IND vs NZ 2nd Test: ಪುಣೆಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ನಲ್ಲಿ ಕಿವೀಸ್ ಪಡೆ ಭಾರತಕ್ಕೆ 359 ರನ್‌ಗಳ ಗುರಿಯನ್ನು ನೀಡಿದೆ. 103 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲೆಂಡ್ ಮೂರನೇ ದಿನದಾಟ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 301 ರನ್‌ಗಳ ಮುನ್ನಡೆ ಪಡೆದು ಬೃಹತ್ ಮೊತ್ತದತ್ತ ದಾಪುಗಾಲು ಹಾಕಿತ್ತು. ಆದರೆ, ನಾಲ್ಕನೇ ದಿನದಾಟವಾ ಇಂದು ಕಿವೀಸ್ ಬ್ಯಾಟರ್ಗಳಿಗೆ ಭಾರತೀಯ ಬೌಲರ್ಗಳು ಬ್ರೇಕ್ ಹಾಕಿದರು.
ದೊಡ್ಡ ಗುರಿ ಕಲೆಹಾಕಬೇಕೆಂದಿದ್ದ ಕಿವೀಸ್ ಕೇವಲ 58 ರನ್ಗಳಿಗೆ ತನ್ನ ಉಳಿದ 5 ವಿಕೆಟ್ ಕಳೆದುಕೊಂಡಿತು. ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (2/97) ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ (3/72) 5 ವಿಕೆಟ್ ಪಡೆದರು. ಇದೀಗ ಭಾರತ ಈ ಗುರಿಯನ್ನು ತಲುಪಿ ಸರಣಿ ಸಮಬಲ ಸಾಧಿಸಲು ಕಣಕ್ಕಿಳಿದೆ. ಅಂದುಕೊಂಡಂತೆ ಭಾರತ ಈ ಮೊತ್ತವನ್ನು ಚೇಸ್ ಮಾಡಿದರೆ ಟೀಂ ಇಂಡಿಯಾದ ಟೆಸ್ಟ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ನಾಲ್ಕನೇ ಇನ್ನಿಂಗ್ಸ್ ಚೇಸ್ ಆಗಲಿದೆ. ಜತೆಗೆ ಕಿವೀಸ್ ವಿರುದ್ಧ 4ನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತದ ಸ್ಕೋರ್ ಚೇಸ್ ಮಾಡಿದ ಮೊದಲ ತಂಡವಾಗಿ ದಾಖಲೆ ಬರೆಯಲಿದೆ.
Innings Break!
— BCCI (@BCCI) October 26, 2024
New Zealand bowled out for 255.
4⃣ wickets for @Sundarwashi5
3⃣ wickets for @imjadeja
2⃣ wickets for @ashwinravi99 #TeamIndia need 359 runs to win!
Scorecard ▶️ https://t.co/YVjSnKCtlI #INDvNZ | @IDFCFIRSTBank pic.twitter.com/ABQKFK2sZt
ಇದನ್ನೂ ಓದಿ: ಚೆನ್ನೈ ಹುಡುಗನ ಮೇಲೆ ಆರ್ಸಿಬಿ ಸೇರಿ 3 ತಂಡಗಳ ಕಣ್ಣು: ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತ ಸಾಧ್ಯತೆ
ಇದಕ್ಕೂ ಮೊದಲ 1969ರಲ್ಲಿ ಆಕ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ನೀಡಿದ್ದ 345 ಗುರಿಯನ್ನು ನಾಲ್ಕನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ಚೇಸ್ ಮಾಡಿ ಗೆಲುವು ಸಾಧಿಸಿತ್ತು. ಇದರೊಂದಿಗೆ ಕಿವೀಸ್ ವಿರುದ್ಧ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 300+ ಗುರಿಯನ್ನು ತಲುಪಿದ ಮೊದಲ ತಂಡ ಎಂಬ ದಾಖಲೆ ಬರೆಯಿತು.
ನಾಲ್ಕು ಬಾರಿ ಮಾತ್ರ: ಭಾರತ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 300ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಕೇವಲ ಮೂರು ಬಾರಿ ಬೆನ್ನಟ್ಟಿದೆ. ಅವುಗಳಲ್ಲಿ ಒಂದು ತವರಿನಲ್ಲಿ ಮತ್ತು ಎರಡು ವಿದೇಶಿ ನೆಲದಲ್ಲಿ ಎಂಬುದು ಗಮನಾರ್ಹ.
- 1976ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಭಾರತ 403 ರನ್ ಗುರಿಯನ್ನು ಬೆನ್ನಟ್ಟಿ ಪಂದ್ಯ ಗೆದ್ದುಕೊಂಡಿತ್ತು. ಭಾರತ ಟೆಸ್ಟ್ ಇತಿಹಾಸದಲ್ಲೇ ನಾಲ್ಕನೇ ಇನ್ನಿಂಗ್ಸ್ನ ಅತಿದ್ದೊಡ್ಡ ಚೇಸ್ ಇದಾಗಿದೆ.
- 2008 ರಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 387 ರನ್ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿತ್ತು. ಇದು ತವರಿನಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಭಾರತದ ಅತಿ ದೊಡ್ಡ ಚೇಸ್ ಆಗಿದೆ.
- 2021ರಲ್ಲಿ ಬ್ರಿಸ್ಬೇನ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 328 ರನ್‌ಗಳ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿತ್ತು.
ಇದನ್ನೂ ಓದಿ: ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಭಾರತ ತಂಡ ಪ್ರಕಟ: ಇಬ್ಬರು ಕನ್ನಡಿಗರಿಗೆ ತಂಡದಲ್ಲಿ ಚಾನ್ಸ್!