Ind W vs Aus W, 1st ODI: ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಐಸಿಸಿ ಮಹಿಳಾ ಚಾಂಪಿಯನ್ಸ್ ಟೂರ್ನಿ ಆರಂಭವಾಗಿದೆ. ಇಂದಿನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲನುಭವಿಸಿತು. ಬ್ರಿಸ್ಬನ್ ಮೈದಾನದಲ್ಲಿ ಪಂದ್ಯ ನಡೆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಮಹಿಳೆಯರು ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕೇವಲ 100 ರನ್ಗಳಿಗೆ ಆಲೌಟ್ ಆದರು. ಹರ್ಲೀನ್ ಡಿಯೋಲ್ (19), ಹರ್ಮನ್ ಪ್ರೀತ್ ಕೌರ್ (17), ಜೆಮಿಮಾ ರೋಡ್ರಿಗಸ್ (23), ರಿಚಾ ಘೋಷ್ (14) ಬಿಟ್ಟರೆ ಉಳಿದ ಬ್ಯಾಟರ್ಗಳು ಎರಡಂಕಿ ಗಳಿಸಲಿಲ್ಲ.
ಸಾಮಾನ್ಯ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ 16.2 ಓವರ್ಗಳಲ್ಲೇ ಗುರಿ ತಲುಪಿತು. ಆರಂಭಿಕರಾಗಿ ಬ್ಯಾಟಿಂಗ್ಗಿಳಿದ ಲಿಚಿಫೀಲ್ಡ್ (35), ಜಿಯಾರ್ಜಿಯಾ ವೊಲ್ (46*) 48 ರನ್ಗಳ ಜೊತೆಯಾಟವಾಡಿ ಗೆಲುವಿನ ರುವಾರಿಗಳಾದರು.
Australia win the first #AUSvIND ODI.#TeamIndia will be aiming to bounce back in the second ODI of the series.
— BCCI Women (@BCCIWomen) December 5, 2024
Scorecard ▶️ https://t.co/RGxrsRZRGN pic.twitter.com/mC4ZBWJKnl
ರೇಣುಕಾ 3 ವಿಕೆಟ್ ಉರುಳಿಸಿದರೂ ತಂಡದ ಗೆಲುವಿಗೆ ಸಾಕಾಗಲಿಲ್ಲ. ಇದರೊಂದಿಗೆ ಆಸೀಸ್ ಸರಣಿಯಲ್ಲಿ 1-0ರ ಅಂತರದಿಂದ ಮುನ್ನಡೆ ಸಾಧಿಸಿತು.
ಮುಂದಿನ ಪಂದ್ಯ: ಎರಡನೇ ಏಕದಿನ ಪಂದ್ಯ ಭಾನುವಾರ (ಡಿ.8) ಬ್ರಿಸ್ಬೆನ್ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ: 11 ಸಿಕ್ಸರ್, 8 ಬೌಂಡರಿ: ಭಾರತದ ಯುವ ದಾಂಡಿಗನ ಸ್ಪೋಟಕ ಪ್ರದರ್ಶನಕ್ಕೆ ಪಂತ್ ದಾಖಲೆ ಪೀಸ್ ಪೀಸ್..!