ಪ್ಯಾರಿಸ್: ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಶುಭಾರಂಭ ಮಾಡಿದ್ದಾರೆ. ಇಂದು ನಡೆದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನ ಗುಂಪು ಹಂತದ ಪಂದ್ಯದಲ್ಲಿ ಸೇನ್ ಗ್ವಾಟೆಮಾಲಾದ ಆಟಗಾರ ಕಾರ್ಡನ್ ಕೆವಿನ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿದರು. ಮೊದಲ ಸೆಟ್ ಅನ್ನು 21-8 ರಿಂದ ಸುಲಭವಾಗಿ ಗೆದ್ದುಕೊಂಡ ಸೇನ್ ಎರಡನೇ ಸೆಟ್ನಲ್ಲಿ ಕಠಿಣ ಹೋರಾಟ ಎದುರಿಸಿದರು. ಆದರೂ ಎರಡನೇ ಸೆಟ್ ಅನ್ನು 22-20 ರಿಂದ ಗೆದ್ದು ಪಂದ್ಯವನ್ನು ಗೆದ್ದುಕೊಂಡರು.
ಮೊದಲ ಸೆಟ್: ಪ್ಯಾರಿಸ್‌ನಲ್ಲಿ ಪದಕ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿರುವ 22 ವರ್ಷದ ಭಾರತೀಯ ಆಟಗಾರ, ಪಂದ್ಯವನ್ನು ವೇಗವಾಗಿ ಪ್ರಾರಂಭಿಸಿದರು ಮತ್ತು ತನ್ನ 37 ವರ್ಷದ ಎದುರಾಳಿಗೆ ಗೆಲುವಿನ ಯಾವುದೇ ಅವಕಾಶವನ್ನು ನೀಡಲಿಲ್ಲ. ಮೊದಲ ಹಂತದಲ್ಲಿ ಸೇನ್ ಅದ್ಭುತ ಪ್ರದರ್ಶನ ನೀಡಿದರು. ಮಧ್ಯ ವಿರಾಮದಲ್ಲಿ 11-3 ಅಂತರದಿಂದ ಮುನ್ನಡೆ ಸಾಧಿಸಿದ್ದರು. ಇದಾದ ಬಳಿಕ ತಮ್ಮ ಪ್ರದರ್ಶನವನ್ನು ಮುಂದುವರಿಸಿದ ಅವರು ಮೊದಲ ಸೆಟ್ ಅನ್ನು 21-8 ರಿಂದ ಗೆದ್ದುಕೊಂಡರು.
Badminton: Lakshya Sen kicks off his Paris Olympics campaign with a hard-fought win .
— India_AllSports (@India_AllSports) July 27, 2024
Lakshya beat Tokyo semi-finalist Kevin Gordon 21-8, 22-20 in his opening Group stage encounter. #Badminton #Paris2024 #Paris2024withIAS pic.twitter.com/KfH35kJdmx
ಎರಡನೇ ಹಂತದಲ್ಲಿ ರೋಚಕ ಪಂದ್ಯ: ಗ್ವಾಟೆಮಾಲಾದ ಆಟಗಾರ ಕಾರ್ಡನ್ ಕೆವಿನ್ ಅವರು ಸೇನ್ ವಿರುದ್ಧ ಎರಡನೇ ಸುತ್ತಿನ ಮೊದಲ ಹಂತದಲ್ಲಿ 6-2 ಅಂತರದಿಂದ ಮುನ್ನಡೆ ಸಾಧಿಸಿದ್ದರು. ಸೇನ್ ಈ ಸುತ್ತಿನಲ್ಲಿ ಕೆಲ ತಪ್ಪು ಹೊಡೆತಗಳಿಂದ ಹಿನ್ನಡೆ ಅನುಭವಿಸಿದರು. ಈ ಹಂತದಲ್ಲಿ ಕೆವಿನ್ ಭಾರತೀಯ ಆಟಗಾರನ ಮೇಲೆ ಪ್ರಾಬಲ್ಯ ತೋರಿದ್ದರು. ಮಧ್ಯ-ವಿರಾಮದವರೆಗೆ 11-6 ಅಂತರದಿಂದ ಹಿನ್ನಡೆ ಅನುಭವಿಸಿದ್ದ ಸೇನ್
ಮಧ್ಯ ವಿರಾಮದಲ್ಲಿ ಹಿನ್ನಡೇ ಅನುಭವಿಸದ್ದ ಸೇನ್ ನಂತರ ಬಲವಾದ ಪುನರಾಗಮನ ಮಾಡಿದರು. ನಂತರ ಸೆಟ್ನಲ್ಲಿ ಕಠಿಣ ಪೈಪೋಟಿ ನಡೆಸಿದ 18ನೇ ಶ್ರೇಯಾಂಕದ ಭಾರತದ ಆಟಗಾರ ಲಕ್ಷ್ಯ ಸೇನ್ 41ನೇ ಶ್ರೇಯಾಂಕದ ಗ್ವಾಟೆಮಾಲಾದ ಕಾರ್ಡನ್ ಕೆವಿನ್ ಅವರನ್ನು 22-20 ಅಂತರದ ಸೆಟ್‌ಗಳಿಂದ ಸೋಲಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.