ETV Bharat / sports

ಕತಾರ್​ ಮೋಸದಾಟಕ್ಕೆ ಭಾರತ ಫುಟ್ಬಾಲ್​ ತಂಡ ಬಲಿ: ವಿಶ್ವಕಪ್​ ಅರ್ಹತಾ ಟೂರ್ನಿಯಿಂದ ಔಟ್​ - FIFA World Cup

ದೋಹಾದಲ್ಲಿ ನಡೆದ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿಯಲ್ಲಿ ಕತಾರ್​ನ ಮೋಸದಾಟಕ್ಕೆ ಭಾರತ ಫುಟ್ಬಾಲ್​ ತಂಡ ಆಘಾತ ಅನುಭವಿಸಿತು.

ಕತಾರ್​ ಮೋಸದಾಟಕ್ಕೆ ಭಾರತ ಫುಟ್ಬಾಲ್​ ತಂಡ ಬಲಿ
ಕತಾರ್​ ಮೋಸದಾಟಕ್ಕೆ ಭಾರತ ಫುಟ್ಬಾಲ್​ ತಂಡ ಬಲಿ (IANS)
author img

By ANI

Published : Jun 12, 2024, 4:20 PM IST

ದೋಹಾ(ಕತಾರ್​): ಕ್ರಿಕೆಟ್​​ನಂತೆ ಫುಟ್ಬಾಲ್​ನಲ್ಲಿ ಮಹತ್ತರ ಬದಲಾವಣೆ ತರಬೇಕಿದೆ. ಈ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣ, ಕತಾರ್​ನ ಮೋಸದಾಟಕ್ಕೆ ಭಾರತ ಫುಟ್ಬಾಲ್​ ತಂಡ ಬಲಿಯಾಗಿರುವುದು. ಈ ಸೋಲಿನಿಂದ ಭಾರತ ತಂಡ 2026ರ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿಯಿಂದ ಹೊರಬಿದ್ದರೆ, 2027ರ ಏಷ್ಯನ್​ ಕಪ್​ಗೆ ನೇರ ಅರ್ಹತೆ ಪಡೆಯಲು ವಿಫಲವಾಗಿ ಡಬಲ್​ ಶಾಕ್​ ಅನುಭವಿಸಬೇಕಾಯಿತು.

ದೋಹಾದಲ್ಲಿ ನಿನ್ನೆ (ಮಂಗಳವಾರ) ನಡೆದ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿಯ 2ನೇ ಸುತ್ತಿನಲ್ಲಿ ಏಷ್ಯನ್​ ಚಾಂಪಿಯನ್​ ಕತಾರ್​ ತಂಡದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಮೋಸದಾಟಕ್ಕೆ ಸೋಲು ಕಂಡಿತು. ನಿರ್ಣಾಯಕ ಪಂದ್ಯದಲ್ಲಿ ಗೆಲುವಿಗಾಗಿ ಹೋರಾಡುತ್ತಿದ್ದ ಭಾರತಕ್ಕೆ ಕತಾರ್​ ಎಸಗಿದ ದ್ರೋಹದಿಂದ 1-2 ಗೋಲುಗಳಿಂದ ನಿರಾಸೆ ಅನುಭವಿಸಿತು.

2 ಬಾರಿಯ ಏಷ್ಯನ್​ ಚಾಂಪಿಯನ್​ ಆದ ಕತಾರ್​ ವಿರುದ್ಧ ಭಾರತ ಉತ್ತಮ ಆಟವಾಡುತ್ತಿತ್ತು. ಮೊದಲಾರ್ಧದ 37ನೇ ನಿಮಿಷದಲ್ಲಿ ಭಾರತದ ಲಾಲಿಯನ್ಜುವಾಲಾ ಚಾಂಗ್ಟೆ ಆಕರ್ಷಕ ಕಾಲ್ಚಳಕದಿಂದ ಮೊದಲ ಗೋಲು ದಾಖಲಾಯಿತು. 1-0 ಯಲ್ಲಿ ಮುನ್ನಡೆದ ಭಾರತ ಮೊದಲಾರ್ಧದಲ್ಲಿ ಕತಾರ್​ಗೆ ಗೋಲು ಬಿಟ್ಟುಕೊಡದೇ ಮುನ್ನಡೆ ಸಾಧಿಸಿತು.

ಕತಾರ್​ ಮೋಸದಾಟ ಹೇಗೆ?: ಬಳಿಕ ದ್ವಿತೀಯಾರ್ಧದಲ್ಲಿ ಗೋಲು ಬಾರಿಸುವ ಬದಲಿಗೆ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಭಾರತಕ್ಕೆ ಕತಾರ್​ ಮೋಸ ಮಾಡಿತು. 75ನೇ ನಿಮಿಷದಲ್ಲಿ ಕತಾರ್ ಗೋಲು ಗಳಿಸುವ ಪ್ರಯತ್ನ ಮಾಡಿತು. ಗೋಲು ಪೆಟ್ಟಿಗೆಯ ಅಂಚಿನಲ್ಲಿ ನಡೆದ ಚಕಮಕಿಯಲ್ಲಿ ಚೆಂಡು ಗೆರೆ ದಾಟಿ ಹೋಯಿತು. ಇದರಿಂದ ಭಾರತದ ಗೋಲ್​ಕೀಪರ್​ ಮತ್ತು ನಾಯಕರಾದ ಗುರ್​ಪ್ರೀತ್​ ಸಿಂಗ್ ಚೆಂಡನ್ನು ಹಿಡಿಯಲು ಪ್ರಯತ್ನಿಸಲಿಲ್ಲ.

ಆದರೆ, ಕತಾರ್​ನ ಅಲ್​ ಹಸನ್​ ಹೊರ ಹೋಗಿದ್ದ ಚೆಂಡನ್ನು ಒಳ ಎಳೆದುಕೊಂಡು ಯೂಸುಫ್​ ಅಯೆಮ್​ಗೆ ಪಾಸ್​ ನೀಡಿದರು. ಯೂಸುಫ್​ ಚೆಂಡನ್ನು ತಕ್ಷಣವೇ ಗೋಲಿಗೆ ತಳ್ಳಿ ಸಂಭ್ರಮಿಸಲು ಶುರು ಮಾಡಿದರು. ಭಾರತೀಯ ಆಟಗಾರರು ಇದನ್ನು ಪ್ರಶ್ನಿಸಿದರು. ಚೆಂಡು ಹೋಗಿದೆ ಎಂದು ರೆಫ್ರಿ ಬಳಿ ದೂರಿದರು. ಆದರೆ, ರೆಫ್ರಿಗಳು ಗೋಲು ಗಳಿಸಿದ ಅಂಕವನ್ನು ಕತಾರ್​ ನೀಡಿದರು. ಇದರಿಂದ ಭಾರತೀಯರು ಭಾರೀ ನಿರಾಸೆಗೆ ಒಳಗಾದರು.

ಬಳಿಕ ಆಟ ಮುಗಿಯಲು 5 ನಿಮಿಷ ಇದ್ದಾಗ (85ನೇ ನಿಮಿಷ) ಕತಾರ್​ ಮತ್ತೊಂದು ಗೋಲು ದಾಖಲಿಸಿ ವಿಜಯಾಚರಣೆ ಮಾಡಿತು. ಕತಾರ್​ಗೆ ಮುಖ್ಯವಾಗಿಲ್ಲದ ಪಂದ್ಯದಲ್ಲಿ ಮೋಸದಾಟವಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಂಡದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ.

ಭಾರತಕ್ಕೆ ಡಬಲ್​ ಶಾಕ್​, ಫಿಫಾಗೆ ದೂರು: ಈ ಸೋಲಿನ ಮೂಲಕ ಭಾರತ ಎರಡು ಆಘಾತ ಅನುಭವಿಸಿತು. 2026 ರಲ್ಲಿ ನಡೆಯುವ ಫಿಫಾ ವಿಶ್ವಕಪ್​ ಮತ್ತು 2027 ರ ಏಷ್ಯನ್​ ಕಪ್​ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಪಂದ್ಯದಲ್ಲಾದ ಮೋಸದ ಬಗ್ಗೆ ಭಾರತ ಫುಟ್ಬಾಲ್​ ಸಂಸ್ಥೆ ಅಂತಾರಾಷ್ಟ್ರೀಯ ಫುಟ್ಬಾಲ್​ ಸಂಸ್ಥೆಗೆ ಪತ್ರ ಬರೆದು ದೂರು ನೀಡಿದೆ.

ವಿವಾದಾತ್ಮಕ ಗೋಲು ನೀಡಿದ್ದು, ಭಾರತೀಯರನ್ನು ಘಾಸಿಗೊಳಿಸಿದೆ. ಗೆಲುವು, ಸೋಲನ್ನು ತಂಡ ವಿನಮ್ರವಾಗಿ ಒಪ್ಪುತ್ತದೆ. ಆದರೆ, ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ ಎಂದು ಪತ್ರದಲ್ಲಿ ನಮೂದಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯ ಕೋಚ್​ ಇಗೊರ್​ ಸ್ಟಿಮ್ಯಾಕ್​, ಭಾರತೀಯರು ಹೆಮ್ಮೆ ಪಡುವಂತೆ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ವಿವಾದದಿಂದಾಗಿ ತಂಡ ಸೋತಿದೆ. ಟಿವಿ ರಿಪ್ಲೈನಲ್ಲಿ ಸತ್ಯ ಕಾಣಿಸುತ್ತದೆ. ಆದಾಗ್ಯೂ ತಂಡ ಸೋತು ಭಾರತೀಯರನ್ನು ನಿರಾಸೆ ತಂದಿದ್ದಕ್ಕೆ ಬೇಸರವಿದೆ ಎಂದರು.

ಇದನ್ನೂ ಓದಿ: ಅಲೆಕ್ಸಾಂಡರ್ ಜ್ವೆರೆವ್ ಮಣಿಸಿ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದ ಕಾರ್ಲೋಸ್ ಅಲ್ಕರಾಜ್ - French Open

ETV Bharat Logo

Copyright © 2024 Ushodaya Enterprises Pvt. Ltd., All Rights Reserved.