ಫ್ಯಾಷನ್ ಎಂಬುದು ಬೃಹತ್ ಉದ್ಯಮ. ಒಂದು ದೇಶದ, ಪ್ರದೇಶದ ಸಂಸ್ಕೃತಿಯೂ ಹೌದು. ಜಗತ್ತಿನ ಅನೇಕ ತಾಣಗಳು ಫ್ಯಾಷನ್ಗೆ ತಮ್ಮದೇ ಆದ ಕೊಡುಗೆ ನೀಡಿವೆ. ಆಧುನಿಕ ಜಗತ್ತಿನಲ್ಲಿ ಹೊಸ ತಾಣಗಳ ಹುಡುಕಾಟದ ಮೂಲಕ ಫ್ಯಾಷನ್ ವಿಶಿಷ್ಠ ಟ್ರೆಂಡ್ಗಳ ಅವಿಷ್ಕಾರಕ್ಕೆ ಪ್ರೇರಣೆಯಾಗುತ್ತದೆ. ಅದಕ್ಕೂ ಮೊದಲು ಜಗತ್ತಿನ ಪ್ರಮುಖ ಫ್ಯಾಷನ್ ತಾಣಗಳೆಂದು ಹೆಸರು ಗಳಿಸಿದ ಪ್ರಮುಖ 6 ನಗರಗಳಿವೆ. ಈ ತಾಣಗಳು ಇಂದಿಗೂ ಈ ಘಮಲು ಕಳೆದುಕೊಳ್ಳದೇ ಫ್ಯಾಷನ್ ಲೋಕಕ್ಕೆ ಹೊಸ ಹೊಸ ವ್ಯಾಖ್ಯಾನ ನೀಡುತ್ತಿವೆ.
ಪ್ಯಾರಿಸ್(ಫ್ರಾನ್ಸ್): ಇದು ಜಗತ್ತಿನ ಫ್ಯಾಷನ್ ರಾಜಧಾನಿ. ಪ್ಯಾರಿಸ್ನ ಫ್ಯಾಷನ್ ಲೋಕ ಅಚ್ಚಳಿಯದ ಸೊಬಗು ಮತ್ತು ಉತ್ಕೃಷ್ಟತೆಯನ್ನು ಹೊಂದಿದೆ. ಇಲ್ಲಿನ ಫ್ಯಾಷನ್ ಇತಿಹಾಸ ಪ್ರತಿಯೊಬ್ಬರ ಅಭಿರುಚಿಗೆ ತಕ್ಕಂತಿದೆ. ಇಲ್ಲಿನ ತಾಣಗಳು ಅದ್ಭುತ ಶಾಪಿಂಗ್ ಅನುಭವ ನೀಡುತ್ತವೆ.
ಟೋಕಿಯೋ(ಜಪಾನ್): ಸಾಂಪ್ರದಾಯಿಕ ಮತ್ತು ಹೊಸತನದ ಸೊಬಗಿನಿಂದ ಇಲ್ಲಿನ ಫ್ಯಾಷನ್ ಕೂಡಿದೆ. ಹೊಸ ಟ್ರೆಂಡ್ಗಳನ್ನು ಹುಟ್ಟುಹಾಕುವಲ್ಲಿ ಫ್ಯಾಷನ್‌ಪ್ರಿಯರಿಗೆ ಸ್ವರ್ಗ ಎನ್ನಬಹುದು. ಟೋಕಿಯೋದ ರಸ್ತೆಗಳು ಕೂಡ ಅತ್ಯಂತ ದುಬಾರಿ ಬ್ರ್ಯಾಂಡ್ಗಳಿಂದ ಕೂಡಿದ ಸ್ಟೈಲಿಶ್ ಉತ್ಪನ್ನಗಳ ಮೂಲಕ ಗಮನ ಸೆಳೆಯುತ್ತವೆ.
ಮಿಲನ್(ಇಟಲಿ): ಇಲ್ಲಿನ ಕರಕುಶಲತೆ ಮತ್ತು ಸೌಂದರ್ಯ ಫ್ಯಾಷನ್‌ಪ್ರಿಯರನ್ನು ಮೋಡಿ ಮಾಡದಿರದು. ಐತಿಹಾಸಿಕ ಮತ್ತು ಡಿಸೈನರ್ ಬೊಟೀಕ್ಗಳು ಹೊಸ ಶೈಲಿಯ ಹುಟ್ಟಿಗೆ ಕಾರಣವಾಗುತ್ತಿವೆ.
ಸಿಯೋಲ್(ದಕ್ಷಿಣ ಕೊರಿಯಾ): ಸಿಯೋಲ್ ಜಾಗತಿಕ ಫ್ಯಾಷನ್ ಲೋಕದ ಶಕ್ತಿಶಾಲಿ ಮನೆಯಾಗಿ ರೂಪುಗೊಳ್ಳುತ್ತಿದೆ. ಯುವ ಜನತೆಯ ಟ್ರೆಂಡ್ಗೆ ತಕ್ಕಂತಹ ಸ್ಥಳೀಯ ಡಿಸೈನರ್ಗಳು ಅಂತಾರಾಷ್ಟ್ರೀಯ ಬ್ರ್ಯಾಂಡ್ಗಳನ್ನು ಹುಟ್ಟು ಹಾಕುತ್ತಿದ್ದಾರೆ. ಇದು ಜಗತ್ತಿನಲ್ಲಿ ಕೆ-ಫ್ಯಾಷನ್ ಪರಿಕಲ್ಪನೆಯ ಉದಯಕ್ಕೂ ಕಾರಣವಾಗಿದೆ.
ಲಂಡನ್(ಯುಕೆ): ಐಷಾರಾಮಿ ಬ್ರ್ಯಾಂಡ್ಗಳು, ಹೊಸ ಸೃಷ್ಟಿಯ ಪ್ರದರ್ಶನಗಳನ್ನು ಇಲ್ಲಿನ ಹೈ ಸ್ಟ್ರಿಟ್ ಫ್ಯಾಷನ್ಗಳಲ್ಲಿ ಕಾಣಬಹುದು.
ನ್ಯೂಯಾರ್ಕ್ ಸಿಟಿ(ಯುಎಸ್ಎ): ಈ ನಗರಿಯಲ್ಲಿ ಸಂಸ್ಕೃತಿ ಮತ್ತು ಕ್ರಿಯಾಶೀಲತೆಯನ್ನು ನೀವು ಕಾಣಬಹುದು. ಇಲ್ಲಿನ ಶಾಪಿಂಗ್ ಅನುಭವವಂತೂ ಹೊಸ ಅನುಭವವನ್ನೇ ಮೂಡಿಸುತ್ತದೆ. ಫ್ಯಾಷನ್‌ಪ್ರಿಯರಿಗೆ ಡೈನಾಮಿಕ್ ಶಾಪಿಂಗ್ ತಾಣ ಇದಾಗಿದೆ. ಜಗತ್ತಿನ ಅನೇಕ ಫ್ಯಾಷನ್‌ಪ್ರಿಯರ ಆಯ್ಕೆಗನುಗುಣವಾದ ಶೈಲಿಗಳನ್ನು ಇಲ್ಲಿ ನೋಡಬಹುದು.(ಎಎನ್ಐ)