ETV Bharat / sports

ಅಬ್ಬಾ! 2023ರ ಐಪಿಎಲ್​ನಿಂದ ಬಿಸಿಸಿಐ ಗಳಿಸಿದ ಲಾಭ ಎಷ್ಟು ಗೊತ್ತಾ?: ಇದು ಪಾಕ್​ ಕ್ರಿಕೆಟ್​ ಬಜೆಟ್​ಗಿಂತಲೂ ಅಧಿಕ! - BCCI Profit - BCCI PROFIT

ಕಳೆದ ವರ್ಷ ಐಪಿಎಲ್​ ಟೂರ್ನಿಯಿಂದ ಬಿಸಿಸಿಐ ಎಷ್ಟು ಲಾಭಗಳಿಸಿದೆ ಎಂದು ವರದಿಯಾಗಿದೆ. ಅವುಗಳ ವಿವರ ಈ ಕೆಳಗಿದೆ.

ಐಪಿಎಲ್ ಟ್ರೋಫಿ
ಐಪಿಎಲ್ ಟ್ರೋಫಿ (IANS)
author img

By ETV Bharat Sports Team

Published : Aug 20, 2024, 6:57 PM IST

ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆದಾಯ ವರ್ಷ ಕಳೆದಂತೆ ಹೆಚ್ಚಾಗುತ್ತಿದೆ. ಕಳೆದ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)​ ಟೂರ್ನಿಯೊಂದರಿಂದಲೇ ಮಂಡಳಿಯ ಖಜಾನೆ ತುಂಬಿ ತುಳುಕುತ್ತಿದೆ.

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, 2023ರ ಐಪಿಎಲ್ ಟೂರ್ನಿಯಿಂದ ಬಿಸಿಸಿಐ 5,120 ಕೋಟಿ ರೂಪಾಯಿ ಗಳಿಸಿದೆ. 2022ರ ಐಪಿಎಲ್‌ನಿಂದ 2,367 ಕೋಟಿ ರೂ ಗಳಿಸಿತ್ತು.

ಜಾಗರಣ್ ವರದಿಯ ಪ್ರಕಾರ, 2023ರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಾರ್ಷಿಕ ಆದಾಯ ಸುಮಾರು 55 ಮಿಲಿಯನ್ ಡಾಲರ್. ಅಂದರೆ 460 ಕೋಟಿ ರೂ. ಬಿಸಿಸಿಐಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ. ಇದು ಎರಡು ದೇಶಗಳ ಕ್ರಿಕೆಟ್ ಮಂಡಳಿಗಳ ನಡುವಿನ ಹಣಕಾಸಿನ ವ್ಯವಹಾರದ ವ್ಯತ್ಯಾಸವನ್ನು ತೋರಿಸುತ್ತದೆ. 2023ರ ವೇಳೆಗೆ ಬಿಸಿಸಿಐ ವಾರ್ಷಿಕ ಆದಾಯ 2.25 ಶತಕೋಟಿ ಡಾಲರ್ ಆಗಿದೆ ಎಂದು ವರದಿ ತಿಳಿಸಿದೆ.

ಮತ್ತೊಂದು ವರದಿಯಂತೆ, ಐಪಿಎಲ್ 2023ರಿಂದ ಬಿಸಿಸಿಐನ ಒಟ್ಟು ಆದಾಯ 11,769 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 78ರಷ್ಟು ಹೆಚ್ಚಳವಾಗತೊಡಗಿದೆ. 2022-23ರಲ್ಲಿ ಬಿಸಿಸಿಐನ ವಾರ್ಷಿಕ ವರದಿಯ ಪ್ರಕಾರ, ಮಂಡಳಿಯ ಆದಾಯ ಶೇ 66ರಷ್ಟು ಹೆಚ್ಚಳಗೊಂಡಿದೆ. ಅಂದರೆ 6,648 ಕೋಟಿ ರೂ.ಗಳಷ್ಟು ಏರಿದೆ. ಡಿಸ್ನಿ ಸ್ಟಾರ್ ಚಾನೆಲ್​ 23,575 ಕೋಟಿ ರೂ.ಗೆ 2021ರಿಂದ 4 ವರ್ಷಗಳವರೆಗೆ ಐಪಿಎಲ್ ಪ್ರಸಾರದ ಹಕ್ಕು ಪಡೆದುಕೊಂಡಿತ್ತು. ಇದೂ ಕೂಡ ಬಿಸಿಸಿಐ ಖಜಾನೆ ಏರಿಕೆಗೆ ಕಾರಣವಾಗಿದೆ. ಐಪಿಎಲ್ 2023ರಿಂದ ಬಿಸಿಸಿಐ 5,000 ಕೋಟಿ ರೂ.ಗಳಷ್ಟು ಹೆಚ್ಚುವರಿ ಆದಾಯ ಗಳಿಸಿದೆ ಎಂದು ಇತ್ತೀಚಿನ ಹಣಕಾಸು ವರದಿಗಳು ಬಹಿರಂಗಪಡಿಸಿವೆ.

ಫ್ಲಡ್​ಲೈಟ್​ ಬಾಡಿಗೆಗೆ ಮುಂದಾದ ಪಾಕಿಸ್ತಾನ​: ಮತ್ತೊಂದೆಡೆ, ವಿಶ್ವದ 4ನೇ ಶ್ರೀಮಂತ ಕ್ರಿಕೆಟ್​ ಮಂಡಳಿ ಎನಿಸಿಕೊಂಡಿರುವ ಪಾಕಿಸ್ತಾನ, 2025ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಗಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜೊತೆಗೆ, ಖರ್ಚು ಕಡಿಮೆ ಮಾಡಲು ಮೈದಾನಗಳಿಗೆ ಬಾಡಿಗೆ ಫ್ಲಡ್‌ಲೈಟ್‌ ಮತ್ತು ಜನರೇಟರ್‌ ಅಳವಡಿಕೆಗೆ ಮಂಡಳಿ ಮುಂದಾಗಿದೆ. ಇದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅಲ್ಲಿನ ಕ್ರಿಕೆಟ್ ಮೈದಾನಗಳಲ್ಲಿ ಆಸನಗಳಾಗಲೀ, ಸ್ನಾನಗೃಹಗಳಾಗಲೀ ಇಲ್ಲ ಎಂದು ಮಾಧ್ಯಮಗಳಿಗೆ ಹೇಳಿದ್ದರು.

ಇದನ್ನೂ ಓದಿ: ವಿಶ್ವದ 10 ಶ್ರೀಮಂತ ಕ್ರಿಕೆಟ್​ ಮಂಡಳಿಗಳು ಯಾವುವು ಎಂದು ನಿಮಗೆ ಗೊತ್ತಾ? - Richest Cricket Boards

ETV Bharat Logo

Copyright © 2024 Ushodaya Enterprises Pvt. Ltd., All Rights Reserved.