ETV Bharat / sports

2024ರ ಟಿ-20 ವಿಶ್ವಕಪ್​: ಬಾಂಗ್ಲಾದೇಶದ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ರೋಚಕ ಗೆಲುವು - South Africa Victory

2024ರ ಟಿ-20 ವಿಶ್ವಕಪ್​ನಲ್ಲಿ ಬೌಲರ್‌ಗಳ ಅಬ್ಬರ ಮುಂದುವರಿಯುತ್ತಿದೆ. ಸಣ್ಣ ಸ್ಕೋರ್​ ಗಳಿಸಿದರೂ ಬೌಲರ್​ಗಳ ನೆರವಿನಿಂದ ತಂಡಗಳು ಗೆಲುವು ಸಾಧಿಸುತ್ತಿವೆ. ಪಾಕಿಸ್ತಾನ ತಂಡದ ವಿರುದ್ಧ ಟೀಂ ಇಂಡಿಯಾ 119 ರನ್ ಗಳಿಸಿದ್ದರೆ, ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ 113 ರನ್ ಗಳಿಸಿತ್ತು. ಆದರೆ, ಅಮೋಘ ಬೌಲಿಂಗ್ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾವನ್ನು ಮಣಿಸಿದೆ.

ICC MENS T20 WORLD CUP 2024  T20 WORLD CUP 2024  ICC  South Africa Vs Bangladesh
2024ರ ಟಿ-20 ವಿಶ್ವಕಪ್​: ಬಾಂಗ್ಲಾದೇಶದ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ರೋಚಕ ಗೆಲುವು (AP Photo)
author img

By ETV Bharat Karnataka Team

Published : Jun 11, 2024, 7:40 AM IST

ದಕ್ಷಿಣ ಆಫ್ರಿಕಾ ವಿರುದ್ಧ ಟಿ-20ಯಲ್ಲಿ ಮೊದಲ ಬಾರಿಗೆ ಗೆಲ್ಲುವ ಸಾಧಿಸುವ ಉತ್ಸಾಹದಲ್ಲಿದ್ದ ಬಾಂಗ್ಲಾದೇಶ ಕೊನೆಗೂ ಸೋಲು ಅನುಭವಿಸಿದೆ. ಬಾಂಗ್ಲಾ ತಂಡ 114 ರನ್‌ಗಳ ಸಣ್ಣ ಗುರಿ ತಲುಪಲು ವಿಫಲರಾಗಿ ಅಂತಿಮವಾಗಿ ಸೋತು ಶರಣಾಯಿತು. ದಕ್ಷಿಣ ಆಫ್ರಿಕಾ 4 ರನ್ ಗಳಿಂದ ಗೆದ್ದು ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ಈ ಗೆಲುವಿನೊಂದಿಗೆ, ದಕ್ಷಿಣ ಆಫ್ರಿಕಾ ಪ್ರಸ್ತುತ ಮೂರು ಜಯ ಮತ್ತು ಆರು ಪಾಯಿಂಟ್‌ಗಳೊಂದಿಗೆ ಡಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಸೂಪರ್-8 ರಲ್ಲೂ ಸ್ಥಾನ ಗಿಟ್ಟಿಸಿಕೊಳ್ಳಲು ಬಹುತೇಕ ಖಚಿತ ಎಂಬಂತೆ ಕಾಣುತ್ತಿದೆ.

ಸೋಮವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 113 ರನ್ ಗಳಿಸಿತು. ಬಾಂಗ್ಲಾ ಬೌಲರ್‌ಗಳಾದ ತಂಜಿಮ್ ಹಸನ್ (3/18) ಮತ್ತು ತಸ್ಕಿನ್ ಅಹ್ಮದ್ (2/19) ಭರ್ಜರಿ ಮಿಂಚಿದರು. ಪಂದ್ಯ ಶ್ರೇಷ್ಠ ಆಟಗಾರ ಕ್ಲಾಸೆನ್ (46; 44 ಎಸೆತಗಳಲ್ಲಿ 2x4, 3x6), ಮಿಲ್ಲರ್ (29; 38 ಎಸೆತಗಳಲ್ಲಿ 1x4, 1x6) ಮತ್ತು ಡಿ ಕಾಕ್ (18) ಗಳಿಸಿ ಗಮನ ಸೆಳೆದರು. ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದ ಸೂಪರ್ ಬೌಲಿಂಗ್​ನಿಂದ ಚಿಕ್ಕ ಟಾರ್ಗೆಟ್​ ನೀಡಿತು.

ಚೇಸಿಂಗ್​ನಲ್ಲಿ ಬಾಂಗ್ಲಾ ತಂಡವು ತತ್ತರಿಸಿತು. 7 ವಿಕೆಟ್‌ಗೆ 109 ರನ್ ಗಳಿಸಲು ಶಕ್ತವಾಯಿತು. ತಂಡದ ಹೃದಯೋಯ್ (37) ಗರಿಷ್ಠ ಸ್ಕೋರರ್. ಮಹಮ್ಮದುಲ್ಲಾ (20) ರನ್ ಗಳಿಸಿದರು. ದಕ್ಷಿಣ ಆಫ್ರಿಕಾದ ಬೌಲರ್​ಗಳಾದ ಕೇಶವ್ ಮಹಾರಾಜ್ (3/27), ರಬಾಡ (2/19) ಮತ್ತು ನೋಕಿಯಾ (2/17) ಬಾಂಗ್ಲಾ ತಂಡಕ್ಕೆ ಭಾರಿ ಕಾಟಕೊಟ್ಟರು ತಂಡವನ್ನು ಹಾನಿಗೊಳಿಸಿದರು.

ಕೊನೆಯಲ್ಲಿ ಬಾಂಗ್ಲಾ ತತ್ತರ: ಅಗ್ರ ಕ್ರಮಾಂಕದ ಆಟಗಾರರ ವೈಫಲ್ಯದಿಂದ ಬಾಂಗ್ಲಾದೇಶ 50 ರನ್​ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಆ ವೇಳೆ ತೌಹೀದ್ ಹೃದಯೋಯ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಯತ್ನಿಸಿದರು. ಮಹಮ್ಮದುಲ್ಲಾ ಅವರಿಗೆ ಸಹಾಯ ಮಾಡಿದರು. ಇಬ್ಬರೂ ಸಾಧ್ಯವಾದಾಗಲೆಲ್ಲಾ ಬೌಂಡರಿ ಬಾರಿಸುವ ಮೂಲಕ ಸ್ಕೋರ್ ಬೋರ್ಡ್ ಅನ್ನು ಮುಂದಕ್ಕೆ ತಳ್ಳಿದರು. ಆದರೆ, 18ನೇ ಓವರ್​ನಲ್ಲಿ ರಬಾಡ ಕೇವಲ 2 ರನ್ ನೀಡಿ ಅಬ್ಬರದ ಆಟವಾಡುತ್ತಿದ್ದ ಹೃದಯೋಯ್ ಅವರನ್ನು ಔಟ್ ಮಾಡಿ ಪಂದ್ಯಕ್ಕೆ ತಿರುವು ನೀಡಿದರು. ಕೊನೆಯ ಓವರ್‌ನಲ್ಲಿ 11 ರನ್‌ಗಳ ಅಗತ್ಯವಿದ್ದಾಗ ಸ್ಪಿನ್ನರ್ ಕೇಶವ್ 6 ರನ್ ನೀಡಿ ಎರಡು ವಿಕೆಟ್ ಪಡೆದರು. ಇದರಿಂದ ಬಾಂಗ್ಲಾ ತಂಡ ತುಂಬಾ ನಿರಾಸೆ ಅನುಭವಿಸಿತು.

ಇದನ್ನೂ ಓದಿ: 'ಭಾರತ ಗೆಲ್ಲಲಿಲ್ಲ, ಪಾಕಿಸ್ತಾನ ಸೋತಿತು': ಪಾಕ್ ಮಾಜಿ ನಾಯಕ ಮುಷ್ತಾಕ್ ಮೊಹಮ್ಮದ್ - Mushtaq Mohammad

ETV Bharat Logo

Copyright © 2024 Ushodaya Enterprises Pvt. Ltd., All Rights Reserved.