ಕೀವ್: ಉಕ್ರೇನ್ ಅನ್ನು ರಷ್ಯಾ ನಾಶ ಮಾಡಲು ಬಯಸುತ್ತಿದೆ. ಆದರೆ, ಯುದ್ಧ ಇದೀಗ ಅವರಿಗೆ ತಿರುಗುಬಾಣವಾಗಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲನ್ಶ್ಕಿ ತಿಳಿಸಿದ್ದಾರೆ. ಉಕ್ರೇನ್ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ವಿಡಿಯೋದಲ್ಲಿ ಮಾತನಾಡಿರುವ ಅವರು, ಕೀವ್ ರಷ್ಯಾ ಮೇಲೆ ಆಶ್ಚರ್ಯಕಾರಿ ಆಕ್ರಮಣ ಆರಂಭಿಸಿದೆ ಎಂದಿದ್ದಾರೆ.
ಸೋವಿಯತ್ ಯುನಿಯನ್ನ ದೀರ್ಘ ಯುದ್ಧದಿಂದ 1991ರಂದು ಬೇರ್ಪಟ್ಟು ಕೀವ್ ಇಂದು ಸ್ವಾತಂತ್ರ್ಯ ಆಚರಣೆ ಮಾಡುತ್ತಿದೆ. ರಷ್ಯಾ ಪೂರ್ವದ ಉಕ್ರೇನ್ ಮೇಲೆ ಕಣ್ಣಿಟ್ಟಿದೆ. ಉಕ್ರೇನ್ ರಷ್ಯಾದ ಕುರ್ಸುಕ್ ಪ್ರಾಂತ್ಯದ ಮೇಲೆ ದಾಳಿ ನಡೆಸಿದೆ ಎಂದು ಹೇಳಿದರು.
ಈ ವಾರದ ಆರಂಭದಲ್ಲಿ ಭೇಟಿ ನೀಡಿದ್ದ ಝೆಲನ್ಸಿ ಸುಮಿ ಪ್ರದೇಶದ ನಿರ್ಜನ ಅರಣ್ಯದಲ್ಲಿ ಚಿತ್ರಿಸಲಾಗಿರುವ ವಿಡಿಯೋದಲ್ಲಿ ಮಾತನಾಡಿರುವ ಅವರು, ಆಗಸ್ಟ್ 6ರಂದು ಉಕ್ರೇನ್ನಿಂದ ಕೆಲವು ಕಿ.ಮೀ ದೂರದಿಂದ ಗುಡ್ಡದ ಪ್ರದೇಶದಲ್ಲಿ ಉಕ್ರೇನ್ ಪ್ರದೇಶವು ರಷ್ಯಾಗೆ ಪ್ರವೇಶವನ್ನು ಮಾಡಿಸುತ್ತಿದೆ ಎಂದು ಝೆಲನ್ಸ್ಕಿ ತಿಳಿಸಿದ್ದಾರೆ.
ಮತ್ತೊಮ್ಮೆ ನಾವು ಅಚ್ಚರಿಯಾದದ್ದನ್ನು ಮಾಡುತ್ತಿದ್ದೇವೆ. ನಮ್ಮನ್ನು ನಾಶ ಮಾಡುವುದಾಗಿ ರಷ್ಯಾ 2022ರಲ್ಲಿ ಯುದ್ಧ ಆರಂಭಿಸಿತು. ಇದರ ಬದಲಾಗಿ ನಾವು ಇಂದು ಉಕ್ರೇನ್ನ 33ನೇ ಸ್ವಾತಂತ್ರ್ಯದಿನವನ್ನು ಆಚರಣೆ ಮಾಡುತ್ತಿದ್ದೇವೆ. ನಮ್ಮ ಭೂಮಿಗೆ ಶತ್ರು ಏನು ಕಳುಹಿಸಿದ್ದರೋ ಅದು ಇದೀಗ ಅವರಿಗೇ ತಿರುಗುಬಾಣವಾಗಿದೆ ಎಂದಿದ್ದಾರೆ.
ಯಾರೇ ನಮ್ಮ ಭೂಮಿ ಮೇಲೆ ಕೆಟ್ಟ ಕಣ್ಣು ಹಾಕಿದರೆ, ಅವರ ಭೂ ಪ್ರದೇಶದಲ್ಲಿ ಅದರ ಫಲ ಉಣ್ಣುತ್ತಾರೆ. ಇದು ಮುನ್ಸೂಚನೆ ಅಲ್ಲ. ಉಲ್ಲಾಸವೂ ಅಲ್ಲ. ಇದು ಕುರುಡು ಪ್ರತೀಕಾರವೂ ಅಲ್ಲ. ಇದು ನ್ಯಾಯ. ಉಕ್ರೇನ್ನ ಈ ಅನಿರೀಕ್ಷಿತ ದಾಳಿ ರಷ್ಯಾವನ್ನು ದಂಗು ಬಡಿಸಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ಇದೇ ವೇಳೆ ಝೆಲನ್ಸ್ಕಿ ಪುಟಿನ್ ಅವರನ್ನು ಕೆಂಪು ಚೌಕದ ರೋಗ ಪೀಡಿತ ಮುದಿ ಮನುಷ್ಯ ಎಂದು ಟೀಕಿಸಿದ್ದು, ಅವರು ರೆಡ್ ಬಟನ್ ಮೂಲಕ ನಿರಂತರವಾಗಿ ಪ್ರತಿಯೊಬ್ಬರಿಗೂ ಬೆದರಿಸುತ್ತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಭಾರತ ಭೇಟಿಗೆ ಉಕ್ರೇನ್ ಅಧ್ಯಕ್ಷರಿಗೆ ಮೋದಿ ಆಹ್ವಾನ: ಮಹಾನ್ ದೇಶಕ್ಕೆ ಬರಲು ಉತ್ಸುಕನಾಗಿದ್ದೇನೆಂದ ಝೆಲೆನ್ಸ್ಕಿ