ETV Bharat / sports

ನನಗೆ ಬ್ಯಾಟಿಂಗ್‌ಗಿಂತ ಫೀಲ್ಡಿಂಗ್‌ ಇಷ್ಟ: ವಿವಿಎಸ್​ ಲಕ್ಷ್ಮಣರಿಂದ ಬೆಸ್ಟ್​ ಫೀಲ್ಡರ್​ ಪ್ರಶಸ್ತಿ ಪಡೆದ ರಿಂಕು ಸಿಂಗ್​ - Best Fielder Award - BEST FIELDER AWARD

Best Fielder Award: ರಿಂಕು ಸಿಂಗ್ ಅವರು ಜಿಂಬಾಬ್ವೆ ವಿರುದ್ಧ ಆಡಿದ 5 - ಪಂದ್ಯಗಳ T20 ಸರಣಿಯಲ್ಲಿ ಬ್ಯಾಟಿಂಗ್​ ಮತ್ತು ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದರಿಂದಾಗಿ ಅವರು ಟೀಮ್ ಇಂಡಿಯಾದ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

IND VS ZIM  RINKU SINGH  BEST FIELDER OF THE SERIES AWARD  INDIAN CRICKET TEAM
ವಿವಿಎಸ್​ ಲಕ್ಷ್ಮನ ಬೆಸ್ಟ್​ ಫಿಲ್ಡರ್​ ಪ್ರಶಸ್ತಿ ಪಡೆದ ರಿಂಕು ಸಿಂಗ್​ (ANI PHOTOS)
author img

By ETV Bharat Karnataka Team

Published : Jul 15, 2024, 1:35 PM IST

ನವದೆಹಲಿ: ಶುಭಮನ್ ಗಿಲ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿದೆ. ಈ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಸೋತ ಭಾರತ ಸತತ 4 ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿದೆ. ಹೊಸ ಕೋಚಿಂಗ್ ಸಿಬ್ಬಂದಿಯೊಂದಿಗೆ ಟೀಂ ಇಂಡಿಯಾ ಈ ಸರಣಿಗೆ ತೆರಳಿದೆ. ಜಿಂಬಾಬ್ವೆ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ 42 ರನ್‌ಗಳ ಜಯ ಸಾಧಿಸಿದ ನಂತರ, ರಿಂಕು ಸಿಂಗ್ ಅವರಿಗೆ ಕೋಚ್ ವಿವಿಎಸ್ ಲಕ್ಷ್ಮಣ್ ಅವರು ಸರಣಿಯ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಯನ್ನು ನೀಡಿದರು. ಇದರ ವಿಡಿಯೋವನ್ನು ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

ಸುಭದೀಪ್ ಘೋಷ್ ಅವರು ಟಿ.ದಿಲೀಪ್ ಅವರ ಸಂಪ್ರದಾಯವನ್ನು ಮುಂದುವರೆಸಿದರು. ಭಾರತೀಯ ತಂಡದ ಕೋಚ್ ವಿವಿಎಸ್ ಲಕ್ಷ್ಮಣ್​ ಅವರು ಈ ಪ್ರವಾಸದಲ್ಲಿ ಉತ್ತಮ ಫೀಲ್ಡರ್ ಪ್ರಶಸ್ತಿ ನೀಡಲು ಫೀಲ್ಡಿಂಗ್ ಕೋಚ್ ಸುಭದೀಪ್ ಘೋಷ್ ಅವರನ್ನು ಕರೆದರು. ಈ ಕುರಿತು ಘೋಷ್ ಅವರು ಪ್ರಶಸ್ತಿ ನೀಡುವ ಮೊದಲು, ನಾನು ನಿಮಗೆ ವಿಡಿಯೋವೊಂದನ್ನು ತೋರಿಸಲು ಬಯಸುತ್ತೇನೆ. ಆ ವಿಡಿಯೋ ಭಾರತ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅವರದ್ದು. ಅವರು ಟಿ20 ವಿಶ್ವಕಪ್​ವರೆಗೆ ರಾಹುಲ್ ದ್ರಾವಿಡ್ ಅವರ ಕೋಚಿಂಗ್‌ನಲ್ಲಿ ತಂಡದೊಂದಿಗೆ ಇದ್ದರು.

ಈ ವಿಡಿಯೋದಲ್ಲಿ ಟಿ ದಿಲೀಪ್ ಅವರು, ಫೀಲ್ಡಿಂಗ್ ಭಾರತಕ್ಕೆ ಪ್ರಮುಖ ಅಂಶವಾಗಿದೆ. ವರ್ಷದಿಂದ ವರ್ಷಕ್ಕೆ ನಾವು ಆಟದಲ್ಲಿ ಉತ್ತಮ ಎತ್ತರವನ್ನು ಸಾಧಿಸಿದ ಕ್ಷೇತ್ರ ಇದು. ನಾವು ಫೀಲ್ಡಿಂಗ್ ಮೆಡಲ್ ಮಾಡುವ ಸಂಪ್ರದಾಯವನ್ನು ಅನುಸರಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ತನ್ನ ಫೀಲ್ಡಿಂಗ್‌ನೊಂದಿಗೆ ಪಂದ್ಯದಲ್ಲಿ ಮಹತ್ವದ ಪ್ರಭಾವ ಬೀರುವವರಿಗೆ ಇದನ್ನು ನೀಡಲಾಗುತ್ತದೆ. ಈಗ ನಾವು ಈ ಅವಕಾಶವನ್ನು ಸುಭದೀಪ್ ಘೋಷ್ ಅವರಿಗೆ ನೀಡುತ್ತೇವೆ ಎಂದು ಹೇಳಿದ್ದರು.

ಇದಾದ ನಂತರ ರಿಂಕು ಅವರು ಲಕ್ಷ್ಮಣ್ ಅವರಿಂದ ಉತ್ತಮ ಫೀಲ್ಡರ್ ಪ್ರಶಸ್ತಿ ಪಡೆದರು. ಇಂದು ಎಲ್ಲರೂ ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಸುಭದೀಪ್ ಘೋಷ್ ಹೇಳಿದರು. ಪಂದ್ಯದಲ್ಲಿ ಫಿಲ್ಡೀಂಗ್​ ಬಹಳ ಮುಖ್ಯ ಎಂದು ನಾನು ಯಾವಾಗಲೂ ಹೇಳುತ್ತೇನೆ. ನೀವು ಕ್ಯಾಚ್‌ಗಳನ್ನು ತೆಗೆದುಕೊಳ್ಳುವ ಮೂಲಕ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಬಹುದು. ಈ ಬಾರಿ ಮೈದಾನದಲ್ಲಿ ಅತ್ಯುತ್ತಮವಾಗಿ ಫಿಲ್ಡೀಂಗ್​ ಮಾಡಿದವರು ಬೇರೆ ಯಾರೂ ಅಲ್ಲ ರಿಂಕು ಸಿಂಗ್ ಎಂದರು. ಬಳಿಕ ರಿಂಕು ಅವರು ವಿವಿಎಸ್ ಲಕ್ಷ್ಮಣ್ ಅವರಿಂದ ಸರಣಿಯ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿ ಪಡೆದರು.

ನನಗೆ ಬ್ಯಾಟಿಂಗ್‌ಗಿಂತ ಫೀಲ್ಡಿಂಗ್‌ ಇಷ್ಟ: ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ರಿಂಕು, ಇದು ನನ್ನ ನಾಲ್ಕನೇ ಅಥವಾ ಐದನೇ ಸರಣಿ. ಎಲ್ಲರೊಂದಿಗೆ ಆಡುವುದು ಚೆನ್ನಾಗಿದೆ. ನನಗೆ ಬ್ಯಾಟಿಂಗ್‌ಗಿಂತ ಫೀಲ್ಡಿಂಗ್‌ ಹೆಚ್ಚು ಇಷ್ಟ. ಫೀಲ್ಡಿಂಗ್‌ ಮಾಡುವುದು ನನಗೆ ತುಂಬಾ ಇಷ್ಟ. ಓಟವು ತುಂಬಾ ಖುಷಿ ನೀಡುತ್ತದೆ. ನಾನು ಸ್ಪ್ರಿಂಟ್ ಓಡದಿದ್ದರೆ ನನ್ನ ದೇಹವು ತೆರೆದುಕೊಳ್ಳುವುದಿಲ್ಲ. ದೇವರಿಗೆ ಧನ್ಯವಾದಗಳು ಎಂದು ಹೇಳಿದರು.

ಓದಿ: ಇತಿಹಾಸ ಸೃಷ್ಟಿಸಿದ ಲಿಯೋನೆಲ್ ಮೆಸ್ಸಿ ತಂಡ, ಕೊಲಂಬಿಯಾ ಮಣಿಸಿ 16ನೇ ಬಾರಿ ಕೋಪಾ ಅಮೆರಿಕ ಪ್ರಶಸ್ತಿ ಗೆದ್ದ ಅರ್ಜೆಂಟೀನಾ - Argentina wins Copa America Title

ETV Bharat Logo

Copyright © 2025 Ushodaya Enterprises Pvt. Ltd., All Rights Reserved.