ETV Bharat / spiritual

ವಾರದ ಭವಿಷ್ಯ: ಈ ರಾಶಿಯವರಿಗೆ ಅಸ್ಥಿರತೆ, ಕೆಲವರಿಗೆ ಹೂಡಿಕೆಯಲ್ಲಿ ಬಂಪರ್! - Weekly Horoscope - WEEKLY HOROSCOPE

ನಿಮ್ಮ ಈ ವಾರದ ರಾಶಿ ಭವಿಷ್ಯ ಹೀಗಿದೆ ನೋಡಿ..

weekly Horoscope
ವಾರದ ಭವಿಷ್ಯ (ETV Bharat)
author img

By ETV Bharat Karnataka Team

Published : Jun 23, 2024, 6:40 AM IST

ಮೇಷ : ಮೇಷ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಅದೃಷ್ಟ ಬಲವಿದೆ. ಹೊಸ ಉದ್ಯೋಗವನ್ನು ಪಡೆಯಲು ನೀವು ಯತ್ನಿಸುತ್ತಿದ್ದರೆ ನಿಮ್ಮ ಇಚ್ಛೆ ಈಡೇರುತ್ತದೆ. ವ್ಯವಹಾರದಲ್ಲಿ ಧನಲಾಭ ಉಂಟಾಗಲಿದೆ. ಅಲ್ಲದೆ ನಿಮ್ಮ ಆದಾಯದ ಮೂಲವು ವೃದ್ಧಿಯಾಗಲಿದೆ. ಹಣದ ವಿಚಾರದಲ್ಲಿ ಈ ವಾರವು ಅದ್ಭುತ ಫಲ ನೀಡಲಿದೆ. ಆದರೆ ನಿಮ್ಮ ಬೆನ್ನ ಹಿಂದಿನ ಶತ್ರುಗಳು ಮತ್ತು ಆಗಾಗ್ಗೆ ನಿಮ್ಮ ನಡುವೆ ಗೊಂದಲವನ್ನುಂಟು ಮಾಡುವ ವ್ಯಕ್ತಿಗಳ ಕುರಿತು ಈ ಅವಧಿಯಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಿ. ನಿಮ್ಮ ಪೋಷಕರು ಹಾಗೂ ಒಡಹುಟ್ಟಿದವರು ನಿಮಗೆ ಬೇಷರತ್‌ ಆದ ಬೆಂಬಲ ನೀಡಲಿದ್ದಾರೆ. ನಿಮ್ಮ ಮಕ್ಕಳು ನಿಮ್ಮ ವಿಚಾರಗಳನ್ನು ಸ್ವೀಕರಿಸಲಿದ್ದಾರೆ. ವಾರದ ಕೊನೆಗೆ ಭೌತಿಕ ಅನುಕೂಲಕ್ಕೆ ಸಂಬಂಧಿಸಿದ ಪ್ರಮುಖ ವಸ್ತುವೊಂದನ್ನು ನೀವು ಖರೀದಿಸಬಹುದು. ಪ್ರೇಮ ಸಂಬಂಧದಲ್ಲಿ ಅನುರಾಗ ನೆಲೆಸಲಿದೆ. ನಿಮ್ಮ ಪ್ರೇಮ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ದೊಡ್ಡದಾದ ಉಡುಗೊರೆಯ ಮೂಲಕ ನಿಮ್ಮ ಜೀವನ ಸಂಗಾತಿಯು ನಿಮಗೆ ಅಚ್ಚರಿ ಮೂಡಿಸಬಹುದು.

ವೃಷಭ : ಈ ವಾರದಲ್ಲಿ ವೃಷಭ ರಾಶಿಯವರು ವಿಪರೀತ ಉದ್ವೇಗಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು. ಅವಸರದಲ್ಲಿ ಯಾವುದೇ ಕೆಲಸವನ್ನು ಮಾಡಬಾರದು. ಅಪಘಾತವಾಗದಂತೆ ನೋಡಿಕೊಳ್ಳುವುದಕ್ಕಾಗಿ ವಾಹನವನ್ನು ಎಚ್ಚರಿಕೆಯಿಂದ ಚಲಾಯಿಸಬೇಕು. ಸಣ್ಣಪುಟ್ಟ ಸಮಸ್ಯೆಗಳು ಮತ್ತು ಒಂದಷ್ಟು ವೈಯಕ್ತಿಕ ಕರ್ತವ್ಯಗಳ ನಡುವೆಯೂ ನಿಮ್ಮ ಆತ್ಮೀಯರ ಜೊತೆಗೆ ನಿಲ್ಲುವುದರಿಂದ ನಿಮಗೆ ನಿರಾಳತೆ ದೊರೆಯಲಿದೆ. ಕೆಲಸದ ಸ್ಥಳದಲ್ಲಿ ಇತರರ ಮಾತನ್ನು ಕೇಳುವುದಕ್ಕಿಂತಲೂ ನಿಮ್ಮ ಉದ್ದೇಶಕ್ಕೆ ಹೆಚ್ಚಿನ ಗಮನ ನೀಡಿರಿ. ಯುವಕರು ಮೋಜಿನಿಂದ ಸಮಯ ಕಳೆಯಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುತ್ತಿರುವವರು ಸಾಕಷ್ಟು ಪ್ರಯತ್ನಪಟ್ಟರೆ ಮಾತ್ರವೇ ಯಶಸ್ವಿಯಾಗಬಹುದು. ಈ ವಾರದಲ್ಲಿ ನಿಮ್ಮ ಆರೋಗ್ಯದ ಕಡೆಗೆ ನೀವು ಹೆಚ್ಚಿನ ಗಮನ ನೀಡಬೇಕು. ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆಗಳ ಕುರಿತು ಮುನ್ನೆಚ್ಚರಿಕೆ ವಹಿಸಿ. ಪ್ರಣಯ ಸಂಬಂಧದಲ್ಲಿ ಜಾಗರೂಕರಾಗಿರಿ. ಏಕೆಂದರೆ ಕೊಡುಕೊಳ್ಳುವಿಕೆಯು ಅಗತ್ಯ. ಮುಖ್ಯವಾಗಿ ನಿಮ್ಮ ಪ್ರಣಯ ಸಂಬಂಧದ ಪ್ರದರ್ಶನ ಮಾಡಬೇಡಿ.

ಮಿಥುನ : ನಿಮ್ಮ ಧೈರ್ಯದ ಎದುರು ಯಾವು ಅಡ್ಡಿ ಆತಂಕಗಳು ಸೋಲೊಪ್ಪಿಕೊಳ್ಳುತ್ತವೆ. ಮಿಥುನ ರಾಶಿಯವರು ಯಾವಾಗಲೂ ನೆನಪಿಟ್ಟುಕೊಳ್ಳಬೇಕಾದ ವಾರವಿದು. ವಾರದ ಆರಂಭದಲ್ಲಿ ಕೆಲಸದ ಸ್ಥಳದಲ್ಲಿ ಕೆಲಸದ ಒತ್ತಡವು ಹೆಚ್ಚಾಗಬಹುದು. ಯಾವುದೇ ದೊಡ್ಡ ಉದ್ಯಮದಲ್ಲಿ ಹೂಡಿಕೆ ಮಾಡುವ ಮೊದಲು ನಿಮ್ಮ ನಿಮ್ಮ ಹಿತೈಷಿಗಳ ಸಲಹೆಯನ್ನು ಪಡೆಯಲು ಮರೆಯಬೇಡಿ. ಉದ್ಯೋಗದಲ್ಲಿರುವ ಮಹಿಳೆಯರ ಪಾಲಿಗೆ ಕೆಲಸ ಮತ್ತು ಕೌಟುಂಬಿಕ ಬದುಕನ್ನು ನಿಭಾಯಿಸುವುದು ಸವಾಲಿನ ಕೆಲಸವೆನಿಸಲಿದೆ. ವೃತ್ತಿಪರ ಮತ್ತು ವ್ಯವಹಾರದ ಹಿನ್ನೆಲೆಯಲ್ಲಿ, ವಾರದ ಪೂರ್ವಾರ್ಧವು ಸವಾಲಿನಿಂದ ಕೂಡಿರಲಿದೆ. ಆದರೆ ಉತ್ತರಾರ್ಧದಲ್ಲಿ ಎಲ್ಲವೂ ಯೋಜನೆಯಂತೆಯೇ ನೆರವೇರಲಿದೆ. ನಿಮ್ಮ ಪ್ರೇಮ ಸಂಬಂಧದ ಕುರಿತು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ನಿಮ್ಮ ಕುಟುಂಬದ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ಇಲ್ಲದಿದ್ದರೆ ನಂತರ ನೀವು ದುಬಾರಿ ಬೆಲೆಯನ್ನು ತೆರಬೇಕಾದೀತು. ಪ್ರಣಯ ಸಂಬಂಧದ ವಿಚಾರಕ್ಕೆ ಬಂದಾಗ, ವಿವೇಕದಿಂದ ವರ್ತಿಸಿ ಮತ್ತು ನಿಮ್ಮ ಸಂಗಾತಿಯ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಅರಿತುಕೊಳ್ಳುವ ಪ್ರಯತ್ನವನ್ನು ಮಾಡಿ.

ಕರ್ಕಾಟಕ : ಈ ವಾರದಲ್ಲಿ ಕರ್ಕಾಟಕ ರಾಶಿಯಲ್ಲಿ ಹುಟ್ಟಿದವರು ತಮ್ಮ ಗುರಿಯತ್ತ ಗಮನ ನೀಡಬೇಕು. ನೀವು ಒಂದು ಕೆಲಸವನ್ನು ಅರ್ಧದಲ್ಲೇ ಬಿಟ್ಟು ಇನ್ನೊಂದರತ್ತ ಓಡುತ್ತೀರಿ. ಕೊನೆಯದಾಗಿ ಯಾವುದು ಸಹ ನಿಮ್ಮ ಕೈಗೂಡುವುದಿಲ್ಲ. ಕೆಲಸದ ಸ್ಥಳದಲ್ಲಿ ನಿಮ್ಮ ಕಿರಿಯರ ಮೇಲೆ ಪ್ರಾಬಲ್ಯ ಬೀರಬೇಡಿ. ವೃತ್ತಿಪರ ಯಶಸ್ಸನ್ನು ಸಾಧಿಸಬೇಕಾದರೆ ಹಿರಿಯರು ಮತ್ತು ಕಿರಿಯರ ನಡುವಿನ ಸಹಯೋಗದ ಅಗತ್ಯವಿದೆ ಎಂಬುದನ್ನು ನೀವು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ವಾರದ ದ್ವಿತೀಯಾರ್ಧದಲ್ಲಿ ಕೆಲಸ, ವ್ಯವಹಾರ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಏರುಪೇರು ಉಂಟಾಗಬಹುದು. ನಿಮ್ಮ ಪ್ರಯತ್ನಗಳಿಗೆ ನಿರೀಕ್ಷೆಗಿಂತ ಕಡಿಮೆ ಫಲ ದೊರೆಯಬಹುದು. ನಿಮ್ಮ ಮನಸ್ಸನ್ನು ಬೇಸರವು ಕಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರ ಅಧ್ಯಯನಕ್ಕೆ ಅಡಚಣೆ ಉಂಟಾಗಬಹುದು. ಪ್ರಣಯ ಸಂಬಂಧದಲ್ಲಿ ಪರಸ್ಪರ ಸಂವೇದನೆಯು ಕಡಿಮೆಯಾಗಲಿದೆ. ಅಲ್ಲದೆ ನಿಮ್ಮ ಸಂಗಾತಿಯಲ್ಲಿ ಅಸಂಗತತೆ ಕಾಣಬಹುದು. ಈ ವಾರದ ಕೊನೆಗೆ ನೀವು ದೂರದ ಅಥವಾ ಹತ್ತಿರದ ಸ್ಥಳಕ್ಕೆ ಪ್ರಯಾಣಿಸಬಹುದು.

ಸಿಂಹ : ಸಿಂಹ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಪ್ರಗತಿ, ಸಂತೃಪ್ತಿ ಮತ್ತು ಸಾಮರಸ್ಯ ದೊರೆಯಲಿದೆ. ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಲಸವನ್ನು ಮುಗಿಸಲು ಹಿತೈಷಿ ಅಥವಾ ಪ್ರಭಾವಿ ವ್ಯಕ್ತಿಯ ನೆರವು ದೊರೆಯಬಹುದು. ಸಂಸ್ಥೆಯ ಬೆಳವಣಿಗೆಗೆ ಕಾರ್ಯತಂತ್ರ ರೂಪಿಸಬಹುದು. ವಾರದ ದ್ವಿತೀಯಾರ್ಧದಲ್ಲಿ ಐಷಾರಾಮಿ ವಸ್ತುಗಳನ್ನು ಖರೀದಿಸುವಾಗ ನಿಮ್ಮ ಬಜೆಟ್‌ ಅನ್ನು ಗಮನದಲ್ಲಿಡಿ. ಹಿರಿಯರು ನಿಮ್ಮ ಪ್ರಯತ್ನವನ್ನು ಪ್ರಶಂಸಿಸಲಿದ್ದಾರೆ. ವ್ಯವಹಾರದಲ್ಲಿ ನಿಮಗೆ ಸಾಕಷ್ಟು ಗೌರವಾದಾರ ದೊರೆಯಲಿದೆ. ನಿಮ್ಮ ಪೋಷಕರು ನಿಮಗೆ ಸಾಧ್ಯವಾದಷ್ಟು ಸಂತಸ ಮತ್ತು ನೆರವನ್ನು ಒದಗಿಸಲಿದ್ದಾರೆ. ನಿಮ್ಮ ಕುಟುಂಬವು ಯಾವುದಾದರೂ ಮಂಗಳದಾಯಕ ಕೆಲಸವನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಈ ವಾರವು ಆರೋಗ್ಯದ ದೃಷ್ಟಿಯಿಂದ ಅನುಕೂಲಕರ. ಪ್ರೇಮ ಸಂಬಂಧದಲ್ಲಿ ಯಾವುದೇ ತಪ್ಪು ಸಂವಹನ ಇರದು. ಬಂಧವು ಇನ್ನಷ್ಟು ಮಾಧುರ್ಯತೆಯಿಂದ ಕೂಡಿರಲಿದೆ. ತಮ್ಮ ಪ್ರಣಯ ಸಂಗಾತಿಯೊಂದಿಗೆ ಇನ್ನಷ್ಟು ಸಮಯವನ್ನು ಕಳೆಯಲಿದ್ದಾರೆ. ಜೀವನ ಸಂಗಾತಿ ಮತ್ತು ಇತರ ವ್ಯಕ್ತಿಗಳ ಜೊತೆಗೆ ಉತ್ತಮ ಸಂವಹನ ನೆಲೆಸಲಿದೆ. ಮಕ್ಕಳ ಕುರಿತು ವಾರದ ಕೊನೆಯಲ್ಲಿ ಶುಭ ಸುದ್ದಿ ದೊರೆಯಲಿದೆ.

ಕನ್ಯಾ : ಕನ್ಯಾ ರಾಶಿಯಲ್ಲಿ ಜನಿಸಿದವರಿಗೆ ಈ ವಾರದಲ್ಲಿ ಅಸ್ಥಿರತೆ ಕಾಡಬಹುದು. ವಾರದ ಆರಂಭದಲ್ಲಿ ಕಚೇರಿಯಲ್ಲಿ ಹೆಚ್ಚು ಕೆಲಸ ಇರಬಹುದು. ಇದನ್ನು ನಿಭಾಯಿಸಲು ಹೆಚ್ಚಿನ ಪ್ರಯತ್ನದ ಅಗತ್ಯವಿದೆ. ಧನಾತ್ಮಕ ಮನೋಭಾವವನ್ನು ಮೈಗೂಡಿಸಿಕೊಳ್ಳಲು ಹಾಗೂ ವ್ಯಕ್ತಿತ್ವದಲ್ಲಿ ಸುಧಾರಣೆಯನ್ನು ತರಲು ಈ ವಾರದಲ್ಲಿ ನೀವು ಸಾಕಷ್ಟು ಒತ್ತಡಕ್ಕೆ ಈಡಾಗಬಹುದು. ನಿಮ್ಮ ಅತ್ಯಂತ ಸವಾಲಿನ ಕೆಲಸವು ಈ ಬಾರಿ ಸಕಾಲದಲ್ಲಿ ಪೂರ್ಣಗೊಳ್ಳಲಿದೆ. ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ನಿಮ್ಮ ಸಂಬಂಧಿಗಳ ನಿರೀಕ್ಷೆಗಳು ಅಥವಾ ಭಾವನೆಗಳನ್ನು ಕಡೆಗಣಿಸಬೇಡಿ. ಈ ವಾರದಲ್ಲಿ ನಿಮ್ಮ ಆರೋಗ್ಯಕ್ಕೆ ನೀವು ಗಮನ ನೀಡಬೇಕು. ನೀವು ಪ್ರಣಯ ಸಂಬಂಧದಲ್ಲಿದ್ದರೆ ನಿಮ್ಮ ಪ್ರೇಮಿಯ ವೈಯಕ್ತಿಕ ಬದುಕಿನಲ್ಲಿ ಮೂಗು ತೋರಿಸಬೇಡಿ. ಇಲ್ಲದಿದ್ದರೆ ಇದು ಎಲ್ಲವನ್ನು ಹಾಳು ಮಾಡಬಹುದು. ನಿಮ್ಮ ಸಂಗಾತಿಯ ಅಗತ್ಯತೆಗಳನ್ನು ಅರಿತುಕೊಂಡರೆ ಮತ್ತು ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಅವರಿಗಾಗಿ ಸಮಯವನ್ನು ಮೀಸಲಿಟ್ಟರೆ ನೀವು ಸಂತಸಭರಿತ ವೈವಾಹಿಕ ಬದುಕನ್ನು ಆನಂದಿಸಲಿದ್ದೀರಿ.

ತುಲಾ : ನೀಡಲಾದ ಯಾವುದೇ ಕೆಲಸವನ್ನು ನೀವು ಪೂರ್ಣಗೊಳಿಸುವುದರಿಂದ ವಾರದ ಆರಂಭದಲ್ಲಿ ನೀವು ಸಂಭ್ರಮದ ಅಲೆಯಲ್ಲಿ ಮೈ ಮರೆಯಲಿದ್ದೀರಿ. ಕೆಲಸ ಅಥವಾ ವ್ಯವಹಾರದ ದೃಷ್ಟಿಯಿಂದ ನೀವು ದೂರದ ಊರಿಗೆ ಪ್ರಯಾಣಿಸುವ ಅಗತ್ಯ ಉಂಟಾಗಬಹುದು. ಆತ್ಮೀಯ ಗೆಳೆಯರಿಂದ ಸಕಾರಾತ್ಮಕ ನೆರವು ದೊರೆಯಲಿದೆ. ನೀವು ಈ ವಾರದಲ್ಲಿ ಬಡ್ತಿಯನ್ನು ಪಡೆಯಬಹುದು ಅಥವಾ ಬಹು ಕಾಲದಿಂದ ಕಾಯುತ್ತಿದ್ದ ಸ್ಥಳಕ್ಕೆ ವರ್ಗಾವಣೆಯಾಗಬಹುದು. ಸಟ್ಟಾಬಾಜಿ ಅಥವಾ ಲಾಟರಿಯಲ್ಲಿ ಕೈ ಹಾಕಬೇಡಿ. ಅಲ್ಲದೆ ವಾರದ ದ್ವಿತೀಯಾರ್ಧದಲ್ಲಿ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು ಸಾಕಷ್ಟು ಎಚ್ಚರಿಕೆ ವಹಿಸಿ. ಜತೆಗೆ ಇದು ಹೊಂದಿರುವ ಅಪಾಯದ ಕುರಿತು ಅರಿತುಕೊಳ್ಳಿರಿ. ಹೀಗೆ ನಡೆದುಕೊಳ್ಳಬೇಕಾದುದು ಅಗತ್ಯ. ಆರೋಗ್ಯದ ವಿಚಾರದಲ್ಲಿ ಎಲ್ಲವೂ ಸುಗಮವಾಗಿರಲಿದೆ. ನಿಮ್ಮ ಕುಟುಂಬದೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲು ನಿಮಗೆ ಅವಕಾಶ ದೊರೆಯಲಿದೆ. ಕ್ಷಿಪ್ರವಾಗಿ ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರಯಾಣಿಸಲು ನೀವು ನಿರ್ಧರಿಸಬಹುದು. ಪ್ರಣಯ ಸಂಬಂಧದಲ್ಲಿ ಎಚ್ಚರಿಕೆ ವಹಿಸಿ ಮತ್ತು ನಿಮ್ಮ ಪ್ರೇಮಿಯ ಭಾವನೆಗಳನ್ನು ಗೌರವಿಸಿ.

ವೃಶ್ಚಿಕ : ಈ ವಾರದಲ್ಲಿ ವೃಶ್ಚಿಕ ರಾಶಿಯವರು ಕೆಲಸಕ್ಕೆ ಸಂಬಂಧಿಸಿದಂತೆ ಅತ್ತಿತ್ತ ಹೋಗಬೇಕಾದೀತು. ವಾರದ ದ್ವಿತೀಯಾರ್ಧದಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿಯಲಿದ್ದು, ನಿರ್ದಿಷ್ಟ ಕೆಲಸದಲ್ಲಿ ಉದ್ದೇಶಿತ ಫಲಿತಾಂಶ ದೊರೆಯಲಿದೆ. ಗುತ್ತಿಗೆ ಕೆಲಸಗಾರರಿಗೆ ಸಮಯವು ಅನುಕೂಲಕರವಾಗಿದೆ. ನಿಮ್ಮ ಅಭಿಪ್ರಾಯವನ್ನು ಇತರರ ಮೇಲೆ ಹೇರಬೇಡಿ. ಬದಲಾಗಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಸಹಕರಿಸಿ. ಇಲ್ಲದಿದ್ದರೆ ನೀವು ಸಮಸ್ಯೆಯಲ್ಲಿ ಸಿಲುಕಲಿದ್ದೀರಿ ಮಾತ್ರವಲ್ಲದೆ ಇದು ನಿಮ್ಮ ವರ್ಚಸ್ಸಿಗೆ ಧಕ್ಕೆ ಉಂಟಾಗಬಹುದು. ಈ ವಾರದಲ್ಲಿ ವೃಶ್ಚಿಕ ರಾಶಿಯವರು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಹೊರಗಿನ ಊಟ ಸೇವಿಸಬೇಡಿ. ದಿನಚರಿಯನ್ನು ಸರಿಯಾಗಿ ಪಾಲಿಸಿ ಮತ್ತು ನಿಮ್ಮ ಆರೋಗ್ಯ ಕ್ರಮಕ್ಕೆ ಒತ್ತು ನೀಡಿರಿ. ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ಅವಸರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಪರಸ್ಪರರ ಭಾವನೆಗಳನ್ನು ನೀವು ಗೌರವಿಸಿದರೆ ಹಾಗೂ ಪರಸ್ಪರರ ಅಗತ್ಯತೆಗಳನ್ನು ಅರಿತುಕೊಂಡರೆ ಜೀವನವು ಸುಗಮವಾಗಿ ಸಾಗಲಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ಅನ್ಯೋನ್ಯತೆ ನೆಲೆಸಲಿದೆ.

ಧನು ಈ ವಾರದಲ್ಲಿ ನಿಮ್ಮ ಸಮಯ ಮತ್ತು ಹಣಕಾಸನ್ನು ನೀವು ಸರಿಯಾಗಿ ನಿಭಾಯಿಸದಿದ್ದರೆ ನೀವು ಸಮಸ್ಯೆಗೀಡಗಬಹುದು. ಮನೆಯ ದುರಸ್ತಿ ಮಾಡುವಾಗ ಅಥವಾ ಐಷಾರಾಮಿ ವಸ್ತುಗಳನ್ನು ಖರೀದಿಸುವಾಗ ನಿಮ್ಮ ಬಜೆಟ್‌ ಕುರಿತು ಎಚ್ಚರಿಕೆ ಇರಲಿ. ಇಲ್ಲದಿದ್ದರೆ ನೀವು ಸಾಲ ತೆಗೆದುಕೊಳ್ಳಬೇಕಾದೀತು. ನಿಮ್ಮ ಆತ್ಮೀಯ ಗೆಳೆಯರು ಅಥವಾ ಕುಟುಂಬದ ಸದಸ್ಯರೊಂದಿಗೆ ವಾಕ್‌ ಗೆ ಹೋಗಬಹುದು. ಭೂಮಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹೊರಗಡೆ ಇತ್ಯರ್ಥ ಮಾಡಿಕೊಳ್ಳುವುದು ಒಳ್ಳೆಯದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಹೀಗಾದಲ್ಲಿ ನಿಮ್ಮ ಆಹಾರಕ್ಕೆ ಗಮನ ನೀಡಿ ಮತ್ತು ಯೋಗ ಮತ್ತು ಧ್ಯಾನಕ್ಕೆ ಸಮಯ ಮೀಸಲಿಡಿ. ಈ ವಾರದಲ್ಲಿ ನಿಮ್ಮ ಆರೋಗ್ಯಕ್ಕೆ ನೀವು ಗಮನ ನೀಡಬೇಕು. ನಿಮ್ಮ ಸಂಗಾತಿಯ ಜೊತೆಗೆ ಅದ್ಭುತ ಸಂವಾದ ನಡೆಸುವ ಪ್ರೇಮ ಮತ್ತು ಸಾಮರಸ್ಯವನ್ನು ಕಾಪಾಡಬಹುದು. ಪ್ರಣಯ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಪ್ರವೇಶವು ಮಾನಸಿಕ ಒತ್ತಡವನ್ನುಂಟು ಮಾಡಬಹುದು. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯವನ್ನು ಬಗೆಹರಿಸುವಾಗ ವಾದ ಮಾಡುವುದಕ್ಕಿಂತಲೂ ಸಂವಾದಕ್ಕೆ ಒತ್ತು ನೀಡಿರಿ.

ಮಕರ : ಈ ವಾರದಲ್ಲಿ ಮಕರ ರಾಶಿಯವರು ವಿಚಾರಶೂನ್ಯರಂತೆ ಅಥವಾ ಆಲಸಿಗಳಂತೆ ವರ್ತಿಸಬಾರದು. ಇಲ್ಲದಿದ್ದರೆ ಇವರು ಸಾಕಷ್ಟು ನಷ್ಟ ಅನುಭವಿಸಬಹುದು. ವ್ಯವಹಾರದಲ್ಲಿ ನೀವು ಸಾಕಷ್ಟು ಸ್ಪರ್ಧೆಯನ್ನು ಎದುರಿಸಬಹುದು. ನಷ್ಟವನ್ನು ಲಾಭವನ್ನಾಗಿ ಪರಿವರ್ತಿಸಿ ಮತ್ತು ಸಾಕಷ್ಟು ಯೋಚಿಸಿದ ನಂತರವೇ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳಿ. ಕಟ್ಟಡ, ಭೂಮಿ, ಅಟೋಮೊಬೈಲ್‌ ಇತ್ಯಾದಿಗಳನ್ನು ಖರೀದಿಸುವಾಗ ನಿಮ್ಮ ಸಂಬಂಧಿಗಳ ಸಲಹೆಯನ್ನು ಪಡೆಯಿರಿ. ಸಾಕಷ್ಟು ಯೋಚಿಸಿದ ನಂತರವೇ ನಿರ್ಣಯ ತೆಗೆದುಕೊಳ್ಳಿ. ಗೆಳತಿಯೊಬ್ಬಳ ನೆರವನ್ನು ಪಡೆಯುವ ಮೂಲಕ ಪ್ರಣಯ ಸಂಬಂಧದಲ್ಲಿ ಮುಂದುವರಿಯಬಹುದು. ಯಾವುದೇ ರೀತಿಯ ಸಮಸ್ಯೆ ಇರಲಿ, ಕುಟುಂಬದ ಎಲ್ಲಾ ಸದಸ್ಯರನ್ನು ಒಳಗೊಳ್ಳುವುದು ಒಳ್ಳೆಯದು. ಮಾತನಾಡುವಾಗ ತಾಳ್ಮೆ ಇರಲಿ. ಆಕ್ರಮಣಕಾರಿ ಮಾತುಗಳನ್ನು ಬಳಸಬೇಡಿ. ನಿಮ್ಮ ವೈವಾಹಿಕ ಜೀವನದಲ್ಲಿ ಅನ್ಯೋನ್ಯತೆ ನೆಲೆಸಲಿದೆ. ಕಷ್ಟದ ಸಂದರ್ಭಗಳಲ್ಲಿ ನಿಮ್ಮ ಜೀವನ ಸಂಗಾತಿಯ ನೆರವು ನಿಮಗೆ ದೊರೆಯಲಿದೆ. ಕುಟುಂಬದ ಹಿರಿಯ ಸದಸ್ಯರ ಯೋಗಕ್ಷೇಮದ ಕುರಿತ ಚಿಂತೆ ಕಾಡಬಹುದು.

ಕುಂಭ : ಈ ವಾರದಲ್ಲಿ ನಿಮ್ಮ ಎದುರಾಳಿಗಳ ಎದುರು ನಿಮ್ಮ ದೌರ್ಬಲ್ಯವನ್ನು ಅಡಗಿಸಿ ಇಡಲು ನೀವು ಯತ್ನಿಸಬೇಕು. ಇಲ್ಲದಿದ್ದರೆ ಅವರು ನಿಮ್ಮ ದೌರ್ಬಲ್ಯದ ದುರುಪಯೋಗ ಮಾಡುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ಆತ್ಮೀಯರು ನಿಮ್ಮ ನೆರವಿಗೆ ಬರಲಿದ್ದಾರೆ. ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ನಿಮ್ಮ ಪ್ರೇಮಿಯ ನೆರವು ನಿಮಗೆ ಲಭಿಸಲಿದೆ. ಈ ವಾರದ ದ್ವಿತೀಯಾರ್ಧವು ಮೊದಲಾರ್ಧಕ್ಕಿಂತ ಚೆನ್ನಾಗಿರಲಿದೆ. ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ ಹಾಗೂ ಹೆಚ್ಚಿನ ಸಮಯವನ್ನು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ನೀವು ಕಳೆಯಲಿದ್ದೀರಿ. ಕೆಲಸದ ದೃಷ್ಟಿಯಿಂದ ನೀವು ದೂರದ ಊರಿಗೆ ಪ್ರಯಾಣಿಸುವ ಅಗತ್ಯತೆ ಉಂಟಾಗಬಹುದು. ಈ ಪ್ರಯಾಣವು ನಿಮ್ಮ ಪಾಲಿಗೆ ಆನಂದದಾಯಕ ಮತ್ತು ಉತ್ಪಾದಕ ಎನಿಸಲಿದೆ. ಈ ಪ್ರಯಾಣದ ಸಂದರ್ಭದಲ್ಲಿ ಪ್ರಭಾವಿ ವ್ಯಕ್ತಿಯನ್ನು ನೀವು ಭೇಟಿಯಾಗಲಿದ್ದು, ಅವರು ಭವಿಷ್ಯದ ಲಾಭದಾಯಕ ಕೆಲಸಗಳಲ್ಲಿ ನಿಮಗೆ ಸಹಾಯ ಮಾಡಲಿದ್ದಾರೆ. ಪ್ರೇಮ ಸಂಬಂಧವನ್ನು ಇನ್ನಷ್ಟು ಗಟ್ಟಿಗಳಿಸಲು ಎರಡೂ ಕಡೆಗಳಿಂದ ಸಹಕಾರ ದೊರೆಯಬೇಕು. ನೀವು ಸಂತಸಮಯ ವೈವಾಹಿಕ ಜೀವನವನ್ನು ಸಾಗಿಸಲಿದ್ದು, ನಿಮ್ಮ ಜೀವನ ಸಂಗಾತಿಯೊಂದಿಗೆ ನಿಮ್ಮ ಸಮಯವನ್ನು ಆನಂದಿಸಲಿದ್ದೀರಿ.

ಮೀನ : ಈ ವಾರದಲ್ಲಿ ಮೀನ ರಾಶಿಯವರು ಎರಡು ಹೆಜ್ಜೆ ಮುಂದಕ್ಕೆ ಇಡಬೇಕು. ಒಂದು ಹೆಜ್ಜೆ ಹಿಂದಕ್ಕೆ ಇಟ್ಟರೆ ಎರಡು ಹೆಜ್ಜೆಗಳನ್ನು ಮುಂದಿಡಲು ಅವಕಾಶ ಲಭಿಸಲಿದೆ. ಈ ವಾರದಲ್ಲಿ ನೀವು ಸಾಕಷ್ಟು ಸಮಯ ಮತ್ತು ಶ್ರಮವನ್ನು ವ್ಯಯಿಸಿದರೆ ಖಂಡಿತವಾಗಿಯೂ ಕೆಲಸದ ಸ್ಥಳದಲ್ಲಿ ಯಶಸ್ವಿಯಾಗಲಿದ್ದೀರಿ. ವಾರದ ದ್ವಿತೀಯಾರ್ಧದಲ್ಲಿ ಆಪ್ತರೊಬ್ಬರು ಮನೆಗೆ ಬರಲಿದ್ದು, ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ನಿಮ್ಮ ಸಂಸ್ಥೆಯ ಮೂಲಕ ಅಗತ್ಯ ಆರ್ಥಿಕ ಲಾಭವನ್ನು ಗಳಿಸಲು ನಿಮಗೆ ಸಾಧ್ಯವಾಗಲಿದೆ. ಪರೀಕ್ಷೆ ಮತ್ತು ಸ್ಪರ್ಧೆಗಳಿಗಾಗಿ ಸಿದ್ಧತೆ ನಡೆಸುತ್ತಿರುವವರಿಗೆ ಕೆಲವೊಂದು ಆಶಾದಾಯಕ ಸುದ್ದಿ ದೊರೆಯಲಿದೆ. ಮಹಿಳೆಯರು ಧಾರ್ಮಿಕ ಕೆಲಸದಲ್ಲಿ ಸಾಕಷ್ಟು ಸಮಯವನ್ನು ಕಳೆಯಲಿದ್ದಾರೆ. ಪ್ರೇಮ ಸಂಬಂಧದಲ್ಲಿ ಅನುರಾಗ ನೆಲೆಸಲಿದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲು ನಿಮಗೆ ಅವಕಾಶ ದೊರೆಯಲಿದೆ. ಜೀವನ ಸಂಗಾತಿಯ ಜೊತೆಗಿನ ಅನ್ಯೋನ್ಯತೆಯು ಹೆಚ್ಚಲಿದೆ. ಆರೋಗ್ಯದ ವಿಚಾರದಲ್ಲಿ ಎಲ್ಲವೂ ಸುಗಮವಾಗಿರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.