ETV Bharat / sports

ಆಡಿದ್ದು 25 ಒಲಿಂಪಿಕ್​, ಪದಕ ಮಾತ್ರ 0: ಈ ರಾಷ್ಟ್ರಗಳಿಗೆ ಮೆಡಲ್​​ ಮರೀಚಿಕೆ! - Paris Olympic 2024

ಒಲಿಂಪಿಕ್​ನಲ್ಲಿ ಇದೂವರೆಗೂ ಒಂದೇ ಒಂದೂ ಪದಕವನ್ನೂ ಗೆಲ್ಲದ 62 ರಾಷ್ಟ್ರಗಳಿವೆ. ಅವು ಯಾವವು ಗೊತ್ತಾ?. ಈ ಕೆಳಗಿದೆ ಸಂಪೂರ್ಣ ಮಾಹಿತಿ.

ಒಲಿಂಪಿಕ್​ ಪದಕ ಗೆಲ್ಲದ ರಾಷ್ಟ್ರಗಳು
ಒಲಿಂಪಿಕ್​ ಪದಕ ಗೆಲ್ಲದ ರಾಷ್ಟ್ರಗಳು (ಫೋಟೋ ಕೃಪಿ (AP))
author img

By ETV Bharat Karnataka Team

Published : Jul 24, 2024, 7:58 PM IST

ಹೈದರಾಬಾದ್​: ವಿಶ್ವದಲ್ಲಿಯೇ ದೊಡ್ಡ ಕ್ರೀಡಾ ಕೂಟವಾದ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವುದು ಅಥ್ಲೀಟ್ಸ್​ಗಳ ಕನಸಾಗಿರುತ್ತದೆ. ಇದಕ್ಕಾಗಿ ಹಗಲಿರುಳು ಶ್ರಮಪಟ್ಟು ಅಭ್ಯಾಸ ನಡೆಸಿರುತ್ತಾರೆ. ಪದಕ ಗೆದ್ದಲ್ಲಿ ಇಡೀ ದೇಶವೇ ಅವರನ್ನು ಕೊಂಡಾಡುತ್ತದೆ, ಜತೆಗೆ ಬಹುಮಾನಗಳೂ ಕೂಡ ಹರಿದು ಬರುತ್ತವೆ.

ಚೀನಾ, ಅಮೆರಿಕ, ರಷ್ಯಾ, ಜಪಾನ್​ನಂತಹ ಹಲವು ರಾಷ್ಟ್ರಗಳು ಪದಗಳ ಕೊಳ್ಳೆಹೊಡೆಯುತ್ತವೆ. ಪದಕ ಪಟ್ಟಿಯಲ್ಲಿ ಈ ರಾಷ್ಟ್ರಗಳು ಯಾವಾಗಲೂ ಮುಂಚೂಣಿಯಲ್ಲಿರುತ್ತವೆ. ಇನ್ನು ಕೆಲ ರಾಷ್ಟ್ರಗಳಿಗೆ ಈ ಭಾಗ್ಯವೇ ಇರುವುದಿಲ್ಲ. ಭಾಗವಹಿಸಿದ ಈವರೆಗಿನ ಒಲಿಂಪಿಕ್ಸ್​ಗಳಲ್ಲಿ ಒಂದೂ ಪದಕವನ್ನು ಗೆಲ್ಲಲು ಸಾಧ್ಯವಾಗದೇ ನಿರಾಸೆ ಅನುಭವಿಸಿವೆ. ಇಂತಹ ದೇಶಗಳ ಸಂಖ್ಯೆ 62.

ಬಾಂಗ್ಲಾದೇಶ: ಪದಕಗಳನ್ನು ಗೆಲ್ಲದೇ ಇರುವ ರಾಷ್ಟ್ರಗಳ ಪೈಕಿ ಬಾಂಗ್ಲಾದೇಶ ಅತೀ ದೊಡ್ಡ ಮತ್ತು ಹೆಚ್ಚು ಜನಸಂಖ್ಯೆಯುಳ್ಳ ದೇಶ. ಇದು ಈವರೆಗೂ 10 ಬೇಸಿಗೆ ಒಲಿಂಪಿಕ್​ಗಳಲ್ಲಿ ಭಾಗವಹಿಸಿದ್ದರೂ ಪದಕಗಳ ಸಂಖ್ಯೆ ಮಾತ್ರ ಸೊನ್ನೆ.

ಕಾಂಗೋ: ಇದು ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. ಕಾಂಗೋ 13 ಬೇಸಿಗೆ ಒಲಿಂಪಿಕ್​ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದು, ಪದಕ ಜಯಿಸುವ ಅದೃಷ್ಟ ಮಾತ್ರ ಈ ದೇಶಕ್ಕೆ ಇನ್ನೂ ಬಂದೊದಗಿಲ್ಲ.

ಅಂಡೋರಾ: ಈ ರಾಷ್ಟ್ರ ಇದೂವರೆಗೂ 25 ಒಲಿಂಪಿಕ್​ಗಳಲ್ಲಿ ಭಾಗವಹಿಸಿರುವ ದೇಶವಾಗಿದೆ. ಆದರೇ ಇದೂ ವರೆಗೂ ಒಂದೇ ಒಂದೂ ಪದಕ ಗೆಲ್ಲಲೂ ಈ ದೇಶಕ್ಕೆ ಸಾಧ್ಯವಾಗಿಲ್ಲ. ಇದು ಬೇಸಿಗೆ ಒಲಿಂಪಿಕ್​ನಲ್ಲಿ 12 ಬಾರಿ ಮತ್ತು ಚಳಿಗಾಲದ ಒಲಿಂಪಿಕ್​ನಲ್ಲಿ 13 ಬಾರಿ ಭಾಗವಹಿಸಿದೆ.​

ಮೊನಾಕೊ: ಅಂಡೋರಾ ಬಳಿಕ ಹೆಚ್ಚು ಒಲಿಂಪಿಕ್​ ಆಡಿರುವ ಮೊನಾಕೊಗೆ ಪದಕದ ಅದೃಷ್ಠದ ಬಾಗಿಲು ಇನ್ನೂ ತೆರೆದಿಲ್ಲ. ಈ ದೇಶ ಇದೂವರೆಗೂ 21 ಬೇಸಿಗೆ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದೆ.

ಅಲ್ಬೇನಿಯಾ: ಈ ದೇಶವೂ 1972 ರಿಂದ ಒಟ್ಟು 8 ಬಾರಿ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದೆ. ಇದನ್ನು ಪ್ರತಿನಿದಿಸುವ ಕ್ರೀಡಾಪಟುಗಳ ಸಂಖ್ಯೆಯೂ ಅತ್ಯಧಿಕವಾಗಿಯೇ ಇದೆ. ಆದರೇ ಈ ದೇಶ ಇದೂವರೆಗೂ ಒಂದೇ ಒಂದೂ ಪದಕವನ್ನು ಗೆದ್ದಿಲ್ಲ.

ಉಳಿದಂತೆ ಈ ಪಟ್ಟಿಯಲ್ಲಿ, ಅಂಗೋಲಾ, ಆಂಟಿಗುವಾ ಮತ್ತು ಬಾರ್ಬುಡಾ, ಅರುಬಾ, ಬೆಲೀಜ್, ಬೆನಿನ್, ಭೂತಾನ್, ಬೊಲಿವಿಯಾ, ಬೋಸ್ನಿಯಾ ಮತ್ತು ಹರ್ಜೆಗೋವಿನಿಯಾ, ಬ್ರೂನಿ, ಕಾಂಬೋಡಿಯಾ, ಕೇಪ್ ವರ್ಡೆ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಚಾಡ್, ಕೊಮೊರೊಸ್, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಡೊಮಿನಿಕಾ, ಎಲ್ ಸಾಲ್ವಡಾರ್, ಈಕ್ವಟೋರಿಯಲ್ ಗಿನಿಯಾ, ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ, ಗ್ಯಾಂಬಿಯಾ, ಗಿನಿಯಾ, ಗಿನಿ-ಬಿಸ್ಸೌ, ಹೊಂಡುರಾಸ್, ಕಿರಿಬಾಟಿ, ಲಾವೋಸ್, ಲೆಸೊಥೊ, ಲೈಬೀರಿಯಾ.

ಲಿಬಿಯಾ, ಲಿಚ್ಟೆನ್‌ಸ್ಟೈನ್, ಮಡಗಾಸ್ಕರ್, ಮಲಾವಿ, ಮಾಲ್ಡೀವ್ಸ್, ಮಾಲಿ, ಮಾಲ್ಟಾ, ಮಾರಿಟಾನಿಯಾ, ಮೊನಾಕೊ, ಮ್ಯಾನ್ಮಾರ್, ನೌರು, ನಿಕರಾಗುವಾ, ಓಮನ್, ಪಲಾವ್, ಪ್ಯಾಲೆಸ್ಟೈನ್, ಪಪುವಾ ನ್ಯೂಗಿನಿಯಾ, ರುವಾಂಡಾ, ಸೇಂಟ್ ಲೂಸಿಯಾ, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಸಾವೋ ಟೋಮ್ ಮತ್ತು ಪ್ರಿನ್ಸಿಪಿ, ಸೀಶೆಲ್ಸ್, ಸಿಯೆರಾ ಲಿಯೋನ್, ಸೊಮಾಲಿಯಾ, ದಕ್ಷಿಣ ಸುಡಾನ್, ಸ್ವಾಜಿಲ್ಯಾಂಡ್, ಟಿಮೋರ್-ಲೆಸ್ಟೆ, ತುರ್ಕಮೆನಿಸ್ತಾನ್, ಟುವಾಲು, ವನೌಟು, ಯೆಮೆನ್ ಈ ದೇಶಗಳು ಸೇರಿವೆ. ಇವುಗಳ ಪದಕ ಗೆಲ್ಲುವ ಕನಸು ಇನ್ನೂ ಕನಸಾಗಿಯೇ ಉಳಿದಿದೆ.

ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಅತ್ಯಂತ ಹಿರಿಯ, ಕಿರಿಯ ಕ್ರೀಡಾಪಟುಗಳು ಇವರೇ ನೋಡಿ! - Paris Olympics 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.