ETV Bharat / spiritual

ವಾರದ ಭವಿಷ್ಯ: ಈ ರಾಶಿಯವರಿಗೆ ಸಾಕಷ್ಟು ಲಾಭ, ಶ್ರಮಕ್ಕೆ ತಕ್ಕ ಫಲ - Weekly Horoscope - WEEKLY HOROSCOPE

ಈ ವಾರದ ರಾಶಿ ಭವಿಷ್ಯ ಹೀಗಿದೆ..

Weekly Horoscope
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : May 19, 2024, 6:57 AM IST

ಮೇಷ ; ಸಂತೃಪ್ತಿಯೇ ಸಂತಸ ಪಡೆಯಲು ಇರುವ ದಾರಿ ಎಂಬುದನ್ನು ಮೇಷ ರಾಶಿಯವರು ಈ ವಾರದಲ್ಲಿ ನೆನಪಿಡಬೇಕು. ಪರಿಶ್ರಮವಿಲ್ಲದೆ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಶೈಕ್ಷಣಿಕ ಕೆಲಸವಾಗಿರಲಿ ಅಥವಾ ವೃತ್ತಿಪರ ಕೆಲಸವಾಗಿರಲಿ, ಈ ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಕೆಲಸವು ನಿಧಾನಗತಿಯಲ್ಲಿ ಸಾಗಬಹುದು. ಆದರೆ ನೀವು ಖಂಡಿತವಾಗಿಯೂ ಪ್ರಗತಿ ಸಾಧಿಸಲಿದ್ದೀರಿ. ಪ್ರಮುಖ ಕೆಲಸಗಳಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ನೀವು ಮಾಡಿದ ಕೆಲಸ ಹಾಳಾಗದಂತೆ ನೋಡಿಕೊಳ್ಳಬೇಕಾದರೆ ನಿಮ್ಮ ಮಾತನ್ನು ನೀವು ನಿಯಂತ್ರಿಸಬೇಕು. ಹಣಕಾಸಿನ ವಿಚಾರದಲ್ಲಿ ಹೇಳುವುದಾದರೆ ದ್ವಿತೀಯಾರ್ಧವು ಅನುಕೂಲಕರವಾಗಿದೆ. ಪ್ರಭಾವಿ ವ್ಯಕ್ತಿಗಳೊಂದಿಗೆ ಗೆಳೆತನ ಬೆಳೆಸಿದರೆ ಕಾಲ ಕ್ರಮೇಣ ಗಣನೀಯ ಪ್ರಮಾಣದ ಲಾಭ ಉಂಟಾಗಲಿದೆ. ಪ್ರಣಯ ಸಂಬಂಧದಲ್ಲಿ ಮಾಧುರ್ಯವು ಇರಲಿದೆ. ನಿಮ್ಮ ಪ್ರಣಯ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲು ನಿಮಗೆ ಅವಕಾಶ ದೊರೆಯಲಿದೆ. ಕೌಟುಂಬಿಕ ಪ್ರವಾಸಕ್ಕೆ ಹೋಗಬಹುದು. ಆರೋಗ್ಯವು ಎಂದಿನಂತೆ ಇರಲಿದೆ.

ವೃಷಭ : ಈ ವಾರದಲ್ಲಿ ವೃಷಭ ರಾಶಿಯವರು ತಮ್ಮ ವೃತ್ತಿ ಮತ್ತು ವ್ಯವಹಾರಕ್ಕೆ ಒತ್ತು ನೀಡಬೇಕು. ವೈಯಕ್ತಿಕ ಬದುಕಿನಲ್ಲಿ ಎಚ್ಚರಿಕೆ ಬೇಕು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಾಕಷ್ಟು ಪರಾಮರ್ಶೆ ನಡೆಸಬೇಕು. ವಾರದ ಆರಂಭದಲ್ಲಿ ಬದುಕು ಒತ್ತಡದಿಂದ ಕೂಡಿರಲಿದೆ. ನಿಮ್ಮ ಯೋಜನೆಗಳು ಮತ್ತು ಪ್ರಯತ್ನಗಳಿಗೆ ಅಡ್ಡಿಯನ್ನುಂಟು ಮಾಡಲು ಎದುರಾಳಿಗಳು ಯತ್ನಿಸಬಹುದು. ಸಾಕಷ್ಟು ತಾಳ್ಮೆ ವಹಿಸಿ. ಸಮಸ್ಯೆಗಳು ಸಣ್ಣದಾಗಿದ್ದರೂ ಸಹ ಸಕಾಲದಲ್ಲಿ ಅವುಗಳನ್ನು ಬಗೆಹರಿಸಲು ಯತ್ನಿಸಿ. ವ್ಯವಹಾರದಲ್ಲಿ ಯಾವುದೇ ಆಯ್ಕೆಯನ್ನು ನಡೆಸುವ ಮೊದಲು ನಿಮ್ಮ ಹಿತೈಷಿಗಳೊಂದಿಗೆ ಸಮಾಲೋಚನೆ ನಡೆಸಿ. ಈ ವಾರದಲ್ಲಿ ವೃಷಭ ರಾಶಿಯವರು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು. ಆಹಾರ ಮತ್ತು ಪಾನೀಯಗಳನ್ನು ಸೇವಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಿ. ವಾರದ ನಡುವೆ ಕೆಲಸಕ್ಕೆ ಸಂಬಂಧಿಸಿದಂತೆ ದೂರದ ಅಥವಾ ಹತ್ತಿರದ ಪ್ರಯಾಣವನ್ನು ಮಾಡಬೇಕಾದೀತು. ನಿಮ್ಮ ಬಂಧವು ಇನ್ನಷ್ಟು ಗಟ್ಟಿಗೊಳ್ಳಬೇಕಾದರೆ ನಿಮ್ಮ ಪ್ರೇಮಿಯ ಭಾವನೆಗಳನ್ನು ನೀವು ನಿರ್ಲಕ್ಷಿಸಬಾರದು. ವಿವಾಹಿತರಿಗೆ ತಮ್ಮ ಜೀವನ ಸಂಗಾತಿಯ ಅರೋಗ್ಯದ ಕುರಿತ ಚಿಂತೆ ಕಾಡಬಹುದು.

ಮಿಥುನ : ಈ ವಾರದ ಆರಂಭದಲ್ಲಿ ಮಿಥುನ ರಾಶಿಯವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಕೆಲವೊಂದು ಸವಾಲುಗಳನ್ನು ಎದುರಿಸಬೇಕಾದೀತು. ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುವ ಸಂದರ್ಭದಲ್ಲಿ ನಿಮ್ಮ ಕುಟುಂಬದ ಭಾವನೆಗಳನ್ನು ಕಡೆಗಣಿಸಬೇಡಿ. ಯೋಜಿತ ರೀತಿಯಲ್ಲಿ ಕೆಲಸ ಮಾಡಿದರೆ ನಿಮ್ಮ ಕೆಲಸ ಅಥವಾ ವ್ಯವಹಾರಕ್ಕೆ ಒಳ್ಳೆಯದಾಗಲಿದೆ. ಇಲ್ಲದಿದ್ದರೆ ನಿಮ್ಮ ಕೆಲಸ ಬಾಕಿ ಉಳಿಯಬಹುದು. ನಿಮ್ಮ ಉತ್ಪಾದಕತೆಗೆ ತಕ್ಕುದಾಗಿ ನಿಮ್ಮ ವ್ಯವಹಾರವನ್ನು ಬೆಳೆಸಲು ಯತ್ನಿಸಿ. ಇತರರ ಅಭಿಪ್ರಾಯವನ್ನು ಆಧರಿಸಿ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ತಪ್ಪನ್ನು ಮಾಡಬೇಡಿ. ಈ ವಾರದಲ್ಲಿ ಉತ್ತರಾರ್ಧದಲ್ಲಿ ಕುಟುಂಬದ ಹಿರಿಯ ಸದಸ್ಯರ ಆರೋಗ್ಯದ ಕುರಿತ ಚಿಂತೆ ನಿಮ್ಮನ್ನು ಕಾಡಬಹುದು. ಈ ಅವಧಿಯಲ್ಲಿ ಅನೇಕ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶ ನಿಮಗೆ ಲಭಿಸಲಿದೆ. ಸವಾಲಿನ ಸಂದರ್ಭಗಳಲ್ಲಿ ನಿಮ್ಮ ಪ್ರೇಮಿಯು ನಿಮ್ಮ ನೆರವಿಗೆ ಬರಲಿದ್ದಾರೆ. ನಿಮ್ಮ ವೈವಾಹಿಕ ಜೀವನದಲ್ಲಿ ಅನ್ಯೋನ್ಯತೆ ನೆಲೆಸಲಿದೆ. ಮಹಿಳೆಯರು ಧಾರ್ಮಿಕ ಕೆಲಸದಲ್ಲಿ ಸಾಕಷ್ಟು ಸಮಯವನ್ನು ಕಳೆಯಲಿದ್ದಾರೆ.

ಕರ್ಕಾಟಕ : ಕರ್ಕಾಟಕ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಸಾಕಷ್ಟು ಯಶಸ್ಸು ಮತ್ತು ಪ್ರಗತಿಯನ್ನು ಸಾಧಿಸಲಿದ್ದಾರೆ, ಕೆಲಸವನ್ನು ಹುಡುಕುತ್ತಿರುವವರಿಗೆ ಯಶಸ್ಸು ದೊರೆಯಲಿದೆ. ಪ್ರಭಾವಿ ವ್ಯಕ್ತಿಯೊಬ್ಬರು ನಿಮ್ಮ ವೃತ್ತಿ ಜೀವನದ ಗುರಿಯಲ್ಲಿ ಯಶಸ್ಸನ್ನು ಕಾಣಲು ನಿಮಗೆ ಸಹಾಯ ಮಾಡಲಿದ್ದಾರೆ. ಕಾನೂನಿನ ವಿಚಾರಕ್ಕೆ ಸಂಬಂಧಿಸಿದಂತೆ ನಿಮಗೆ ಸಾಕಷ್ಟು ನಿರಾಳತೆ ದೊರೆಯಲಿದೆ. ವಾರದ ಮಧ್ಯದಲ್ಲಿ ನೀವು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಈ ಅವಧಿಯಲ್ಲಿ ನಿಮ್ಮ ವರ್ಚಸ್ಸು ಮತ್ತು ಸ್ಥಾನಮಾನದಲ್ಲಿ ವೃದ್ಧಿ ಉಂಟಾಗಲಿದೆ. ಈ ವಾರದಲ್ಲಿ ದ್ವಿತೀಯಾರ್ಧದಲ್ಲಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವುದರಿಂದ ಸಾಕಷ್ಟು ಆರ್ಥಿಕ ಲಾಭ ಉಂಟಾಗಲಿದೆ. ಈ ವಾರದಲ್ಲಿ ಯಾರಾದರೂ ಆಪ್ತ ಗೆಳೆಯ ಅಥವಾ ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ಪ್ರಣಯ ಸಂಬಂಧಕ್ಕೆ ಸಂಬಂಧಿಸಿದಂತೆ ಈ ವಾರವು ಅದೃಷ್ಟದಿಂದ ಕೂಡಿರಲಿದೆ. ಯಾರಾದರೂ ವ್ಯಕ್ತಿಗೆ ನಿಮ್ಮ ಪ್ರೇಮವನ್ನು ನಿವೇದಿಸಿಕೊಳ್ಳುವ ನಿಮ್ಮ ಪ್ರಯತ್ನಕ್ಕೆ ಈ ಬಾರಿ ಯಶಸ್ಸು ದೊರೆಯಲಿದೆ. ಈಗಾಗಲೇ ಪ್ರಣಯ ಸಂಬಂಧದಲ್ಲಿರುವವರ ಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ಅನ್ಯೋನ್ಯತೆ ನೆಲೆಸಲಿದೆ.

ಸಿಂಹ : ಈ ವಾರದಲ್ಲಿ ಆಕ್ರೋಶ ಅಥವಾ ಭಾವನಾತ್ಮಕ ನೆಲೆಯಲ್ಲಿ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ ಈತನಕ ನೀವು ಗಳಿಸಿದ ಹಣ ಅಥವಾ ಸಂಬಂಧವನ್ನು ಕಳೆದುಕೊಳ್ಳಬೇಕಾದೀತು. ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎಂಬುದು ನಿಮ್ಮ ಅರಿವಿಗೆ ಬರದಿದ್ದರೆ ಹಿತೈಷಿಗಳ ಮಾರ್ಗದರ್ಶನವನ್ನು ಪಡೆಯಿರಿ. ಅನಿಶ್ಚಿತತೆ ಇದ್ದಲ್ಲಿ ಯಾವುದೇ ಪ್ರಮುಖ ಆಯ್ಕೆಯನ್ನು ಕೈ ಬಿಡಬೇಕಾದೀತು. ವಾರದ ಪೂರ್ವಾರ್ಧಕ್ಕೆ ಹೋಲಿಸಿದರೆ ಉತ್ತರಾರ್ಧದಲ್ಲಿ ನಿರಾಳತೆ ಲಭಿಸಲಿದೆ. ಕಚೇರಿಯಲ್ಲಿ ಹಿರಿಯರು ನಿಮಗೆ ಕನಿಕರವನ್ನು ತೋರಲಿದ್ದಾರೆ. ವಿದೇಶದಲ್ಲಿ ದುಡಿಯುತ್ತಿರುವವರು ಈ ವಾರದಲ್ಲಿ ನಿರೀಕ್ಷಿತ ಫಲವನ್ನು ಪಡೆಯಲಿದ್ದಾರೆ. ಈ ವಾರದಲ್ಲಿ ನಿಮ್ಮ ಪ್ರಣಯ ಸಂಬಂಧದಲ್ಲಿ ನಾಟಕೀಯ ಬದಲಾವಣೆ ಉಂಟಾಗಲಿದೆ. ವಾದ ಮಾಡುವ ಬದಲಿಗೆ ಯಾವುದೇ ತಪ್ಪು ಗ್ರಹಿಕೆಯನ್ನು ದೂರ ಮಾಡಲು ಯತ್ನಿಸಿ. ವೈವಾಹಿಕ ಬದುಕಿನಲ್ಲಿ ಸಂತಸವು ಮುಂದುವರಿಯಲಿದೆ. ಕಾಲೋಚಿತ ಮತ್ತು ದೀರ್ಘಕಾಲೀನ ರೋಗಗಳ ಕುರಿತು ಎಚ್ಚರಿಕೆ ವಹಿಸಿ.

ಕನ್ಯಾ : ಈ ವಾರದ ಆರಂಭದಲ್ಲಿ ಕನ್ಯಾ ರಾಶಿಯವರ ವೃತ್ತಿ ಮತ್ತು ವ್ಯವಹಾರಿಕ ಬದುಕಿನಲ್ಲಿ ನಿರೀಕ್ಷಿತ ಪ್ರಗತಿ ಉಂಟಾಗಲಿದೆ. ಗಣನೀಯ ಆರ್ಥಿಕ ಪ್ರಗತಿ ಉಂಟಾಗಲಿದೆ. ಇದರಿಂದಾಗಿ ನಿಮ್ಮಲ್ಲಿರುವ ಹಣದಲ್ಲಿ ಹೆಚ್ಚಳ ಉಂಟಾಗಲಿದೆ. ಉದ್ಯೋಗದಲ್ಲಿರುವವರು ಆದಾಯದ ಹೊಸ ಮೂಲವನ್ನು ಪಡೆಯಲಿದ್ದಾರೆ. ಈ ನಡುವೆ ಅನಗತ್ಯ ವಿಚಾರಗಳಿಗಾಗಿ ಬೇಸರಗೊಳ್ಳಬಹುದು. ಉದ್ಯೋಗದಲ್ಲಿರುವವರು ಕಿರಿಯರು ಮತ್ತು ಹಿರಿಯರೊಂದಿಗೆ ಎಚ್ಚರದಿಂದ ವರ್ತಿಸಬೇಕು. ಮಗುವಿನ ಕುರಿತ ಯಾವುದಾದರೂ ವಿಷಯದ ಕುರಿತು ನಿಮಗೆ ಚಿಂತೆ ಕಾಡಬಹುದು. ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಜೀವನ ಸಂಗಾತಿಯ ಜೊತೆಗೆ ವಾದವಿವಾದ ಉಂಟಾಗಬಹುದು. ಪ್ರಣಯ ಸಂಬಂಧದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕಿ ಹಾಗೂ ನಿಮ್ಮ ಪ್ರೀತಿಯ ವಿಪರೀತ ಪ್ರದರ್ಶನ ಮಾಡಬೇಡಿ. ಇಲ್ಲದಿದ್ದರೆ ನೀವು ಸಮಾಜದ ಎದುರು ತಲೆ ತಗ್ಗಿಸಬೇಕಾದೀತು. ವಾರದ ಕೊನೆಗೆ ನೀವು ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಪ್ರಯಾಣಿಸುವ ನಿಮ್ಮ ಆರೋಗ್ಯ ಮತ್ತು ಬೆಲೆಬಾಳುವ ವಸ್ತುಗಳ ಕುರಿತು ವಿಶೇಷ ಕಾಳಜಿ ವಹಿಸಿ. ಅಲ್ಲದೆ ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ.

ತುಲಾ : ತುಲಾ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಸಂತಸ, ಅದೃಷ್ಟ ಮತ್ತು ಪ್ರಗತಿಯ ಫಲ ದೊರೆಯಲಿದೆ. ಸಹಜವಾಗಿಯೇ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಹೊಸ ಸ್ಥಳಕ್ಕೆ ಸಾಗುವ ಅಥವಾ ಸೂಕ್ತ ಕೆಲಸವನ್ನು ಪಡೆಯುವ ಇಚ್ಛೆಯು ಈಡೇರಲಿದೆ. ಆಸ್ತಿ ಮತ್ತು ಕಟ್ಟಡಗಳನ್ನು ಖರೀದಿಸಿ ಮಾರುವುದರಿಂದ ಲಾಭ ದೊರೆಯಲಿದೆ. ಅಲ್ಲದೆ ಅವುಗಳಿಗೆ ಸಂಬಂಧಿಸಿದ ವಿವಾದಗಳಿಂದ ಮುಕ್ತಿ ದೊರೆಯಲಿದೆ. ನಿಮ್ಮ ಇಚ್ಛೆಯನ್ನು ಈಡೇರಿಸುವ ವಿಷಯದಲ್ಲಿ ಆಪ್ತ ಸ್ನೇಹಿತ ಅಥವಾ ಪ್ರಮುಖ ವ್ಯಕ್ತಿಯಿಂದ ನಿಮಗೆ ವಿಶೇಷ ನೆರವು ದೊರೆಯಲಿದೆ. ಯೋಜಿತ ಕಾರ್ಯಗಳಿಂದಾಗಿ ವ್ಯವಹಾರದಲ್ಲಿ ಹಣ ಮಾಡುವ ಅವಕಾಶ ದೊರೆಯಲಿದೆ. ಪ್ರೇಮ ಸಂಬಂಧದಲ್ಲಿ ಅನುರಾಗ ನೆಲೆಸಲಿದೆ. ನಿಮ್ಮ ಪ್ರೇಮಿಯನ್ನು ಹೆಚ್ಚಿನ ಸಮಯವನ್ನು ಕಳೆಯಲು ನಿಮಗೆ ಅವಕಾಶ ದೊರಯೆಲಿದೆ. ಅಲ್ಲದೆ ಪರಸ್ಪರ ನಂಬಿಕೆ ಹೆಚ್ಚಲಿದೆ. ಮಕ್ಕಳು ಸಂತಸದ ಸುದ್ದಿಯನ್ನು ನೀಡುವುದರಿಂದ ಕುಟುಂಬದಲ್ಲಿ ಸಂಭ್ರಮ ನೆಲೆಸಲಿದೆ. ಆರೋಗ್ಯದ ವಿಚಾರದಲ್ಲಿ ಎಲ್ಲವೂ ಸುಗಮವಾಗಿರಲಿದೆ.

ವೃಶ್ಚಿಕ : ವೃಶ್ಚಿಕ ರಾಶಿಯವರು ತಮ್ಮ ಕೆಲಸವ ಮತ್ತು ಪ್ರಗತಿಯ ಕುರಿತು ಈ ವಾರದಲ್ಲಿ ಅತೃಪ್ತಿಯನ್ನು ಅನುಭವಿಸಬಹುದು. ಹೀಗಾಗಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಒಂದಷ್ಟು ಹೊತ್ತು ಕಾಯಿರಿ. ಎದುರಾಳಿಗಳು ಕೆಲಸದ ಸ್ಥಳದಲ್ಲಿ ಉಂಟು ಮಾಡುವ ಪಿತೂರಿಯ ಕುರಿತು ಎಚ್ಚರಿಕೆ ವಹಿಸಿ. ಈ ವಾರದಲ್ಲಿ ನೀವು ಹತ್ತಿರದ ಮತ್ತು ದೂರದ ಪ್ರಯಾಣವನ್ನು ಮಾಡಬಹುದು. ವ್ಯವಹಾರದಲ್ಲಿ ಆರ್ಥಿಕ ಲಾಭ ಉಂಟಾಗಲಿದೆ. ಆದರೆ ಖರ್ಚು ಸಹ ಹೆಚ್ಚಲಿದೆ. ಆದರೆ ಹಣವು ಅಗತ್ಯ ವಸ್ತುಗಳಿಗಾಗಿಯೇ ಖರ್ಚಾಗಲಿದೆ. ಹೊಸ ವ್ಯಕ್ತಿಗಳ ಪರಿಚಯ ಮಾಡಿಕೊಳ್ಳುವುದರಿಂದ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಉಂಟಾಗಲಿದೆ. ಪ್ರಣಯ ಸಂಬಂಧದಲ್ಲಿ ಈ ವಾರದಲ್ಲಿ ಅಡೆತಡೆಗಳು ಉಂಟಾಗಬಹುದು. ನಿಮ್ಮ ಪ್ರೇಮಿಯೊಂದಿಗಿನ ಯಾವುದೇ ತಪ್ಪು ಗ್ರಹಿಕೆಯು ನಿಮ್ಮ ಸಂಬಂಧವನ್ನು ಹದಗೆಡಿಸಬಹುದು. ಒತ್ತಡದಿಂದ ದೂರವಿರಬೇಕಾದರೆ ಯಾವುದೇ ಸವಾಲಿನ ಸನ್ನಿವೇಶಗಳಿಂದ ದೂರವಿರಿ. ವಿವಾಹಿತ ವ್ಯಕ್ತಿಗಳ ಬದುಕಿನಲ್ಲಿ ಸಿಹಿ - ಕಹಿ ಎರಡೂ ನೆಲೆಸಲಿದೆ.

ಧನು : ಈ ವಾರವು ಸಮೀಪದ ಅಥವಾ ದೂರದ ಪ್ರಯಾಣದ ಮೂಲಕ ಪ್ರಾರಂಭಗೊಳ್ಳಲಿದೆ. ಜತೆಗೆ ಪ್ರಭಾವಿ ವ್ಯಕ್ತಿಗಳ ಪರಿಚಯ ಉಂಟಾಗುವುದರಿಂದ ಆರ್ಥಿಕ ಲಾಭ ಉಂಟಾಗಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರದಲ್ಲಿ ಭಡ್ತಿ ಉಂಟಾಗಲಿದೆ. ಕೆಲಸದ ಸ್ಥಳದಲ್ಲಿ ಹಿರಿಯರು ಮತ್ತು ಕಿರಿಯರು ನಿಮಗೆ ಸಹಕಾರ ನೀಡಲಿದ್ದಾರೆ. ನಿಮ್ಮ ಸಂಸ್ಥೆಯ ಬೆಳವಣಿಗೆಗಾಗಿ ಆರ್ಥಿಕ ಹೂಡಿಕೆಯನ್ನು ಮಾಡುವಾಗ ಎಚ್ಚರಿಕೆ ವಹಿಸಿ. ಮಾರ್ಗದರ್ಶನಕ್ಕಾಗಿ ನಿಮ್ಮ ಹಿತೈಷಿಗಳ ಜೊತೆಗೆ ಸಮಾಲೋಚನೆ ನಡೆಸುವುದನ್ನು ಮರೆಯಬೇಡಿ. ವಾರದ ನಡುವೆ ಕೆಲವೊಂದು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶ ನಿಮಗೆ ದೊರೆಯಲಿದೆ. ಕುಟುಂಬದ ಸದಸ್ಯರು ಅಥವಾ ಆಪ್ತ ಮಿತ್ರರನ್ನು ಧಾರ್ಮಿಕ ಸ್ಥಳಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ಆಸ್ತಿ ಮತ್ತು ಕಟ್ಟಡಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಇಚ್ಛೆಯು ಈ ವಾರದಲ್ಲಿ ಈಡೇರಲಿದೆ. ಪ್ರೇಮಿಯ ಜೊತೆಗಿನ ಸಂಬಂಧದಲ್ಲಿ ಸಿಹಿತನ ಕಾಣಿಸಿಕೊಳ್ಳಲಿದೆ. ವೈವಾಹಿಕ ಬದುಕು ಸಂತಸದಿಂದ ಕೂಡಿರಲಿದೆ.

ಮಕರ : ಈ ವಾರದ ಆರಂಭದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕೆಲಸದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸ್ಥಳೀಯ ಸ್ಥಳಗಳಿಗೆ ಅಥವಾ ವಿದೇಶಕ್ಕೆ ಪ್ರಯಾಣಿಯಿಸುವ ಅವಕಾಶ ದೊರೆಯಬಹುದು. ಈ ವಾರದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನಿಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿ ಇದೆ ಎಂಬುದು ನಿಮ್ಮ ಅರಿವಿಗೆ ಬರಲಿದೆ. ಸಾಲ ಕೊಟ್ಟ ಹಣ ಮರಳಿ ಬರುವುದರಿಂದ ನೀವು ನಿರಾಳತೆಯನ್ನು ಅನುಭವಿಸಲಿದ್ದೀರಿ. ಆದರೆ ಯಾವುದೇ ರೀತಿಯ ಅಪಾಯವನ್ನು ಒಳಗೊಂಡಿರುವ ಕಾರ್ಯಕ್ರಮದಲ್ಲಿ ಈ ವಾರದಲ್ಲಿ ಹಣಕಾಸಿನ ಹೂಡಿಕೆ ಮಾಡಬೇಡಿ. ಉದ್ಯೋಗದಲ್ಲಿರುವವರಿಗೆ ಆದಾಯದ ಹೊಸ ಮೂಲ ದೊರೆಯಲಿದೆ. ಸಂಪತ್ತಿನ ಮಟ್ಟದಲ್ಲಿ ಹೆಚ್ಚಳ ಉಂಟಾಗಲಿದೆ. ಭೂಮಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ವಿವಾದವನ್ನು ಬಗೆಹರಿಸುವ ವಿಚಾರದಲ್ಲಿ ಪ್ರಭಾವಿ ಅಥವಾ ಹಿರಿಯ ವ್ಯಕ್ತಿಯೊಬ್ಬರು ನಿಮ್ಮ ನೆರವಿಗೆ ಬರಲಿದ್ದಾರೆ. ಪ್ರಣಯ ಸಂಬಂಧದಲ್ಲಿ ಪರಸ್ಪರ ನಂಬಿಕೆಯನ್ನಿರಿಸಲು ಮರೆಯಬೇಡಿ. ನಿಮ್ಮ ಪ್ರೇಮಿಯ ಭಾವನೆಗಳನ್ನು ಕಡೆಗಣಿಸಬೇಡಿ. ವೈವಾಹಿಕ ಬದುಕು ಸಂಭ್ರಮದಿಂದ ಕೂಡಿರಲಿದೆ. ಯಾವುದೇ ಸವಾಲಿನ ಸಂದರ್ಭದಲ್ಲಿ ನಿಮ್ಮ ಜೀವನ ಸಂಗಾತಿಯು ನಿಮ್ಮ ನೆರವಿಗೆ ಬರಲಿದ್ದಾರೆ.

ಕುಂಭ : ಈ ವಾರದಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯರು ಮತ್ತು ಕಿರಿಯರಿಂದ ಹೆಚ್ಚಿನ ನೆರವನ್ನು ನೀವು ಪಡೆಯಲಿದ್ದೀರಿ. ನಿರುದ್ಯೋಗಿಗಳ ಕೆಲಸದ ಹುಡುಕಾಟವು ಕೊನೆಗೊಳ್ಳಲಿದೆ. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ನಿಮ್ಮ ಸಂಸ್ಥೆಯು ಪ್ರಗತಿ ಸಾಧಿಸಲಿದ್ದು, ಈ ವಾರದಲ್ಲಿ ನೀವು ಸಾಕಷ್ಟು ಲಾಭವನ್ನು ಗಳಿಸಲಿದ್ದೀರಿ. ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣ ಕೈಗೊಳ್ಳುವುದರಿಂದ ಲಾಭ ಉಂಟಾಗಲಿದೆ. ರಾಜಕಾರಣಿಗಳಿಗೆ ಈ ವಾರದಲ್ಲಿ ಪ್ರಮುಖ ಹುದ್ದೆ ಅಥವಾ ಜವಾಬ್ದಾರಿ ದೊರೆಯಲಿದೆ. ಒಟ್ಟಾರೆಯಾಗಿ ಈ ವಾರದಲ್ಲಿ ನಿಮ್ಮ ಶ್ರಮ ಮತ್ತು ಶ್ರದ್ಧೆಗೆ ತಕ್ಕುದಾದ ಫಲ ದೊರೆಯಲಿದೆ. ಪರೀಕ್ಷೆ ಮತ್ತು ಸ್ಪರ್ಧೆಗಳಿಗಾಗಿ ಸಿದ್ಧತೆ ನಡೆಸುತ್ತಿರುವವರಿಗೆ ಕೆಲವೊಂದು ಆಶಾದಾಯಕ ಸುದ್ದಿ ದೊರೆಯಲಿದೆ. ಆಪ್ತರೆಲ್ಲರೂ ಮನೆಯಲ್ಲಿರುವಾಗ ಪಿಕ್ನಿಕ್‌ ಅಥವಾ ಇತರ ಕಾರ್ಯಕ್ರಮಗಳಿಗಾಗಿ ಯೋಜನೆ ರೂಪಿಸುವ ಸಾಧ್ಯತೆ ಇದೆ. ಪ್ರೇಮ ಸಂಬಂಧದಲ್ಲಿ ಅನುರಾಗ ನೆಲೆಸಲಿದೆ. ವೈವಾಹಿಕ ಸಂಬಂಧದಲ್ಲಿ ಅನ್ಯೋನ್ಯತೆಯು ಹೆಚ್ಚಲಿದೆ. ನಿಮ್ಮ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ.

ಮೀನ : ಕೆಲಸಕ್ಕೆ ಸಂಬಂಧಿಸಿದ ಜವಾಬ್ದಾರಿಯನ್ನು ಈಡೇರಿಸುವುದಕ್ಕಾಗಿ ಮೀನ ರಾಶಿಯವರು ಈ ವಾರದಲ್ಲಿ ಒಂದಷ್ಟು ಪ್ರಯಾಣಿಸಬೇಕಾದ ಅಗತ್ಯತೆ ಉಂಟಾಗಬಹುದು. ಕುಟುಂಬ ಹಾಗೂ ಮನೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಭೂಮಿ, ಕಟ್ಟಡ ಅಥವಾ ಕೌಟುಂಬಿಕ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಭಿನ್ನಾಭಿಪ್ರಾಯಗಳಿದ್ದಲ್ಲಿ ನೀವು ನ್ಯಾಯಾಲಯಕ್ಕೆ ಹೋಗಬೇಕಾದೀತು. ಆದರೆ ನ್ಯಾಯಾಲಯದ ಹೊರಗಡೆ ಪರಸ್ಪರ ಒಪ್ಪಿಗೆಯ ವಿಲೇವಾರಿಗೆ ಒಪ್ಪಿಕೊಂಡರೆ ನಿಮಗೆ ಒಳ್ಳೆಯದು. ಕೆಲಸದಲ್ಲಿ ವಿಪರೀತ ವಿರೋಧ ಎದುರಿಸಬೇಕಾದೀತು. ಇಂತಹ ಸನ್ನಿವೇಶದಲ್ಲಿ ಸಣ್ಣಪುಟ್ಟ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸದೆ ನಿಮ್ಮ ಲಕ್ಷ್ಯದತ್ತ ಗಮನ ನೀಡಿ. ಸಹೋದ್ಯೋಗಿಗಳಿಗೆ ಸಹಕಾರ ನೀಡುವುದು ಒಳ್ಳೆಯದು. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ಸಾಕಷ್ಟು ಪರ್ಯಾಲೋಚನೆಯ ನಂತರವೇ ಹೂಡಿಕೆ ಮಾಡಿ. ವಾರದ ಉತ್ತರಾರ್ಧದಲ್ಲಿ ನಿಮ್ಮ ಕುಟುಂಬದ ಸದಸ್ಯರು ಅಥವಾ ಪ್ರೇಮಿಯೊಂದಿಗೆ ಸಂಘರ್ಷವನ್ನು ತಪ್ಪಿಸಿ ಸಂವಹನಕ್ಕೆ ಒತ್ತು ನೀಡಿರಿ. ಯಾವುದೇ ಕಾರಣಕ್ಕೂ ನಿಮ್ಮ ಸಂಬಂಧಿಗಳ ಭಾವನೆಗಳನ್ನು ಕಡೆಗಣಿಸಬೇಡಿ. ಇಲ್ಲದಿದ್ದರೆ ನೀವು ನಂತರ ದುಬಾರಿ ಬೆಲೆ ತೆರಬೇಕಾದೀತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.