ಧರ್ಮಶಾಲಾ(ಹಿಮಾಚಲ ಪ್ರದೇಶ): ಮಂಡಿರಜ್ಜು ಗಾಯದಿಂದಾಗಿ ಕಳೆದೆರಡು ಪಂದ್ಯಗಳಿಂದ ಹೊರಗುಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವೇಗಿ ಮಥೀಶ ಪತಿರಾನ ಶ್ರೀಲಂಕಾಕ್ಕೆ ತೆರಳಿದ್ದಾರೆ.
ಭಾನುವಾರ ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಪತಿರಾನ, ನಿನ್ನೆಯ ಪಂದ್ಯದಲ್ಲೂ ಆಡಿರಲಿಲ್ಲ. ಇದೀಗ ತವರಿಗೆ ತೆರಳಿದ್ದಾರೆ. ಈ ಬಗ್ಗೆ ಫ್ರಾಂಚೈಸಿ ಮಾಹಿತಿ ನೀಡಿದ್ದು, 'ಪತಿರಾನ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳಲು ಶ್ರೀಲಂಕಾಕ್ಕೆ ಮರಳಲಿದ್ದಾರೆ. ಶೀಘ್ರ ಅವರು ಗುಣಮುಖರಾಗಲಿ' ಎಂದು ಹಾರೈಸಿದೆ.
ಬಲಗೈ ವೇಗಿ ಪತಿರಾನಾ ಈ ಋತುವಿನಲ್ಲಿ ಚೆನ್ನೈ ಪರ 6 ಪಂದ್ಯಗಳನ್ನು ಆಡಿದ್ದು 7.68ರ ಎಕಾನಮಿಯೊಂದಿಗೆ 13 ವಿಕೆಟ್ಗಳನ್ನು ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದು, 4 ಓವರ್‌ಗಳಲ್ಲಿ 28 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಮುಂಬರುವ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು, ಶೀಘ್ರವೇ ಗುಣಮುಖರಾಗಲು ಸ್ವದೇಶಕ್ಕೆ ಹಿಂತಿರುಗಿದ್ದಾರೆ.
ಮುಸ್ತಫಿಜುರ್ ಕೂಡ ವಾಪಸ್: ಐಪಿಎಲ್ ಅಂತಿಮ ಘಟ್ಟ ತಲುಪುತ್ತಿರುವಾಗಲೇ ಸಿಸಿಎಸ್ಕೆ ಪ್ರಮುಖ ಬೌಲರ್ಗಳು ತಮ್ಮ ದೇಶಕ್ಕೆ ಹಿಂತಿರುಗಿದ್ದಾರೆ. ಮಥೀಶ ಪತಿರಾನಾ ಗಾಯದ ಸಮಸ್ಯೆಯಿಂದ ತಂಡ ತೊರೆದರೆ, ಇದಕ್ಕೂ ಮೊದಲು ಮುಸ್ತಾಫಿಜುರ್ ರೆಹಮಾನ್ ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ20 ಸರಣಿಗಾಗಿ ತಮ್ಮ ದೇಶಕ್ಕೆ ಹಿಂತಿರುಗಿದ್ದಾರೆ.
ಇದನ್ನೂ ಓದಿ: ಡೋಪಿಂಗ್ ಟೆಸ್ಟ್ಗೆ ಒಳಗಾಗದ ಬಜರಂಗ್ ಪೂನಿಯಾ ಅಮಾನತು: ನಾಡಾ ವಿರುದ್ಧ ಪೈಲ್ವಾನ್ ಗರಂ - wrestler Bajrang Punia