ETV Bharat / sports

ಚಾಂಪಿಯನ್ಸ್​ ಟ್ರೋಫಿಯ ಎಲ್ಲ ಪಂದ್ಯ ಪಾಕಿಸ್ತಾನದಲ್ಲಿಯೇ ನಡೆಯಲಿ: ಬಿಕ್ಕಟ್ಟು ಸೃಷ್ಟಿಸಿದ ಪಿಸಿಬಿ ಹಠಮಾರಿ ಧೋರಣೆ - Champions Trophy 2025 - CHAMPIONS TROPHY 2025

ಚಾಂಪಿಯನ್ಸ್​ ಟ್ರೋಫಿಯ ಎಲ್ಲ ಪಂದ್ಯಗಳನ್ನು ತನ್ನ ನೆಲದಲ್ಲಿಯೇ ನಡೆಸಬೇಕೆಂದು ಪಿಸಿಬಿ ಹಠಮಾರಿ ಧೋರಣೆ ತಳೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Jul 14, 2024, 7:40 PM IST

ನವದೆಹಲಿ: 2025ರ ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್​ ಪಂದ್ಯಾವಳಿಯ ಎಲ್ಲ ಪಂದ್ಯಗಳನ್ನು ತನ್ನ ದೇಶದಲ್ಲಿಯೇ ಆಯೋಜಿಸುವುದಾಗಿ ದೃಢ ನಿಲುವಿಗೆ ಅಂಟಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸುವ ಪ್ರಸ್ತಾವನೆಗಳನ್ನು ತಳ್ಳಿ ಹಾಕಿದೆ.

ಒಂದು ವೇಳೆ ಚಾಂಪಿಯನ್ಸ್​ ಟ್ರೋಫಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಬರಲು ಭಾರತ ತಂಡ ಒಪ್ಪದಿದ್ದರೆ, ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನಗಳ ಸಹ-ಪ್ರಾಯೋಜಕತ್ವದಲ್ಲಿ 2026ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಬೆದರಿಕೆ ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಮಾಧ್ಯಮ ಸಂಸ್ಥೆ ಜಿಯೊ ನ್ಯೂಸ್ ಪ್ರಕಾರ, ಚಾಂಪಿಯನ್ಸ್​ ಟ್ರೋಫಿಯ ಎಲ್ಲ ಪಂದ್ಯಗಳನ್ನು ತನ್ನ ನೆಲದಲ್ಲಿಯೇ ನಡೆಸಲು ಪಾಕಿಸ್ತಾನ ಹಠಮಾರಿ ನಿಲುವು ತಳೆದಿದ್ದು, ಜುಲೈ 19 ರಿಂದ 22ರವರೆಗೆ ಕೊಲಂಬೊದಲ್ಲಿ ನಡೆಯಲಿರುವ ಐಸಿಸಿಯ ವಾರ್ಷಿಕ ಸಭೆಯಲ್ಲಿ ಹೈಬ್ರಿಡ್​ ಮಾದರಿಯಲ್ಲಿ ಪಂದ್ಯಾವಳಿ ಆಯೋಜಿಸುವುದನ್ನು ಸ್ಪಷ್ಟವಾಗಿ ವಿರೋಧಿಸಲಿದೆ.

ಮುಂದಿನ ವರ್ಷ ಫೆಬ್ರವರಿ ಮತ್ತು ಮಾರ್ಚ್ ನಡುವೆ ನಡೆಯಲಿರುವ ಪ್ರತಿಷ್ಠಿತ ಪಂದ್ಯಾವಳಿಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಿಂಜರಿಯುತ್ತಿದೆ ಎಂಬ ಭಾರತೀಯ ಮಾಧ್ಯಮಗಳ ವರದಿಗಳಿಗೆ ಪ್ರತಿಕ್ರಿಯೆಯಾಗಿ ಪಿಸಿಬಿ ಈ ಅಚಲ ನಿಲುವನ್ನು ತಳೆದಿದೆ. ಭಾರತ ಮತ್ತು ಪಾಕಿಸ್ತಾನಗಳ ಮಧ್ಯದ ತ್ವೇಷಮಯ ಸಂಬಂಧಗಳಿಂದಾಗಿ 2008ರ ಏಷ್ಯಾಕಪ್ ಬಳಿಕ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ.

ಚಾಂಪಿಯನ್ಸ್ ಟ್ರೋಫಿಗೆ ಹೈಬ್ರಿಡ್ ಮಾದರಿಯನ್ನು ಜಾರಿಗೆ ತರಲು ಐಸಿಸಿಗೆ ಮನವಿ ಮಾಡುವ ಬಗ್ಗೆ ಬಿಸಿಸಿಐ ಸುಳಿವು ನೀಡಿದ್ದು, ತಟಸ್ಥ ದೇಶದಲ್ಲಿ ತಮ್ಮ ಪಂದ್ಯಗಳನ್ನು ಆಡಲು ಭಾರತಕ್ಕೆ ಅವಕಾಶ ನೀಡಬೇಕೆಂದು ಅದು ಕೇಳಲಿದೆ.

2008 ರ ಮುಂಬೈ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧಗಳು ಹದಗೆಟ್ಟಿವೆ. ಅದರ ನಂತರ ದ್ವಿಪಕ್ಷೀಯ ಸರಣಿಗಳನ್ನು ಸ್ಥಗಿತಗೊಳಿಸಲಾಗಿದೆ. 2008ರಲ್ಲಿ ಏಷ್ಯಾಕಪ್​ಗಾಗಿ ಭಾರತ ಕೊನೆಯ ಬಾರಿ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಅಂದಿನಿಂದ ಉಭಯ ದೇಶಗಳು ಐಸಿಸಿ ಈವೆಂಟ್​ಗಳಲ್ಲಿ ಅಥವಾ ತಟಸ್ಥ ಸ್ಥಳಗಳಲ್ಲಿ ನಡೆಯುವ ಏಷ್ಯಾ ಕಪ್ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗಿವೆ.

ಏಷ್ಯಾ ಕಪ್ 2023 ರ ಸಮಯದಲ್ಲಿಯೂ ಇದೇ ರೀತಿಯ ಬಿಕ್ಕಟ್ಟು ಉದ್ಭವಿಸಿತ್ತು. ಆ ಸಂದರ್ಭದಲ್ಲಿ ಬಿಸಿಸಿಐ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ್ದರಿಂದ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳಲಾಗಿತ್ತು. ಇದು ಪಂದ್ಯಾವಳಿಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟರೂ, ಪಾಕಿಸ್ತಾನವು ಸೆಮಿಫೈನಲ್ ಮತ್ತು ಅಂತಿಮ ಪಂದ್ಯಗಳ ಆತಿಥ್ಯದ ಹಕ್ಕುಗಳನ್ನು ಕಳೆದುಕೊಂಡಿತು. ಹೀಗಾಗಿ ಮತ್ತೊಮ್ಮೆ ಇಂಥ ಘಟನೆ ಮರುಕಳಿಸದಂತೆ ಮಾಡಲು 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದ ನೆಲದಲ್ಲಿಯೇ ನಡೆಸಬೇಕೆಂದು ಪಾಕಿಸ್ತಾನ ದೃಢ ನಿಶ್ಚಯ ಮಾಡಿದೆ.

ಇದನ್ನೂ ಓದಿ : ವಿಂಬಲ್ಡನ್​: ಬ್ರಿಟನ್‌ನ ಹೆನ್ರಿ ಪ್ಯಾಟನ್-ಫಿನ್‌ಲ್ಯಾಂಡ್‌ನ ಹ್ಯಾರಿ ಹೆಲಿಯೊವಾರಾ ಜೋಡಿಗೆ ಪುರುಷರ ಡಬಲ್ಸ್​ ಪ್ರಶಸ್ತಿ - mens doubles title

ETV Bharat Logo

Copyright © 2025 Ushodaya Enterprises Pvt. Ltd., All Rights Reserved.