ETV Bharat / sports

T20 World Cup 2024: ಐರ್ಲೆಂಡ್​ ವಿರುದ್ಧ ಭಾರತಕ್ಕೆ ಸುಲಭ ಜಯ: ರೋಹಿತ್​ ಪಡೆ ಶುಭಾರಂಭ - India Beat Ireland - INDIA BEAT IRELAND

ಐರ್ಲೆಂಡ್​ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್​​ಗಳ​ ಗೆಲುವು ಸಾಧಿಸಿ ಟಿ-20 ವಿಶ್ವಕಪ್​ ಶುಭಾರಂಭ ಮಾಡಿದೆ.

ಐರ್ಲೆಂಡ್​ ವಿರುದ್ಧ ಭಾರತಕ್ಕೆ ಸುಲಭ ಜಯ
ಐರ್ಲೆಂಡ್​ ವಿರುದ್ಧ ಭಾರತಕ್ಕೆ ಸುಲಭ ಜಯ (IANS)
author img

By ETV Bharat Karnataka Team

Published : Jun 6, 2024, 7:05 AM IST

ನ್ಯೂಯಾರ್ಕ್​: ಬುಧವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್​ ವಿರುದ್ದ ಭಾರತ 8 ವಿಕೆಟ್​​ಗಳ ಗೆಲುವು ಸಾಧಿಸಿ ತನ್ನ ಟಿ20 ವಿಶ್ವಕಪ್​ ಅಭಿಯಾನ ಆರಂಭಿಸಿದೆ.

ನ್ಯೂಯಾರ್ಕ್​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ ನೀಡಿದ್ದ 96 ರನ್​ಗಳ ಅಲ್ಪಮೊತ್ತದ ಗುರಿಯನ್ನು 12.2 ಓವರ್‌ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿತು. ಭಾರತದ ಪರ ನಾಯಕ ರೋಹಿತ್​ ಶರ್ಮಾ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 52 ರನ್ ಸಿಡಿಸುವ ಮೂಲಕ ಅರ್ಧ ಶತಕ ಪೂರೈಸಿದರು, ಬಳಿಕ ಗಾಯಗೊಂಡು ಪೆವಿಲಿಯನ್​ ಸೇರಿದರು. ಮತ್ತೊಂದೆಡೆ ರಿಷಭ್​ ಪಂತ್​ ಅಜೇಯವಾಗಿ 36 ರನ್​ಗ ಕಲೆಹಾಕುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರಂಭಿಕರಾಗಿ ಕ್ರೀಸ್​ಗಿಳಿದಿದ್ದ ಕೊಹ್ಲಿ ಕೇವಲ 1 ರನ್​ ಗಳಿಸಿ ಪೆವಲಿಯನ್​ ಸೇರಿದರೇ, ಸೂರ್ಯಕುಮಾರ್​ ಯಾದವ್​ 2 ರನ್​ಗಳಿಸಿ ವಿಕೆಟ್​​ ಒಪ್ಪಿಸಿ ನಿರಾಸೆ ಮೂಡಿಸಿದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ್ದ ಐರ್ಲೆಂಡ್, 16 ಓವರ್​ಗಳಲ್ಲಿ ಕೇವಲ 96 ರನ್​ಗಳಿಗೆ ಸರ್ವಪತನ ಕಂಡಿತು. ಭಾರತದ ವೇಗದ ಬೌಲರ್‌ಗಳ ದಾಳಿಗೆ ಸಿಲುಕಿ ಐರ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್​ ಪರೇಡ್​ ಮಾಡಿದರು. ಗರೆಥ್ ಡೆಲಾನಿ (26), ಜೋಶುವಾ ಲಿಟಲ್ (14), ಕರ್ಟಿಸ್ ಕ್ಯಾಂಫರ್ (12) ಮತ್ತು ಲೋರ್ಕನ್ ಟಕರ್ (10) ಮಾತ್ರ ಎರಡು ಅಂಕಿ ಸ್ಕೋರ್​ ದಾಟಿದರು. ಭಾರತದ ಪರ ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದರೇ, ಅರ್ಷದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಕಬಳಿಸಿದರು.

ರೋಹಿತ್​ ದಾಖಲೆ: ನಿನ್ನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ ನಾಲ್ಕು ಸಾವಿರ ರನ್ ಪೂರೈಸಿದರು. ಅಲ್ಲದೇ, ಅವರು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿ ಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್​ ಎಂಬ ದಾಖಲೆ ಬರೆದರು.

ಇದನ್ನೂ ಓದಿ: ದ್ರಾವಿಡ್ ಕೋಚ್​​ ಸ್ಥಾನದಿಂದ ಹೊರ ಹೋಗುವುದನ್ನ ನನ್ನಿಂದ ನೋಡಲು ಸಾಧ್ಯವಿಲ್ಲ:​ ರೋಹಿತ್​ ಶರ್ಮಾ ಭಾವುಕ - T20 World Cup 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.