ETV Bharat / opinion

ವೈದ್ಯ ವೃತ್ತಿಯಲ್ಲಿ ನೈತಿಕತೆಯೂ ಬಹಳ ಮುಖ್ಯ: ಪದ್ಮಶ್ರೀ ಡಾ. ಪಿ. ರಘುರಾಮ್ - Doctors Day - DOCTORS DAY

ವೈದ್ಯರ ದಿನದ ನಿಮಿತ್ತ ಪದ್ಮಶ್ರೀ ಮತ್ತು ಡಾ.ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕೃತ ಡಾ. ಪಿ. ರಘುರಾಮ್ ಅವರು ಬರೆದ ಅಂಕಣ ಇಲ್ಲಿದೆ.

ವೈದ್ಯ ವೃತ್ತಿಯಲ್ಲಿ ನೈತಿಕತೆಯೂ ಬಹಳ ಮುಖ್ಯ: ಪದ್ಮಶ್ರೀ ಡಾ. ಪಿ. ರಘುರಾಮ್
ವೈದ್ಯ ವೃತ್ತಿಯಲ್ಲಿ ನೈತಿಕತೆಯೂ ಬಹಳ ಮುಖ್ಯ: ಪದ್ಮಶ್ರೀ ಡಾ. ಪಿ. ರಘುರಾಮ್ (IANS (ಸಾಂದರ್ಭಿಕ ಚಿತ್ರ))
author img

By ETV Bharat Karnataka Team

Published : Jul 1, 2024, 7:48 PM IST

ಭಾರತ ರತ್ನ ಪ್ರಶಸ್ತಿ ಪುರಸ್ಕೃತ, ಪ್ರಖ್ಯಾತ ವೈದ್ಯ, ಸಮಾಜ ಸೇವಕ, ಶಿಕ್ಷಣ ತಜ್ಞ ಮತ್ತು ಭಾರತದ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಡಾ.ಬಿ.ಸಿ. ರಾಯ್ ಅವರ ನೆನಪಿಗಾಗಿ ಪ್ರತಿವರ್ಷ ಜುಲೈ 1 ರಂದು ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಡಾ. ಬಿ.ಸಿ. ರಾಯ್ ಅವರು ತಮ್ಮ ಜೀವನದ ಉದ್ದಕ್ಕೂ, ಭಾರತದ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಲು ದಣಿವರಿಯದೇ ಕೆಲಸ ಮಾಡಿದರು. ಈ ದಿನವು ಡಾ. ರಾಯ್ ಅವರಿಗೆ ಮಾತ್ರವಲ್ಲ, ಅವರದೇ ಮಾರ್ಗದಲ್ಲಿ ನಡೆಯುತ್ತಿರುವ, ಜನರ ಜೀವನವನ್ನು ಸುಧಾರಿಸುವ ಮತ್ತು ತಮ್ಮ ಪರಿಣತಿಯಿಂದ ಅಸಂಖ್ಯಾತ ಜೀವಗಳನ್ನು ಉಳಿಸುವ ಎಲ್ಲ ವೈದ್ಯರಿಗೂ ಸಲ್ಲಿಸುವ ಗೌರವವಾಗಿದೆ.

ನಿಖರವಾಗಿ, 33 ವರ್ಷಗಳ ಹಿಂದೆ (1991) ನಾನು ವೈದ್ಯಕೀಯ ಪದವಿ ಪಡೆದಿದ್ದೆ. ಅದು ಭಾರತದಲ್ಲಿ ವೈದ್ಯರ ದಿನವನ್ನು ಆಚರಿಸಲು ಪ್ರಾರಂಭಿಸಿದ ವರ್ಷವಾಗಿತ್ತು. ಭಾರತದಲ್ಲಿನ ವೈದ್ಯರಿಗೆ ಸಲ್ಲಿಸಬಹುದಾದ ಅತ್ಯುನ್ನತ ಪ್ರಶಸ್ತಿಯಾಗಿರುವ ಡಾ.ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿ (2017) ಪುರಸ್ಕೃತನಾಗಿರುವ ನನಗೆ ಈ ದಿನ ಇನ್ನಷ್ಟು ವಿಶೇಷವಾಗಿದೆ.

ವೈದ್ಯಕೀಯ ಭ್ರಾತೃತ್ವದ ಅಸಾಧಾರಣ ಬದ್ಧತೆ ಮತ್ತು ಅವಿರತ ಸಮರ್ಪಣೆ ಗುರುತಿಸಲು ಇದು ಮಹತ್ವದ ದಿನವಾಗಿದೆ. "ವೈದ್ಯೋ ನಾರಾಯಣೋ ಹರಿ" ಎಂಬ ಪ್ರಾಚೀನ ಸಂಸ್ಕೃತ ನುಡಿಗಟ್ಟು ತುಂಬಾ ಅರ್ಥಗರ್ಭಿತವಾಗಿದೆ. ಇದರರ್ಥ ವೈದ್ಯ ಎಂದರೆ ಭಗವಾನ್ ನಾರಾಯಣ ಮತ್ತು ಭಗವಾನ್ ಹರಿ. ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ, ವೈದ್ಯರನ್ನು 'ದೇವರು' ಎಂದೇ ಭಾವಿಸಲಾಗುತ್ತದೆ.

ವೈದ್ಯರು ತಮ್ಮ ಜೀವ ಉಳಿಸುವ ದೇವರು ಎಂದು ರೋಗಿಗಳು ನಂಬುತ್ತಾರೆ. ಅನೇಕ ಸಂದರ್ಭಗಳಲ್ಲಿ ಅವರು ಗೌಪ್ಯ ಮಾಹಿತಿಯನ್ನು ಕೂಡ ವೈದ್ಯರ ಮುಂದೆ ಬಹಿರಂಗಪಡಿಸುತ್ತಾರೆ. ತಮ್ಮ ಹತ್ತಿರದ ಕುಟುಂಬ ಸದಸ್ಯರಿಗೂ ಹೇಳದ ವಿಷಯಗಳನ್ನು ರೋಗಿಗಳು ವೈದ್ಯರಿಗೆ ಹೇಳಿಕೊಳ್ಳುತ್ತಾರೆ. ಇದಲ್ಲದೇ, ಅವರು ತಮ್ಮ ದೇಹವನ್ನು ಪರೀಕ್ಷೆಗೆ ಒಡ್ಡುತ್ತಾರೆ ಮತ್ತು ಸಂಪೂರ್ಣ ಅಪರಿಚಿತರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ.

ಬೇರೆ ಯಾವುದೇ ವೃತ್ತಿಯಲ್ಲಿರುವವರು ನಿತ್ಯವೂ ಜನರಿಂದ ಈ ಮಟ್ಟದ ವಿಶ್ವಾಸ ಮತ್ತು ಅಸಾಧಾರಣ ನಂಬಿಕೆ ಅನುಭವಿಸುವುದಿಲ್ಲ. ಈ ನಂಬಿಕೆಯನ್ನು ವೈದ್ಯಕೀಯ ಭ್ರಾತೃತ್ವವು ಯಾವಾಗಲೂ ಗೌರವಿಸಬೇಕು ಮತ್ತು ರಕ್ಷಿಸಬೇಕು. ಅಲ್ಲದೇ, ಈ ಕಾರಣಕ್ಕಾಗಿಯೇ ವೈದ್ಯರು ಉನ್ನತ ಮಟ್ಟದ ನೈತಿಕ ನೀತಿ ಸಂಹಿತೆ ಪಾಲಿಸಲು ಬದ್ಧರಾಗಿದ್ದಾರೆ ಮತ್ತು ಅವರು / ಅವಳು ಬಹಳ ಸವಲತ್ತು ಪಡೆದ ಸ್ಥಾನದಲ್ಲಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ದುರದೃಷ್ಟವಶಾತ್ ಕಳೆದ ಕೆಲ ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ, ವೈದ್ಯರು ಮತ್ತು ರೋಗಿಗಳ ನಡುವಿನ ಪರಸ್ಪರ ನಂಬಿಕೆಯಲ್ಲಿ ಒಂದಿಷ್ಟು ಕುಸಿತ ಕಂಡು ಬಂದಿದೆ. ಕಳೆದುಹೋದ ನಂಬಿಕೆಯನ್ನು ಪುನಃ ಸ್ಥಾಪಿಸುವಲ್ಲಿ ರೋಗಿಗಳು ಮತ್ತು ವೈದ್ಯರು ಇಬ್ಬರೂ ಒಟ್ಟಾಗಿ ಪ್ರಯತ್ನಿಸುವುದು ಇಂದಿನ ಅಗತ್ಯವಾಗಿದೆ. ಈ ಅನನ್ಯ ಸಂಬಂಧವನ್ನು ಬಲಪಡಿಸಲು ವೈದ್ಯರ ದಿನಕ್ಕಿಂತ ಉತ್ತಮ ದಿನ ಮತ್ತೊಂದಿರಲಾರದು.

ಈ ಕೌಶಲ್ಯಗಳು ಅತ್ಯಗತ್ಯ: ಕ್ಲಿನಿಕಲ್ ವೃತ್ತಿ ಸಾಮರ್ಥ್ಯ ಮತ್ತು ಪರಿಣಾಮಕಾರಿ ಸಂವಹನವು ಪ್ರತಿಯೊಬ್ಬ ವೈದ್ಯರಿಗೆ ಇರಬೇಕಾದ ಅತ್ಯಗತ್ಯ ಕೌಶಲ್ಯಗಳಾಗಿವೆ. ಈ ದಿನ ಮತ್ತು ಯುಗದಲ್ಲಿ, ವೈದ್ಯರು-ರೋಗಿಯ ಸಂಬಂಧವು ತೀವ್ರ ಒತ್ತಡಕ್ಕೆ ಒಳಗಾಗುತ್ತಿರುವಾಗ, ಸಂವಹನ ಕೌಶಲ್ಯಗಳು ಹೆಚ್ಚು ಮುಖ್ಯವಾಗುತ್ತವೆ.

ಪಾಶ್ಚಿಮಾತ್ಯ ದೇಶಗಳಲ್ಲಿ ವೈದ್ಯಕೀಯ ಪಠ್ಯಕ್ರಮದಲ್ಲಿ ನೈತಿಕತೆ ಮತ್ತು ಸಂವಹನ ಕೌಶಲ್ಯಗಳು ಸ್ಥಾನವನ್ನು ಹೊಂದಿದ್ದರೂ, ಇದು ಇತ್ತೀಚಿನವರೆಗೂ ಭಾರತೀಯ ವೈದ್ಯಕೀಯ ಪಠ್ಯಕ್ರಮದ ಭಾಗವಾಗಿರಲಿಲ್ಲ. ಆದಾಗ್ಯೂ, 2019 ರಲ್ಲಿ, ರಾಷ್ಟ್ರೀಯ ವೈದ್ಯಕೀಯ ಆಯೋಗವು ಹೊಸ ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣ ಪಠ್ಯಕ್ರಮದಲ್ಲಿ (ಸಿಬಿಎಂಇ) ವೈದ್ಯಕೀಯ ನೈತಿಕತೆಯನ್ನು ಸೇರಿಸಿತು. "ವರ್ತನೆ, ನೈತಿಕತೆ ಮತ್ತು ಸಂವಹನ" (ಎಇಟಿಸಿಒಎಂ) ಮಾಡ್ಯೂಲ್ ವೈದ್ಯರಿಗೆ ಅಗತ್ಯವಾದ ಜ್ಞಾನ, ವರ್ತನೆಗಳು ಮತ್ತು ಮೌಲ್ಯಗಳನ್ನು ಬೆಳೆಸುವ ಗುರಿ ಹೊಂದಿದೆ.

ವೈದ್ಯಕೀಯ ನೀತಿಶಾಸ್ತ್ರದ ಹೊರತಾಗಿ, ವ್ಯಕ್ತಿಯೊಬ್ಬ ಎಷ್ಟೇ ಬುದ್ಧಿವಂತ, ಜ್ಞಾನಿ ಮತ್ತು ನುರಿತವನಾಗಿದ್ದರೂ, ಜೀವನದ ಪ್ರತಿಯೊಂದು ಅಂಶದಲ್ಲೂ ನೈತಿಕವಾಗಿರುವುದು ಬಹಳ ಮುಖ್ಯ. ನೈತಿಕತೆ ಇಲ್ಲದಿದ್ದರೆ ನಮ್ಮ ಯಾವುದೇ ಸಾಧನೆಗಳಿಗೆ ಯಾವುದೇ ಮಹತ್ವವಿರುವುದಿಲ್ಲ. ಆದ್ದರಿಂದ, ಉತ್ತಮ ಮನುಷ್ಯನಾಗಿರುವುದು ಬಹಳ ಮುಖ್ಯ. ಈ ಕ್ಷೇತ್ರದಲ್ಲಿ ಸ್ಪರ್ಧೆ ತುಂಬಾ ಕಡಿಮೆ ಇದ್ದು, ಅವಕಾಶಗಳು ಹೇರಳವಾಗಿವೆ. ಇತ್ತೀಚೆಗೆ ದಿವಂಗತರಾದ ರಾಮೋಜಿ ಸಮೂಹದ ಹಿಂದಿನ ಅಧ್ಯಕ್ಷರಾದ ಶ್ರೀ ರಾಮೋಜಿ ರಾವ್ ಅವರ ಬಗ್ಗೆ ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ. ಅವರು ನೈತಿಕತೆಯ ಪ್ರತಿರೂಪವಾಗಿದ್ದರು ಮತ್ತು ಭಾರತದ ಆದರ್ಶ ನಾಗರಿಕರಾಗಿದ್ದರು.

ವೈದ್ಯರು ಸಮಾಜದಲ್ಲಿ ಆದರ್ಶಪ್ರಾಯರಾಗಿರಬೇಕು. ವೈದ್ಯಕೀಯ, ಶಸ್ತ್ರಚಿಕಿತ್ಸೆಯ ಕಲೆ ಮತ್ತು ವಿಜ್ಞಾನದ ಕೆಲಸವು ಪೈಪೋಟಿಯಿಂದ ಮಾಡುವ ಕೆಲಸವಲ್ಲ. ಕೇವಲ ವೈದ್ಯರಾಗುವುದಕ್ಕಿಂತ ಜೀವನದಲ್ಲಿ ಇನ್ನೂ ಹಲವಾರು ಮಹತ್ವದ ಅಂಶಗಳಿವೆ. ಅಂದರೆ ಯಾವುದೋ ಹವ್ಯಾಸವೊಂದನ್ನು ಅಳವಡಿಸಿಕೊಳ್ಳಬೇಕು ಎಂದು ನಾನು ಹೇಳುತ್ತಿಲ್ಲ. ಇದು ಅದಕ್ಕಿಂತ ಹೆಚ್ಚು ಮಹತ್ವದ್ದಾಗಿದೆ ಮತ್ತು ಸಮುದಾಯ ಮತ್ತು ಸಮಾಜಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುವ ಅರ್ಥಪೂರ್ಣ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ.

ಒಂದು ಉದಾಹರಣೆ - ನಮ್ಮ ಜನಸಂಖ್ಯೆಯ 70% ಕ್ಕಿಂತ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಭಾರತದಲ್ಲಿ 6,00,000 ಹಳ್ಳಿಗಳಿವೆ. ಸಿರಿವಂತರಾಗಿರುವ 6 ಲಕ್ಷ ನಾಗರಿಕರು 6 ಲಕ್ಷ ಗ್ರಾಮಗಳನ್ನು ದತ್ತು ತೆಗೆದುಕೊಂಡರೆ ಭಾರತಕ್ಕೆ ನಿಜವಾಗಿಯೂ ಅಮೃತಕಾಲ ಬರಲಿದೆ. ಹೀಗೆ ಮಾಡಿದಲ್ಲಿ ಮುಂಬರುವ 25 ವರ್ಷಗಳು ನಿಸ್ಸಂದೇಹವಾಗಿ ಭಾರತದಾದ್ಯಂತ ಅಸಂಖ್ಯಾತ ಜನರ ಕನಸುಗಳು, ಗುರಿಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ಸುವರ್ಣಾವಕಾಶವಾಗಲಿವೆ ಎಂಬುದು ನನ್ನ ಆಸೆ ಮತ್ತು ಬಯಕೆಯಾಗಿದೆ.

ವೈದ್ಯರು ಕಾಲಕಾಲಕ್ಕೆ ತಮ್ಮ ವೃತ್ತಿಜೀವನದ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು. ಸ್ತನ ಕ್ಯಾನ್ಸರ್ ಅನ್ನು 'ಜಯಿಸಿದ' ನನ್ನ ತಾಯಿಯನ್ನು ನೋಡಿಕೊಳ್ಳುವುದು ಮತ್ತು ನನ್ನ ತಾಯ್ನಾಡಿಗೆ ಸೇವೆ ಸಲ್ಲಿಸುವುದು ಒಂದು ಆಶೀರ್ವಾದವಾಗಿದೆ. ನನ್ನ ದತ್ತು ಗ್ರಾಮದಲ್ಲಿ (ಇಬ್ರಾಹಿಂಪುರ) ವೈಯಕ್ತಿಕ ಲೋಕೋಪಕಾರದ ಮೂಲಕ ಜೀವನವನ್ನು ಪರಿವರ್ತಿಸುವ ದತ್ತಿ ಉಪಕ್ರಮಗಳನ್ನು ಮುನ್ನಡೆಸುವುದರ ಜೊತೆಗೆ ಸುಮಾರು ಎರಡು ದಶಕಗಳ ಕಾಲ ನವೀನ ಮತ್ತು ಪರಿಣಾಮಕಾರಿ ಸ್ತನ ಕ್ಯಾನ್ಸರ್ ವಕಾಲತ್ತು ಅಭಿಯಾನದ ಮೂಲಕ 'ಆರಂಭಿಕ ಪತ್ತೆ' ಪ್ರಾಮುಖ್ಯತೆಯ ಬಗ್ಗೆ ಹೆಚ್ಚು ಅಗತ್ಯವಾದ ಜಾಗೃತಿ ಮೂಡಿಸುವುದು ನನಗೆ ಹೆಚ್ಚಿನ ತೃಪ್ತಿಯನ್ನು ನೀಡಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಧ್ಯಾನ, ಕೃತಜ್ಞತೆ ವ್ಯಕ್ತಪಡಿಸುವುದು ಮತ್ತು ಪ್ರಾರ್ಥನಾಪೂರ್ವಕವಾಗಿರುವುದು - ಇವೆಲ್ಲವೂ ನನ್ನ ಕನಸುಗಳನ್ನು ವ್ಯಕ್ತಪಡಿಸಲು ನನಗೆ ಅನುವು ಮಾಡಿಕೊಟ್ಟಿವೆ. ಇದು ನನ್ನ ಜೀವನವನ್ನು ಅನೇಕ ರೀತಿಯಲ್ಲಿ ಶ್ರೀಮಂತಗೊಳಿಸಿದೆ.

ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ, ಹಿಪೊಕ್ರೆಟಿಕ್ ಪ್ರತಿಜ್ಞೆಯ (Hippocratic oath) ಒಂದು ಪ್ರಮುಖ ಅಂಶವನ್ನು ನಾನು ನೆನಪಿಸಿಕೊಳ್ಳಲು ಬಯಸುತ್ತೇನೆ. ಅದೇನೆನದರೆ- 'ರೋಗಿಯ ಒಳಿತನ್ನು ನನ್ನ ಅತ್ಯುನ್ನತ ಆದ್ಯತೆಯಾಗಿ ಇಟ್ಟುಕೊಳ್ಳುವುದು'.

1953 ರಲ್ಲಿ ಪ್ರಸಿದ್ಧ ವೈದ್ಯ ಸರ್ ರಾಬರ್ಟ್ ಹಚಿಸನ್ ಬರೆದ ಒಂದು ಸಂದೇಶವು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ. ಸುಮಾರು 70 ವರ್ಷಗಳ ಹಿಂದೆ ಅವರು ಹೇಳಿದ್ದು ಇಂದಿಗೂ ಪ್ರಸ್ತುತವಾಗಿದೆ. ಅದೇನೆಂದರೆ- "ಹೊಸದರ ಬಗ್ಗೆ ಅತಿಯಾದ ಉತ್ಸಾಹ ಮತ್ತು ಹಳೆಯದರ ಬಗ್ಗೆ ತಿರಸ್ಕಾರ; ವಿವೇಕಕ್ಕಿಂತ ಜ್ಞಾನಕ್ಕೆ ಹೆಚ್ಚು ಆದ್ಯತೆ, ಕಲೆಗಿಂತ ವಿಜ್ಞಾನಕ್ಕೆ ಆದ್ಯತೆ, ಸಾಮಾನ್ಯ ಜ್ಞಾನಕ್ಕಿಂತ ಬುದ್ಧಿವಂತಿಕೆಗೆ ಆದ್ಯತೆ ನೀಡುವುದರಿಂದ; ರೋಗಿಗಳನ್ನು ಪ್ರಕರಣಗಳಾಗಿ ಪರಿಗಣಿಸುವುದರಿಂದ; ಮತ್ತು ಒಂದು ರೋಗವನ್ನು ಅದರ ಸಹಿಷ್ಣುತೆಗಿಂತ ಹೆಚ್ಚು ಭೀಕರವಾಗಿಸದಿರುವ ಮೂಲಕ, ದೇವರೇ, ನಮ್ಮನ್ನು ರಕ್ಷಿಸಿ".

ಲೇಖನ: ಡಾ. ಪಿ. ರಘುರಾಮ್, ಪದ್ಮಶ್ರೀ ಮತ್ತು ಡಾ.ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕೃತರು, ಸ್ಥಾಪಕ ನಿರ್ದೇಶಕ, ಕಿಮ್ಸ್-ಉಷಾಲಕ್ಷ್ಮಿ ಸ್ತನ ರೋಗಗಳ ಆಸ್ಪತ್ರೆ, ಹೈದರಾಬಾದ್.

ಇದನ್ನೂ ಓದಿ : ಯುಎಸ್​ ಅಧ್ಯಕ್ಷೀಯ ಚುನಾವಣೆ: ಮಂಕಾದ ಬೈಡನ್, ಉತ್ಸಾಹದಲ್ಲಿ ಟ್ರಂಪ್ - US Presidential Election

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.