ETV Bharat / opinion

ಮುಖ್ಯಮಂತ್ರಿಯನ್ನು ಬಂಧಿಸಬಹುದೇ? ಕಾನೂನು ಏನನ್ನುತ್ತದೆ? - Arrest of Chief Ministers - ARREST OF CHIEF MINISTERS

ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಹೇಮಂತ್ ಸೊರೇನ್ ಅವರನ್ನು ಭೂ ಹಗರಣ ಪ್ರಕರಣದಲ್ಲಿ ಇ.ಡಿ. ಬಂಧಿಸಿತ್ತು. ಈ ಹಿಂದೆ ಹಲವು ಸಿಎಂಗಳು ಹಾಗೂ ಮಾಜಿ ಸಿಎಂಗಳನ್ನು ವಿವಿಧ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. ತಮ್ಮ ಆಡಳಿತಾವಧಿಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮುಖ್ಯಮಂತ್ರಿಗಳಿಗೆ ಬಂಧನದಿಂದ ವಿನಾಯಿತಿ ಇದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗಳೆದ್ದಿವೆ. ಈ ಬಗ್ಗೆ ಕಾನೂನು ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

Hemant Soren  Chandrababu Naidu  Arvind Kejriwal  Madhu Koda
ಮುಖ್ಯಮಂತ್ರಿಯನ್ನು ಬಂಧಿಸುವ ಕುರಿತಂತೆ ಕಾನೂನು ಏನು ಹೇಳುತ್ತದೆ?
author img

By ETV Bharat Karnataka Team

Published : Mar 22, 2024, 2:18 PM IST

ಹೈದರಾಬಾದ್: ಕಾನೂನಿನ ಅಡಿಯಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಮಾನ ಸ್ಥಾನವನ್ನು ಹೊಂದಿರುತ್ತಾನೆ. ಅದೇ ರೀತಿ ಮುಖ್ಯಮಂತ್ರಿಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ಬಂಧನದಿಂದ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ. ಕ್ರಿಮಿನಲ್ ಪ್ರೊಸೀಜರ್ ಕೋಡ್ 1973 (CrPC) ಪ್ರಕಾರ, ನ್ಯಾಯಾಲಯದಿಂದ ಬಂಧನ ವಾರಂಟ್ ಹೊರಡಿಸಿದ ಯಾವುದೇ ವ್ಯಕ್ತಿಯನ್ನು ಕಾನೂನು ಜಾರಿ ಸಂಸ್ಥೆ ಬಂಧಿಸಬಹುದು ಎಂದು ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಆರೋಪಿಗಳು ಪರಾರಿಯಾಗುತ್ತಾರೆ, ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸುತ್ತಾರೆ ಅಥವಾ ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಮುಂದಾಗುತ್ತಾರೆ ಎಂಬ ಕಾರಣವಿದ್ದರೆ ಮಾತ್ರ ಮುಖ್ಯಮಂತ್ರಿಯನ್ನು ಬಂಧಿಸಬಹುದು ಎಂದು ವರದಿ ಹೇಳಿದೆ. ಅದಲ್ಲದೆ, ಪ್ರಕರಣದಲ್ಲಿ ಶಿಕ್ಷೆಯಾದರೆ ಮಾತ್ರ ಸಿಎಂ ಹುದ್ದೆಯಿಂದ ಕೆಳಗಿಳಿಸಬಹುದು. ತನಿಖೆಯ ಸಂದರ್ಭದಲ್ಲಿ ಸಿಎಂ ಹುದ್ದೆಯಲ್ಲಿರುವುದನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿಲ್ಲ.

ಕಾನೂನಿನ ಪ್ರಕಾರ, ಅಧಿಕಾರದಲ್ಲಿರುವಾಗ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧನದಿಂದ ಭಾರತದ ರಾಷ್ಟ್ರಪತಿಗಳು ಮತ್ತು ರಾಜ್ಯಗಳ ಗವರ್ನರ್‌ಗಳಿಗೆ ಮಾತ್ರ ರಕ್ಷಣೆ ನೀಡಲಾಗುತ್ತದೆ. "ರಾಷ್ಟ್ರಪತಿ ಅಥವಾ ರಾಜ್ಯಪಾಲರ ಬಂಧನ ಅಥವಾ ಜೈಲು ಶಿಕ್ಷೆಗೆ ಯಾವುದೇ ಪ್ರಕ್ರಿಯೆಯು ಅವರ ಅಧಿಕಾರದ ಅವಧಿಯಲ್ಲಿ ಯಾವುದೇ ನ್ಯಾಯಾಲಯದಿಂದ ಹೊರಡಿಸುವುದಿಲ್ಲ" ಎಂದು 1949ರ ಭಾರತದ ಸಂವಿಧಾನದಲ್ಲಿ 361ನೇ ವಿಧಿ ತಿಳಿಸುತ್ತದೆ.

ಸಂಪುಟದ ಸದಸ್ಯರು ಮತ್ತು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಪರಿಗಣಿಸುವಾಗ, ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸು ಇಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು. ಮುಖ್ಯಮಂತ್ರಿಯೊಬ್ಬರ ಪ್ರಾಸಿಕ್ಯೂಷನ್ ಅನ್ನು ಅನುಮೋದಿಸಲು ಅಥವಾ ಅನುಮೋದಿಸದಿರಲು ನಿರ್ಧರಿಸುವಲ್ಲಿ, ರಾಜ್ಯಪಾಲರು ತಮ್ಮ ವಿವೇಚನಾಧಿಕಾರಕ್ಕೆ ಬಿಟ್ಟಿದೆ. ಆದ್ರೆ, ಮಂತ್ರಿ ಮಂಡಳಿಯ ನೆರವು ಮತ್ತು ಸಲಹೆಯೊಂದಿಗೆ ಅಲ್ಲವೆಂಬುದು ಸರಿಯಾಗಿ ಭಾವಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ 2004ರಲ್ಲಿ ಆದೇಶದಲ್ಲಿ ಹೇಳಿತ್ತು.

ಜಾಗರಣ್ ಅವರ ಪ್ರಕಾರ, ಕ್ರಿಮಿನಲ್ ಪ್ರಕರಣದಲ್ಲಿ ಮುಖ್ಯಮಂತ್ರಿ ಅಥವಾ ವಿಧಾನಸಭೆ ಸದಸ್ಯರನ್ನು ಬಂಧಿಸಬೇಕಾದರೆ, ಮೊದಲನೆಯದಾಗಿ, ಸದನದ ಸ್ಪೀಕರ್‌ನಿಂದ ಅನುಮೋದನೆ ಪಡೆಯಬೇಕು. ವಿಧಾನಸಭೆ ಸ್ಪೀಕರ್ ಒಪ್ಪಿಗೆ ನೀಡಿದ ಬಳಿಕವಷ್ಟೇ ಬಂಧನಕ್ಕೆ ಅವಕಾಶವಿದೆ. ಈವರೆಗೆ ಬಂಧನವನ್ನು ಎದುರಿಸಿದ ಮಾಜಿ ಸಿಎಂಗಳ ಮಾಹಿತಿ ಇಲ್ಲಿದೆ ನೋಡಿ.

ಲಾಲು ಪ್ರಸಾದ್ ಯಾದವ್: ಜಾನುವಾರುಗಳ ಮೇವು ಖರೀದಿಗೆ ಮೀಸಲಿಟ್ಟ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಅವರನ್ನು ಕಂಬಿ ಹಿಂದೆ ಕಳುಹಿಸಲಾಗಿತ್ತು. ಗಣನೀಯ ಪ್ರಮಾಣದ ಸಾರ್ವಜನಿಕ ಹಣವನ್ನು ದರ್ಬಳಕೆ ಮಾಡಿದ ಆರೋಪವೂ ಅವರ ಮೇಲಿತ್ತು. ಈ ಯೋಜನೆಯು ದುರುಪಯೋಗಕ್ಕೆ ಅನುಕೂಲವಾಗುವಂತೆ ನಕಲಿ ಬಿಲ್‌ಗಳನ್ನು ಸೃಷ್ಟಿ ಮಾಡಲಾಗಿತ್ತು. 1990ರ ದಶಕದಲ್ಲಿ ಈ ಹಗರಣ ಬೆಳಕಿಗೆ ಬಂದಿತ್ತು. 2013ರಲ್ಲಿ ಲಾಲು ಪ್ರಸಾದ್ ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಯಿತು. ಇದರ ಪರಿಣಾಮವಾಗಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಮತ್ತು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತ್ತು.

ಜಗನ್ನಾಥ್ ಮಿಶ್ರಾ: ಮೂರು ಬಾರಿ ಬಿಹಾರದ ಅಧಿಕಾರದ ಗದ್ದುಗೆ ಏರಿದ್ದ, ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ಅವರು 1997ರಲ್ಲಿ ಮೊದಲ ಬಾರಿಗೆ ಜೈಲು ಪಾಲಾದರು. ಅವರೂ ಸಹ ಸೆಪ್ಟೆಂಬರ್ 2013ರಲ್ಲಿ ಅಪರಾಧಿ ಎಂದು ಸಾಬೀತಾಯಿತು ಮತ್ತು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಜೆ. ಜಯಲಲಿತಾ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರ ತ್ಯಜಿಸಿ ಬಂಧನಕ್ಕೊಳಗಾದ ದೇಶದ ಮೊದಲ ಹಾಲಿ ಮುಖ್ಯಮಂತ್ರಿ ಜಯಲಲಿತಾ ಆಗಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು, ಉನ್ನತ ಮಟ್ಟದ ಭ್ರಷ್ಟಾಚಾರ ಪ್ರಕರಣವನ್ನು ಎದುರಿಸಿದ್ದರು. ಅಧಿಕಾರಾವಧಿಯಲ್ಲಿ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಆರೋಪ ಹೊಂದಿದ್ದರು. ಆದಾಯಕ್ಕೂ ಮೀರಿ ಆಸ್ತಿಗಳು, ಆಭರಣಗಳು ಹೊಂದಿರುವ ಆರೋಪ ಎದುರಿಸಿದ್ದರು.

2014ರಲ್ಲಿ ಜಯಲಲಿತಾ ಅವರನ್ನು ತಪ್ಪಿತಸ್ಥರೆಂದು ನಿರ್ಣಯಿಸಲಾಗಿತ್ತು ಮತ್ತು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಈ ಪ್ರಕರಣದಿಂದ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿದಿದ್ದರು. ಅವರು ಮೇಲ್ಮನವಿ ಸಲ್ಲಿಸಿದರು ಮತ್ತು 2015 ರಲ್ಲಿ ಖುಲಾಸೆಗೊಂಡರು. ಬಳಿಕ ಅವರು ಸಿಎಂ ಸ್ಥಾನವನ್ನು ಮರಳಿ ಪಡೆದಿದ್ದರು. ಆದರೆ, ಕರ್ನಾಟಕ ಸರ್ಕಾರವು ಆಕೆಯ ಖುಲಾಸೆಯನ್ನು ಪ್ರಶ್ನಿಸಿತು. ಮತ್ತು 2017ರಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಮರು ವಿಚಾರಣಕ್ಕೆಗೆ ಕೈಗೆತ್ತಿಕೊಂಡಿತ್ತು. ತೀರ್ಪು ಬರುವ ಮುನ್ನವೇ ಜಯಲಲಿತಾ ನಿಧನರಾಗಿದ್ದರು.

ಬಿ.ಎಸ್. ಯಡಿಯೂರಪ್ಪ: ಕರ್ನಾಟಕದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ಪುತ್ರರಿಗೆ ಭೂ ಮಂಜೂರಾತಿಯಲ್ಲಿ ಒಲವು ತೋರಿದ ಆರೋಪ ಹೊತ್ತಿದ್ದರು. ಜುಲೈ 2011ರ ಲೋಕಾಯುಕ್ತ ವರದಿಯು ತನಿಖೆಯನ್ನು ಶಿಫಾರಸು ಮಾಡಲು ಸಾಕಷ್ಟು ಪುರಾವೆಗಳನ್ನು ಕಲೆಹಾಕಿತ್ತು. ಬಿಎಸ್‌ವೈ ಅವರು 2011ರ ಅಕ್ಟೋಬರ್‌ನಲ್ಲಿ ಜೈಲು ಪಾಲಾಗಿದ್ದರು. ಆದರೆ, 23 ದಿನಗಳ ನಂತರ ಜಾಮೀನು ಪಡೆದಿದ್ದರು.

ಓಂ ಪ್ರಕಾಶ್ ಚೌತಾಲಾ: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಅವರು 2000ರ ದಶಕದ ಆರಂಭದಲ್ಲಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದರು. ಆಯ್ಕೆ ಪ್ರಕ್ರಿಯೆಯಲ್ಲಿನ ಭ್ರಷ್ಟ, ಅಕ್ರಮಗಳನ್ನು ಎಸಗಿದ್ದ ಆರೋಪಗಳು ಹೊತ್ತಿದ್ದರು. 2013ರಲ್ಲಿ ಅವರು ಮತ್ತು ಅವರ ಮಗ ಅಜಯ್, ವಂಚನೆ ಮತ್ತು ಫೋರ್ಜರಿ ಸೇರಿದಂತೆ ವಿವಿಧ ಆರೋಪಗಳ ಮೇಲೆ 10 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದರು. ಮೇಲ್ಮನವಿಗಳ ಹೊರತಾಗಿಯೂ, ಅವರ ಅಪರಾಧಗಳನ್ನು 2015ರಲ್ಲಿ ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎರಡೂ ಎತ್ತಿಹಿಡಿದ್ದವು.

ಮಧು ಕೋಡಾ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರು ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿದ್ದರು. ಅವರು ಅಕ್ರಮ ಹಣ ವರ್ಗಾವಣೆ ಮತ್ತು ಅಕ್ರಮ ಆಸ್ತಿಯನ್ನು ಸಂಗ್ರಹಿಸಿರುವ ಆರೋಪಗಳನ್ನು ಎದುರಿಸಿದ್ದರು. ಕೊಡಾ ಗಣಿ ಹಗರಣದಲ್ಲಿ ಭಾಗಿಯಾಗಿದ್ದರು ಮತ್ತು ಲಂಚ ಪಡೆದು ಗಣಿಗಾರಿಕೆ ಗುತ್ತಿಗೆ ನೀಡಿದ್ದರು ಎಂದು ಆರೋಪಿಸಲಾಗಿತ್ತು.

ವರದಿಯ ಪ್ರಕಾರ, ಅವರು ಮತ್ತು ಅವರ ಸಹಚರರು ಇಂತಹ ಕೃತ್ಯಗಳ ಮೂಲಕ 4,000 ಕೋಟಿ ರೂ. ಪಡೆದ ಆರೋಪದಲ್ಲಿ 2009ರಲ್ಲಿ ಬಂಧಿಸಲಾಗಿತ್ತು. ನಂತರ, ಅವರು 2013ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು, ಆದರೆ, ಅವರ 144 ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಪ್ತಿ ಮಾಡಲಾಯಿತ್ತು. 2017ರಲ್ಲಿ ಅವರು ಅಪರಾಧಿ ಎಂದು ಸಾಬೀತಾಯಿತು ಹಾಗೂ 25 ಲಕ್ಷ ರೂಪಾಯಿ ದಂಡದೊಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತ್ತು.

ಚಂದ್ರಬಾಬು ನಾಯ್ಡು: ಕೌಶಲ ಅಭಿವೃದ್ಧಿ ನಿಗಮದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಸೆಪ್ಟೆಂಬರ್ 9 ರಂದು ಬಂಧಿಸಲಾಯಿತ್ತು. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 300 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ ಎಂಬ ಆರೋಪವಿದೆ. ಅವರು ಪ್ರಸ್ತುತ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ. ಮತ್ತು ಅವರ ಸಾಮಾನ್ಯ ಜಾಮೀನು ಅರ್ಜಿಯನ್ನು ಆಂಧ್ರಪ್ರದೇಶ ಹೈಕೋರ್ಟ್ ನವೆಂಬರ್ 10ರಂದು ವಿಚಾರಣೆ ನಡೆಸಲಿದೆ.

ಹೇಮಂತ್ ಸೊರೇನ್: ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಹೇಮಂತ್ ಸೊರೇನ್ ಅವರು 2024ರ ಜನವರಿ 31 ರಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರನ್ನು ಭೂ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇತ್ತೀಚೆಗೆ ಬಂಧಿಸಿತ್ತು. ಹೇಮಂತ್ ಸೊರೇನ್ ಅವರು ಇ.ಡಿ ಅವರನ್ನು ಹಲವು ಗಂಟೆಗಳ ವಿಚಾರಣೆಗೆ ಒಳಪಡಿಸಿತ್ತು. ನಂತರ ಸೊರೇನ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು.

ಅರವಿಂದ್ ಕೇಜ್ರಿವಾಲ್: ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ನಿನ್ನೆ (ಶುಕ್ರವಾರ) ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಿಂದೆ, ಎಎಪಿಯ ಇಬ್ಬರು ಹಿರಿಯ ನಾಯಕರಾದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ: ಕಾನೂನು ಹೇಳುವುದು ಏನು? - Kejriwal Arrest What Next

ETV Bharat Logo

Copyright © 2024 Ushodaya Enterprises Pvt. Ltd., All Rights Reserved.