ETV Bharat / international

ಬೆಂಜಮಿನ್ ನೆತನ್ಯಾಹುಗೆ ಬಂಧನ ವಾರಂಟ್ ಹೊರಡಿಸಿ: ಐಸಿಸಿಗೆ ಮುಖ್ಯ ಪ್ರಾಸಿಕ್ಯೂಟರ್ ಮನವಿ - Karim Khan appeals to ICC - KARIM KHAN APPEALS TO ICC

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಹಮಾಸ್ ಮತ್ತು ಇಸ್ರೇಲ್ ನಾಯಕರಿಗೆ ಬಂಧನ ವಾರಂಟ್‌ಗಳನ್ನು ಹೊಡಿಸುವಂತೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ (ಐಸಿಸಿ) ಮುಖ್ಯ ಪ್ರಾಸಿಕ್ಯೂಟರ್ ಸೋಮವಾರ ಮನವಿ ಮಾಡಿದ್ದಾರೆ.

Israel Hamas War  International Criminal Court  Prime Minister Benjamin Netanyahu
Benjamin Netanyahu (IANS)
author img

By PTI

Published : May 21, 2024, 12:20 PM IST

ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಹಮಾಸ್ ಮತ್ತು ಇಸ್ರೇಲ್ ನಾಯಕರಿಗೆ ಬಂಧನ ವಾರಂಟ್ ಹೊರಡಿಸುವಂತೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ (ಐಸಿಸಿ) ಮುಖ್ಯ ಪ್ರಾಸಿಕ್ಯೂಟರ್ ಸೋಮವಾರ ಮನವಿ ಮಾಡಿದ್ದಾರೆ.

ನೆತನ್ಯಾಹು ಮತ್ತು ಇಸ್ರೇಲಿ ರಕ್ಷಣಾ ಸಚಿವ ಯೆವಾ ಗ್ಯಾಲಂಟ್ ವಿರುದ್ಧ ಮುಖ್ಯ ಪ್ರಾಸಿಕ್ಯೂಟರ್ ಕರೀಮ್ ಖಾನ್ ಅವರು, ಗಾಜಾ ಪಟ್ಟಿಯಲ್ಲಿ ಯುದ್ಧ ಅಪರಾಧಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು. ಇವರಿಂದ ಅನೇಕ ಅಮಾಯಕ ನಾಗರಿಕರು ಹಸಿವಿನಿಂದ ನರಳುತ್ತಿದ್ದಾರೆ. ಈ ಯುದ್ಧದಲ್ಲಿ ಅನೇಕ ಮಹಿಳೆಯರು ಮತ್ತು ಮಕ್ಕಳು ಪ್ರಾಣ ಕಳೆದುಕೊಂಡರು. ಮತ್ತೊಂದೆಡೆ, ಅಕ್ಟೋಬರ್ 7 ರಂದು ಇಸ್ರೇಲ್​ ನಾಗರಿಕರ ವಿರುದ್ಧ ಮಾಡಿದ ಅಪರಾಧಗಳಿಗಾಗಿ ಹಮಾಸ್ ನಾಯಕರಾದ ಯಾಹ್ಯಾ ಸಿನ್ವಾರ್, ಮೊಹಮ್ಮದ್ ಡೀಫ್ ಮತ್ತು ಇಸ್ಮಾಯಿಲ್ ಹನಿಯಾ ವಿರುದ್ಧ ಬಂಧನ ವಾರಂಟ್ ಹೊರಡಿಸುವಂತೆ ಕರೀಮ್ ಖಾನ್ ಕೋರಿದ್ದಾರೆ.

ಯುದ್ಧದಲ್ಲಿ ಅನೇಕ ಕುಟುಂಬಗಳಿಗೆ ತೀವ್ರ ಹಾನಿಯಾಗಿದೆ. ಜೊತೆಗೆ ಅನೇಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಮತ್ತೊಂದೆಡೆ, 2014ರ ಗಾಜಾ ಯುದ್ಧದ ಪ್ರಕರಣದಲ್ಲಿ ಐಸಿಸಿ ಇಸ್ರೇಲ್​ನ ಮಿಲಿಟರಿ ಅಧಿಕಾರಿಗಳು ಮತ್ತು ನಾಯಕರ ವಿರುದ್ಧ ಬಂಧನ ವಾರಂಟ್‌ಗಳನ್ನು ಹೊರಡಿಸುವ ಸಾಧ್ಯತೆಯಿದೆ. ಈ ವಾರಂಟ್​ಗಳು ಜಾರಿಯಾದರೆ ಐಸಿಸಿ ಪಾಲುದಾರ ರಾಷ್ಟ್ರಗಳಲ್ಲಿ ದೇಶದ ಅಧಿಕಾರಿಗಳು ಬಂಧನಕ್ಕೊಳಗಾಗುವ ಅಪಾಯವಿದೆ.

ನೆತನ್ಯಾಹು, ಜೋ ಬೈಡನ್ ಅಸಮಾಧಾನ: ICC ಪ್ರಾಸಿಕ್ಯೂಟರ್‌ನ ಮನವಿ ವಿರುದ್ಧ ಇಸ್ರೇಲ್ ಕಿಡಿಕಾರಿದೆ. ಇದೊಂದು ಅತಿರೇಕದ ಮನವಿಯಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇತಿಹಾಸವು ಈ ತಪ್ಪನ್ನು ಯಾವಾಗಲೂ ನೆನಪಿಸಿಕೊಳ್ಳುತ್ತದೆ. ಇದನ್ನು ಎದುರಿಸಲು ವಿಶೇಷ ಸಮಿತಿ ರಚಿಸುವುದು ಎಂದು ಇಸ್ರೇಲ್ ವಿದೇಶಾಂಗ ಸಚಿವ ಕಾಜ್ ಫ್ಲ್ಯಾಗ್ ತಿಳಿಸಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಐಸಿಸಿ ಪ್ರಾಸಿಕ್ಯೂಟರ್ ಮನವಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ನಾಯಕರು ಮತ್ತು ಹಮಾಸ್‌ನ ಭಯೋತ್ಪಾದಕರನ್ನು ಗುಂಪು ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಜೋ ಬೈಡನ್ ಹೇಳಿದರು.

ಐಸಿಸಿಗೆ ಕರೀಂ ಖಾನ್ ಮನವಿಗೆ ಹಮಾಸ್ ಆಕ್ಷೇಪ ವ್ಯಕ್ತಪಡಿಸಿದೆ. ಈ ಕ್ರಮವು ಮೃತರು ಮತ್ತು ಅಪರಾಧಿಗಳನ್ನು ಒಟ್ಟಿಗೆ ಕಟ್ಟಿಹಾಕುತ್ತದೆ. ಇಬ್ಬರು ಇಸ್ರೇಲಿ ನಾಯಕರ ಬಂಧನವನ್ನು ಅವರು ಬಯಸಿದ್ದು ತಪ್ಪು. ಉಳಿದ ನಾಯಕರನ್ನು ಬಂಧಿಸಬೇಕು. ಇಸ್ರೇಲ್ ಆಕ್ರಮಣ ಮತ್ತು ಮಿಲಿಟರಿ ದಾಳಿಯನ್ನು ವಿರೋಧಿಸುವ ಹಕ್ಕಿದೆ ಎಂದು ಹಮಾಸ್ ಹೇಳಿಕೆ ನೀಡಿದೆ.

ಇದನ್ನೂ ಓದಿ: ಸತತ ನಾಲ್ಕನೇ ಬಾರಿಗೆ ವಿಶ್ವಾಸಮತ ಗೆದ್ದ ನೇಪಾಳ ಪ್ರಧಾನಿ 'ಪ್ರಚಂಡ' - NEPAL PM PRACHANDA WIN TRUST VOTE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.