ETV Bharat / sports

ಆರ್​ಸಿಬಿ - ಸಿಎಸ್​ಕೆ ಪಂದ್ಯ: ಸಂಜೆ 7 ರಿಂದ ಮಳೆ ಬರುವ ಸಾಧ್ಯತೆ, ಪಂದ್ಯದ ಆರಂಭ ಸಮಯ 7.30! - CSK vs RCB - CSK VS RCB

ಐಪಿಎಲ್​ನ 17ನೇ ಆವೃತ್ತಿಯ ರಣರೋಚಕ ಪಂದ್ಯಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ಸಜ್ಜಾಗಿವೆ. ಈ ಮಧ್ಯೆ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ.

ಆರ್​ಸಿಬಿ- ಸಿಎಸ್​ಕೆ ಪಂದ್ಯ
ಆರ್​ಸಿಬಿ- ಸಿಎಸ್​ಕೆ ಪಂದ್ಯ (Etv Bharat)
author img

By ETV Bharat Karnataka Team

Published : May 18, 2024, 6:32 PM IST

Updated : May 18, 2024, 7:58 PM IST

ಕ್ರೀಡಾಂಗಣಕ್ಕೆ ಬಂದ ಅಭಿಮಾನಿಗಳು (ETV Bharat)

ಬೆಂಗಳೂರು: ಐಪಿಎಲ್​ನ 17ನೇ ಋತುವಿನಲ್ಲಿಯೇ ರಣರೋಚಕ ಕುತೂಹಲ ಮೂಡಿಸಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಅಭಿಮಾನಿಗಳು ಕ್ರೀಡಾಂಗಣದತ್ತ ಧಾವಿಸುತ್ತಿದ್ದಾರೆ. ಕ್ರಿಕೆಟ್​ ಲೋಕವೇ ಎದುರು ನೋಡುತ್ತಿರುವ ಪಂದ್ಯಕ್ಕೆ ವರುಣರಾಯ ಅಡ್ಡಿಯಾಗುವ ಆತಂಕವೂ ಇದೆ.

ಸದ್ಯ ಬೆಂಗಳೂರಿನಲ್ಲಿ ವಾತಾವರಣ ತಿಳಿಯಾಗಿದೆ. ಅಲ್ಲಲ್ಲಿ ಮೋಡ ಕವಿದ ವಾತಾವರಣವೂ ಇದ್ದು, ಹವಾಮಾನ ಇಲಾಖೆಯ ಪ್ರಕಾರ ಸಂಜೆ 7 ರ ಬಳಿಕ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಪಂದ್ಯದ ಆರಂಭದ ಸಮಯ ಸಂಜೆ 7.30. ಪಂದ್ಯದ ಆರಂಭಕ್ಕೂ ಮೊದಲು ಮಳೆಯಾಗುವ ಭೀತಿ ಇದೆ. ಸಂಜೆ 7 ರಿಂದ ರಾತ್ರಿ 11 ಗಂಟೆ ನಡುವೆ ಗುಡುಗು ಸಹಿತ ಬಿರುಗಾಳಿ ಇರಲಿದ್ದು, ಶೇ.51 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ‌ ಇಲಾಖೆ ತಿಳಿಸಿದೆ.

ಈಗಾಗಲೇ ನಗರದ ಕೆಲವೆಡೆ ಮಧ್ಯಾಹ್ನದ ವೇಳೆ ಮಳೆಯಾಗಿದೆ. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿಲ್ಲ. ಅದಾಗ್ಯೂ, ಸಹ ಸಂಜೆ ವೇಳೆಗೆ ಮಳೆ ಬೀಳುವ ನಿರೀಕ್ಷೆ ಇದೆ. ಇದು ಪಂದ್ಯಕ್ಕೆ ಸಹಜವಾಗಿಯೇ ಅಡ್ಡಿಯಾಗಲಿದೆ. ಮತ್ತೊಂದೆಡೆ ಮೈದಾನದತ್ತ ಆಗಮಿಸುತ್ತಿರುವ ಉಭಯ ತಂಡಗಳ ಅಭಿಮಾನಿಗಳು ವರುಣ ಅವಕೃಪೆ ತೋರದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಸಬ್​ ಏರ್​ ಸಿಸ್ಟಂ ಗುಂಗು: ಮಳೆ ಬಂದರೂ, ಪಂದ್ಯಕ್ಕೆ ಅಡ್ಡಿಯಾಗದು ಎಂಬ ಭರವಸೆಯೂ ಅಭಿಮಾನಿಗಳಲ್ಲಿದೆ. ಇದಕ್ಕೆ ಕಾರಣ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಸಬ್​ ಏರ್​ ಸಿಸ್ಟಂ. ಇದು ಮಳೆ ನೀರನ್ನು ಅರ್ಧಗಂಟೆಯಲ್ಲಿಯೇ ಇಂಗುವಂತೆ ಮಾಡುತ್ತದೆ. ಮಳೆ ಭಾದಿಸಿದರೂ ಸಹ ಹೆಚ್ಚುಕಾಲ ಸುರಿಯದೇ ಇದ್ದರೆ ಸಬ್​ ಏರ್​ಸಿಸ್ಟಂ ಮೂಲಕ ಮೈದಾನವನ್ನು ಆದಷ್ಟು ಬೇಗ ಒಣಗಿಸಿ ಆಡಲು ಅನುವು ಮಾಡಿಕೊಡಲು ಕೆಎಸ್​ಸಿಎ ಸಜ್ಜಾಗಿದೆ.

ಪ್ಲೇಆಫ್​ಗಾಗಿ ಆರ್​ಸಿಬಿಗಿರುವ ಹಾದಿ: ಆರ್​ಸಿಬಿ ಪಂದ್ಯವನ್ನು ಗೆಲ್ಲುವುದಷ್ಟೇ ಅಲ್ಲ. ದೊಡ್ಡ ಅಂತರದಲ್ಲಿ ಗೆಲ್ಲುವ ಅನಿವಾರ್ಯವೂ ಇದೆ. ಅಂದರೆ, ಮೊದಲು ಬ್ಯಾಟ್​ ಮಾಡಿದಲ್ಲಿ ತಂಡ ಕನಿಷ್ಠ 200 ರನ್​ ಗಳಿಸಬೇಕು. ಬಳಿಕ ಸಿಎಸ್​ಕೆ ತಂಡವನ್ನು 18 ರನ್​ಗಳಿಂದ ಸೋಲಿಸಬೇಕು. ಸಿಎಸ್​ಕೆ ಮೊದಲು ಬ್ಯಾಟ್​ ಮಾಡಿದಲ್ಲಿ ಗುರಿಯನ್ನು 18.1 ಓವರ್​ಗಳಲ್ಲಿ ದಾಟಿ ಗೆಲ್ಲಬೇಕು. ಇದ್ಯಾವುದೂ ಸಂಭವಿಸದೆ, ಪಂದ್ಯ ರದ್ದಾದಲ್ಲಿ ಆರ್​ಸಿಬಿಯ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚುನೂರಾಗಲಿದೆ. ತಲಾ 1 ಅಂಕ ಹಂಚಿಕೆಯಾಗಿ ಆರ್​ಸಿಬಿ ಟೂರ್ನಿಯಿಂದ ಹೊರಬಿದ್ದು, ಸಿಎಸ್​ಕೆ ನಾಲ್ಕನೇ ತಂಡವಾಗಿ ಪ್ಲೇ ಆಫ್​ಗೇರಲಿದೆ.

ಇದನ್ನೂ ಓದಿ: ಆರ್​ಸಿಬಿ-ಸಿಎಸ್​ಕೆ ಪಂದ್ಯಕ್ಕೆ ವರುಣ ಕಾಡಿದರೇನಂತೆ ಚಿನ್ನಸ್ವಾಮಿಯಲ್ಲಿದೆ ಸಬ್ ಏರ್ ವ್ಯವಸ್ಥೆ - Sub Air System in Chinnaswamy

Last Updated : May 18, 2024, 7:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.