ETV Bharat / lifestyle

ನಿಮಗೆ ಅತಿಯಾಗಿ ಕೂದಲು ಉದುರುತ್ತಿದೆಯೇ?: ಈ ಪ್ಯಾಕ್ ಹಾಕಿದರೆ ಲಭಿಸುತ್ತೆ ಉತ್ತಮ ಫಲಿತಾಂಶ! - HAIR FALL PREVENTION TIPS

Hair Fall Prevention Tips in Kannada: ನಿಮಗೆ ಅತಿಯಾಗಿ ಕೂದಲು ಉದುರುವ ಚಿಂತೆ ಕಾಡುತ್ತಿದೆಯೇ? ಈ ಸರಳ ಟಿಪ್ಸ್​ ಅನುಸರಿಸಿದರೆ ಸಾಕು, ನಿಮ್ಮ ಕೂದಲು ಉದುರುವಿಕೆಯ ಸಮಸ್ಯೆ ದೂರವಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

HAIR CARE TIPS FOR WOMEN  HAIR LOSS TRATMENTS  HOW TO STOP HAIR LOSS  HAIR FALL PREVENTION TIPS
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Oct 17, 2024, 12:41 PM IST

Updated : Oct 17, 2024, 2:36 PM IST

Hair Fall Prevention Tips in Kannada: ಮೊಸರು ತಿನ್ನಲು ಮಾತ್ರವಲ್ಲದೇ ಕೂದಲಿಗೂ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳಿದ್ದಾರೆ. ಮೊಸರಿನಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಲ್ಯಾಕ್ಟಿಕ್ ಆಮ್ಲ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮೊಸರಿನೊಂದಿಗೆ ಸೇರಿಸಿ ತಯಾರಿಸುವ ಕೆಲವು ಹೇರ್ ಪ್ಯಾಕ್‌ಗಳು ಕೂದಲಿನ ವಿವಿಧ ಸಮಸ್ಯೆಗಳನ್ನು ನಿವಾರಿಸುತ್ತವೆ. ಜೊತೆಗೆ ಕೂದಲಿನ ಬುಡಕ್ಕೆ ಶಕ್ತಿ ಮತ್ತು ಹೊಳಪನ್ನು ಸಹ ನೀಡುತ್ತದೆ. ಅಂತಹ ಕೆಲವು ಪ್ಯಾಕ್‌ಗಳನ್ನು ನಾವು ನಿಮಗಾಗಿ ತಂದಿದ್ದೇವೆ.

ಮೊಸರು, ಉದ್ದಿನಬೇಳೆ ಪ್ಯಾಕ್: ನಿಮ್ಮ ಕೂದಲನ್ನು ದಪ್ಪ ಮತ್ತು ಸ್ಟ್ರಾಂಗ್ ಮಾಡಲು ನೀವು ಬಯಸಿದರೆ ಈ ಪ್ಯಾಕ್ ಪ್ರಯತ್ನಿಸಬಹುದು.

ಅಗತ್ಯವಿರುವ ಸಾಮಗ್ರಿ:

✭ ಉದ್ದಿನಬೇಳೆ - ಅರ್ಧ ಕಪ್

✭ ಮೊಸರು - ಅರ್ಧ ಕಪ್

ಪ್ಯಾಕ್ ಸಿದ್ಧಪಡಿಸುವುದು ಹೀಗೆ: ರಾತ್ರಿಯಿಡೀ ಉದ್ದಿನ ಬೇಳೆಯನ್ನು ನೆನೆಸಿ ಮತ್ತು ಬೆಳಗ್ಗೆ ಮೃದುವಾದ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮೊಸರಿಗೆ ಸೇರಿಸಿ. ಮತ್ತು ಮೊಸರಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನೆತ್ತಿ ಮತ್ತು ಕೂದಲಿಗೆ ಅನ್ವಯಿಸಿ. ಅರ್ಧ ಗಂಟೆಯ ನಂತರ ಸೌಮ್ಯವಾದ ಶಾಂಪೂ ಬಳಸಿ ಸ್ನಾನ ಮಾಡಿ. ಈ ಪ್ಯಾಕ್ ಕೂದಲನ್ನು ದೃಢವಾಗಿ, ಮೃದುವಾಗಿ ಮತ್ತು ಸುಂದರವಾಗಿ ಮಾಡುತ್ತದೆ.

✭ ಉತ್ತಮ ಫಲಿತಾಂಶಗಳಿಗಾಗಿ ವಾರಕ್ಕೆ ಎರಡು ಬಾರಿ ಈ ಪ್ಯಾಕ್ ಅನ್ನು ಅನ್ವಯಿಸಿ.

ಮೊಸರು ಮತ್ತು ಮೆಂತ್ಯ ಪ್ಯಾಕ್: ನೀವು ಸ್ಪ್ಲಿಟ್ ಕೂದಲು ಮತ್ತು ಅತಿಯಾದ ಕೂದಲು ಉದುರುವಿಕೆ ಅನುಭವಿಸುತ್ತಿದ್ದೀರಾ? ಹಾಗಾದರೆ, ಈ ಪ್ಯಾಕ್ ಟ್ರೈ ಮಾಡಿ ನೋಡಿ.

ಅಗತ್ಯವಿರುವ ಪದಾರ್ಥಗಳು:

✭ ಮೊಸರು - ಒಂದು ಕಪ್

✭ ಮೆಂತ್ಯ - ಕಾಲು ಕಪ್

ಪ್ಯಾಕ್ ತಯಾರಿಸುವುದು ಹೇಗೆ?: ಮೊದಲು ಮೆಂತ್ಯ ಬೀಜಗಳನ್ನು (Fenugreek Seeds) ನಿಧಾನವಾಗಿ ಪುಡಿ ಮಾಡಿ. ಹೀಗೆ ಮಾಡಿದ ಪುಡಿಯನ್ನು ಮೊಸರಿಗೆ ಸೇರಿಸಿ ದಪ್ಪವಾಗುವವರೆಗೆ ಕಲಸುತ್ತಿರಬೇಕು. ಈ ಪೇಸ್ಟ್ ಅನ್ನು ಕೂದಲಿನ ತುದಿಯಿಂದ ನೆತ್ತಿಗೆ ಹಚ್ಚಿ ಒಂದು ಗಂಟೆ ಇಡಬೇಕು. ನಂತರ ನಿಮ್ಮ ತಲೆಯನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ ಮತ್ತು ಕಂಡಿಷನರ್ ಅನ್ವಯಿಸಿ. ಈ ಪ್ಯಾಕ್‌ನಲ್ಲಿ ಬಳಸಲಾಗುವ ಮೆಂತ್ಯವು ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ. ಮತ್ತು ಸೀಳು ತುದಿಗಳನ್ನು ಕಡಿಮೆ ಮಾಡುತ್ತದೆ. ಇದು ಅತಿಯಾದ ಕೂದಲು ಉದುರುವಿಕೆಯನ್ನು ತಡೆಯುತ್ತದೆ.

ನೆನಪಿನಲ್ಲಿ ಇಡಬೇಕಾದ ಅಂಶಗಳು:

✭ ಒಣ ಕೂದಲಿನ ಮೇಲೆ ಮಾತ್ರ ಈ ಪ್ಯಾಕ್ ಅನ್ವಯಿಸಿ.

✭ ಈ ಪ್ಯಾಕ್ ಅನ್ನು ವಾರಕ್ಕೊಮ್ಮೆ ಪ್ರಯತ್ನಿಸಬಹುದು.

✭ ಈ ಪ್ಯಾಕ್ ಅನ್ನು ಅನ್ವಯಿಸುವುದಕ್ಕೂ ಮುನ್ನ ಅಂದ್ರೆ, ಕನಿಷ್ಠ ಎರಡು ಗಂಟೆಗಳ ಮೊದಲು ತಯಾರಿಸಿ ಇಟ್ಟುಕೊಂಡಿರಬೇಕು.

ಮೊಸರು ಕೂದಲ ಸಮಸ್ಯೆಯನ್ನು ಹೇಗೆ ನಿವಾರಿಸುತ್ತದೆ. ಈ ನೈಸರ್ಗಿಕ, ಸುಲಭವಾಗಿ ಮಾಡಬಹುದಾದ ಹೇರ್ ಪ್ಯಾಕ್‌ಗಳನ್ನು ಪ್ರಯತ್ನಿಸಿ ಮತ್ತು ನಿಮ್ಮ ಕೂದಲಿನ ಮೇಲೆ ಆಗುವ ಯಾವುದೇ ಅಡ್ಡಪರಿಣಾಮಗಳಿಂದ ಮುಕ್ತವಾಗಿಡಲು ಸಾಧ್ಯವಾಗುತ್ತದೆ. ಆದರೆ, ನೀವು ಬಳಸುವ ಶಾಂಪೂ ಕಡಿಮೆ ಸಾಂದ್ರತೆ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾದ ಅಂಶವಾಗಿದ ಎಂದು ತಜ್ಞರು ಸಲಹೆ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ಸಂರ್ಕಿಸಬಹುದು:

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

Last Updated : Oct 17, 2024, 2:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.