ಮೇಷ: ಈ ವಾರದಲ್ಲಿ ಮೇಷ ರಾಶಿಯವರು ಕುಟುಂಬದ ಬೆಂಬಲ ಪಡೆಯಲಿದ್ದಾರೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಎಲ್ಲಾದರೂ ಹೋಗುವ ಯೋಜನೆಯನ್ನು ರೂಪಿಸಲಿದ್ದು ಎಲ್ಲರೂ ಸಂತಸ ಅನುಭವಿಸಲಿದ್ದೀರಿ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಲಿದ್ದಾರೆ. ನಿಮ್ಮ ಹಿರಿಯ ಅಧಿಕಾರಿಗಳಿಂದ ಸಹಕಾರ ಪಡೆಯಲಿದ್ದೀರಿ. ನೀವು ವ್ಯವಹಾರದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಆರ್ಥಿಕ ಲಾಭ ಗಳಿಸುವ ಸಾಧ್ಯತೆಗಳಿದ್ದು, ಅಧಿಕ ಮಟ್ಟದ ವೆಚ್ಚವೂ ಉಂಟಾಗಬಹುದು. ಆದರೆ ಆದಾಯವು ಚೆನ್ನಾಗಿದೆ. ನೀವು ನಿಮಗಾಗಿ ಹೊಸ ವಾಹನವನ್ನು ಖರೀದಿಸಲಿದ್ದೀರಿ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ವಿದ್ಯಾರ್ಥಿಗಳು ಸಂಪೂರ್ಣ ಏಕಾಗ್ರತೆಯಿಂದ ಅಧ್ಯಯನ ಮಾಡಲಿದ್ದಾರೆ. ಅತ್ತಿತ್ತ ಗಮನ ನೀಡುವ ಬದಲಿಗೆ ನಿಮ್ಮೆಲ್ಲ ಗಮನವನ್ನು ಅಧ್ಯಯನದ ಮೇಲೆ ಕೇಂದ್ರೀಕರಿಸಿ. ಹೀಗೆ ಮಾಡುವುದರಿಂದ ನಿಮಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ.
ವೃಷಭ: ವೃಷಭ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮಗೆ ತಾಯಿಯ ಸಾಂಗತ್ಯ ಮತ್ತು ನೆರವು ದೊರೆಯಲಿದೆ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ನೀವು ನಿಮ್ಮ ಪ್ರೇಮ ಸಂಗಾತಿಯ ಜೊತೆಗೆ ಹೊಸ ಸಂಬಂಧಕ್ಕೆ ಕಾಲಿಡಬಹುದು. ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ನೀವು ವ್ಯವಹಾರದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಸರ್ಕಾರಿ ವಲಯದಿಂದ ನಿಮಗೆ ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಮುಂದುವರಿಯಲು ಅವಕಾಶ ದೊರೆಯಲಿದೆ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ನಿಮ್ಮ ಕಾರ್ಯಸಾಧನೆಯನ್ನು ತೋರಿಸಲು ನಿಮಗೆ ಅವಕಾಶ ದೊರೆಯಲಿದೆ. ಮನೆಯಲ್ಲಿ ಪೂಜೆ ಪುನಸ್ಕಾರಗಳು ನಡೆಯಲಿದ್ದು, ಅನೇಕ ಜನರು ಬಂದು ಹೋಗಲಿದ್ದಾರೆ. ನಿಮ್ಮ ಆರೋಗ್ಯವು ಮೊದಲಿಗಿಂತಲೂ ಚೆನ್ನಾಗಿರಲಿದೆ. ವಿದೇಶದಿಂದ ಆಮದು ರಫ್ತು ಕೆಲಸ ಮಾಡುವವರಿಗೆ ಶುಭ ಸುದ್ದಿ ದೊರೆಯಲಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ವಿಶೇಷ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲಿದ್ದು ಇದರಿಂದ ಅವರ ಅಧ್ಯಯನಕ್ಕೆ ವಿಶೇಷ ಪ್ರಯೋಜನ ದೊರೆಯಲಿದೆ.
ಮಿಥುನ: ಈ ವಾರವು ಹಣಕಾಸಿನ ವಿಚಾರದಲ್ಲಿ ಚೆನ್ನಾಗಿರಲಿದೆ. ನೀವು ಹೊಸ ಸಂಪರ್ಕಗಳನ್ನು ಪಡೆಯಲಿದು, ನಿಮ್ಮ ವ್ಯವಹಾರದಲ್ಲಿ ಪ್ರಗತಿ ಸಾಧಿಸುವುದರಲ್ಲಿ ಯಶಸ್ವಿಯಾಗಲಿದ್ದೀರಿ. ನಿಮ್ಮ ಎಲ್ಲಾ ವೆಚ್ಚಗಳನ್ನು ನಿಭಾಯಿಸಲು ಸಿದ್ಧರಿದ್ದೀರಿ. ಸಹೋದರಿಯ ಮದುವೆಯಲ್ಲಿ ಎದುರಾಗಿರುವ ಅಡಚಣೆಗಳು ದೂರಗೊಳ್ಳಲಿವೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಲಿದ್ದಾರೆ. ಹಿರಿಯರೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡುವುದು ಒಳ್ಳೆಯದು. ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಲು ನೀವು ಅವಕಾಶ ಪಡೆಯಲಿದ್ದೀರಿ. ಇದಕ್ಕಾಗಿ ನೀವು ಯಾವುದಾದರೂ ಸಾಮಾಜಿಕ ಸಂಘಟನೆಗೆ ಸೇರಬಹುದು. ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೃಪ್ತಿಯ ವಾತಾವರಣ ಇರಲಿದೆ. ನಿಮ್ಮ ಜೀವನ ಸಂಗಾತಿಗಾಗಿ ಪ್ರೇಮ ಗೀತೆಗಳನ್ನು ಹಾಡಬಹುದು. ಪ್ರೇಮ ಜೀವನವನ್ನು ಸಾಗಿಸುತ್ತಿರುವ ಜನರು ತಮ್ಮ ಭಾವನೆಗಳನ್ನು ಪ್ರೇಮಿಯೊಂದಿಗೆ ಹಂಚಿಕೊಳ್ಳಲಿದ್ದಾರೆ. ಹೀಗಾಗಿ ಅವರ ಸಂಬಂಧದಲ್ಲಿ ಪ್ರೇಮ ಕಾಣಿಸಿಕೊಳ್ಳಲಿದೆ. ನೀವು ತೀರ್ಥಯಾತ್ರೆಗೆ ಹೋಗಲು ಯೋಜನೆ ರೂಪಿಸಬಹುದು.
ಕರ್ಕಾಟಕ: ಈ ವಾರದಲ್ಲಿ ಕರ್ಕಾಟಕ ರಾಶಿಯವರ ವೈವಾಹಿಕ ಬದುಕಿನಲ್ಲಿ ಏರುಪೇರು ಉಂಟಾಗಬಹುದು. ನಿಮ್ಮ ಅಹಂನ ಕಾರಣ ನೀವು ಹೇಳುವ ಮಾತು ನಿಮ್ಮ ಜೀವನ ಸಂಗಾತಿಯನ್ನು ನೋಯಿಸಬಹುದು. ನಿಮ್ಮ ಮತ್ತು ನಿಮ್ಮ ಪ್ರೇಮಿಯ ನಡುವೆ ಸಾಕಷ್ಟು ಅನ್ಯೋನ್ಯತೆ ಇರಲಿದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ವಿದ್ಯಾರ್ಥಿಗಳು ಸಂಪೂರ್ಣ ಏಕಾಗ್ರತೆಯಿಂದ ಅಧ್ಯಯನ ಮಾಡಲಿದ್ದಾರೆ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ನೀವು ಯಾವುದಾದರೂ ಹೂಡಿಕೆಯನ್ನು ಮಾಡಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಗಳಿಸಬಹುದು. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದಲ್ಲಿ ಸಂತಸ ಕಾಣಲಿದ್ದಾರೆ. ಬದಲಾಗುತ್ತಿರುವ ಹವಾಮಾನದ ಕಾರಣ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಸ್ಪರ್ಧೆಯಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ. ಮನೆಯಲ್ಲಿ ಆರಾಧನೆಯನ್ನು ಅಯೋಜಿಸಬಹುದು. ನಿಮ್ಮ ತಾಯಿಯ ಸಂಗವನ್ನು ಪಡೆಯಲಿದ್ದೀರಿ. ಅವರ ಪ್ರೀತಿಯನ್ನು ಪಡೆಯಲಿದ್ದೀರಿ. ಈ ವಾರದಲ್ಲಿ ವಿಪರೀತವಾಗಿ ಭಾವನಾತ್ಮಕವಾಗಿ ವರ್ತಿಸದೆ ನಿಮ್ಮ ಮನಸ್ಸಿನ ಭಾವನೆಗಳನ್ನು ಕೇಳಿಸಿಕೊಂಡರೆ ನಿಮಗೆ ಪ್ರಯೋಜನ ಉಂಟಾಗಲಿದೆ.
ಸಿಂಹ: ಸಿಂಹ ರಾಶಿಯ ಜನರು ತಮ್ಮಲ್ಲಿ ತಾವು ಭರವಸೆ ಇಟ್ಟುಕೊಳ್ಳಲು ಕಲಿತರೆ ಈ ವಾರದಲ್ಲಿ ಒಳ್ಳೆಯ ಫಲಿತಾಂಶವನ್ನು ಪಡೆಯಲಿದ್ದಾರೆ. ಪ್ರೇಮ ಸಂಬಂಧವಾಗಿರಲಿ ಅಥವಾ ಕೌಟುಂಬಿಕ ಬದುಕಾಗಿರಲಿ, ನಿಮಗೆ ಸಂತಸ ಮತ್ತು ತೃಪ್ತಿ ದೊರೆಯಲಿದೆ. ಕೆಲ ಪ್ರಮುಖ ಕೆಲಸಗಳಲ್ಲಿ ನಿಮ್ಮ ಸಂಗಾತಿಯ ಬೆಂಬಲವು ದೊರೆಯುವುದರಿಂದ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ಹಣಕಾಸಿನಲ್ಲಿ ಉಂಟಾಗುವ ಏರುಪೇರಿನ ನಡುವೆ ಒಳ್ಳೆಯ ಆದಾಯವನ್ನು ನೀವು ಗಳಿಸಲಿದ್ದೀರಿ. ವ್ಯವಹಾರದ ವಿಚಾರದಲ್ಲಿ ಸಮಯವು ಚೆನ್ನಾಗಿದೆ. ನಿಮ್ಮ ವ್ಯವಹಾರವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲು ನಿಮಗೆ ಅವಕಾಶ ದೊರೆಯಲಿದೆ. ಉದ್ಯೋಗದಲ್ಲಿರುವವರು ಉತ್ತಮ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಲಿದ್ದಾರೆ. ಚೆನ್ನಾಗಿ ಅಧ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ಒಳ್ಳೆಯ ಫಲಿತಾಂಶ ಪಡೆಯಲಿದ್ದಾರೆ. ಶಿಕ್ಷಣದತ್ತ ಅವರ ಒಲವು ಹೆಚ್ಚಲಿದೆ. ಈ ವಾರದಲ್ಲಿ ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನವನ್ನು ನೀಡಿರಿ. ಏಕೆಂದರೆ ದೌರ್ಬಲ್ಯವು ನಿಮ್ಮನ್ನು ಕಾಡಬಹುದು.
ಕನ್ಯಾ: ನಿಮ್ಮ ಜೀವನ ಸಂಗಾತಿಯ ಜೊತೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ನಿಮಗೆ ನಿಮ್ಮ ಮಕ್ಕಳ ಬೆಂಬಲ ಮತ್ತು ಹಿರಿಯ ಸದಸ್ಯರ ಆಶೀರ್ವಾದವು ದೊರೆಯಲಿದೆ. ಪಿತ್ರಾರ್ಜಿತ ಆಸ್ತಿಯಿಂದ ಹಣಕಾಸಿನ ಲಾಭ ಉಂಟಾಗಬಹುದು. ನಿಮ್ಮ ಆರೋಗ್ಯವು ಮೊದಲಿಗಿಂತಲೂ ಚೆನ್ನಾಗಿರಲಿದೆ. ಪ್ರೇಮ ಸಂಬಂಧದಲ್ಲಿ ಏರುಪೇರು ಉಂಟಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉದ್ಯೋಗದಲ್ಲಿರುವವರು ಬಡ್ತಿ ಪಡೆಯಲು ಅವಕಾಶ ಪಡೆಯಲಿದ್ದಾರೆ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನೀವು ವ್ಯವಹಾರದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಹೊಸ ಅವಕಾಶಗಳು ಲಭಿಸಬಹುದು. ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಮನೆಯಿಂದ ದೂರವಿದ್ದು ಕೆಲಸ ಮಾಡುವವರು ತಮ್ಮ ಕುಟುಂಬವನ್ನು ಮಿಸ್ ಮಾಡಲಿದ್ದಾರೆ. ಅವಿವಾಹಿತರಿಗೆ ಮದುವೆಯ ಪ್ರಸ್ತಾಪ ದೊರೆಯಬಹುದು. ಕುಟುಂಬದ ಎಲ್ಲಾ ಸದಸ್ಯರು ಧಾರ್ಮಿಕ ಸ್ಥಳಕ್ಕೆ ಒಟ್ಟಿಗೆ ಭೇಟಿ ನೀಡಲು ಯೋಜನೆ ರೂಪಿಸಲಿದ್ದಾರೆ.
ತುಲಾ: ಈ ವಾರದಲ್ಲಿ ಪ್ರೇಮ ಜೀವನವು ಚೆನ್ನಾಗಿರಲಿದೆ. ನಿಮ್ಮ ಬಂಧವು ಇನ್ನಷ್ಟು ಗಟ್ಟಿಯಾಗಲಿದೆ. ನಿಮ್ಮ ವಿವಾಹದಲ್ಲಿ ಯಾವುದೇ ವಿಳಂಬ ಉಂಟಾಗದಂತೆ ನೋಡಿಕೊಳ್ಳಲು ನಿಮ್ಮ ಪ್ರೇಮಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ನೀವು ಪರಿಚಯಿಸಲಿದ್ದೀರಿ. ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೃಪ್ತಿಯ ವಾತಾವರಣ ಇರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಜೊತೆಗೆ ಏನಾದರೂ ಅಡ್ಡ ಕಸುಬನ್ನು ಮಾಡಲಿದ್ದಾರೆ. ಇದರಲ್ಲಿ ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ನಿಮಗೆ ದೊರೆಯಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ವ್ಯವಹಾರದಲ್ಲಿ ಪ್ರಗತಿ ಸಾಧಿಸುವುದಕ್ಕಾಗಿ ಮಾಡಿರುವ ಯೋಜನೆಗಳಲ್ಲಿ ಯಶಸ್ಸನ್ನು ಗಳಿಸಲಿದ್ದಾರೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಬಾಕಿ ಉಳಿದಿರುವ ಹಣವು ದೊರೆಯಲಿದೆ. ನೀವು ಯಾರಿಂದ ಆದರೂ ಹಣವನ್ನು ಸಾಲ ಪಡೆದಿದ್ದರೆ ಅದನ್ನು ನೀವು ಮರಳಿಸಲಿದ್ದೀರಿ. ರಾಜಕೀಯದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಹವನ, ಪೂಜೆ, ಭಜನೆ, ಕೀರ್ತನೆ ಇತ್ಯಾದಿಗಳನ್ನು ಮನೆಯಲ್ಲಿ ಆಯೋಜಿಸುವ ಸಾಧ್ಯತೆಯಿದ್ದು ಇದಕ್ಕಾಗಿ ಎಲ್ಲರೂ ಕೈಗೂಡಿಸಲಿದ್ದಾರೆ.
ವೃಶ್ಚಿಕ: ಈ ವಾರದಲ್ಲಿ ವೃಶ್ಚಿಕ ರಾಶಿಯವರು ತಮ್ಮ ಭಾವನೆಯನ್ನು ಪ್ರೇಮಿಗೆ ವ್ಯಕ್ತಪಡಿಸಲಿದ್ದಾರೆ. ನೀವು ಅವರಿಗೆ ಒಳ್ಳೆಯ ಉಡುಗೊರೆಯನ್ನು ನೀಡಲಿದ್ದೀರಿ. ಇದು ಅವರನ್ನು ಸಂತಸಪಡಿಸಲಿದೆ. ನಿಮ್ಮ ಕೌಟುಂಬಿಕ ಬದುಕಿನಲ್ಲಿ ಇತರ ವ್ಯಕ್ತಿಯ ಹಸ್ತಕ್ಷೇಪದ ಕಾರಣ ಒತ್ತಡ ಉಂಟಾಗಬಹುದು. ಹೀಗಾಗಿ ಎಚ್ಚರಿಕೆ ವಹಿಸಿ. ಹೊಸ ವಾಹನ ಖರೀದಿಯಿಂದಾಗಿ ನಿಮಗೆ ಸಂತಸ ಲಭಿಸಲಿದೆ. ಪಿತ್ರಾರ್ಜಿತ ಆಸ್ತಿಯಿಂದ ಹಣಕಾಸಿನ ಲಾಭ ಉಂಟಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ನಿಮ್ಮ ವೆಚ್ಚಗಳಲ್ಲಿ ಒಂದಷ್ಟು ಹೆಚ್ಚಳ ಉಂಟಾಗಬಹುದು. ಆದರೆ ನಿಮ್ಮ ಆದಾಯದಲ್ಲಿಯೂ ಹೆಚ್ಚಳ ಉಂಟಾಗಲಿದೆ. ನೀವು ಸರ್ಕಾರಿ ವಲಯದಿಂದ ಲಾಭ ಗಳಿಸಲಿದ್ದೀರಿ. ನೀವು ಉದ್ಯೋಗದಲ್ಲಿ ಭಡ್ತಿ ಪಡೆಯಲಿದ್ದೀರಿ. ನೀವು ವ್ಯವಹಾರದಲ್ಲಿ ಹೊಸ ಗುತ್ತಿಗೆಯನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಹೆಚ್ಚಿನ ಗಮನವನ್ನು ನೀಡುತ್ತಾರೆ. ಇದರಿಂದಾಗಿ ಅವರಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ನಿಮ್ಮ ಅಚ್ಚುಮೆಚ್ಚಿನ ವಿಷಯಗಳನ್ನು ಓದಲು ನಿಮಗೆ ಅವಕಾಶ ಸಿಗಬಹುದು. ಸಹೋದರನ ಮದುವೆಯಲ್ಲಿ ಎದುರಾಗಿರುವ ಅಡಚಣೆಗಳು ದೂರಗೊಳ್ಳಲಿವೆ. ಮನೆಯಲ್ಲಿ ಮಂಗಳದಾಯಕ ಕಾರ್ಯಕ್ರಮಗಳನ್ನು ಅಯೋಜಿಸಬಹುದು.
ಧನು: ಕುಟುಂಬದ ಸದಸ್ಯರಿಂದ ನಿಮಗೆ ನೆರವು ದೊರೆಯಲಿದ್ದು ಅವರೊಂದಿಗೆ ಸಮಯ ಕಳೆಯಲಿದ್ದೀರಿ. ನಿಮ್ಮ ಗೆಳೆಯರೊಂದಿಗೆ ಸುಖ ದುಃಖವನ್ನು ಹಂಚಿಕೊಳ್ಳಲಿದ್ದೀರಿ. ಹಣವನ್ನು ಹೇಗೆ ಉಳಿಸಬಹುದು ಎಂಬುದನ್ನು ಹಿರಿಯ ಸದಸ್ಯರಿಂದ ಕಲಿಯಲಿದ್ದೀರಿ. ಇದು ಭವಿಷ್ಯದಲ್ಲಿ ಸಾಕಷ್ಟು ಉಪಯುಕ್ತ ಎನಿಸಲಿದೆ. ಕೌಟುಂಬಿಕ ಬದುಕಿನಲ್ಲಿ ಏರುಪೇರು ಉಂಟಾಗಬಹುದು. ಪ್ರಯಾಣಕ್ಕೆ ಹೋಗುವ ಸಾಧ್ಯತೆ ಇದ್ದು ಇದು ನಿಮ್ಮ ಪಾಲಿಗೆ ಪ್ರಯೋಜನಕಾರಿ ಎನಿಸಲಿದೆ. ನಿಮ್ಮ ಪ್ರೇಮ ಜೀವನವು ಸಾಂಗವಾಗಿ ಮುಂದುವರಿಯಲಿದೆ. ಕೆಲಸದ ಸ್ಥಳದಲ್ಲಿ ನೀವು ಸವಾಲುಗಳನ್ನು ಎದುರಿಸಬೇಕಾದೀತು. ಹಣ ಬರುವ ಸಾಧ್ಯತೆ ಇದೆ. ನೀವು ಆಸ್ತಿಯನ್ನು ಖರೀದಿಸಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಒಂದಷ್ಟು ಎಚ್ಚರಿಕೆಯಿಂದ ಇರಬೇಕು. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮ ಮತ್ತು ಪ್ರಾಮಾಣಿಕತೆಯ ಕಾರಣ ಯಶಸ್ಸನ್ನು ಗಳಿಸಬಹುದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ತೋರದೆ ಇರಬಹುದು. ಪೋಷಕರು ಬೇಸರ ಅನುಭವಿಸಬಹುದು. ಉನ್ನತ ಶಿಕ್ಷಣಕ್ಕೆ ಸಮಯವು ಚೆನ್ನಾಗಿದೆ. ಆರೋಗ್ಯದ ದೃಷ್ಟಿಯಿಂದ ಈ ವಾರವು ದುರ್ಬಲವೆನಿಸಲಿದೆ.
ಮಕರ: ಈ ವಾರದಲ್ಲಿ ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕನ್ನು ಆನಂದಿಸಲಿದ್ದು, ತಮ್ಮ ಜೀವನ ಸಂಗಾತಿಯು ಏನಾದರೂ ಹೊಸ ಕೆಲಸವನ್ನು ಮಾಡುವಂತೆ ಮಾಡಲಿದ್ದಾರೆ. ಸಹೋದರಿಯ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ತಮ್ಮ ಮಗುವಿಗೆ ಕೆಲಸ ಸಿಕ್ಕಿದರೆ ಪೋಷಕರು ಸಂತಸ ಪಡಲಿದ್ದಾರೆ. ಆದಾಯ ಗಳಿಸಲು ಹೊಸ ಅವಕಾಶಗಳು ಲಭಿಸಲಿದ್ದು, ಇದು ಲಾಭವನ್ನು ತಂದು ಕೊಡುವ ಮೂಲಕ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತರಲಿದೆ. ನೀವು ಮನೆಯ ಕೆಲಸಗಳಿಗಾಗಿ ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ದೂರದ ಸಂಬಂಧಿಯ ಸ್ಥಳದಲ್ಲಿ ವಿವಾಹ ಕಾರ್ಯಕ್ರಮದಲ್ಲಿ ನೀವು ಪಾಲ್ಗೊಳ್ಳಲಿದ್ದು ಎಲ್ಲರೊಂದಿಗೂ ಸಂವಾದ ನಡೆಸಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ವಿದೇಶದಿಂದ ಶಿಕ್ಷಣ ಪಡೆಯಲು ಅವಕಾಶ ಲಭಿಸಬಹುದು. ಪ್ರೇಮ ಸಂಬಂಧದಲ್ಲಿ ಏರುಪೇರು ಉಂಟಾಗಬಹುದು. ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಲಿದ್ದೀರಿ. ಕೆಲಸದ ಸ್ಥಳದಲ್ಲಿ ನೀಡಲಾದ ಕೆಲಸವನ್ನು ನೀವು ಸಂಪೂರ್ಣ ಸಮರ್ಪಣಾ ಭಾವದೊಂದಿಗೆ ನೆರವೇರಿಸಲಿದ್ದೀರಿ. ನೀವು ಹಿರಿಯರು ಮತ್ತು ಕಿರಿಯರ ಬೆಂಬಲವನ್ನು ನೀವು ಪಡೆಯಲಿದ್ದೀರಿ. ಹಿರಿಯ ಸದಸ್ಯರ ಪಾದವನ್ನು ಸ್ಪರ್ಶಿಸಿ ಅವರ ಆಶೀರ್ವಾದವನ್ನು ಪಡೆದರೆ ನಿಮ್ಮ ಕೆಲಸವು ಪೂರ್ಣಗೊಳ್ಳಲಿದೆ.
ಕುಂಭ: ಈ ವಾರದಲ್ಲಿ ಪ್ರೇಮ ಸಂಬಂಧವು ಗಟ್ಟಿಗೊಳ್ಳಲಿದೆ. ನಿಮ್ಮ ವಿವಾಹದಲ್ಲಿ ಯಾವುದೇ ವಿಳಂಬ ಉಂಟಾಗದಂತೆ ನಿಮ್ಮ ಪ್ರೇಮಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ನೀವು ಪರಿಚಯಿಸಬಹುದು. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಅನುಭವಿಸಲಿದ್ದಾರೆ. ಕುಟುಂಬದ ಕಲ್ಯಾಣಕ್ಕಾಗಿ ಜೀವನ ಸಂಗಾತಿಯೊಂದಿಗೆ ಕೆಲಸ ಮಾಡಲಿದ್ದೀರಿ. ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ಹಿಂದಿನ ಹೂಡಿಕೆಯ ಸಂಪೂರ್ಣ ಲಾಭ ನಿಮಗೆ ದೊರೆಯಲಿದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ನಿಮ್ಮ ಗೆಳೆಯರು ಮತ್ತು ಸಂಬಂಧಿಗಳು ನಿಮಗೆ ಸಹಾಯ ಮಾಡಬಹುದು. ಪಾಲುಗಾರಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಈ ಬಾರಿ ಒಳ್ಳೆಯ ಲಾಭ ಪಡೆಯಲಿದ್ದಾರೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಲಿದ್ದಾರೆ. ಉನ್ನತ ಶಿಕ್ಷಣದ ವಿಚಾರದಲ್ಲಿ ಈ ವಾರವು ದುರ್ಬಲವೆನಿಸಲಿದೆ. ಅಧ್ಯಯನದಲ್ಲಿ ಅನಾಸಕ್ತಿ ಉಂಟಾಗಬಹುದು. ನೀವು ಹಿರಿಯ ಸದಸ್ಯರಿಂದ ಬೆಂಬಲ ಪಡೆಯಲಿದ್ದೀರಿ. ಅವಿವಾಹಿತರ ವಿಚಾರದಲ್ಲಿ ವಿವಾಹದ ಪ್ರಸ್ತಾವನೆಯ ಮಾತುಕತೆ ಉಂಟಾಗಬಹುದು.
ಮೀನ: ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಬಹುದು. ಕುಟುಂಬದ ಸದಸ್ಯರೊಂದಿಗೆ ಒಟ್ಟಿಗೆ ಎಲ್ಲಾದರೂ ಹೋಗುವ ಸಾಧ್ಯತೆ ಇದೆ. ಪ್ರೇಮ ವಿವಾಹದ ಸಾಧ್ಯತೆಗಳಿವೆ. ಅವಿವಾಹಿತರಿಗೆ ಒಳ್ಳೆಯ ಸಂಬಂಧವು ದೊರೆಯಲಿದೆ. ಆರ್ಥಿಕವಾಗಿ ಈ ವಾರದಲ್ಲಿ ಸಾಕಷ್ಟು ಖರ್ಚುವೆಚ್ಚ ಉಂಟಾಗಲಿದೆ. ದೈನಂದಿನ ಆದಾಯವು ಚೆನ್ನಾಗಿರಲಿದೆ. ಇದರಿಂದಾಗಿ ನಿಮಗೆ ಯಾವುದೇ ಸಮಸ್ಯೆಯು ಎದುರಾಗದು. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಗಳಿಸಬಹುದು. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ನಿಮ್ಮ ಅಚ್ಚುಮೆಚ್ಚಿನ ವಿಷಯಗಳನ್ನು ಓದಲು ನಿಮಗೆ ಅವಕಾಶ ಸಿಗಬಹುದು. ಹಿರಿಯ ಸದಸ್ಯರ ಆಶೀರ್ವಾದವು ದೊರೆಯಲಿದೆ. ಮನೆ, ಅಂಗಡಿ, ಜಮೀನು ಇತ್ಯಾದಿಗಳ ಖರೀದಿಯಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ತಮ್ಮ ಮಕ್ಕಳಿಗೆ ಒಳ್ಳೆಯ ಕೆಲಸ ಸಿಕ್ಕರೆ ಪೋಷಕರಿಗೆ ಸಂತಸ ಲಭಿಸಲಿದೆ. ಈ ವಾರದಲ್ಲಿ ಕೌಟುಂಬಿಕ ಸಮಸ್ಯೆಗಳಿಗೆ ನೀವು ಗಮನ ನೀಡಬಹುದು. ಇದರಿಂದಾಗಿ ಅಧ್ಯಯನಕ್ಕೆ ಗಮನ ನೀಡಲು ನಿಮಗೆ ಸಾಧ್ಯವಾಗದು.
ಇದನ್ನೂ ಓದಿ: ಭಾನುವಾರದ ರಾಶಿ ಭವಿಷ್ಯ: ಈ ರಾಶಿಯವರು ಇಂದು ಇದ್ದುದರಲ್ಲೇ ಸಂತೃಪ್ತರಾಗಿರುತ್ತೀರಿ - Daily Horoscope