ETV Bharat / sports

ಐಸಿಸಿ ಟಿ20 ವಿಶ್ವಕಪ್​: ದಕ್ಷಿಣ ಆಫ್ರಿಕಾ ತಂಡಕ್ಕೆ ಮಾರ್ಕ್ರಮ್​ ನಾಯಕ, ಡಿ ಕಾಕ್​, ನೋಕಿಯಾಗೆ ಸ್ಥಾನ - South Africa T20 World Cup Team

ಜೂನ್​ನಲ್ಲಿ ಆರಂಭವಾಗುವ ಟಿ20 ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ ತಂಡವನ್ನು ಇಂದು ಪ್ರಕಟಿಸಲಾಗಿದೆ.

ದಕ್ಷಿಣ ಆಫ್ರಿಕಾ ತಂಡ
ದಕ್ಷಿಣ ಆಫ್ರಿಕಾ ತಂಡ
author img

By ETV Bharat Karnataka Team

Published : Apr 30, 2024, 4:11 PM IST

ಹೈದರಾಬಾದ್: ಐಸಿಸಿ ಪುರುಷರ ಟಿ20 ವಿಶ್ವಕಪ್-2024ಕ್ಕೆ ದಕ್ಷಿಣ ಆಫ್ರಿಕಾ ತಂಡವನ್ನು ಮಂಗಳವಾರ ಪ್ರಕಟಿಸಲಾಯಿತು. ಹಿರಿಯ ಆಟಗಾರರಾದ ಕ್ವಿಂಟನ್​ ಡಿ ಕಾಕ್​, ಆ್ಯನ್ರಿಚ್​ ನೋಕಿಯಾಗೆ ಸ್ಥಾನ ಸಿಕ್ಕರೆ, ಐಡೆನ್ ಮಾರ್ಕ್ರಮ್​ ಅವರಿಗೆ ನಾಯಕತ್ವ ನೀಡಲಾಗಿದೆ. ಮಾರ್ಕ್ರಮ್​ಗೆ ಇದು ಐಸಿಸಿ ಟೂರ್ನಿಯಲ್ಲಿ ಮೊದಲ ಮಹತ್ತರ ಹೊಣೆಯಾಗಿದೆ.

ಜೂನ್​ 2ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್​ನಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ನಾಳೆ ತಂಡಗಳನ್ನು ಘೋಷಿಸಲು ಅಂತಿಮ ದಿನವಾಗಿದೆ. ಈ ಗಡುವಿಗೆ ಒಂದು ದಿನ ಮೊದಲು ದಕ್ಷಿಣ ಆಫ್ರಿಕಾ ತನ್ನ 15 ಸದಸ್ಯರ ತಂಡವನ್ನು ಅಂತಿಮಗೊಳಿಸಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಯ ಕೇಂದ್ರ ಗುತ್ತಿಗೆಯಿಂದ ಹೊರಗುಳಿದಿರುವ ಆ್ಯನ್ರಿಚ್ ನೋಕಿಯಾ ಮತ್ತು ಕ್ವಿಂಟನ್ ಡಿ ಕಾಕ್​ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಬೆನ್ನು ನೋವಿನ ಕಾರಣ 2023ರಿಂದ ನೋಕಿಯಾ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಹೊರಗುಳಿದಿದ್ದರು. ಡಿ ಕಾಕ್ ಕಳೆದ ವರ್ಷದ ವಿಶ್ವಕಪ್ ನಂತರ ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿದ್ದರು. 2022ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಇಬ್ಬರು ಹೊಸಬರಿಗೆ ಚಾನ್ಸ್​: ತಂಡದಲ್ಲಿ ಇಬ್ಬರು ಹೊಸಬರಿಗೆ ಅವಕಾಶ ಸಿಕ್ಕಿದೆ. ಇತ್ತೀಚೆಗೆ ನಡೆದ SA20 ಪಂದ್ಯಾವಳಿಯಲ್ಲಿ 173.77 ಸರಾಸರಿಯಲ್ಲಿ ಬ್ಯಾಟ್​ ಬೀಸಿ 530 ರನ್​ ಕಲೆಹಾಕಿದ್ದ ಎಂಐ ಕೇಪ್​ಟೌನ್​ ತಂಡದ ರಿಯಾನ್​ ಒಟ್ನಿಯೆಲ್​ ಮತ್ತು ಹಾಲಿ ಚಾಂಪಿಯನ್​ ಸನ್‌ರೈಸರ್ಸ್ ಈಸ್ಟರ್ನ್ ಕೇಪ್‌ ತಂಡದ ಒಟ್ನಿಯೆಲ್ ಬಾರ್ಟ್‌ಮನ್​ಗೆ ಚೊಚ್ಚಲ ಬಾಗಿಲು ತೆರೆದಿದೆ. ಬಾರ್ಟ್‌ಮನ್ ಟಿ-20 ಟೂರ್ನಿಯಲ್ಲಿ 8 ಪಂದ್ಯಗಳಲ್ಲಿ 18 ವಿಕೆಟ್​ ಉರುಳಿಸಿದ್ದರು.

ಮಾರ್ಕ್ರಮ್​ಗೆ ಕ್ಯಾಪ್ಟನ್ಸಿ: ಐಡೆನ್ ಮಾರ್ಕ್ರಮ್​ಗೆ ಐಸಿಸಿ ಟೂರ್ನಿಯಲ್ಲಿ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದ್ದರೆ, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್ ಮತ್ತು ಭರವಸೆ ಮೂಡಿಸಿರುವ ಟ್ರಿಸ್ಟಾನ್ ಸ್ಟಬ್ಸ್‌ಗೆ ಮಣೆ ಹಾಕಲಾಗಿದೆ.

ವೇಗಿಗಳ ಬೌಲಿಂಗ್​ ಪಡೆಯಲ್ಲಿ ಕಗಿಸೊ ರಬಾಡ, ಮಾರ್ಕೊ ಜಾನ್ಸನ್, ಜೆರಾಲ್ಡ್ ಕೊಯೆಟ್ಜಿ ಇದ್ದರೆ, ಜಾರ್ನ್ ಫೋರ್ಚುಯಿನ್, ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ ಸ್ಪಿನ್​ ಜಾದೂಗಾರರಾಗಿದ್ದಾರೆ.

ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ಜಾರ್ನ್ ಫೋರ್ಚುಯಿನ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಆನ್ರಿಚ್ ನೋಕಿಯಾ, ಕಗಿಸೊ ರಬಾಡ, ರಿಯಾನ್‌ಹ್ಯಾಮ್, ಟ್ರಿಸ್ಟಾನ್ ಸ್ಟಬ್ಸ್.

ಮೀಸಲು ಆಟಗಾರರು: ನಂಡ್ರೆ ಬರ್ಗರ್ ಮತ್ತು ಲುಂಗಿ ಎಂಗಿಡಿ.

ಇದನ್ನೂ ಓದಿ: T20 ವಿಶ್ವಕಪ್​ಗೆ ಕಿವೀಸ್​ ತಂಡ ಪ್ರಕಟ: ವಿಲಿಯಮ್ಸನ್​ಗೆ ನಾಯಕತ್ವ, ರಚಿನ್​ ರವೀಂದ್ರಗೆ ಸ್ಥಾನ - T20 ವಿಶ್ವಕಪ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.