ETV Bharat / opinion

ಭಾರತದಲ್ಲಿ ಉದ್ಯೋಗ ಸೃಷ್ಟಿಸುವುದು ಹೇಗೆ; ಇಲ್ಲಿದೆ ಸತ್ಯ-ಮಿಥ್ಯಗಳ ಸಾರಾಂಶ - labour intensive sectors

ಭಾರತವು ಜಾಗತಿಕ ಮಟ್ಟದಲ್ಲಿ ಉತ್ಪಾದನಾ ವಲಯವಾಗಿ ಗುರುತಿಸಿಕೊಳ್ಳುವ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಕುರಿತಾಗಿ ಗುರುಚರಣ್​ ದಾಸ್​ ಹಂಚಿಕೊಂಡಿರುವ ವಿಷಯದ ಸಾರಾಂಶ ಇಲ್ಲಿದೆ.

india-can-replicate-the-success-story-in-all-labour-intensive-sectors
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Aug 24, 2024, 5:11 PM IST

ಹೈದರಾಬಾದ್​: ಜಗತ್ತಿನಲ್ಲಿ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದರೂ ಸಾಕಷ್ಟು ಪ್ರಮಾಣದ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇದಕ್ಕೆ ಪ್ರಮುಖವಾಗಿ ಕೈಗಾರಿಕಾ ಕ್ರಾಂತಿಯನ್ನು ಸೃಷ್ಟಿಸಲು ವಿಫಲವಾಗಿರುವುದು. ಆದಾಗ್ಯೂ ನಮ್ಮ ಆಡಳಿತಗಾರರು ಮತ್ತು ನೀತಿ ನಿರೂಪಕರು ಸುಳ್ಳು ಮಿಥ್ಯಗಳ ಯಶಸ್ಸನ್ನು ಬಿಂಬಿಸುತ್ತಿದ್ದಾರೆ. ಉದ್ಯೋಗ ಸೃಷ್ಟಿಸುವಲ್ಲಿ ಕಾರ್ಮಿಕ ತೀವ್ರ ವಲಯವಾಗಿ ರೂಪಿಸುವ ಅಗತ್ಯವಿದೆ. ಇದು ಅನೇಕ ಪಾಠಗಳ ಜೊತೆಗೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಕರೆ ನೀಡುತ್ತದೆ.

ಉತ್ಪಾದನೆ ವಿಫಲ: 1991ರಿಂದ 30 ವರ್ಷಗಳಲ್ಲಿ ಭಾರತ ಸುಮಾರು ಶೇ 6ರಷ್ಟು ಬೆಳವಣಿಗೆ ಕಂಡಿದೆ. 450 ಮಿಲಿಯನ್​ ಜನರನ್ನು ಬಡತನದಿಂದ ಮೇಲೆತ್ತಿದ್ದು, ಮಧ್ಯಮ ವರ್ಗಗಳ ಜನಸಂಖ್ಯೆ ಶೇ 10ರಿಂದ 30ರಷ್ಟು ವಿಸ್ತರಣೆ ಕಂಡಿದೆ. ಸೇವಾ ವಲಯದಲ್ಲಿ ಭಾರತ ಅತ್ಯುನ್ನತ ಕೆಲಸ ಮಾಡಿದೆ. ಆದರೆ, ಉತ್ಪಾದನೆಯಲ್ಲಿ ವೈಫಲ್ಯತೆ ಕಂಡಿದೆ. ಇದರ ಜಿಡಿಪಿ ಶೇ 15ಕ್ಕಿಂತ ಕಡಿಮೆ ಇದ್ದರೆ, ಶೇ. 11ರಷ್ಟು ಉದ್ಯೋಗಿಗಳಿದ್ದಾರೆ. ಜಾಗತಿಕ ಸರಕನ್ನು ಶೇ 2ರ ಪ್ರಮಾಣದಲ್ಲಿ ರಫ್ತು ಮಾಡುತ್ತಿದೆ. ಪೂರ್ವ ಏಷ್ಯಾದ ಯಶಸ್ವಿ ದೇಶಗಳಾದ ಜಪಾನ್​, ಕೊರಿಯಾ ಮತ್ತು ತೈವಾನ್​ ದೇಶಗಳು ಕಾರ್ಮಿಕ ತೀವ್ರ ಉತ್ಪಾದನೆ ರಫ್ತು ಎಂಬ ಒಂದು ಮಂತ್ರದ ಮೂಲಕ ಬಡತನದಿಂದ ಹೊರಬಂದಿವೆ ಎಂಬುದನ್ನು ಮರೆಯಬಾರದು. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಚೀನಾ.

ನಿರುದ್ಯೋಗ ಸಮಸ್ಯೆ ಕಾರಣವಲ್ಲ: ಭಾರತದ ಸಮಸ್ಯೆ ಕಾರಣ ನಿರುದ್ಯೋಗವಲ್ಲ, ಕಡಿಮೆ ಉದ್ಯೋಗವಾಗಿದೆ. ಪಾಕ್ಷಿಕ ಕಾರ್ಮಿಕ ಸಮೀಕ್ಷೆಗಳು ಉದ್ಯೋಗ ಬಿಕ್ಕಟ್ಟಿನ ವ್ಯಾಪ್ತಿಯನ್ನು ಪ್ರತಿಬಿಂಬಿಸುವುದಿಲ್ಲ. ಅನೇಕ ಯುವ ಜನರು ಕಡಿಮೆ ಉತ್ಪಾದನೆಗೆ, ಘಟಕಗಳಲ್ಲಿ ಅನೌಪಚಾರಿಕ ಉದ್ಯೋಗ ಅಥವಾ ಬಜಾರ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಗುಣಮಟ್ಟದ ಹೆಚ್ಚು ಉತ್ಪಾದಕ ಕೆಲಸವನ್ನು ಮಾಡುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಲೋಕಸಭಾ ಚುನಾವಣೆ ಸಮಯದಲ್ಲಿ ಸಮೀಕ್ಷೆಯಲ್ಲೂ ಈ ವಿಷಯಗಳನ್ನು ಗುರುತಿಸಲಾಗಿತ್ತು. ಗುಣಮಟ್ಟದ ಉದ್ಯೋಗದ ಆತಂಕವು ಅಚ್ಚರಿ ಚುನಾವಣಾ ಫಲಿತಾಂಶವನ್ನು ಭಾಗಶಃ ಪ್ರತಿಫಲಿಸಿದ್ದವು.

ಉತ್ಪಾದನಾ ಸ್ಥಳವಾಗಿ ರೂಪುಗೊಳ್ಳುತ್ತಿರುವ ಭಾರತ: ಈ ನಡುವೆ ಇರುವ ಖುಷಿ ಸಂಗತಿ ಎಂದರೆ, ಇದೀಗ ಜಾಗತಿಕ ನಾಯಕರು ಭಾರತವನ್ನು ಜಾಗತಿಕ ಪೂರೈಕೆಗಾಗಿ ಎರಡನೇ ಉತ್ಪಾದನಾ ಸ್ಥಳವಾಗಿ ಆಯ್ಕೆ ಮಾಡಿದ್ದಾರೆ. 2021ರ ವರೆಗೆ ಚೀನಾದಲ್ಲಿಯೇ ಆ್ಯಪಲ್​ ಕಂಪನಿಯ ಐಫೋನ್​ ಸಂಪೂರ್ಣವಾಗಿ ತಯಾರಾಗುತ್ತಿತ್ತು. ಇಂದು ಭಾರತದಲ್ಲಿ ಈ ಸಂಸ್ಥೆ 1,50,000ಕ್ಕೂ ನೇರ ಉದ್ಯೋಗ (ಶೇ70ರಷ್ಟು ಮಹಿಳೆಯರು) ಜೊತೆಗೆ 4,50,000 ಪರೋಕ್ಷ ಉದ್ಯೋಗ ಸೃಷ್ಟಿಸಿದೆ. ಪ್ರತಿ ವರ್ಷ 14 ಬಿಲಿಯನ್​ ಫೋನ್​ ಉತ್ಪಾದನೆ ಮಾಡುವ ಮೂಲಕ 10 ಬಿಲಿಯನ್​ ರಫ್ತನ್ನು ಮಾಡಲಾಗುತ್ತಿದೆ. ಸದ್ಯ ಈ ಅಂಕಿ ಸಂಖ್ಯೆ ಐಫೋನ್​ನ ಜಾಗತಿಕ ಉತ್ಪಾದನೆಯಲ್ಲಿ ಶೇ 14ರಷ್ಟಿದ್ದು, 2026ರ ಹೊತ್ತಿಗೆ ಇದರ ಪ್ರಮಾಣ ಶೇ 26 ರಿಂದ 30 ಆಗಲಿದೆ.

ಉತ್ಪಾದನಾ ಮಾರುಕಟ್ಟೆಗೆ ಒತ್ತು: ಭಾರತ ರಫ್ತುಗಾರಿಕೆ ಹಬ್​ ಆಗಿ ರೂಪುಗೊಳ್ಳಲು ಶೇ. 85ರಷ್ಟು ಮೌಲ್ಯದ ವೃದ್ಧಿಯನ್ನು ಪ್ರತಿನಿಧಿಸುವ ಐಫೋನ್​ ಘಟಕ ತಯಾರಕರನ್ನು ಆಕರ್ಷಿಸುವುದು ಅವಶ್ಯವಾಗಿದೆ. ಅವರು ಬಹುತೇಕ ಚೀನಿಗರಾಗಿದ್ದಾರೆ. ಅವರು ಇನ್ನಷ್ಟು ಉದ್ಯೋಗ ಸೃಷ್ಟಿಸಿ, ಕೌಶಲ್ಯವನ್ನು ಕಲಿಸಿ, ಹೆಚ್ಚಿನ ತಂತ್ರಜ್ಞಾನವನ್ನು ವರ್ಗಾವಣೆ ಮಾಡುತ್ತಾರೆ. ಇದರಿಂದ ಮಾತ್ರ ನಮ್ಮ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್​ಎಂಇ) ಜಾಗತಿಕ ಮೌಲ್ಯದ ಸರಪಳಿ ಸಂಪರ್ಕ ಹೊಂದುತ್ತವೆ. ವರ್ಷಗಳ ಹಿಂದೆ ಮಾರುತಿ ಕಂಪನಿ ಜೊತೆ ಆಗಿದ್ದು ಇದೇ ಕಥೆ. ಚೀನಾದೊಂದಿಗೆ ಭಾರತ ವ್ಯಾಪಾರ ಕಡಿಮೆ ಮಾಡುವುದು ಪ್ರಯೋಜನವಾಗಲಿದೆ. ಇದರಲ್ಲಿ ಭಾರತದ ಹಿತಾಸಕ್ತಿ ಕೂಡ ಹೊಂದಿದೆ. ಇಲ್ಲದೇ ಹೋದಲ್ಲಿ ಭಾರತದಲ್ಲಿ ಮಾರಾಟವಾಗುವ ಪ್ರತಿ ಮೊಬೈಲ್​ ಚೀನಾದಲ್ಲಿಯೇ ಉತ್ಪಾದನೆಯಾಗುತ್ತದೆ.

ಕಂಪನಿಗಳ ಪ್ರವೇಶಕ್ಕೆ ದಾರಿ: ಈ ನಿಟ್ಟಿನಲ್ಲಿ ಹಲವು ಪಾಠಗಳನ್ನು ಕಲಿಯಬೇಕಿದೆ. ಮೊದಲನೇಯದಾಗಿ ಭಾರತ ಬಲು ದೊಡ್ಡ ಮಾರುಕಟ್ಟೆ ಎಂಬ ಸುಳ್ಳು ಮಿಥ್ಯವನ್ನು ಬಿಡಬೇಕಿದೆ. ಅತಿ ದೊಡ್ಡ ಜನಸಂಖ್ಯೆಯಿದ್ದು, ಕೊಳ್ಳುವಿಕೆ ಶಕ್ತಿ ಸುಧಾರಣೆ ಕಂಡಿದೆ. ಮತ್ತೊಂದು ಸಾಮಾನ್ಯ ನಂಬಿಕೆ ಎಂದರೆ, ಮೇಕ್​ ಇನ್​ ಇಂಡಿಯಾ ಎಂದ ಕೂಡಲೇ ಜಾಗತಿಕ ಬ್ರಾಂಡ್​ಗಳು ಸಾಲುಗಟ್ಟುತ್ತಾರೆ ಎಂಬುದು ಸುಳ್ಳಾಗಿದೆ. ಭಾರತದಲ್ಲಿನ ಆ್ಯಪಲ್​ ಫೋನ್​ಗಳ ಜಾಗತಿಕ ಮಾರಾಟ ಕೇವಲ 0.5ರಷ್ಟಿದೆ. ಸರ್ಕಾರದ ಮಟ್ಟದಲ್ಲಿ ಸೂಕ್ಷ್ಮ ಮಾತುಕತೆ ಮೂಲಕ ಕಂಪನಿಯ ಅಗತ್ಯತೆಯಂತಹ ಅಂಶವನ್ನು ಆಲಿಸಿದಾಗ ಐಫೋನ್​ ಪ್ರವೇಶ ಸುಲಭ ಸಾಧ್ಯವಾಗುತ್ತದೆ.

ಸುಂಕದ ಹೊರೆ: ಎರಡನೇ ಪಾಠ ಎಂದರೆ, ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ಯಾವುದೇ ದೇಶ ಕೂಡ ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. ಚೀನಾ ಅತಿ ದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದರು ಅದರ ಯಶಸ್ವಿಗೆ ರಫ್ತು ಮಾರುಕಟ್ಟೆ ಅಗತ್ಯವಿದೆ. ಅಧಿಕ ಸುಂಕ ರಕ್ಷಣೆಯೊಂದಿಗೆ ಪರ್ಯಾಯಗಳ ಆಮದು ಅಂಶ 1960ರಿಂದ ಭಾರತೀಯರ ಮನಸ್ಸಿನಲ್ಲಿದೆ. ಆದರೆ ಇದು ಅತ್ಯಂತ ಕೆಟ್ಟ ಯೋಚನೆ. ಇದು ಭಾರತವನ್ನು ಸುಂಕದ ಚಾಂಪಿಯನ್​ ಮಾಡುತ್ತದೆಯೇ ಹೊರತು ಸ್ಪರ್ಧಾತ್ಮಕ ಮಟ್ಟದಲ್ಲಿ ಸುಂಕವನ್ನು ಕಡಿಮೆ ಮಾಡುವುದಿಲ್ಲ. ಇದರಿಂದ ಭಾರತ ಜಾಗತಿಕ ಮೌಲ್ಯ ಸರಪಳಿ ಸೇರುವ ಆಶಯವನ್ನು ಹೊಂದಲು ಸಾಧ್ಯವಿಲ್ಲ. ಇದರು 24 ಟ್ರಿಲಿಯನ್​ ಡಾಲರ್​ ಜಾಗತಿಕ ವ್ಯಾಪಾರ ಸರಕಲ್ಲಿ ಶೇ 70ರಷ್ಟು ಪ್ರತಿನಿಧಿಸುತ್ತದೆ.

ಸಂಸ್ಥೆಗಳ ಕರೆತರುವ ಪ್ರಯತ್ನ: ಮೂರನೇ ಅಂಶ ಎಂದರೆ, ಉದ್ಯೋಗ ಸೃಷ್ಟಿ ಎಂದರೆ ಸಣ್ಣ ಎಂಎಸ್​ಎಂಇಗಳ ಸೃಷ್ಟಿಯಲ್ಲ. ಬದಲಾಗಿ ದೊಡ್ಡ ಕಂಪನಿಗಳು ಸಣ್ಣ ಕಂಪನಿಗಳಿಗೆ ಪೂರೈಕೆದಾರರಾಗಬೇಕಿದೆ. ಸಣ್ಣ ಕಂಪನಿಗಳು ಉದ್ಯೋಗ ಸೃಷ್ಟಿ ಮಾಡುತ್ತವೆ. ಸರ್ಕಾರವೂ ಅವರಿಗೆ ಸಾಲವನ್ನು ಖಾತ್ರಿಪಡಿಸುವ ಕೆಲಸವನ್ನು ಮಾಡಬೇಕಿದೆ. ಆದಾಗ್ಯೂ ಕ್ರಮಗಳಳು ಇನ್ನು ದೊಡ್ಡ ಮಟ್ಟದಲಿದೆ. ಸರ್ಕಾರಗಳು ಜಾಗತಿಕ ಬ್ರಾಂಡ್​ ನಾಯಕರು ವಿಶೇಷವಾಗಿ ಚೀನಾದಲ್ಲಿ ಉತ್ಪಾದನೆಯ ಅಪಾಯದ ಚಿಂತೆ ಹೊಂದಿರುವವರನ್ನು ಕರೆತರುವ ಗುರಿಯನ್ನು ಹೊಂದಬೇಕಿದೆ.

ಬ್ರಾಂಡ್​ಗಳ ಆಕರ್ಷಣೆ: ನಾಲ್ಕನೇಯ ಅಂಶ, ದೊಡ್ಡ ಕಂಪನಿಗಳಲ್ಲಿ ಭಾರತೀಯನೇ ಇರಬೇಕು ಎಂಬ ಅವಶ್ಯಕತೆ ಇಲ್ಲ. ಒಮ್ಮೆ ಜಿವಿಸಿ ಬಂದರೆ, ಅವರು ರಾಷ್ಟ್ರೀಯ ಚಾಂಪಿಯನ್​ ಅನ್ನು ಜಾಗತಿಕ ಮಟ್ಟಕ್ಕೆ ತಲುಪಿಸುತ್ತಾರೆ. ಐಫೋನ್ ಉತ್ಪಾದನೆಯಲ್ಲಿ ಟಾಟಾ ಭಾಗವಹಿಸಿರುವುದು ಇದಕ್ಕೆ ನಿದರ್ಶನ. ಜಾಗತಿಕ ಮಾರುಕಟ್ಟೆಯಲ್ಲಿ ಯಶಸ್ವಿಯಾಗಬೇಕು ಎಂದರೆ, ಉನ್ನತ ಉತ್ಪನ್ನದ ಅವಶ್ಯಕತೆ ಇದೆ. ಭಾರತದ ಕಂಪನಿಗಳು ಸುಂಕದ ಹಿಂದೆ ಬಿದ್ದಿರುವ ಹಿನ್ನೆಲೆ ಅವು ರಕ್ಷಣೆ ಮತ್ತು ಅಭಿವೃದ್ಧಿ ಮೇಲೆ ಖರ್ಚು ಮಾಡಿ, ಉನ್ನತ ಉತ್ಪನ್ನಗಳ ಸೃಷ್ಟಿ ಮಾಡಬೇಕಿದೆ. ಆದಾಗ್ಯೂ, ಭಾರತೀಯ ಜಾಗತಿಕ ಬ್ರಾಂಡ್​ ಕೊರತೆ ಇದೆ. ಈ ಹಿನ್ನೆಲೆ ಎಲ್ಲಾ ಕಾರ್ಮಿಕ ತೀವ್ರ ವಲಯಗಳಲ್ಲಿ ಪ್ರಮುಖ ಬ್ರಾಂಡ್‌ಗಳನ್ನು ಆಕರ್ಷಿಸುವುದು. ಐಫೋನ್ ಕಥೆಯನ್ನು ಪುನರಾವರ್ತಿಸುವುದು ಮೊದಲ ಹೆಜ್ಜೆಯಾಗಿದೆ.

ಕೌಶಲ್ಯ ಕಲಿಕೆ: ಐದನೇ ಅಂಶ ಎಂದರೆ, ಭಾರತಕ್ಕೆ ಕೌಶಲ್ಯಯುತ ಜನಸಂಖ್ಯೆ ಬೇಕಿದೆ. ಈ ಹಿನ್ನೆಲೆ ಕುದುರೆ ಕೊಳ್ಳುವ ಮೊದಲೇ ಗಾಡಿ ಕೊಳ್ಳಬಾರದು. ಐಫೋನ್​ ಫ್ಯಾಕ್ಟರಿಯಲ್ಲಿ ಬಹುತೇಕ ಮಹಿಳೆಯರಿಗೆ ಅವರ ಮೊದಲ ಉದ್ಯೋಗವಾದರೂ ಕೇವಲ 4-6 ವಾರದ ತರಬೇತಿ ಅವಶ್ಯಕವಾಗಿದೆ. ನಮ್ಮ ತರಬೇತಿ ಸಂಸ್ಥೆಗಳು (ಐಟಿಐ ಮತ್ತು ಕೌಶಲ್ಯ ಮಿಷನ್​) ಕೈಗಾರಿಕೆಗಳೊಂದಿಗೆ ಸಂಪರ್ಕದಲ್ಲಿಲ್ಲ. ಈ ಹಿನ್ನೆಲೆ ಅಪ್ರೆಂಟಿಸ್ಶಿಪ್​, ಇಂಟರ್ನ್​ಶಿಪ್​ ಮತ್ತು ಉದ್ಯೋಗದ ದಾರಿಯಲ್ಲಿ ತರಬೇತಿ ನೀಡಬೇಕಿದೆ.

ಯೋಜನೆ ಸದ್ಬಳಕೆ: ಆರನೇ ಅಂಶ, ಐಫೋನ್​ ಕಥೆಗಳು ಪಿಎಲ್​ಐ ಯೋಜನೆ (ಉತ್ಪಾದನಾ ಸಂಬಂಧಿತ ಪ್ರೋತ್ಸಾಹ) ಬಳಕೆಯ ಸರಿಯಾದ ಹಾದಿಯನ್ನು ತೋರಿಸುತ್ತದೆ. ಚೀನಾ, ವಿಯೆಟ್ನಾಂ ಮತ್ತು ಇತರ ಸ್ಪರ್ಧಿಗಳ ವಿರುದ್ಧ ಭಾರತ ವೆಚ್ಚದ ಅಸಾಮರ್ಥ್ಯಗಳನ್ನು ಹೊಂದಿದೆ. ಪಿಎಲ್​ಐ ಎಂಬುದು ಸಬ್ಸಿಡಿ ಅಲ್ಲ. ಆದರೆ ಇದು ಹೆಚ್ಚಿನ ಭೂಮಿ, ಕಾರ್ಮಿಕ, ಶಕ್ತಿ ಮತ್ತು ಸಾರಿಗೆ ವೆಚ್ಚಗಳ ಪ್ರಮಾಣೀಕರಿಸಬಹುದಾದ ಅನಾನುಕೂಲಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ವಿಶ್ವ ವ್ಯಾಪಾರ ಸಂಸ್ಥೆ ನಿಯಮಗಳ ಪ್ರಕಾರ ಇದು ರಫ್ತಿಗೆ ಪ್ರತಿಫಲ ನೀಡುವುದಿಲ್ಲ. ಈ ಹಿನ್ನೆಲೆ, ಸ್ಮಾರ್ಟ್‌ಫೋನ್ ಪಿಎಲ್‌ಐ ಬಹಳ ಮಹತ್ವಾಕಾಂಕ್ಷೆಯ ಉತ್ಪಾದನಾ ಗುರಿಗಳನ್ನು ಜಾಣ್ಮೆಯಿಂದ ಕೂಡಿದೆ. ಈ ಮೂಲಕ ರಫ್ತು ಮತ್ತು ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಳ ಕಾಣಬಹುದು.

ಕಂಪನಿಗೆ ಅನುಕೂಲಕರ ವಾತಾವರಣ: ಏಳನೇ ಅಂಶ, ಸರ್ಕಾರ ಮತ್ತು ಇತರೆ ಕಂಪನಿಗಳ ನಡುವೆ ಪರಸ್ಪರ ಗೌರವ, ಮಾತುಕತೆ, ವಸ್ತುನಿಷ್ಠ, ವಿಶ್ವಾಸದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ನಾಗರಿಕ ಸೇವಕರು ಮತ್ತು ಆಪಲ್ ಕಾರ್ಯನಿರ್ವಾಹಕರ ಮುಕ್ತ ಮನಸ್ಸಿನ ತಂಡ ಕೇವಲ 15 ತಿಂಗಳ ತಾಳ್ಮೆಯ ಮಾತುಕತೆಯಿಂದ ಅವರು ತಮ್ಮ ಅಹಂಕಾರವನ್ನು ಹೊರಗಿಟ್ಟು ಬಂದರು.

ಭಾರತ ಉತ್ಪಾದನೆ ವಲಯಕ್ಕೆ ಪ್ರತಿಕೂಲ ತಾಣ ಅಲ್ಲ ಎಂಬ ಜಾಗತಿಕ ಕಂಪನಿಗಳಿಗೆ ಐಫೋನ್​ ಹೊಸ ಸೂಚನೆಯನ್ನು ನೀಡಿದೆ. ಇದು ಗಾರ್ಮೆಂಟ್ಸ್​, ಶೂ, ಆಟಿಕೆ ಆಹಾರ ಸಂಸ್ಕೃರಣೆ ಸೇರಿದಂತೆ ಹಲವು ವಲಯದಲ್ಲಿ ಕಾರ್ಮಿಕ ತೀವ್ರ ವಲಯವನ್ನು ಪುನರ್​ಸ್ಥಾಪಿಸಲು ಕರೆ ನೀಡಿದೆ. ಇದಕ್ಕೆ ಸರ್ಕಾರವು ಸಕ್ರಿಯವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ವಿಯೆಟ್ನಾಂನಲ್ಲಿ ಐಪ್ಯಾಡ್​ಗಳ ತಯಾರಿಕೆಗೆ ಮನವೊಲಿಸುವ ಉದ್ದೇಶದಿಂದಾಗಿ ವಿಯೆಟ್ನಾಂ ಪ್ರಧಾನಿ ಆ್ಯಪಲ್​ನ ಮುಖ್ಯ ಕಚೇರಿಗೆ ಭೇಟಿ ನೀಡಿದ್ದರು. ಚೀನಾ ಕೂಡ ನಿರಂತರವಾಗಿ ವಿದೇಶಿ ಕಂಪನಿಗಳ ಓಲೈಕೆ ನಡೆಸುತ್ತಲೇ ಇದೆ. ಭಾರತದ ಆಡಳಿತಗಾರರು ಇದಕ್ಕೆ ಇನ್ನೂ ಮುಂದಾಗಿಲ್ಲ. ಭಾರತದ ಕೆಲವು ರಾಜ್ಯಗಳು, ಅದರಲ್ಲೂ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳು ಇದನ್ನು ಅರ್ಥಮಾಡಿಕೊಂಡಿವೆ. ಭಾರತ ಕೇವಲ ಏಷ್ಯಾ ದೇಶಗಳೊಂದಿಗೆ ಸ್ಪರ್ಧಿಸುತ್ತಿಲ್ಲ. ಜಾಗತಿಕ ಹಬ್​ ಆಗಿ ರೂಪುಗೊಳ್ಳಲು ಅದು ಮೆಕ್ಸಿಕೊ, ಅಮೆರಿಕದ ಒಹಿಯೋ ಜೊತೆಗೆ ಸ್ಪರ್ಧಿಸಬೇಕಿದೆ. ನಾವು ಒಮ್ಮೆ ಹೆಜ್ಜೆ ಹಿಂಪಡೆದರೆ, ಇದು ಆರ್ಥಿಕ ಸುಧಾರಣೆಯನ್ನು ಒತ್ತಡಕ್ಕೆ ತಳ್ಳುತ್ತೇವೆ. ಬಡ ದೇಶವನ್ನು ಮಧ್ಯಮ ವರ್ಗದ ರಾಷ್ಟ್ರವನ್ನಾಗಿ ಪರಿವರ್ತಿಸುವುದಕ್ಕಿಂತ ದೊಡ್ಡ ಬಹುಮಾನ ಏನಿದೆ ಎಂಬುದರ ಬಗ್ಗೆ ಚಿಂತಿಸಬೇಕಿದೆ.

ಲೇಖಕರು: ಗುರುಚರಣ್​ ದಾಸ್​

ಇದನ್ನೂ ಓದಿ: ಭಾರತದಲ್ಲಿ ವಿದೇಶಿಗರ ಉದ್ಯೋಗ ಹುಡುಕಾಟ ಪ್ರಮಾಣ ಶೇ 60ರಷ್ಟು ಹೆಚ್ಚಳ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.