Eng vs NZ 2nd Test: ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯ ಎರಡನೇ ಪಂದ್ಯದಲ್ಲಿ ಆಂಗ್ಲ ಬ್ಯಾಟರ್ ಶತಕ ಸಿಡಿಸಿ ರಾಹುಲ್ ದ್ರಾವಿಡ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ವೆಲ್ಲಿಂಗ್ಟನ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 280ರನ್ ಗಳಿಸಿತು. ತಂಡದ ಪರ ಹ್ಯಾರಿ ಬ್ರೂಕ್ ಮತ್ತು ಓಲಿ ಪೋಪ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಬ್ರೂಕ್ ಶತಕ ಸಮೇತ 123 ರನ್ ಕಲೆಹಾಕಿದರೇ, ಪೋಪ್ 66 ರನ್ಗಳೊಂದಿಗೆ ಅರ್ಧಶತಕ ಸಿಡಿಸಿ ತಂಡದ ಸ್ಕೋರ್ಗೆ ಕೊಡುಗೆ ನೀಡಿದರು. ಇದಕ್ಕುತ್ತರವಾಗಿ ನ್ಯೂಜಿಲೆಂಡ್ 125 ರನ್ಗಳಿಗೆ ಸರ್ವಪತನ ಕಂಡಿತು. ಆಕಿನ್ಸನ್ ಮತ್ತು ಬ್ರೈಡನ್ ಕೆರ್ಸೆ ಬೌಲಿಂಗ್ ದಾಳಿಗೆ ಸಿಲುಕಿದ ಕಿವೀಸ್ ಪಡೆ ಪೆವಿಲಿಯನ್ ಪರೇಡ್ ಮಾಡಿತು.
Joe Root... That is RIDICULOUS! 🤯
— England Cricket (@englandcricket) December 7, 2024
He reaches three figures in style, ramping his way to a THIRTY-SIXTH Test century! pic.twitter.com/EFNXzRlatp
155 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಂಗ್ಲರು ಬೃಹತ್ ಮೊತ್ತ ಪೇರಿಸಿದರು. ಬೆನ್ ಡಕೆಟ್ (92), ಜಾಕೋಬ್ ಬೆಥೆಲ್ (96), ಹ್ಯಾರಿ ಬ್ರೂಕ್ (55), ಸ್ಟೋಕ್ಸ್ (49), ರೂಟ್ (106) ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 427 ರನ್ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿತು. 582 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್, ಟಾಮ್ ಬ್ಲಂಡೆಲ್ (115), ನಥನ್ ಸ್ಮಿತ್ (42) ಬ್ಯಾಟಿಂಗ್ ನೆರವಿನಿಂದ 259ರನ್ ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ 323 ರನ್ಗಳೊಂದಿಗೆ 16 ವರ್ಷಗಳ ಬಳಿಕ ನ್ಯೂಜಿಲೆಂಡ್ನಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡಿತು. ಇದರಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸುವ ಮೂಲಕ ಜೋ ರೂಟ್ ದಾಖಲೆ ಬರೆದಿದ್ದಾರೆ.
And we've declared 🤝
— England Cricket (@englandcricket) December 7, 2024
Joe Root nicks off and Ben Stokes says enough's enough. We lead by 5️⃣8️⃣2️⃣ runs in Wellington.
🏴 4️⃣2️⃣7️⃣-6️⃣ (dec) pic.twitter.com/5obxXK8sZR
ಜೋ ರೂಟ್ 36ನೇ ಶತಕ; ಎರಡನೇ ಇನ್ನಿಂಗ್ಸ್ನಲ್ಲಿ 73 ರನ್ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಜೋ ರೂಟ್ ಶತಕ ಬಾರಿಸಿ ತಮ್ಮ ಟೆಸ್ಟ್ ವೃತ್ತಿಜೀವನದ 36ನೇ ಸೆಂಚುರಿಯನ್ನು ಪೂರ್ಣಗೊಳಿಸಿದರು. ಈವೆರಗೆ 151 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 276 ಇನ್ನಿಂಗ್ಸ್‌ಗಳಲ್ಲಿ 50.93ರ ಸರಾಸರಿಯಲ್ಲಿ 12,886ರನ್ ಗಳಿಸಿದ್ದಾರೆ. 36ನೇ ಶತಕ ಜೊತೆಗೆ ರೂಟ್ ದ್ರಾವಿಡ್ ದಾಖಲೆಯನ್ನು ಸರಿಗಟ್ಟಿದ್ದಾರೆ. ರಾಹುಲ್ ದ್ರಾವಿಡ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 164 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 286 ಇನ್ನಿಂಗ್ಸ್‌ಗಳಲ್ಲಿ 52.31ರ ಸರಾಸರಿಯಲ್ಲಿ 13,288 ರನ್ ಗಳಿಸಿದ್ದಾರೆ. ಇದರಲ್ಲಿ 36 ಶತಕ ಮತ್ತು 63 ಅರ್ಧ ಶತಕಗಳು ಸೇರಿವೆ.
ಇದನ್ನೂ ಓದಿ: ಟೆಸ್ಟ್ನಲ್ಲಿ 5 ಲಕ್ಷ ರನ್ ಪೂರ್ಣಗೊಳಿಸಿದ ಇಂಗ್ಲೆಂಡ್: ವಿಶ್ವದ ಏಕೈಕ ತಂಡವಾಗಿ ದಾಖಲೆ; 3ನೇ ಸ್ಥಾನದಲ್ಲಿದೆ ಭಾರತ!