ಹೈದರಾಬಾದ್: ವೆಸ್ಟ್ ಇಂಡೀಸ್ನ ಮಾಜಿ ಬ್ಯಾಟರ್ ಮತ್ತು ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಸ್ಪೋಟಕ ಬ್ಯಾಟಿಂಗ್ನಿಂದಲೇ ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ದಾಖಲೆಗಳನ್ನು ಬರೆದಿರುವ ಗೇಲ್ ಬಾಲ್ಯದ ಜೀವನ ಹೋರಾಟದಿಂದ ಕೂಡಿತ್ತು. ಹಿಂದೊಮ್ಮೆ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಕಷ್ಟದ ಸಮಯವನ್ನು ಎದುರಿಸಿದ್ದ ಗೇಲ್ ಇಂದು ಕೋಟಿ ಕೋಟಿ ಆಸ್ತಿಯ ಒಡೆಯನಾಗಿದ್ದಾರೆ. ಹಾಗಾದರೆ ಗೇಲ್ ಎಷ್ಟು ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಈ ಸುದ್ಧಿಯಲ್ಲಿ ತಿಳಿಯಿರಿ.
ಗೇಲ್ ಹಿನ್ನೆಲೆ: ವೆಸ್ಟ್ ಇಂಡೀಸ್ನ ದೈತ್ಯ ಬ್ಯಾಟರ್ 21 ಸೆಪ್ಟೆಂಬರ್ 1979 ರಂದು ಜಮೈಕಾದ ಕಿಂಗ್ಸ್ಟನ್ನಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ಆರಂಭಿಕ ದಿನಗಳಲ್ಲಿ ಗೇಲ್ ಸಾಕಷ್ಟು ಆರ್ಥಿಕ ಸಮಸ್ಯಗಳನ್ನು ಎದುರಿಸಿದ್ದರು. ಕುಟುಂಬದ ನಿರ್ವಾಹಣೆಗಾಗಿ ಪ್ಲಾಸ್ಟಿಕ್ ಬಾಟಲ್ ಮತ್ತು ಕಸವನ್ನು ಸಂಗ್ರಹಿಸುತ್ತಿದ್ದರು. ಅಲ್ಲದೇ ವಾಸಿಸಲು ಸರಿಯಾದ ಮನೆಯಿಲ್ಲದೇ ಪುಟ್ಟ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದರು. ಮತ್ತೊಂದೆಡೆ ತಾಯಿ ಚೀಪ್ಸ್ ಮಾರಾಟ ಮಾಡುತ್ತಿದ್ದರು ಎಂದು ಸ್ವತಃ ಗೇಲ್ ಅವರೇ ಸಂದರ್ಶನವೊಂದರಲ್ಲೇ ಈ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೇ ಅದೇಷ್ಟೋ ರಾತ್ರಿಗಳು ಉಪವಾಸದಿಂದ ಕಳೆದಿದ್ದರು. ಆದರೆ ಇಂದು ಖ್ಯಾತ ಕ್ರಿಕೆಟರ್ ಆಗಿ ಬೆಳೆದಿರುವ ಗೇಲ್ 337 ಕೋಟಿ ಆಸ್ತಿಯ ಒಡೆಯನಾಗಿದ್ದಾರೆ.
HAPPY BIRTHDAY, CHRIS GAYLE. 🐐
— Mufaddal Vohra (@mufaddal_vohra) September 20, 2024
- Champions Trophy winner.
- Orange Cap winner twice.
- 10,480 ODI runs.
- 7,215 runs.
- 4,965 IPL runs.
- 42 international 💯.
- 2 triple 💯 in Tests.
- A double 💯 in ODIs.
- THE GREATEST EVER ENTERTAINER...!!!pic.twitter.com/sHci0KaQcR
ಗೇಲ್ ದಾಖಲೆ: ಕ್ರಿಸ್ ಗೇಲ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಎಲ್ಲ ಸ್ವರೂಪದಲ್ಲೂ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಇದರಲ್ಲಿ ಟೆಸ್ಟ್‌ನಲ್ಲಿ ತ್ರಿಶತಕ, ಏಕದಿನ ಸ್ವರೂಪದಲ್ಲಿ ದ್ವಿಶತಕಗಳು ಮತ್ತು ಟಿ20 ಗಳಲ್ಲಿ ಶತಕಗಳು ಇವರ ಹೆಸರಿಗೆ ಸೇರಿವೆ. ವೆಸ್ಟ್ ಇಂಡೀಸ್ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. ಟಿ20 ಸ್ವರೂಪದಲ್ಲಿ 14,000ಕ್ಕೂ ಹೆಚ್ಚು ರನ್ ಗಳಿಸಿರುವ ಗೇಲ್ 1,000ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.
Here's wishing the RCB Hall of Famer, Chris Gayle, a very Happy Birthday! 🥳 🎂
— Royal Challengers Bengaluru (@RCBTweets) September 21, 2024
Thank you for the unforgettable memories, Universe Boss! 🫡#PlayBold #ನಮ್ಮRCB pic.twitter.com/nKc1rip9mJ
1000 ಸಿಕ್ಸರ್‌ಗಳು: ಕ್ರಿಸ್ ಗೇಲ್ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಗೇಲ್ ವಿವಿಧ ಲೀಗ್‌ಗಳು ಮತ್ತು ಅಂತಾರಾಷ್ಟ್ರೀಯ ಟಿ20ಯಲ್ಲಿ 15 ಸಾವಿರ ರನ್ ಗಳಿಸಿದ್ದಾರೆ. ಅವರು 1000 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ, ಜತೆಗೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 22 ಶತಕಗಳನ್ನು ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಪಂದ್ಯವೊಂದದರಲ್ಲೇ ಅತೀ ಹೆಚ್ಚು ರನ್ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.
ಇದನ್ನೂ ಓದಿ: ಚೆನ್ನೈ ಟೆಸ್ಟ್: 5ನೇ ಶತಕ ಸಿಡಿಸಿ ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಿಂದಿಕ್ಕಿದ ಶುಭಮನ್ ಗಿಲ್ - Shubman Gill