ಮೇಷ: ಈ ರಾಶಿಯಲ್ಲಿ ಹುಟ್ಟಿದವರಿಗೆ ವಾರದಲ್ಲಿ ತಮ್ಮ ಪ್ರಯತ್ನಗಳಿಗೆ ಮಿಶ್ರಫಲ ದೊರೆಯಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ನೀವು ಕಠಿಣ ಶ್ರಮ ಪಟ್ಟರೆ ನಿಮಗೆ ಫಲ ದೊರೆಯಲಿದೆ. ಆದರೆ ನಿರೀಕ್ಷಿತ ಫಲ ದೊರೆಯದು. ದೊರೆಯುವ ಯಾವುದೇ ಅವಕಾಶವು ಕೈಚೆಲ್ಲಿ ಹೋಗದಂತೆ ನೋಡಿಕೊಳ್ಳಿ. ವ್ಯವಹಾರದಲ್ಲಿ, ತಾತ್ಕಾಲಿಕ ಲಾಭಕ್ಕಾಗಿ ದೀರ್ಘಕಾಲಿನ ಲಾಭವನ್ನು ಕೈಚೆಲ್ಲಿ ಕುಳಿತುಕೊಳ್ಳಬೇಡಿ. ಅಲ್ಲದೆ ಯಾವುದೇ ಅಪಾಯವನ್ನು ಮೈಗೆಳೆದುಕೊಳ್ಳಬೇಡಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಆಹಾರಕ್ರಮ ಮತ್ತು ದಿನಚರಿಗೆ ಗಮನ ನೀಡಿರಿ. ಕಷ್ಟದ ಸಂದರ್ಭದಲ್ಲಿ ನಿಮ್ಮ ಜೀವನ ಸಂಗಾತಿಯ ನೆರವು ಬಿರುಬಿಸಿಲಿನಲ್ಲಿ ದೊರೆಯುವ ಛಾಯೆಯಂತೆ ನಿಮಗೆ ಸಾಂತ್ವನ ಒದಗಿಸಲಿದೆ. ಈ ವಾರದಲ್ಲಿ ಎಲ್ಲಾ ಸಂಕೋಲೆಗಳಿಂದ ಮುಕ್ತರಾಗುವ ನಿಮ್ಮ ಇಚ್ಛೆಯು ನಿಮ್ಮನ್ನು ಕೌಟುಂಬಿಕ ಮತ್ತು ವೈಯಕ್ತಿಕ ಸಂಬಂಧಗಳಿಂದ ದೂರಗೊಳಿಸಲಿದೆ. ಯಾವುದೇ ಗೊಂದಲಗಳಿದ್ದಲ್ಲಿ ನಿಮ್ಮ ಹಿತೈಷಿಗಳ ಅಭಿಪ್ರಾಯವನ್ನು ತೆಗೆದುಕೊಳ್ಳಿ. ಅಲ್ಲದೆ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಹತ್ತು ಬಾರಿ ಯೋಚಿಸಿ.
ವೃಷಭ: ಈ ರಾಶಿಯವರಿಗೆ ಈ ವಾರವು ಸಾಕಷ್ಟು ಮಂಗಳದಾಯಕ ಹಾಗೂ ಅದೃಷ್ಟಶಾಲಿ ಎನಿಸಲಿದೆ. ಈ ವಾರದಲ್ಲಿ ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಮಹತ್ತರ ಸಾಧನೆಯನ್ನು ಮಾಡಲಿದ್ದೀರಿ. ನಿಮ್ಮ ಹಿರಿಯರು ನಿಮಗೆ ಕೆಲಸದ ಸ್ಥಳದಲ್ಲಿ ಆಶೀರ್ವದಿಸಲಿದ್ದಾರೆ. ಇದರ ಪರಿಣಾಮವಾಗಿ ನಿಮ್ಮ ಆಯ್ಕೆಯ ಸ್ಥಳಕ್ಕೆ ನಿಮಗೆ ವರ್ಗಾವಣೆಯಾಗಬಹುದು ಅಥವಾ ಹೆಚ್ಚಿನ ಜವಾಬ್ದಾರಿಗಳು ದೊರೆಯಬಹುದು. ಪ್ರೇಮ ಸಂಬಂಧದಲ್ಲಿ ಅನುರಾಗ ನೆಲೆಸಲಿದೆ. ನಿಮ್ಮ ಪ್ರಣಯ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಕಳೆಯಲಿದ್ದೀರಿ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ವಾರದ ನಡುವೆ ಯಾರಾದರೂ ಹಿರಿಯ ಅಥವಾ ಪ್ರಭಾವಿ ವ್ಯಕ್ತಿಗಳ ಜೊತೆಗೆ ನಡೆಯುವ ಸಭೆಯು ಭವಿಷ್ಯದಲ್ಲಿ ಲಾಭ ಗಳಿಸಿ ಕೊಡಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಬಹುದು. ನಿಮ್ಮ ಅಲೋಚನೆಗಳು, ಹವ್ಯಾಸಗಳು ಮತ್ತು ಆಸಕ್ತಿಗಳು ಹಾಗೂ ಮಕ್ಕಳಿಗೆ ಸಂಬಂಧಿಸಿದ ವಿಚಾರಗಳು ನಿಮಗೆ ಸಾಕಷ್ಟು ತೃಪ್ತಿಯನ್ನು ನೀಡಲಿವೆ. ನಿಮ್ಮ ಚಟುವಟಿಕೆಗಳ ವ್ಯಾಪ್ತಿಯು ವಿಸ್ತರಣೆಯಾಗಲಿದೆ. ನಿಮ್ಮ ಸಾಮರ್ಥ್ಯ, ತಾಳ್ಮೆ ಮತ್ತು ಸಹಾಯ ಮಾಡುವ ಮನೋಭಾವವು ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ.
ಮಿಥುನ: ಮಿಥುನ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಸಾಕಷ್ಟು ಕೆಲಸದ ಒತ್ತಡ ಮತ್ತು ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಯಾವುದೇ ಗಂಭೀರ ಸಮಸ್ಯೆಯು ನಿಮ್ಮ ಬದುಕನ್ನು ಕಾಡುತ್ತಿದ್ದರೆ, ಈ ಬಗ್ಗೆ ಚಿಂತಿಸುವ ಬದಲಿಗೆ ಶಾಂತ ಚಿತ್ತದಿಂದ ಪರಿಹಾರವನ್ನು ಕಂಡುಹಿಡಿಯಲು ಯತ್ನಿಸಿ. ವ್ಯವಹಾರದಲ್ಲಿ ಸಾಧಾರಣ ಮಟ್ಟದ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಯಾವುದೇ ವ್ಯಕ್ತಿಯ ಜೊತೆಗೂ ವಿವಾದದ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುವ ಬದಲಿಗೆ ನಿಮ್ಮ ಕೆಲಸಕ್ಕೆ ಗಮನ ನೀಡಿರಿ. ವ್ಯವಹಾರವನ್ನು ಅಭಿವೃದ್ಧಿಪಡಿಸಲು ಅಥವಾ ಯಾವುದೇ ಯೋಜನೆಯಲ್ಲಿ ಕೈ ಹಾಕಲು ಮುಂದೆ ಹೋಗುವ ಮೊದಲು ಸರಿಯಾದ ಸಮಯಕ್ಕಾಗಿ ಕಾಯಿರಿ. ವಾರದ ಕೊನೆಯಲ್ಲಿ ನೀವು ಮತ್ತು ನಿಮ್ಮ ಜೀವನ ಸಂಗಾತಿಯು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ಪ್ರೇಮ ಸಂಬಂಧದಲ್ಲಿ ನಿಮ್ಮ ಪ್ರೇಮಿಯ ಜೊತೆಗೆ ನೀವು ಯಾವುದೇ ಭಿನ್ನಾಭಿಪ್ರಾಯ ಅಥವಾ ತಪ್ಪು ಗ್ರಹಿಕೆಯನ್ನು ಹೊಂದಿದ್ದಲ್ಲಿ, ಯಾರಾದರೂ ಹಿತೈಷಿಗಳ ನೆರವಿನಿಂದ ಸಮಸ್ಯೆಯನ್ನು ಬಗೆಹರಿಸಲಿದ್ದೀರಿ.
ಕರ್ಕಾಟಕ: ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೆ ಈ ವಾರದಲ್ಲಿ ತಮ್ಮ ಕನಸು ನನಸಾಗಲಿದೆ. ಇಡೀ ವಾರದಲ್ಲಿ ನಿಮಗೆ ಅದೃಷ್ಟದ ನೆರವು ದೊರೆಯಲಿದೆ. ಉದ್ಯೋಗದಲ್ಲಿರುವವರಿಗೆ ಸಮಯವು ಅನುಕೂಲಕರವಾಗಿದೆ. ಬಡ್ತಿ ಪಡೆಯುವ ಇಚ್ಛೆಯು ಈಡೇರಲಿದೆ. ಆದರೆ ಈ ವಾರದಲ್ಲಿ ನೀವು ಸಾಕಷ್ಟು ಸಮಯ ಮತ್ತು ಗಮನವನ್ನು ಕೌಟುಂಬಿಕ ವಿಚಾರಗಳಿಗೆ ಮೀಸಲಿಡಬೇಕಾಗುತ್ತದೆ. ವಿದೇಶದಲ್ಲಿ ವ್ಯವಹಾರವನ್ನು ನಡೆಸುವವರಿಗೆ ಹೆಚ್ಚುವರಿ ಲಾಭ ದೊರೆಯಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಉತ್ತಮ ಬಾಂಧವ್ಯವನ್ನು ರೂಪಿಸುವ ಕಾರಣ ನಿಮ್ಮ ಎಲ್ಲಾ ಸವಾಲುಗಳನ್ನು ಬಗೆಹರಿಸಲು ನಿಮಗೆ ಸಾಧ್ಯವಾಗಲಿದೆ. ಮಾತ್ರವಲ್ಲದೆ ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ಅದ್ಭುತ ಕ್ಷಣಗಳನ್ನು ಕಳೆಯಲಿದ್ದೀರಿ. ಕುಟುಂಬದ ಸದಸ್ಯರ ಹಸಿರು ನಿಶಾನೆ ದೊರೆತಲ್ಲಿ, ಪ್ರೇಮ ಸಂಬಂಧವು ವಿವಾಹದಲ್ಲಿ ಪರ್ಯವಸನಗೊಳ್ಳಬಹುದು. ಆರೋಗ್ಯವು ಎಂದಿನಂತೆ ಇರಲಿದೆ. ಈ ವಾರದ ಉತ್ತರಾರ್ಧದಲ್ಲಿ ಉದ್ಯೋಗಸ್ಥ ಮಹಿಳೆಯರು ಮನೆ ಮತ್ತು ಕೆಲಸದ ನಡುವೆ ಸಂತುಲನವನ್ನು ಕಾಪಾಡಲು ಹೆಣಗಾಡಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಹೋಗುವ ಅವಕಾಶ ಲಭಿಸಬಹುದು.
ಸಿಂಹ: ಸಿಂಹ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ಹೆಚ್ಚಿನ ಒತ್ತನ್ನು ನೀಡುವ ಬದಲಿಗೆ ಅದನ್ನು ನಿರ್ಲಕ್ಷಿಸಬೇಕು. ಇದರಿಂದ ಸಂತಸ ಮತ್ತು ಆತ್ಮತೃಪ್ತಿ ದೊರೆಯಲಿದೆ. ಈ ವಾರದಲ್ಲಿ ನಿಮ್ಮ ವೃತ್ತಿಯಲ್ಲಿ ನೀವು ಮುಂದಕ್ಕೆ ಸಾಗಲಿದ್ದೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ಹಿರಿಯರ ಬೆಂಬಲವನ್ನು ನೀವು ಪಡೆಯಲಿದ್ದೀರಿ. ಯಾರಿಗಾದರೂ ನಿಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲು ನೀವು ಇಚ್ಛಿಸುವುದಾದರೆ ಗೆಳೆಯರೊಬ್ಬರು ನಿಮಗೆ ಸಹಕರಿಸಲಿದ್ದಾರೆ. ಈಗಾಗಲೇ ಪ್ರೇಮ ಸಂಬಂಧದಲ್ಲಿರುವ ವ್ಯಕ್ತಿಗಳು ತಮ್ಮ ಸಂಗಾತಿಯ ಕುರಿತು ಅಭಿಮಾನ ಹೊಂದಲಿದ್ದಾರೆ. ವೈವಾಹಿಕ ಬದುಕಿನಲ್ಲಿ ತೃಪ್ತಿ ನೆಲೆಸಲಿದೆ. ವಾರದ ಕೊನೆಗೆ ನಿಮ್ಮ ಮಕ್ಕಳಿಂದ ಏನಾದರೂ ಶುಭ ಸುದ್ದಿ ಬರಲಿದೆ. ಹವಾಮಾನದಲ್ಲಿ ಬದಲಾವಣೆ ಉಂಟಾಗುವ ಕಾರಣ ನಿಮ್ಮ ಆರೋಗ್ಯವನ್ನು ರಕ್ಷಿಸುವುದಕ್ಕಾಗಿ ಮುಂಜಾಗರೂಕತೆಯನ್ನು ವಹಿಸಿ. ನಿಮ್ಮ ಸಂಬಂಧಿಗಳ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ಇಲ್ಲದಿದ್ದರೆ ಸಮಸ್ಯೆಯನ್ನು ಬಗೆಹರಿಸಿದ್ದಕ್ಕೆ ಕೃತಜ್ಞತೆಗಳನ್ನು ಪಡೆಯುವ ಬದಲಿಗೆ ಟೀಕೆಯನ್ನು ಕೇಳಬೇಕಾದೀತು.
ಕನ್ಯಾ: ಕನ್ಯಾ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಕೆಲವೊಂದು ವಾಗ್ವಾದಗಳು ಮಾನಸಿಕ ತೊಂದರೆಗಳನ್ನು ಉಂಟು ಮಾಡಬಹುದು. ವಾರದ ಆರಂಭದಲ್ಲಿ ನೀವು ಕೋಪಗೊಳ್ಳಬಹುದು ಮತ್ತು ಅಡಚಣೆಗಳು, ಭೀತಿಗಳಿಂದ ರೋಸಿ ಹೋಗಬಹುದು. ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಿದರೆ ಗಂಭೀರ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಹಣವನ್ನು ಜಾಣ್ಮೆಯಿಂದ ನಿಭಾಯಿಸಿ. ಇಲ್ಲದಿದ್ದಲ್ಲಿ ಹಣಕಾಸಿನ ಸಮಸ್ಯೆಯು ನಿಮ್ಮ ಸಮಸ್ಯೆಗಳಿಗೆ ಪ್ರಮುಖ ಕಾರಣವೆನಿಸಬಹುದು. ಬೇರೆಯವರ ಪ್ರಭಾವಕ್ಕೆ ಒಳಗಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ವಾರದ ಉತ್ತರಾರ್ಧ ಪರಿಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ಉಂಟಾಗಲಿದೆ. ಈ ಅವಧಿಯಲ್ಲಿ ನಿಮ್ಮ ಪ್ರೇಮಿ ಅಥವಾ ಜೀವನ ಸಂಗಾತಿಯ ಜೊತೆಗಿನ ಸಂಬಂಧದಲ್ಲಿ ಅನ್ಯೋನ್ಯತೆ ಅಥವಾ ಸುಖೋಷ್ಣತೆಯನ್ನು ಅನುಭವಿಸಲಿದ್ದೀರಿ. ನಿಮ್ಮ ಪ್ರೇಮಿ ಅಥವಾ ಜೀವನ ಸಂಗಾತಿಯು ಯಾವುದೇ ಕಷ್ಟಕರ ಸಮಸ್ಯೆಯನ್ನು ಬಗೆಹರಿಸಲು ನಿಮಗೆ ಸಹಾಯ ಮಾಡಲಿದ್ದಾರೆ. ಅಲ್ಲದೆ ಬದುಕಿನ ಕುರಿತ ನಿಮ್ಮ ಅರಿವನ್ನು ವಿಸ್ತರಿಸಲಿದ್ದಾರೆ. ತಾಯಿಯ ಆರೋಗ್ಯದ ಕುರಿತ ಚಿಂತೆಯು ನಿಮ್ಮನ್ನು ಕಾಡಬಹುದು. ಹವಾಮಾನವು ಬದಲಾಗುತ್ತಿರುವ ಸಂದರ್ಭದಲ್ಲಿ ಅಜಾಗರೂಕತೆಯಿಂದ ವರ್ತಿಸಬೇಡಿ. ನಿಮ್ಮ ಆಹಾರಕ್ರಮಕ್ಕೆ ಸಾಕಷ್ಟು ಗಮನವನ್ನು ನೀಡಿರಿ.
ತುಲಾ: ಈ ವಾರದಲ್ಲಿ ತುಲಾ ರಾಶಿಯವರು ಹೊಸ ವ್ಯಕ್ತಿಗಳನ್ನು ಸಂಪರ್ಕಿಸಲು ಮತ್ತು ತಮ್ಮ ಸಂಬಂಧಿಗಳ ಜೊತೆಗಿನ ಸಂಬಂಧದಲ್ಲಿ ಸುಧಾರಣೆಯನ್ನು ತರಲು ಯತ್ನಿಸಲಿದ್ದಾರೆ. ನಿರ್ದಿಷ್ಟ ವ್ಯಕ್ತಿಯೊಬ್ಬರ ಸಹಾಯದಿಂದ ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಕೆಲಸವು ಕ್ಷಿಪ್ರವಾಗಿ ಪೂರ್ಣಗೊಳ್ಳಲಿದ್ದು, ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ಪ್ರವಾಸವು ಸಂತಸ, ಪ್ರಗತಿ ಮತ್ತು ಸಾಕಷ್ಟು ಗಳಿಕೆಯನ್ನು ತಂದು ಕೊಡಲಿದೆ. ಆಸ್ತಿ ಮತ್ತು ಕಟ್ಟಡದ ಖರೀದಿ ಮತ್ತು ಮಾರಾಟದ ಮೂಲಕ ನೀವು ದೊಡ್ಡ ಪ್ರಮಾಣದ ಲಾಭ ಮಾಡಬಹುದು. ನಿಮ್ಮ ಜೀವನ ಸಂಗಾತಿಯು ಸಮಾನ ಬೆಂಬಲವನ್ನು ಒದಗಿಸಲಿದ್ದಾರೆ. ಆರೋಗ್ಯವು ಎಂದಿನಂತೆ ಇರಲಿದೆ. ಆದರೆ ನಿಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡುವುದಕ್ಕಾಗಿ ಧ್ಯಾನ ಮತ್ತು ಯೋಗದಲ್ಲಿ ಪಾಲ್ಗೊಳ್ಳುವುದು ಒಳ್ಳೆಯದು. ನೀವು ಪ್ರೇಮ ಸಂಬಂಧದಲ್ಲಿದ್ದರೆ, ಇದು ಸದ್ಯವೇ ವಿವಾಹ ಬಂಧನದಲ್ಲಿ ಪರ್ಯವಸನಗೊಳ್ಳಲಿದೆ. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಪ್ರೇಮ ಸಂಬಂಧಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಮಕ್ಕಳಿಗೆ ಸಂಬಂಧಿಸಿದಂತೆ ಉಂಟಾಗಿರುವ ಚಿಂತೆ ಮತ್ತು ಒತ್ತಡವನ್ನು ತಗ್ಗಿಸುವುದಕ್ಕಾಗಿ ಎರಡೂ ಪಕ್ಷಗಳು ಎಲ್ಲಾ ಪ್ರಯತ್ನವನ್ನು ಮಾಡಲಿವೆ.
ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಈ ವಾರದಲ್ಲಿ ನೋವು - ನಲಿವು ಎರಡೂ ಲಭಿಸಲಿದೆ. ವಾರದ ಆರಂಭದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಚಿಂತೆಗಳು ನಿಮ್ಮನ್ನು ಕಾಡಬಹುದು. ಋತುಮಾನದ ಬದಲಾವಣೆಯ ಸಂದರ್ಭದಲ್ಲಿ ನಿಮ್ಮ ದೇಹದ ಕುರಿತು ಸಾಕಷ್ಟು ಕಾಳಜಿ ವಹಿಸಿ. ನೀವು ಈಗಾಗಲೇ ಯಾವುದೇ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಕುರಿತು ನಿರ್ಲಕ್ಷ್ಯ ವಹಿಸಬೇಡಿ. ಇಲ್ಲದಿದ್ದರೆ ನೀವು ಆಸ್ಪತ್ರೆಗೆ ಭೇಟಿ ನೀಡಬೇಕಾದೀತು. ನಿಮ್ಮ ಪ್ರೇಮಿಯೊಂದಿಗೆ ಅನ್ಯೋನ್ಯತೆ ಮತ್ತು ಆಪ್ತತೆಯನ್ನು ಬೆಳೆಸುವ ಪ್ರಬಲ ಇಚ್ಛೆ ನಿಮ್ಮಲ್ಲಿ ಕಾಣಿಸಿಕೊಳ್ಳಲಿದೆ. ನೀವು ಯಾರಿಗಾದರೂ ನಿಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲು ಇಚ್ಛಿಸುವುದಾದರೆ ಅಥವಾ ಕೋಪಗೊಂಡಿರುವ ನಿಮ್ಮ ಸಂಗಾತಿಯ ಮನವೊಲಿಸುವ ಪ್ರಯತ್ನವನ್ನು ಮಾಡುತ್ತಿದ್ದರೆ, ಸಣ್ಣದಾದ ಉಡುಗೊರೆಯೊಂದು ನಿಮ್ಮ ನೆರವಿಗೆ ಬರಲಿದೆ. ನಿಮ್ಮ ಕುಟುಂಬದೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲು ನಿಮಗೆ ಅವಕಾಶ ದೊರೆಯಲಿದೆ. ಈ ವಾರದಲ್ಲಿ ಅರ್ಥಪೂರ್ಣ ರೀತಿಯಲ್ಲಿ ಮತ್ತು ಎಚ್ಚರಿಕೆಯಿಂದ ಮಾಡಿದ ಹೂಡಿಕೆಯು ನಿಮ್ಮ ಗುರಿಯನ್ನು ಸಾಧಿಸಲು ನಿಮಗೆ ಸಹಾಯ ಮಾಡಲಿದೆ. ಆದರೆ ಯಾವುದೇ ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದರೆ ನಿಮಗೆ ನಷ್ಟ ಉಂಟಾಗಬಹುದು ಎಂಬುದನ್ನು ಮರೆಯಬೇಡಿ.
ಧನು: ಧನು ರಾಶಿಯಲ್ಲಿ ಹುಟ್ಟಿದ ಯಾವುದೇ ವ್ಯಕ್ತಿಗೆ ಈ ವಾರದಲ್ಲಿ ಹೊಸ ಅವಕಾಶಗಳು ಲಭಿಸಲಿವೆ. ಕೆಲಸದ ಸ್ಥಳದಲ್ಲಿರುವ ಹಿರಿಯರು ನಿಮ್ಮ ಪ್ರಯತ್ನಗಳ ಕುರಿತು ಸಂತಸ ವ್ಯಕ್ತಪಡಿಸಲಿದ್ದಾರೆ ಹಾಗೂ ಪ್ರಮುಖ ಕರ್ತವ್ಯ ಅಥವಾ ಹುದ್ದೆಯನ್ನು ನಿಮಗೆ ದಯಪಾಲಿಸಲಿದ್ದಾರೆ. ಒಟ್ಟಾರೆಯಾಗಿ ವೃತ್ತಿಪರ ಮತ್ತು ವ್ಯಾವಹಾರಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಈ ವಾರದಲ್ಲಿ ಅವಕಾಶಗಳು ಲಭಿಸಲಿವೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರಕ್ಕೆ ಪ್ರಯಾಣ ಮಾಡಬೇಕಾದೀತು. ನಿಮ್ಮ ಸಂಸ್ಥೆಯು ಕೆಲ ಕಾಲದಿಂದ ನಷ್ಟ ಅನುಭವಿಸುತ್ತಿದ್ದರೆ, ಈ ವಾರದಲ್ಲಿ ದೊಡ್ಡದಾದ ವ್ಯವಹಾರದಿಂದ ಬರುವ ಲಾಭವು ಇದನ್ನು ಸರಿದೂಗಿಸಲಿದೆ. ಪ್ರಗತಿಗೆ ಅವಕಾಶ ಲಭಿಸಲಿದೆ. ಪ್ರೇಮ ಸಂಬಂಧವು ಗಟ್ಟಿಗೊಳ್ಳಲಿದೆ. ನಿಮ್ಮ ಪ್ರೇಮಿಯೊಂದಿಗೆ ಇನ್ನಷ್ಟು ಸಾಮಿಪ್ಯವನ್ನು ಗಳಿಸಲಿದ್ದೀರಿ. ವೈವಾಹಿಕ ಸಂಬಂಧದಲ್ಲಿ ಅನ್ಯೋನ್ಯತೆಯು ಹೆಚ್ಚಲಿದೆ. ಹಿತೈಷಿ ಅಥವಾ ಗೆಳೆಯರ ಸಹಾಯದಿಂದ ಆದಾಯದ ಹೊಸ ಮೂಲಗಳು ಲಭಿಸಲಿದ್ದು, ಸಮೃದ್ಧಿ ಉಂಟಾಗಲಿದೆ. ಪರೀಕ್ಷೆಗಳು ಮತ್ತು ಸ್ಪರ್ಧೆಗಳಿಗಾಗಿ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅದ್ಭುತ ಫಲಿತಾಂಶ ಲಭಿಸಲಿದೆ.
ಮಕರ: ಈ ವಾರದಲ್ಲಿ ಮಕರ ರಾಶಿಯವರು ಅಲ್ಪಕಾಲಿನ ಲಾಭಕ್ಕಾಗಿ ದೀರ್ಘಕಾಲಿನ ನಷ್ಟವನ್ನುಂಟು ಮಾಡಬಾರದು. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದಲ್ಲಿ ಅನಾಸಕ್ತಿ ತೋರಬೇಡಿ. ಇಲ್ಲದಿದ್ದರೆ ನಿಮ್ಮ ಬಾಸ್ನ ಕೋಪಕ್ಕೆ ನೀವು ಗುರಿಯಾಗುವ ಸಾಧ್ಯತೆ ಇದೆ. ವಾರದ ನಡುವೆ, ನಿಮ್ಮ ಮನೆಯ ಅಥವಾ ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯವನ್ನು ಸಾಧಿಸುವುದಕ್ಕಾಗಿ ನಿಮ್ಮ ವೃತ್ತಿ ಜೀವನದಲ್ಲಿ ಸಾಮರಸ್ಯವನ್ನು ಕಾಪಾಡಲು ಯತ್ನಿಸಲಿದ್ದೀರಿ. ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ನಿಮ್ಮ ಬಗ್ಗೆ ನಿಜವಾಗಿಯೂ ಕಾಳಜಿ ತೋರುವವರ ಬಗ್ಗೆ ನಿರ್ಲಕ್ಷ್ಯ ತೋರಬೇಡಿ. ಪ್ರಣಯ ಸಂಬಂಧದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಜೀವನ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ಆರ್ಥಿಕ ಮುಗ್ಗಟ್ಟನ್ನು ಮೀರುವುದಕ್ಕಾಗಿ ಆದಾಯದ ಹೆಚ್ಚುವರಿ ಮೂಲಗಳನ್ನು ನೀವು ಹುಡುಕಬೇಕಾದ ಅಗತ್ಯವಿದೆ. ವೃತ್ತಿಪರ ಮತ್ತು ಸಾಮಾಜಿಕ ಚಟುವಟಿಕೆಗಳಿಗಾಗಿ ಖರ್ಚು ಮಾಡುವ ಸಮಯವನ್ನು ನೀವು ಕಡಿಮೆ ಮಾಡಬೇಕು.
ಕುಂಭ: ಈ ವಾರದಲ್ಲಿ ವಿಶ್ವಾಸಾರ್ಹತೆ, ನಂಬಿಕೆ ಮತ್ತು ದೃಢ ಬಂಧವನ್ನು ಆಧರಿಸಿ ಸಹಭಾಗಿತ್ವವನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಇದ್ದು, ಸಂತಸಭರಿತ ಭವಿಷ್ಯವನ್ನು ರೂಪಿಸಲು ಇದು ನಿಮಗೆ ಸಹಾಯ ಮಾಡಲಿದೆ. ಪ್ರೇಮ ಸಂಬಂಧದಲ್ಲಿ ಇನ್ನಷ್ಟು ಭಾವತೀವ್ರತೆ ಕಾಣಿಸಿಕೊಳ್ಳಲಿದ್ದು, ನಿಮ್ಮ ಪ್ರಣಯ ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ನೀವು ಕಳೆಯಲಿದ್ದೀರಿ. ವಾರದ ಆರಂಭದಲ್ಲಿ, ನೀವು ಕೈ ಹಾಕುವ ಕೆಲಸ ಅಥವಾ ಗುತ್ತಿಗೆಯಿಂದ ನಿಮಗೆ ಲಾಭ ದೊರೆಯಲಿದೆ. ಈ ವಾರದಲ್ಲಿ ಯಾವುದಾದರೂ ದೊಡ್ಡದಾದ ಬಿಲ್ ಅಥವಾ ಸಮಸ್ಯೆಯಿಂದ ನಿಮಗೆ ಮುಕ್ತಿ ದೊರೆಯಲಿದೆ. ವಾರದ ಆರಂಭದಲ್ಲಿ ಧ್ಯಾನ ಅಥವಾ ಧಾರ್ಮಿಕ ಕಾರ್ಯದಲ್ಲಿ ನಿಮ್ಮ ಆಸಕ್ತಿಯು ಬೆಳೆಯಲಿದೆ. ನೀವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಐಷಾರಾಮಿ ವಸ್ತುಗಳಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ. ಈ ವಾರದಲ್ಲಿ ಬದುಕಿನ ಆನಂದ ಮತ್ತು ಸಾಮಾಜೀಕರಣವನ್ನು ನೀವು ಆನಂದಿಸಲಿದ್ದೀರಿ.
ಮೀನ: ಉದ್ಯೋಗದ ಒತ್ತಡಭರಿತ ವೇಳಾಪಟ್ಟಿಯ ನಡುವೆ ಕೌಟುಂಬಿಕ ಬದ್ಧತೆಗಳನ್ನು ಈಡೇರಿಸುವುದು ಕಷ್ಟಕರವಾದೀತು. ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ನೀವು ಪ್ರಗತಿ ಸಾಧಿಸಲಿದ್ದೀರಿ. ಆದರೆ ಹಣಕ್ಕೆ ಸಂಬಂಧಿಸಿದಂತೆ ಅತೃಪ್ತಿ ಕಾಡಬಹುದು. ವಾರದ ಉತ್ತರಾರ್ಧದಲ್ಲಿ ಕೆಲಸದ ಸ್ಥಳದಲ್ಲಿ ಅಸಾಧಾರಣ ಯಶಸ್ಸು ಲಭಿಸಲಿದೆ. ಪ್ರೇಮ ಸಂಬಂಧದಲ್ಲಿ ತೀವ್ರತೆ ಕಾಣಿಸಿಕೊಳ್ಳಲಿದ್ದು, ನಿಮ್ಮ ಪ್ರೇಮಿಯೊಂದಿಗೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿಮ್ಮ ಜೀವನ ಸಂಗಾತಿಯು ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ. ನಿಮ್ಮ ಆರೋಗ್ಯವು ಎಂದಿನಂತೆ ಇರಲಿದೆ. ಪ್ರಭಾವಿ ವ್ಯಕ್ತಿಯೊಬ್ಬರ ನೆರವಿನಿಂದ ಸರ್ಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಭವಿಷ್ಯದ ಬಗ್ಗೆ ಯೋಜನೆಗಳನ್ನು ರೂಪಿಸಲು ಇದು ಸಕಾಲ.