿನೇಶ್​ ಕಾರ್ತಿಕ್​ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದರು. ಕೇವಲ 23 ಬಾಲ್​ಗಳಲ್ಲಿ ನಾಲ್ಕು ಸಿಕ್ಸರ್​, ಐದು ಬೌಂಡರಿಗಳ ಸಮೇತವಾಗಿ 53 ರನ್​ ಸಿಡಿಸಿದರು. ಅದರಲ್ಲೂ, ಕೊನೆಯ ಓವರ್​ಗಳನ್ನು ಸತತವಾಗಿ ಎರಡು ಸಿಕ್ಸರ್​, ಒಂದು ಬೌಂಡರಿ ಬಾರಿಸಿ ಅಜೇಯರಾಗಿ ಉಳಿದರು. ಇದರಿಂದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ ಎಂಟು ವಿಕೆಟ್​ ನಷ್ಟಕ್ಕೆ 196 ರನ್​ ಕಲೆ ಹಾಕಿತು.

ಮುಂಬೈ ಪರ ಬೂಮ್ರಾ ಐದು ವಿಕೆಟ್​ಗಳ ಗೊಂಚಲು ಪಡೆದು ಮಿಂಚಿದರು. ಅಲ್ಲದೇ, ಐಪಿಎಲ್​ನಲ್ಲಿ ಆರ್​ಸಿಬಿ ವಿರುದ್ಧ ಅತಿಹೆಚ್ಚು ಎಂದರೆ 29 ವಿಕೆಟ್​ ಕಿತ್ತ ಸಾಧನೆಯನ್ನೂ ಅವರು ಬರೆದರು. ಆಕಾಶ್ ಮಧ್ವಾಲ್, ಜೆರಾಲ್ಡ್ ಕೋಟ್ಜಿ, ಶ್ರೇಯಸ್ ಗೋಪಾಲ್ ತಲಾ ಒಂದು ವಿಕೆಟ್​ ಪಡೆದರು.

ತಂಡಗಳು: ಆರ್​ಸಿಬಿ - ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್​​), ಮಹಿಪಾಲ್ ಲೊಮೊರೊರ್, ರೀಸ್ ಟೋಪ್ಲಿ, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ಮುಂಬೈ - ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್​ ಕೀಪರ್​), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಮೊಹಮ್ಮದ್ ನಬಿ, ಶ್ರೇಯಸ್ ಗೋಪಾಲ್, ಜಸ್ಪ್ರೀತ್ ಬುಮ್ರಾ, ಜೆರಾಲ್ಡ್ ಕೋಟ್ಜಿ, ಆಕಾಶ್ ಮಧ್ವಾಲ್.

ಇದನ್ನೂ ಓದಿ: ಏಪ್ರಿಲ್ 16ರಿಂದ 19ರವರೆಗೆ ಜಮ್ಮುವಿನಲ್ಲಿ 'ಕಿವುಡರ ಐಪಿಎಲ್​' ಕ್ರಿಕೆಟ್ - Deaf IPL

Last Updated : Apr 11, 2024, 10:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.