ಕಾನ್ಸಾಸ್ ಸಿಟಿ( ಅಮೆರಿಕ): ಕಾನ್ಸಾಸ್ ಸಿಟಿಯಲ್ಲಿ ನಡೆಯುತ್ತಿದ್ದ NFL ಚಾಂಪಿಯನ್ ಮುಖ್ಯಸ್ಥರ ಸೂಪರ್ ಬೌಲ್ ಗೆಲುವಿನ ಪರೇಡ್ ವೇಳೆ, ಗುಂಡಿನ ದಾಳಿ ನಡೆದಿದ್ದು, ಒಬ್ಬ ಮೃತಪಟ್ಟು ಹದಿನೈದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪರೇಡ್ ಬಳಿ ನಡೆದ ಈ ಗುಂಡಿನ ದಾಳಿಯಿಂದ ಭಯಭೀತರಾದ ಅಭಿಮಾನಿಗಳು ರಕ್ಷಣೆಗಾಗಿ ಓಡಿಹೋಗಿ ರಕ್ಷಣೆ ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ನಗರದ ಹೆಗ್ಗುರತಾದ ಯೂನಿಯನ್ ಸ್ಟೇಷನ್ನ ಹೊರೆಗೆ ಈ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯ ಕಾರಣ ಏನು ಎಂಬುದು ಗೊತ್ತಾಗಿಲ್ಲ.
ಈ ಘಟನೆ ಬಗ್ಗೆ ಕಾನ್ಸಾಸ್ ಸಿಟಿ ಪೊಲೀಸ್ ಮುಖ್ಯಸ್ಥ ಸ್ಟೇಸಿ ಗ್ರೇವ್ಸ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಗುಂಡಿನ ದಾಳಿಯ ಬಗ್ಗೆ ವಿವರ ನೀಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು. ಈ ಘಟನೆ ಬಗ್ಗೆ ನನಗೆ ತೀವ್ರ ಬೇಸರದ ಜತೆಗೆ ಕೋಪವೂ ಇದೆ. ಈ ಪರೇಡ್ ವೀಕ್ಷಿಸಲು ಬಂದವರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಆಗಬೇಕಿತ್ತು ಎಂದರು.
ಈ ದಾಳಿಯಲ್ಲಿ ಕನಿಷ್ಠ 22 ವ್ಯಕ್ತಿಗಳ ಮೇಲೆ ಗುಂಡು ಹಾರಿಸಲಾಗಿದೆ. ಇದರಿಂದಾಗಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದ ಸಿಟಿ ಪೊಲೀಸ್ ಮುಖ್ಯಸ್ಥರು, 15 ಮಂದಿಗೆ ಮಾರಣಾಂತಿಕ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ. ಘಟನೆಯ ವಿಡಿಯೋ ತುಣುಕುಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಮತ್ತು ಘಟನೆಯ ತನಿಖೆಗೆ ಆದೇಶಿಸಲಾಗಿದೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದ್ದಾರೆ.
ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಒಬ್ಬ ಬಳಕೆದಾರರ ಗುಂಡಿನ ದಾಳಿಯ ವಿಡಿಯೋ ಅಪ್ಲೋಡ್ ಮಾಡಿ, ತಮ್ಮ ಭೀತಿಯನ್ನು ತೋಡಿಕೊಂಡಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗುಂಡೇಟಿನಿಂದ ನೆಲದ ಮೇಲೆ ಬೀಳುವ ದೃಶ್ಯ ಸೆರೆಯಾಗಿದೆ. ದೊಡ್ಡ ನಗರದಲ್ಲಿ ಪರೇಡ್ಗಳು ನಡೆಯುವಾಗ ಸೂಕ್ತ ಭದ್ರತೆ ಒದಗಿಸದ ಸ್ಥಳೀಯ ಆಡಳಿತ ಮತ್ತು ಪೊಲೀಸರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಾನ್ಸಾಸ್ ಸಿಟಿಯ ವಕ್ತಾರ ಲೀಸಾ ಆಗಸ್ಟಿನ್, ದಾಳಿಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಕ್ಷಣಕ್ಕೆ ಗಾಯಾಳುಗಳ ಸಂಖ್ಯೆ ಎಷ್ಟು ಎಂಬುದು ಗೊತ್ತಾಗಿಲ್ಲ ಎಂದರು. ಈ ನಡುವೆ ಪರೇಡ್ನಲ್ಲಿ ಪಾಲ್ಗೊಂಡ ಮಿಸೌರಿ ಗವರ್ನರ್ ಮೈಕ್ ಪಾರ್ಸನ್ ಸುರಕ್ಷಿತವಾಗಿದ್ದಾರೆ. ಈ ವಿಚಾರವನ್ನು ಪಾರ್ಸನ್ ಅವರೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿ: ರೈಲಿನೊಳಗೆ ಕಾದಾಟ, ಸ್ಟೇಷನ್ನಲ್ಲಿ ಗುಂಡಿನ ದಾಳಿ, ಓರ್ವ ಸಾವು, ಐವರಿಗೆ ಗಾಯ