ETV Bharat / sports

ಗೌತಮ್​ ಟೀಂ ಇಂಡಿಯಾದ ಕೋಚ್​ ಆದರೆ, ಯಾವ 'ಗಂಭೀರ' ಬದಲಾವಣೆ ತರಬಲ್ಲರು? - India Head Coach

author img

By ETV Bharat Karnataka Team

Published : May 31, 2024, 4:04 PM IST

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್​ ಹುದ್ದೆಗೆ ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಹೆಸರು ಸಾಕಷ್ಟು ಮುಂಚೂಣಿಗೆ ಬಂದಿದೆ. ಒಂದು ವೇಳೆ, ಅವರು ಟೀಂ ಇಂಡಿಯಾದ ಕೋಚ್ ಆಗಿ ಆಯ್ಕೆಯಾದರೆ, ಯಾವ ಬದಲಾವಣೆಗಳನ್ನು ತರಬಲ್ಲರು ಎಂಬ ಬಗ್ಗೆ ವರದಿ ಇಲ್ಲಿದೆ.

Gautam Gambhir
ಗೌತಮ್ ಗಂಭೀರ್ (ETV Bharat)

ಹೈದರಾಬಾದ್: ಟಿ-20 ವಿಶ್ವಕಪ್‌ನಂತಹ ಪ್ರಮುಖ ಮತ್ತು ಮಹತ್ವದ ಸರಣಿಗೆ ಯಾವುದೇ ತಂಡ ಸಜ್ಜಾದಾಗ ಸಾಮಾನ್ಯವಾಗಿ ಆ ತಂಡದ ತಯಾರಿ ಅಥವಾ ವಿಶ್ವಕಪ್ ಗೆಲ್ಲುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ, ಈ ಬಾರಿ ಭಾರತೀಯ ಕ್ರಿಕೆಟ್​ನಲ್ಲಿ ಮುಂದಿನ ಮುಖ್ಯ ಕೋಚ್ ನೇಮಕದ ಬಗ್ಗೆ ಅಭಿಮಾನಿಗಳಲ್ಲಿ ಊಹಾಪೋಹಗಳು ಹಬ್ಬಿಕೊಂಡಿವೆ.

ಟೀಂ ಇಂಡಿಯಾದ ಹಾಲಿ ಮುಖ್ಯ ಕೋಚ್​ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಜೂನ್ 2ರಿಂದ ಪ್ರಾರಂಭವಾಗುವ ಟಿ-20 ವಿಶ್ವಕಪ್ ಮುಕ್ತಾಯದೊಂದಿಗೆ ಕೊನೆಗೊಳ್ಳಲಿದೆ. ದ್ರಾವಿಡ್ ಅವರ ಮೂಲ ಅಧಿಕಾರಾವಧಿಯು 2023ರ ಏಕದಿನ ವಿಶ್ವಕಪ್​ಗೆ ಪೂರ್ಣಗೊಂಡಿತ್ತು. ಆದರೆ, ಬಿಸಿಸಿಐ ಕೆರಿಬಿಯನ್ ದ್ವೀಪಗಳು ಮತ್ತು ಅಮೆರಿಕಾದಲ್ಲಿ ನಡೆಯಲಿರುವ ಈ ಟಿ-20 ವಿಶ್ವಕಪ್​ವರೆಗೆ ವಿಸ್ತರಿಸಿದೆ. ಇದೀಗ ದ್ರಾವಿಡ್ ಕೋಚ್​ ಆಗಿ ಮುಂದುವರೆಯುವ ಆಸಕ್ತಿ ತೋರಿಸಿಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಮುಖ್ಯ ಕೋಚ್​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಮುಂದಿನ ಎರಡು ತಿಂಗಳಲ್ಲಿ ದ್ರಾವಿಡ್ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ಆಸ್ಟ್ರೇಲಿಯಾದ ಮಾಜಿ ಬ್ಯಾಟರ್‌ಗಳಾದ ಜಸ್ಟಿನ್ ಲ್ಯಾಂಗರ್ ಮತ್ತು ರಿಕಿ ಪಾಂಟಿಂಗ್ ಅವರ ಕೋಚ್ ಹುದ್ದೆಗೆ ಕೇಳಿ ಬಂದಿತ್ತು. ಬಳಿಕ ಇಬ್ಬರೂ ಬಹಿರಂಗವಾಗಿ ಈ ಪ್ರಸ್ತಾಪವನ್ನು ತಿರಸ್ಕರಿಸಿರುವುದಾಗಿ ಹೇಳಿಕೊಂಡಿದ್ದರು. ಮತ್ತೊಂದೆಡೆ, ಆಸೀಸ್​ ಕ್ರಿಕೆಟಿಗರನ್ನು ಯಾರನ್ನೂ ಸಂಪರ್ಕಿಸಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು.

ಇದೀಗ ಭಾರತ ತಂಡದ ಮಾಜಿ ಸದಸ್ಯ ಗೌತಮ್ ಗಂಭೀರ್ ಮುಂದಿನ ಭಾರತ ಮುಖ್ಯ ಕೋಚ್ ಆಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತಿವೆ. ಅವರು ಇದುವರೆಗೂ ಪರಿಪೂರ್ಣ ಕೋಚ್​ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿಲ್ಲ. ಆದರೆ, ಐಪಿಎಲ್​ನಲ್ಲಿ 2022 ಮತ್ತು 2023ರಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಮೆಂಟರ್​ ಆಗಿ ಕೆಲಸ ಮಾಡಿದ್ದಾರೆ. ಎರಡೂ ಆವೃತ್ತಿಗಳಲ್ಲಿ ಲಖನೌ ತಂಡವು ಪ್ಲೇಆಫ್‌ಗೇರಿತ್ತು. ಈ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮೆಂಟರ್ ಆಗಿದ್ದು, ಈ ತಂಡವು ಪ್ರಶಸ್ತಿಯನ್ನೂ ಗೆದ್ದಿದೆ ಎಂಬುವುದು ಗಮನಾರ್ಹ.

ಗಂಭೀರ್ ಕೋಚ್​ ಆದರೆ, ಯಾವ ಬದಲಾವಣೆ ತರಬಲ್ಲರು?: ಒಂದು ವೇಳೆ, ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆಯಾದರೆ, ಈ ಕೆಲ ಬದಲಾವಣೆಗಳನ್ನು ತರುವುದಂತೂ ಖಚಿತ. ತಂಡದಲ್ಲಿನ ಯುವ ಪ್ರತಿಭೆಗಳ ಬೆಂಬಲಿಸುವುದು ಮತ್ತು ಅವರ ಆಟದಲ್ಲಿ ಸುಧಾರಣೆಯನ್ನು ತರಬಲ್ಲರು. ಇದನ್ನು ನಾಯಕ ಮತ್ತು ಮೆಂಟರ್​ ಆಗಿ ಗಂಭೀರ್ ತೋರಿಸಿಕೊಟ್ಟಿದ್ದಾರೆ.

2023ರ ಐಪಿಎಲ್​ನಲ್ಲಿ ಹರ್ಷಿತ್ ರಾಣಾ ಮತ್ತು ವೈಭವ್ ಅರೋರಾ ಕೆಕೆಆರ್​ ತಂಡದಲ್ಲಿದ್ದರು. ಆದರೆ, ಗಂಭೀರ್ ಆಗಮನವು ಇಬ್ಬರಲ್ಲೂ ಸಾಕಷ್ಟು ಸುಧಾರಣೆಯನ್ನು ತಂದಿದೆ. ಡೆಲ್ಲಿ ತಂಡದ ನಾಯಕತ್ವ ವಹಿಸಿಕೊಂಡಾಗ 2014/15ರ ಆವೃತ್ತಿಯಲ್ಲಿ ಗಂಭೀರ್ ವೇಗಿ ನವದೀಪ್ ಸೈನಿ ಅವರಿಗೆ ಪ್ರೋತ್ಸಾಹ ನೀಡಿದ್ದರು. ಇದರಿಂದ ಐದು ಪಂದ್ಯಗಳಲ್ಲಿ 15.50ರ ಬೌಲಿಂಗ್ ಸರಾಸರಿ ಮತ್ತು 40.8ರ ಸ್ಟ್ರೈಕ್ ರೇಟ್‌ನೊಂದಿಗೆ 16 ವಿಕೆಟ್‌ಗಳನ್ನು ಸೈನಿ ಪಡೆಯುವ ಮೂಲಕ ನಾಯಕನ ನಂಬಿಕೆ ಉಳಿಸಿದ್ದರು. 2015/16ರ ಆವೃತ್ತಿಯಲ್ಲಿ ನಿತೀಶ್ ರಾಣಾ ಗೌತಮ್​ ನಾಯಕತ್ವದಲ್ಲಿ ಪದಾರ್ಪಣೆ ಮಾಡಿದ್ದರು. ಆಗ ನಿತೀಶ್ ರಾಣಾ ಏಳು ಪಂದ್ಯಗಳಲ್ಲಿ 50.63 ಸರಾಸರಿಯೊಂದಿಗೆ 557 ರನ್ ಬಾರಿಸಿದ್ದರು.

ಆಕ್ರಮಣಶೀಲತೆ ಮತ್ತು ಕಠಿಣ ನಿರ್ಧಾರಗಳಿಗೆ ಸೈ: ಮೈದಾನದಲ್ಲಿ ಗೌತಮ್ ಗಂಭೀರ್ ತಾವೊಬ್ಬ ಆಕ್ರಮಣಶೀಲ ಆಟಗಾರರ ಎಂಬುವುದನ್ನು ಹಿಂದೆ ತೋರಿದ್ದಾರೆ. ಪ್ರಸ್ತುತ ಕೆಕೆಆರ್​ ಮೆಂಟರ್​ ಆಗಿಯೂ ಅವರು ತಮ್ಮ ಅಭಿಪ್ರಾಯಗಳ ಬಗ್ಗೆ ಧ್ವನಿಯೆತ್ತುವ ಮೂಲಕ ಹೆಸರುವಾಸಿಯಾಗಿದ್ದಾರೆ. ಈ ಆಕ್ರಮಣಶೀಲತೆಯು ತಂಡಕ್ಕೆ ಮತ್ತೊಂದು ಪ್ರಮುಖ ಅಂಶವೂ ಆಗಬಹುದು. ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸಿದಾಗ ಅವರ ಆಕ್ರಮಣಕಾರಿ ಮನಸ್ಸು ಆಟಗಾರರ ಮೂಲಕ ಹೊರಹೊಮ್ಮಿತ್ತು. ಮೈದಾನದಲ್ಲಿ ಆಟಗಾರರು ತುಂಬಾ ರೋಮಾಂಚಕರಾಗಿದ್ದರು.

ಈಗ ಗಂಭೀರ್, ಕೊಹ್ಲಿ ಅವರೊಂದಿಗೆ ತಂಡವನ್ನು ಸೇರಿಕೊಂಡರೆ, ಆಕ್ರಮಣಶೀಲ ಜೋಡಿಯು ತಂಡವು ಅತ್ಯುತ್ತಮ ಪ್ರದರ್ಶನ ನೀಡಲು ಉತ್ತೇಜಿಸಬಹುದು. ಜೊತೆಗೆ ರಾಷ್ಟ್ರೀಯ ತಂಡದಲ್ಲಿ ಅಗತ್ಯವಾದ ಯಾವುದೇ ಕಠಿಣ ನಿಲುವುಗಳನ್ನು ತೆಗೆದುಕೊಳ್ಳಲು ಗಂಭೀರ್ ಯೋಚನೆ ಮಾಡುವುದಿಲ್ಲ.

ಕೋಚ್​ ಆಗಿ ಅನುಭವದ ಕೊರತೆ: ಗಂಭೀರ್ ಕೋಚ್​ ಆಗಿದ್ದರೆ, ತಂಡದಲ್ಲಿ ಹಲವು ಪಾಸಿಟಿವ್​ ಬದಲಾವಣೆಗಳನ್ನು ತರುವ ನಿರೀಕ್ಷೆ ಇದ್ದರೂ, ಇದರಲ್ಲಿ ಕೆಲವು ನೆಗಟಿವ್ ಅಂಶಗಳೂ ಇವೆ. ಪ್ರಮುಖವಾದ ಅಂಶವೆಂದರೆ, ಅವರು ಯಾವುದೇ ತಂಡಕ್ಕೆ ಕೋಚ್ ಆಗಿ ಕೆಲಸ ಮಾಡಿಲ್ಲ. ಲಖನೌ ಮತ್ತು ಕೆಕೆಆರ್​ ತಂಡಗಳಿಗೆ ಮೆಂಟರ್​ ಆಗಿದ್ದರೂ, ಆಯಾ ಸಂದರ್ಭದಲ್ಲಿ ಎರಡೂ ತಂಡಗಳಿಗೆ ಬೇರೆಯವರು ಮುಖ್ಯ ಮುಖ್ಯ ಕೋಚ್ ಆಗಿದ್ದರು. ಹೀಗಾಗಿ ಅವರಿಗೆ ಅನುಭವದ ಕೊರತೆ ಅಡ್ಡಿಯಾಗಬಹುದು.

ಹೆಚ್ಚಿನ ಓದಿಗಾಗಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.