ETV Bharat / sports

ಭಾರತದಲ್ಲಿ ಇತಿಹಾಸ ನಿರ್ಮಿಸಿದ ನ್ಯೂಜಿಲೆಂಡ್‌; 92 ವರ್ಷಗಳ ಬಳಿಕ ತವರಿನಲ್ಲಿ ಟೀಂ ಇಂಡಿಯಾ ವೈಟ್​ವಾಶ್​ - IND VS NZ

ನ್ಯೂಜಿಲೆಂಡ್​ ವಿರುದ್ಧದ 3ನೇ ಟೆಸ್ಟ್​ ಪಂದ್ಯದಲ್ಲಿ ಭಾರತ 25 ರನ್​ಗಳಿಂದ​ ಸೋಲನುಭವಿಸಿದೆ.

ನ್ಯೂಜಿಲೆಂಡ್​ ತಂಡ
ನ್ಯೂಜಿಲೆಂಡ್​ ಕ್ರಿಕೆಟ್‌ ತಂಡ (AP)
author img

By ETV Bharat Sports Team

Published : Nov 3, 2024, 1:22 PM IST

ಹೈದರಾಬಾದ್​: ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 3ನೇ ಟೆಸ್ಟ್​ ಪಂದ್ಯದಲ್ಲಿ ಇಂದು ನ್ಯೂಜಿಲೆಂಡ್​ ತಂಡ ಭಾರತ ವಿರುದ್ಧ 25 ರನ್​ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್​ ಸರಣಿಯನ್ನು ಕಿವೀಸ್ ಕ್ಲೀನ್​ ಸ್ವೀಪ್​ ಮಾಡಿತು. ಇನ್ನೊಂದೆಡೆ, ಭಾರತ 92 ವರ್ಷಗಳ ನಂತರ ತವರಿನಲ್ಲಿ ನಡೆದ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್​ ಸರಣಿಯ ಎಲ್ಲಾ ಪಂದ್ಯಗಳನ್ನು ಸೋತು ವೈಟ್​ವಾಶ್​ ಆಯಿತು.

2000ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್​ ಸ್ವೀಪ್​ ಆಗಿತ್ತು. ಆದರೆ 3 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್​ ಪಂದ್ಯಗಳಲ್ಲಿ ಒಮ್ಮೆಯೂ ಕ್ಲೀನ್​ ಸ್ವೀಪ್​ ಆಗಿರಲಿಲ್ಲ.

ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 235 ರನ್‌ಗಳಿಗೆ ಸರ್ವಪತನ ಕಂಡಿದ್ದ ಕಿವೀಸ್​ ಪಡೆ ಎರಡನೇ ಇನ್ನಿಂಗ್ಸ್​ನಲ್ಲೂ ಸ್ಪಿನ್​ ಬಲೆಗೆ ಸಿಲುಕಿ 174 ರನ್​ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತಕ್ಕೆ 147 ರನ್​ಗಳ ಸಾಮಾನ್ಯ ಗುರಿ ನೀಡಿತ್ತು. ಇದನ್ನು ಬೆನ್ನತ್ತಿದ ಭಾರತ, ಅಜಾಜ್​ ಪಟೇಲ್​ ಸ್ಪೀನ್​ ದಾಳಿಗೆ ಸಿಲುಕಿ ಕೇವಲ 121 ರನ್​ಗಳಿಗೆ ಸರ್ವಪತನ ಕಂಡಿತು. ಭಾರತದ ಪರ ರಿಷಭ್​ ಪಂತ್​ ಅರ್ಧಶತಕ ಸಿಡಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳು ಕ್ರೀಸ್​ನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.