ETV Bharat / sports

8 ಚಿನ್ನ, 1 ಬೆಳ್ಳಿ, 4 ಕಂಚು!: ಒಲಿಂಪಿಕ್ಸ್​​​​​​​​​​ನಲ್ಲಿ 13 ಪದಕಗಳನ್ನು ಗೆದ್ದ ಭಾರತೀಯ ಹಾಕಿ ತಂಡದ ಪಯಣ ಹೀಗಿದೆ - Indian Hockey Medals In Olympics - INDIAN HOCKEY MEDALS IN OLYMPICS

1928 ರಿಂದ ಇಂದಿನವರೆಗೆ ಒಲಿಂಪಿಕ್ಸ್‌ನಲ್ಲಿ 8 ಚಿನ್ನ ಸೇರಿದಂತೆ ಒಟ್ಟು 13 ಪದಕಗಳನ್ನು ತನ್ನದಾಗಿಸಿಕೊಂಡಿರುವ ಭಾರತೀಯ ಹಾಕಿ ಪಯಣ ಮತ್ತು ತಂಡದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

India In Hockey
ಭಾರತೀಯ ಹಾಕಿ ತಂಡದ ಆಟಗಾರರು (AP)
author img

By ETV Bharat Sports Team

Published : Aug 9, 2024, 2:27 PM IST

Updated : Aug 9, 2024, 4:24 PM IST

ಚಂಡೀಗಢ: ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೆ ಇತಿಹಾಸ ಬರೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಸೆಮಿಫೈನಲ್‌ನ ರೋಚಕ ಪಂದ್ಯದಲ್ಲಿ ಜರ್ಮನಿ ಎದುರು 2-3 ಅಂತರದಲ್ಲಿ ಸೋತು ಫೈನಲ್‌ ತಲುಪಲು ವಿಫಲಗೊಂಡಿದ್ದ ಟೀಂ ಇಂಡಿಯಾ, ಗುರುವಾರ (ಆ. 8) ನಡೆದ ಕಂಚಿನ ಪದಕದ ಪಂದ್ಯದಲ್ಲಿ ಅಪಾಯಕಾರಿ ಸ್ಪೇನ್‌ ತಂಡವನ್ನು 2-1 ಗೋಲ್‌ಗಳಿಂದ ಮಣಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿತು. ಇದು ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತದ ಪುರುಷರ ಹಾಕಿ ತಂಡ ಗೆದ್ದ 4ನೇ ಕಂಚಿನ ಪದಕ ಆಗಿದೆ. ಇದರ ಹೊರತಾಗಿ 8 ಚಿನ್ನ ಮತ್ತು ಒಂದು ಬೆಳ್ಳಿ ಪದಕಗಳನ್ನು ಭಾರತ ಗೆದ್ದಿದೆ. ಈ ಮೂಲಕ 1928ರಿಂದ ಈವರೆಗಿನ ಒಲಿಂಪಿಕ್ಸ್‌ನಲ್ಲಿ ಒಟ್ಟು 13 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಪದಕಗಳ ಪೈಕಿ ಚಿನ್ನದ ಪದಕಗಳ ಸಂಖ್ಯೆಯೇ ಹೆಚ್ಚಿರುವುದು ಹೆಮ್ಮೆಯ ವಿಷಯ.

ಹಾಕಿ ತಂಡದ ಪಯಣ:

1928ರ ಒಲಿಂಪಿಕ್ಸ್‌: 1928ರ ನೆದರ್ಲೆಂಡ್ಸ್‌ನಲ್ಲಿ ನಡೆದ ಆಮ್‌ಸ್ಟರ್‌ಡ್ಯಾಮ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಮೊದಲ ಚಿನ್ನದ ಪದಕ ಗೆದ್ದುಕೊಂಡಿತು. ಫೈನಲ್‌ನಲ್ಲಿ ನೆದರ್ಲೆಂಡ್ಸ್ ತಂಡವನ್ನು 3-0 ಗೋಲುಗಳಿಂದ ಸೋಲಿಸುವ ಮೂಲಕ ತನ್ನ ಮೊದಲ ಪದಕ ಪಡೆಯಿತು. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನದ ಪದಕ ಇದಾಗಿದೆ.

1932ರ ಒಲಿಂಪಿಕ್ಸ್‌ನಲ್ಲಿ ಚಿನ್ನ: ಇದಾದ ಬಳಿಕ 1932ರಲ್ಲಿ ಅಮೆರಿಕದಲ್ಲಿ ನಡೆದ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಅಮೋಘ ಪ್ರದರ್ಶನ ನೀಡಿ, ಫೈನಲ್‌ನಲ್ಲಿ ಅಮೆರಿಕ ತಂಡವನ್ನು 24-1 ಅಂತರದಿಂದ ಸೋಲಿಸಿತು. ಇದು ಒಲಂಪಿಕ್ ಹಾಕಿ ಇತಿಹಾಸದಲ್ಲಿ ಸತತ ಅತಿ ದೊಡ್ಡ ಗೆಲುವು ಎಂಬ ದಾಖಲೆ ಕೂಡ ಇದೆ.

1936ರ ಒಲಿಂಪಿಕ್ಸ್‌ನಲ್ಲಿ ಚಿನ್ನ: 1936ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ಮುಂದುವರಿಸಿತ್ತು. ಧ್ಯಾನ್ ಚಂದ್ ನೇತೃತ್ವದ ಭಾರತ ತಂಡವು ಫೈನಲ್‌ನಲ್ಲಿ 8-1 ಅಂತರದಿಂದ ಜರ್ಮನಿಯನ್ನು ಸೋಲಿಸುವ ಮೂಲಕ ಒಲಿಂಪಿಕ್ ಚಿನ್ನದ ಪದಕಗಳ ಹ್ಯಾಟ್ರಿಕ್ ಸಾಧಿಸಿತು.

1948ರ ಒಲಿಂಪಿಕ್ಸ್‌ನಲ್ಲಿ ಚಿನ್ನ: 1948ರಲ್ಲಿ ಯುಕೆಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿಯೂ ಭಾರತದ ಅತ್ಯುತ್ತಮ ಪ್ರದರ್ಶನ ನೀಡಿತು. ಈ ಒಲಿಂಪಿಕ್ಸ್‌ನಲ್ಲಿಯೂ ಚಿನ್ನದ ಪದಕ ಗೆದ್ದಿತು. ಸ್ವಾತಂತ್ರ್ಯದ ನಂತರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬಂದ ಮೊದಲ ಪದಕ ಇದಾಗಿದೆ. ಭಾರತವು ಗ್ರೇಟ್ ಬ್ರಿಟನ್ ಅನ್ನು ಫೈನಲ್‌ನಲ್ಲಿ 4-0 ಗೋಲುಗಳಿಂದ ಸೋಲಿಸಿತು.

1952ರಲ್ಲಿ ಮತ್ತೊಂದು ಚಿನ್ನ: 1952ರಲ್ಲಿ ಫಿನ್‌ಲ್ಯಾಂಡ್‌ನ ಹೆಲ್ಸಿಂಕಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತೆ ತನ್ನ ಪ್ರಾಬಲ್ಯ ಮರೆಯಿತು. ಫೈನಲ್‌ನಲ್ಲಿ ನೆದರ್ಲೆಂಡ್ಸ್ ಅನ್ನು ಎದುರಿಸಿದ ಭಾರತ ಸತತ 5ನೇ ಚಿನ್ನವನ್ನು ತನ್ನದಾಗಿಸಿಕೊಂಡಿತು. ಭಾರತದ ಹಾಕಿ ಆಟಗಾರ ಬಲ್ಬೀರ್ ಸಿಂಗ್ ಸೀನಿಯರ್ ನೆದರ್ಲೆಂಡ್ಸ್ ವಿರುದ್ಧ 5 ಗೋಲು ಗಳಿಸಿದರು.

1956ರಲ್ಲಿ ಆರನೇ ಚಿನ್ನ: 1956ರಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತೊಮ್ಮೆ ಚಿನ್ನದ ಪದಕ ಗೆದ್ದುಕೊಂಡಿತು. ಈ ಬಾರಿಯ ಒಲಿಂಪಿಕ್ಸ್ ಫೈನಲ್‌ನಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದೊಂದಿಗೆ ಇತ್ತು. ಫೈನಲ್‌ನಲ್ಲಿ ಪಾಕ್​ ತಂಡವನ್ನು 1-0 ಗೋಲುಗಳಿಂದ ಸೋಲಿಸಿತು.

1960ರಲ್ಲಿ ಬೆಳ್ಳಿ ಪದಕ ಬಂದಿತ್ತು: 1960ರಲ್ಲಿ ಇಟಲಿಯ ರೋಮ್‌ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಮತ್ತೆ ಭಾರತವು ತನ್ನ ಎದುರಾಳಿ ಪಾಕಿಸ್ತಾನದೊಂದಿಗೆ ಫೈನಲ್​ ಆಡಿತು. ಈ ಅವಧಿಯಲ್ಲಿ ಭಾರತ ತಂಡವು ಫೈನಲ್‌ನಲ್ಲಿ ಸೋಲು ಕಂಡಿತ್ತು. ಒಲಿಂಪಿಕ್ಸ್‌ನಲ್ಲಿ ಸತತ ಆರು ಚಿನ್ನದ ಪದಕಗಳ ಗೆದ್ದ ಭಾರತಕ್ಕೆ ಭಾರೀ ನಿರಾಸೆ ತಂದಿತು.

1964ರಲ್ಲಿ ಚಿನ್ನ ಗೆದ್ದು ಸೇಡು: ಇದಾದ ಬಳಿಕ 1964ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತೊಮ್ಮೆ ತನ್ನ ಕ್ರೀಡಾಸ್ಫೂರ್ತಿ ತೋರಿತು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮತ್ತೊಮ್ಮೆ ಎದುರಾದ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಭಾರತವು ಒಲಿಂಪಿಕ್ಸ್‌ನಲ್ಲಿ ಏಳನೇ ಚಿನ್ನದ ಪದಕವನ್ನು ಗೆದ್ದುಕೊಂಡಿತು.

1968ರಲ್ಲಿ ಕಂಚಿನ ಪದಕ: 1968ರಲ್ಲಿ ಮೆಕ್ಸಿಕೊ ನಗರದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಬಾರಿಗೆ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡ ಭಾರತ ತಂಡವು, ಕಂಚಿನ ಪದಕದ ಪಂದ್ಯದಲ್ಲಿ ಪಶ್ಚಿಮ ಜರ್ಮನಿಯನ್ನು ಸೋಲಿಸಿ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

1972ರಲ್ಲಿ ಮತ್ತೆ ಕಂಚಿನ ಪದಕ: 1972ರಲ್ಲಿ ಮ್ಯೂನಿಚ್ ಮತ್ತು ಜರ್ಮನಿಯಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಭಾರತ ಮತ್ತೆ ಫೈನಲ್ ರೇಸ್​ನಲ್ಲಿ ಎಡವಿತು. ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ಭಾರತ, ಕಂಚಿನ ಪದಕದ ಪಂದ್ಯದಲ್ಲಿ ನೆದರ್ಲೆಂಡ್ಸ್ ಅನ್ನು ಸೋಲಿಸಿ ಎರಡನೇ ಬಾರಿಗೆ ಕಂಚಿನ ಪದಕವನ್ನು ಗೆದ್ದುಕೊಂಡಿತು.

1980ರಲ್ಲಿ ಚಿನ್ನದ ಜಾದೂ: 1980ರಲ್ಲಿ ಯುಎಸ್‌ಎಸ್‌ಆರ್‌ನ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ಮತ್ತೆ ಜಾದೂ ಮಾಡಿತು. ಈ ಒಲಿಂಪಿಕ್ಸ್​ನಲ್ಲಿ ಸೆಮಿ-ಫೈನಲ್‌ಗಳಿಲ್ಲದ ಮಾದರಿಯಲ್ಲಿ ಆಡಲಾಯಿತು. ಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಸೋಲಿಸುವ ಮೂಲಕ ಭಾರತ ತನ್ನ 8ನೇ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಇದಾದ ನಂತರ ನಾಲ್ಕು ದಶಕಗಳ ಕಾಲ ಭಾರತೀಯ ಹಾಕಿ ಯಾವುದೇ ಸುಧಾರಣೆ ಕಾಣದಿರುವುದು ದುರಂತ.

2021ರಲ್ಲಿ ಗೆದ್ದ ಕಂಚಿನ ಪದಕ: ಇದಾದ ಬಳಿಕ 41 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ 2021ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಮತ್ತೊಮ್ಮೆ ತನ್ನ ಫಾರ್ಮ್ ಅನ್ನು ತೋರಿಸಿತು. ಆದರೂ ಭಾರತಕ್ಕೆ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಕಂಚಿನ ಪದಕದ ಪಂದ್ಯದಲ್ಲಿ ಜರ್ಮನಿಯನ್ನು 5-4 ರಿಂದ ಸೋಲಿಸುವ ಮೂಲಕ 41 ವರ್ಷಗಳ ನಂತರ ಕಂಚಿನ ಪದಕವನ್ನು ಗೆದ್ದಿತು.

2024ರಲ್ಲಿ ಮತ್ತೆ ಕಂಚಿನ ಪದಕ: ಫ್ರಾನ್ಸ್‌ನಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡದ ಪ್ರದರ್ಶನ ಅತ್ಯುತ್ತಮವಾಗಿತ್ತು. ಆದರೆ, ಫೈನಲ್ ತಲುಪುವ ಭಾಗ್ಯ ಸಿಗದ ಕಾರಣ ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ 2-3 ಅಂತರದಿಂದ ಸೋಲನುಭವಿಸಬೇಕಾಯಿತು. ಕಂಚಿನ ಪದಕಕ್ಕಾಗಿ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಭಾರತ ಹಾಕಿ ತಂಡ 2-1 ರಲ್ಲಿ ಗೆದ್ದು ಕಂಚಿನ ಪದಕ ಗೆದ್ದರು. ಈ ಪದಕದೊಂದಿಗೆ, ಭಾರತ ಹಾಕಿ ತಂಡವು ತಮ್ಮ ಗೋಲ್‌ಕೀಪರ್ ಪಿಆರ್ ಶ್ರೀಜೇಶ್‌ಗೆ ವಿದಾಯ ಹೇಳಿದರು.

ಹಾಕಿ ತಂಡದ ಇಬ್ಬರು ಆಟಗಾರರು ಪಿಸಿಎಸ್ (ಪ್ರಾಂತೀಯ ನಾಗರಿಕ ಸೇವೆ) ಆಗಿ ಮತ್ತು ನಾಲ್ವರು ಡಿಎಸ್ಪಿ (ಉಪ ಪೊಲೀಸ್ ವರಿಷ್ಠಾಧಿಕಾರಿ) ಆಗಿ ನೇಮಕೊಂಡಿದ್ದಾರೆ. ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಸದ್ಯದ ಹಾಕಿ ತಂಡದಲ್ಲಿ ಹತ್ತು ಆಟಗಾರರು ಪಂಜಾಬ್ ರಾಜ್ಯಕ್ಕೆ ಸೇರಿದವರಾಗಿರುವುದು ಗಮನಾರ್ಹ.

India In Hockey
ಭಾರತೀಯ ಹಾಕಿ ತಂಡದ ಆಟಗಾರರು (ETV Bharat)

ಪಂಜಾಬಿ ಹಾಕಿ ಆಟಗಾರರ ಬಗ್ಗೆ ಮಾಹಿತಿ:

ಹರ್ಮನ್‌ಪ್ರೀತ್ ಸಿಂಗ್: ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪಂಜಾಬಿ ಆಟಗಾರರಲ್ಲಿ ಒಬ್ಬರು. ಮೂರನೇ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದು ಗಮನಾರ್ಹ. ಡಿಫೆಂಡರ್ ಮತ್ತು ಡ್ರ್ಯಾಗ್ ಫ್ಲಿಕ್ಕರ್ ಆಗಿ ತಂಡದ ಸ್ಕೋರಿಂಗ್ ಶಕ್ತಿ ಕೂಡ ಆಗಿದ್ದಾರೆ. 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ 41 ವರ್ಷಗಳ ನಂತರ ಹಾಕಿಯಲ್ಲಿ ಪದಕ ಗೆದ್ದಿತ್ತು. ಈ ಅವಧಿಯಲ್ಲಿ ಹರ್ಮನ್‌ಪ್ರೀತ್ ಸಿಂಗ್ ಆರು ಗೋಲು ಗಳಿಸಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮೂಲತಃ ಅಮೃತಸರ ಜಿಲ್ಲೆಯ ತಿಮ್ಮೋವಾಲ್ ಗ್ರಾಮದ ನಿವಾಸಿಯಾಗಿರುವ ಇವರು ಸದ್ಯ ಪಂಜಾಬ್ ಪೊಲೀಸ್​ ಇಲಾಖೆಯಲ್ಲಿ ಡಿಎಸ್‌ಪಿ ಕೂಡ ಆಗಿದ್ದಾರೆ.

ಹಾರ್ದಿಕ್ ಸಿಂಗ್: ಎರಡನೇ ಒಲಿಂಪಿಕ್ಸ್‌ನಲ್ಲಿ ಆಡಿದ ಹಾರ್ದಿಕ್ ಸಿಂಗ್ ಅವರು ಭಾರತ ತಂಡದ ಉಪನಾಯಕರು. ಖುಸ್ರೋಪುರ್ ಗ್ರಾಮದ ಕ್ರೀಡಾ ಕುಟುಂಬದ ಬಂದವರಾಗಿದ್ದಾರೆ. ಇವರ ಕುಟುಂಬದ ಗುರ್ಮೈಲ್ ಸಿಂಗ್ ಒಲಿಂಪಿಕ್ ಚಿನ್ನದ ಪದಕ ವಿಜೇತರಾಗಿದ್ದಾರೆ. ರಾಜ್ಬೀರ್ ಕೌರ್ ಎಂಬುವರು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿದ್ದರೆ, ಜುಗ್ರಾಜ್ ಸಿಂಗ್ ಎಂಬುವರು ಜೂನಿಯರ್ ವಿಶ್ವಕಪ್ ವಿಜೇತರಾಗಿದ್ದಾರೆ. ಹಾರ್ದಿಕ್ ಸಿಂಗ್ ಮಿಡ್‌ಫೀಲ್ಡ್‌ನಲ್ಲಿ ಪಳಗಿದ ಆಟಗಾರ. ಅವರು ಪಂಜಾಬ್ ಸರ್ಕಾರದಲ್ಲಿ ಪಿಸಿಎಸ್ ಆಗಿದ್ದಾರೆ.

ಮನ್‌ಪ್ರೀತ್ ಸಿಂಗ್: ಭಾರತ ಹಾಕಿ ತಂಡದ ಅತ್ಯಂತ ಅನುಭವಿ ಆಟಗಾರ ಮನ್‌ಪ್ರೀತ್ ಸಿಂಗ್ ಈ ಬಾರಿ ತಮ್ಮ ದಾಖಲೆಯ ನಾಲ್ಕನೇ ಒಲಿಂಪಿಕ್ಸ್‌ನಲ್ಲಿ ಆಡಿದ್ದಾರೆ. ಮನ್‌ಪ್ರೀತ್ ಮತ್ತು ಶ್ರೀಜೇಶ್ ಭಾರತದಿಂದ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಆಡಿರುವ ಏಕೈಕ ಐವರು ಆಟಗಾರರು. ಮಿಥಾಪುರ್ ಗ್ರಾಮದ ನಿವಾಸಿ ಮನ್‌ಪ್ರೀತ್ ಸಿಂಗ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತ ತಂಡದ ನಾಯಕರಾಗಿದ್ದರು. ಮಿಡ್‌ಫೀಲ್ಡ್‌ನಲ್ಲಿ, ರಕ್ಷಣಾ ಮತ್ತು ದಾಳಿಯ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುವ ಭಾರತ ತಂಡದ ಜೀವಾಳವು ಹೌದು. 350ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಮನ್‌ಪ್ರೀತ್ ಸಿಂಗ್ ಪಂಜಾಬ್ ಪೊಲೀಸ್‌ನಲ್ಲಿ ಡಿಎಸ್‌ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮನ್‌ದೀಪ್ ಸಿಂಗ್: ಮನ್‌ಪ್ರೀತ್ ಸಿಂಗ್ ಅವರ ಮಗ ಮನ್‌ದೀಪ್ ಸಿಂಗ್ ಈ ಬಾರಿ ತನ್ನ ಎರಡನೇ ಒಲಿಂಪಿಕ್ಸ್ ಆಡಿದ್ದಾರೆ. ಭಾರತದ ಫಾರ್ವರ್ಡ್ ಲೈನ್‌ನಲ್ಲಿ ಅತ್ಯಂತ ಅನುಭವಿ ಆಟಗಾರ ಮನ್‌ದೀಪ್ ಸಿಂಗ್ ಇದುವರೆಗೆ ಸುಮಾರು 250 ಪಂದ್ಯಗಳಲ್ಲಿ 100ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ. ಅವರು ಪಂಜಾಬ್ ಪೊಲೀಸ್‌ನಲ್ಲಿ ಡಿಎಸ್‌ಪಿ ಕೂಡ ಆಗಿದ್ದಾರೆ.

ಗುರ್ಜಂತ್ ಸಿಂಗ್: ಅಮೃತಸರ ಜಿಲ್ಲೆಯ ಖಲಿಹರಾ ಗ್ರಾಮದ ನಿವಾಸಿಯಾಗಿರುವ ಗುರ್ಜಂತ್ ಸಿಂಗ್ ವೇಗದ ಗೋಲು ಗಳಿಸುವಲ್ಲಿ ಹೆಸರುವಾಸಿ. ಹಾಲೆಂಡ್ ವಿರುದ್ಧದ ಪಂದ್ಯದಲ್ಲಿ 13 ಸೆಕೆಂಡುಗಳಲ್ಲಿ ಅತಿವೇಗದ ಗೋಲು ಗಳಿಸಿದ ಭಾರತದ ಸ್ಟ್ರೈಕರ್ ಗುರ್ಜಂತ್ ಸಿಂಗ್ ಅವರು ತಮ್ಮ ಎರಡನೇ ಒಲಿಂಪಿಕ್ಸ್ ಕೂಡ ಆಡಿದರು. ಅವರು ಪಂಜಾಬ್ ಸರ್ಕಾರದಲ್ಲಿ ಪಿಸಿಎಸ್ ಆಗಿದ್ದಾರೆ. ಅಧಿಕಾರಿಯಾಗಿದ್ದಾರೆ

ಶಂಶೇರ್ ಸಿಂಗ್: ಗಡಿ ಗ್ರಾಮವಾದ ಅಟ್ಟಾರಿಯವರಾದ ಶಂಶೇರ್ ಸಿಂಗ್ ಅವರು ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅತ್ಯಂತ ಕಡಿಮೆ ಅನುಭವ ಹೊಂದಿರುವ ಆಟಗಾರರಾಗಿದ್ದರು. ಈಗ ಭಾರತದ ಫಾರ್ವರ್ಡ್ ಲೈನ್‌ನಲ್ಲಿ ಅತ್ಯಂತ ಅನುಭವಿ ಆಟಗಾರರಾಗಿದ್ದಾರೆ. ಮೈದಾನದಲ್ಲಿ ಶಾಂತ ವರ್ತನೆಯ ಆಟಗಾರರಲ್ಲಿ ಹೆಸರುವಾಸಿಯಾದ ಇವರು ಪಂಜಾಬ್ ಪೊಲೀಸ್‌ನಲ್ಲಿ ಡಿಎಸ್‌ಪಿ ಆಗಿದ್ದಾರೆ.

ಜರ್ಮನ್‌ಪ್ರೀತ್ ಸಿಂಗ್ ಬಾಲ್: ಅಮೃತಸರ ಜಿಲ್ಲೆಯ ರಜ್ದಾನ್ ಗ್ರಾಮದ ನಿವಾಸಿಯಾಗಿರುವ ಜರ್ಮನ್‌ಪ್ರೀತ್ ಸಿಂಗ್ ಅವರು ತಮ್ಮ ಅಂದ ಮತ್ತು ಎತ್ತರದ ನಿಲುವಿನಿಂದಾಗಿ ಹಾಕಿ ಕ್ಷೇತ್ರದಲ್ಲಿ ವಿಶಿಷ್ಟವಾದ ಗುರುತನ್ನು ಹೊಂದಿದ್ದಾರೆ. ಭಾರತೀಯ ರಕ್ಷಣಾ ಸಾಲಿನಲ್ಲಿ ಆಡುವ ಈ ಆಟಗಾರನು ತನ್ನ ಲಾಂಗ್ ಸ್ಲ್ಯಾಪ್ ಹೊಡೆತಗಳ ಮೂಲಕ ಫಾರ್ವರ್ಡ್ ಲೈನ್‌ಗೆ ಫೀಡರ್ ಆಗಿಯೂ ಅನುಭವ ಹೊಂದಿದ್ದಾರೆ. ಅವರು ಭಾರತೀಯ ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸುಖಜಿತ್ ಸಿಂಗ್: ಅಮೃತಸರ ಜಿಲ್ಲೆಯವರಾದ ಸುಖಜಿತ್ ಸಿಂಗ್ ಜಲಂಧರ್ ನಗರದ ನಿವಾಸಿ. ಭಾರತೀಯ ಫಾರ್ವರ್ಡ್ ಲೈನ್‌ನ ಹೊಸ ಆಟಗಾರರಲ್ಲಿ ಒಬ್ಬರಾದ ಸುಖಜಿತ್ ಸಿಂಗ್, ಇತ್ತೀಚಿನ ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಎಂಟು ಆಟಗಾರರ ಹೊರತಾಗಿ, ಕಪುರ್ತಲಾದ ಗೋಲಿ ಕೃಷ್ಣ ಬಹದ್ದೂರ್ ಪಾಠಕ್ ಮತ್ತು ಡ್ರ್ಯಾಗ್ ಫ್ಲಿಕರ್ ಮಜೆಯ ಜುಗರಾಜ್ ಸಿಂಗ್ ಅವರನ್ನು ಮೀಸಲು ಆಟಗಾರರಾಗಿ ಭಾರತ ತಂಡದಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ: ಬೆಳ್ಳಿ ಗೆದ್ದ ಚಿನ್ನದ ಹುಡುಗ ನೀರಜ್​ ಚೋಪ್ರಾ: "ಅತ್ಯುತ್ತಮ ಸಾಧನೆ" ಎಂದು ಪ್ರಧಾನಿ ಮೋದಿ ಶ್ಲಾಘನೆ - PM Modi praised Neeraj Chopra

Last Updated : Aug 9, 2024, 4:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.