ETV Bharat / sports

ರೋಹಿತ್​ ಶತಕಕ್ಕೆ ಪತಿರಾನ ಯಾರ್ಕರ್​ ತಿರುಮಂತ್ರ: ಚೆನ್ನೈ ವಿರುದ್ಧ ಮುಂಬೈಗೆ 20 ರನ್​​ಗಳ​ ಸೋಲು - MI vs CSK - MI VS CSK

ರೋಹಿತ್​ ಶರ್ಮಾ ಶತಕದ ಹೊರತಾಗಿಯೂ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ 20 ರನ್​ಗಳ ಸೋಲು ಕಂಡಿದೆ.

ಚೆನ್ನೈ ವಿರುದ್ಧ ಮುಂಬೈಗೆ 20 ರನ್​ ಸೋಲು
ಚೆನ್ನೈ ವಿರುದ್ಧ ಮುಂಬೈಗೆ 20 ರನ್​ ಸೋಲು
author img

By ETV Bharat Karnataka Team

Published : Apr 15, 2024, 6:54 AM IST

ಮುಂಬೈ: ಟಿ20 ವಿಶ್ವಕಪ್​ನಲ್ಲಿ ತನ್ನ ಬಲವನ್ನು ತೋರಿಸುವೆ ಎಂದಿದ್ದ ರೋಹಿತ್​ ಶರ್ಮಾ ಅದರ ಟ್ರೈಲರ್​ ಎಂಬಂತೆ ಆಡಿದ, ಅದ್ಭುತ ಶತಕದ ಇನಿಂಗ್ಸ್​ ಹೊರತಾಗಿಯೂ ಭಾನುವಾರ ಇಲ್ಲಿ ನಡೆದ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಸೋಲು ಕಂಡಿದೆ.

ಚೆನ್ನೈ ಮತ್ತು ಮುಂಬೈ ತಂಡದ ಇಬ್ಬರೂ ಮಾಜಿ ನಾಯಕರಾದ ಎಂಎಸ್​ ದೋನಿ ಮತ್ತು ರೋಹಿತ್​ ಶರ್ಮಾ ಪಂದ್ಯದಲ್ಲಿ ತಮ್ಮ ತೋಳ್ಬಲ ಪ್ರದರ್ಶಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದರೂ ದೋನಿ ಸತತ 3 ಸಿಕ್ಸರ್​ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು. ಇತ್ತ, ರೋಹಿತ್​ ತಮ್ಮ ಹೆಸರಿನ ಮುಂದಿನ 'ಹಿಟ್​ಮ್ಯಾನ್​' ಗುಣವಾಚಕಕ್ಕೆ ಸಮನಾಗಿ ಬ್ಯಾಟ್​ ಮಾಡಿ ವಾಂಖೆಡೆ ಕ್ರೀಡಾಂಗಣದಲ್ಲಿ ಅಲೆ ಎಬ್ಬಿಸಿದರು.

ಮುಂಬೈ ಬೆಂಬಿಡದ ಸೋಲು: ಭಾನುವಾರ ಇಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅಜೇಯ 105 ರನ್ ಗಳಿಸಿದ ಹೊರತಾಗಿಯೂ. ಮಹೇಶ್​ ಪತಿರಾನ ದಾಳಿಗೆ ಸಿಲುಕಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 20 ರನ್‌ಗಳಿಂದ ಪರಾಜಯ ಕಂಡಿತು. ಸಿಎಸ್​ಕೆ ನೀಡಿದ 206 ರನ್​ಗಳ ಗುರಿಯನ್ನು ದಾಟುವಾಗ ಕೊನೆಯಲ್ಲಿ ಎಡವಿದ ಮುಂಬೈ 186 ರನ್​ ಗಳಿಸಿತು. ಜೊತೆಗೆ ಟೂರ್ನಿಯಲ್ಲಿ 4ನೇ ಸೋಲು ಕಂಡಿತು. ಸಿಎಸ್​ಕೆ 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು.

ರೋ'ಹಿಟ್​' ಶತಕದ ಸೊಬಗು: ದೊಡ್ಡ ಮೊತ್ತದ ಗುರಿ ಬೆಂಬತ್ತಿದ ಮುಂಬೈಗೆ ಹಿಟ್​ಮ್ಯಾನ್​ ರೋಹಿತ್​ ಮತ್ತು ಇಶಾನ್​ ಕಿಶನ್​ ಭರ್ಜರಿ ಆರಂಭ ನೀಡಿದರು. 7 ಓವರ್​ಗಳಲ್ಲಿ 70 ರನ್​ ಗಳಿಸಿದರು. ಕಿಶನ್​ ಔಟಾದ ಬಳಿಕ ತಂಡ ರನ್​ ಗಳಿಸಲು ಪರದಾಡಿತು. ಶತಕ ಬಾರಿಸಿದ ರೋಹಿತ್​ಗೆ ಇನ್ನೊಂದು ತುದಿಯಲ್ಲಿ ಉತ್ತಮ ಬೆಂಬಲ ಸಿಗಲಿಲ್ಲ. ತಿಲಕ್​ ವರ್ಮಾ 31 ರನ್​ ಕಾಣಿಕೆ ನೀಡಿದರು.

ಪತಿರಾನ ಬೆಂಕಿ ಯಾರ್ಕರ್​: ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದ ಯುವ ವೇಗಿ ಮಹೇಶ್​ ಪತಿರಾನ ತನಗೆ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಮೊದಲ ಎಸೆತದಲ್ಲೇ ಕಿಶನ್​ ವಿಕೆಟ್​ ಪಡೆದು ಮುಂಬೈ ಸೋಲಿಗೆ ನಾಂದಿ ಹಾಡಿದರು. ಇದಾದ ಬಳಿಕ ವಿಶ್ವದ ನಂಬರ್​ 1 ಟಿ20 ಬ್ಯಾಟರ್​ ಸೂರ್ಯಕುಮಾರ್​ ಯಾದವ್​​ (0), ತಿಲಕ್​ ವರ್ಮಾ (31), ರೊಮಾರಿಯೊ ಶೆಫರ್ಡ್​ (1)ರನ್ನ ಕ್ಲೀನ್​ಬೌಲ್ಡ್​ ಮಾಡಿ 4 ವಿಕೆಟ್​ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಗಾಯಕ್ವಾಡ್​ - ದುಬೆ ಫಿಫ್ಟಿ: ಇದಕ್ಕೂ ಮೊದಲು ಬ್ಯಾಟ್​ ಮಾಡಿದ ಸಿಎಸ್​ಕೆ ಆರಂಭಿಕ ಸ್ಥಾನದಲ್ಲಿ ಬದಲಾವಣೆ ಮಾಡಿದರೂ ಯಶಸ್ಸು ಸಾಧಿಸಲಿಲ್ಲ. ನಾಯಕ ಋತುರಾಜ್​ ಗಾಯಕ್ವಾಡ್​ ಬದಲಿಗೆ ಅಜಿಂಕ್ಯಾ ರಹಾನೆ ಕಣಕ್ಕಿಳಿದರು. 5 ರನ್​ಗೆ ರಹಾನೆ ಔಟಾದರೆ, ರಚಿನ್​ ರವೀಂದ್ರ 21 ರನ್​ಗೆ ವಿಕೆಟ್​ ನೀಡಿದರು. ಇದಾದ ಬಳಿಕ ಜೊತೆಯಾದ ಗಾಯಕ್ವಾಡ್​ ಮತ್ತು ಶಿವಂ ದುಬೆ ಭರ್ಜರಿ ಬ್ಯಾಟ್ ಮಾಡಿದರು. ಗಾಯಕ್ವಾಡ್​ 40 ಎಸೆತಗಳಲ್ಲಿ 69 ರನ್​, ದುಬೆ 38 ಬಾಲ್​ನಲ್ಲಿ 66 ರನ್​ ಗಳಿಸಿದರು.

ಧೋನಿ 'ಸಿಕ್ಸರ್ಸ್​​' ಅಲೆ: ವಾಂಖೆಡೆ ಸ್ಟೇಡಿಯಂನಲ್ಲಿ ನಿಜಕ್ಕೂ ಅಲೆ ಎಬ್ಬಿಸಿದ್ದು ಮಹೇಂದ್ರ ಸಿಂಗ್​ ಧೋನಿ. ಸಿಎಸ್​ಕೆ ಇನಿಂಗ್ಸ್​ ಮುಕ್ತಾಯಕ್ಕೆ 4 ಎಸೆತ ಬಾಕಿ ಇರುವಾಗ ಕಣಕ್ಕಿಳಿದ ದೋನಿ, ಹಾರ್ದಿಕ್​ ಪಾಂಡ್ಯ ಬೌಲಿಂಗ್​ನಲ್ಲಿ ಸತತ ಮೂರು ಭರ್ಜರಿ ಸಿಕ್ಸರ್​ ಬಾರಿಸಿದರು. ಇದು ಐಪಿಎಲ್​ ವೀಕ್ಷಿಸುತ್ತಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ದೋನಿ ಬ್ಯಾಟಿಂಗ್ ನೋಡಲು ಬಂದಿದ್ದ ಫ್ಯಾನ್ಸ್​ಗೆ ನಿರಾಸೆಯಾಗಲಿಲ್ಲ. 4 ಎಸೆತಗಳಲ್ಲಿ 20 ರನ್​ ಗಳಿಸಿದರು. ಸ್ಟ್ರೈಕ್​​ರೇಟ್​ 500 ಇತ್ತು.

ಇದನ್ನೂ ಓದಿ: ವಾಂಖೆಡೆಯಲ್ಲಿ ಚೆನ್ನೈ ಅಬ್ಬರ, ಕೊನೆಯ ಓವರ್​ನಲ್ಲಿ ಧೋನಿ ಬೆಂಕಿ ಬ್ಯಾಟಿಂಗ್​; ಮುಂಬೈಗೆ 207 ರನ್​ಗಳ ಗುರಿ - MI VS CSK

ETV Bharat Logo

Copyright © 2024 Ushodaya Enterprises Pvt. Ltd., All Rights Reserved.