ETV Bharat / sports

ಪ್ಯಾರಾಲಿಂಪಿಕ್ಸ್​ 2024: 10ಮೀ ಏರ್​ ರೈಫಲ್​ ಶೂಟಿಂಗ್​ನಲ್ಲಿ ಚಿನ್ನ, ಕಂಚು ಗೆದ್ದ ಭಾರತದ ಮಹಿಳಾ ಶೂಟರ್ಸ್​ - Indian wins gold in Paralympics

ಪ್ಯಾರಾಲಿಂಪಿಕ್ಸ್​ನ 10ಮೀ ಏರ್​​ ರೈಫಲ್​ ಶೂಟಿಂಗ್​ ಸ್ಪರ್ಧೆಯಲ್ಲಿ ಭಾರತದ ಸ್ಟಾರ್​ ಶೂಟರ್​ ಅವನಿ ಲೆಖರಾ ಚಿನ್ನದ ಪದಕ ಗೆದ್ದಿದ್ದಾರೆ.

ಅವನಿ ಲೆಖರಾ
ಅವನಿ ಲೆಖರಾ (AFP)
author img

By ETV Bharat Sports Team

Published : Aug 30, 2024, 4:17 PM IST

ಪ್ಯಾರಿಸ್​ (ಫ್ರಾನ್ಸ್​): ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತ ಪದಕ ಖಾತೆಯನ್ನು ತೆರೆದಿದೆ. ಒಂದೇ ಈವೆಂಟ್​ನಲ್ಲಿ ಚಿನ್ನ ಮತ್ತು ಕಂಚು ಪದಕಗಳನ್ನು ಗೆಲ್ಲುವ ಮೂಲಕ ಪ್ಯಾರಾ ಮಹಿಳಾ ಶೂಟರ್​ಗಳು ವಿಶೇಷ ಸಾಧನೆ ಮಾಡಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಪ್ಯಾರಾ ಶೂಟರ್ ಅವನಿ ಲೆಖರಾ ಚಿನ್ನದ ಪದಕ ಗೆದ್ದರೇ, ಮೋನಾ ಅಗರ್ವಾಲ್ ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ.

ಇದಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ಅವ್ನಿ ಲೇಖರಾ ಉತ್ತಮ ಪ್ರದರ್ಶನ ನೀಡಿ ಫೈನಲ್‌ಗೆ ಪ್ರವೇಶ ಪಡೆದಿದ್ದರು. ಅವನಿ ಅರ್ಹತಾ ಸುತ್ತಿನಲ್ಲಿ 625.8 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದ್ದರು. ಆದರೆ ಕೇವಲ 0.2 ಅಂಕಗಳಿಂದ ಪ್ಯಾರಾಲಿಂಪಿಕ್ ದಾಖಲೆಯನ್ನು ತಪ್ಪಿಸಿಕೊಂಡರು. ಮೋನಾ ಅರ್ಹತಾ ಸುತ್ತಿನಲ್ಲಿ ಐದನೇ ಸ್ಥಾನ ಪಡೆದಿದ್ದರು.

ಈ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ 10 ಮೀಟರ್ ಏರ್ ರೈಫಲ್‌ ಸ್ಪರ್ಧೆಯಲ್ಲೂ ಅವನಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಅಲ್ಲದೇ 50 ಮೀಟರ್ ರೈಫಲ್ ಪಂದ್ಯದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ.

ಇದನ್ನೂ ಓದಿ: 3 ಬಾರಿ ಗ್ರ್ಯಾಂಡ್​ ಸ್ಲ್ಯಾಮ್​ ಚಾಂಪಿಯನ್​ ಅಲ್ಕರಾಜ್​ಗೆ ಸೋಲುಣಿಸಿದ 74ನೇ ಶ್ರೇಯಾಂಕಿತ ಆಟಗಾರ - Carlos Alcaraz

ETV Bharat Logo

Copyright © 2024 Ushodaya Enterprises Pvt. Ltd., All Rights Reserved.