ಒಮಾಹಾ (ನೆಬ್ರಸ್ಕಾ) : ತೀವ್ರ ಚಳಿಯಿಂದ ತತ್ತರಿಸಿ ಹೋಗಿದ್ದ ಮಧ್ಯ ಮತ್ತು ಪಶ್ಚಿಮ ಅಮೆರಿಕ ಭಾನುವಾರ ಸೂರ್ಯನ ಬಿಸಿಲ ಕಿರಣಕ್ಕೆ ತನ್ನನ್ನು ಒಡ್ಡಿಕೊಂಡಿತು. ಹೌದು ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳು ಹಿಮದಿಂದ ಆವರಿಸಿಕೊಳ್ಳುವ ಅಮೆರಿಕದ ಬಹುತೇಕ ಪ್ರದೇಶಗಳಲ್ಲಿ ನಿನ್ನೆಯಿಂದ ಸೂರ್ಯನ ದರ್ಶನವಾಗುತ್ತಿದೆ. ನಿನ್ನೆ ಚಳಿಗೆ ವಿರಾಮ ಹೇಳಲು ಮನೆಯಿಂದ ಹೊರ ಬಂದ ಜನ ಸೂರ್ಯನ ಕಿರಣಗಳನ್ನ ಹಾಗೂ ಬೆಚ್ಚಗಿನ ಭಾವ ಅನುಭವಿಸಿದರು. ಒಮಾಹಾ, ನೆಬ್ರಸ್ಕಾದಲ್ಲಿ ನಿನ್ನೆ ಅಧಿಕ ತಾಪಮಾನ ದಾಖಲೆಯಾಗಿದೆ ಎಂದು ಅಲ್ಲಿನ ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ.
ಒಮಾಹಾವು ತನ್ನ 154 ವರ್ಷಗಳ ಹವಾಮಾನ ಟ್ರ್ಯಾಕಿಂಗ್ ಇತಿಹಾಸದಲ್ಲಿ ಎರಡನೇ ಬೆಚ್ಚಗಿನ ಫೆಬ್ರವರಿ ತಿಂಗಳನ್ನು ಪಡೆದುಕೊಂಡಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಅಂಕಿ - ಅಂಶಗಳು ಹೇಳಿವೆ. ಭಾನುವಾರದ ತಾಪಮಾನ ಆಧಾರದ ಮೇಲೆ ಸೋಮವಾರ(ಇಂದು) ಹೆಚ್ಚಿನ ತಾಪಮಾನ ಉಂಟಾಗುವ ಸಾಧ್ಯತೆ ಇದೆ ಎಂದೂ ಹವಾಮಾನಶಾಸ್ತ್ರಜ್ಞ ಮೈಕೆಲಾ ವುಡ್ ತಿಳಿಸಿದ್ದಾರೆ.
ಶೀತದ ತಾಪಮಾನ ಕಡಿಮೆ ಆಗುತ್ತಿದ್ದಂತೆ ಬಿಸಿಲಿನ ಝಳ ಹೆಚ್ಚಾಗಲಿದ್ದು ಅಪಾಯವು ಅಧಿಕವಾಗಲಿದೆ. ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿರುವಂತೆ ಉಷ್ಣತೆ, ಕಡಿಮೆ ಆರ್ದ್ರತೆಯ ಸ್ಥಳಗಳಲ್ಲಿ 35 mph (56 kph) ಗಿಂತ ಹೆಚ್ಚು ಉಷ್ಣ ಗಾಳಿ ಬೀಸುತ್ತದೆ. ಹಾಗೆಯೇ 11 ರಾಜ್ಯಗಳ ಭಾಗಗಳಲ್ಲಿ ಸಸ್ಯಗಳು ಹರಡಿದ್ದು ಈ ಪ್ರದೇಶದಲ್ಲಿ ಬೆಂಕಿಯ ಅಪಾಯಗಳು (ಕಾಳ್ಗಿಚ್ಚು) ಅಧಿಕ.
ಹವಾಮಾನ ಮುನ್ಸೂಚನೆ : ನ್ಯೂ ಮೆಕ್ಸಿಕೋ, ಕೊಲೊರಾಡೋ, ಟೆಕ್ಸಾಸ್, ಒಕ್ಲಹೋಮಾ, ಕಾನ್ಸಾಸ್, ನೆಬ್ರಸ್ಕಾ, ಸೌತ್ ಡಕೋಟಾ ಮತ್ತು ಪೂರ್ವದಲ್ಲಿ ಅಯೋವಾ, ಇಲಿನಾಯ್ಸ್ ಮತ್ತು ಮಿಸೌರಿಯ ಕೆಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅರ್ಕಾನ್ಸಾಸ್, ಮಿನ್ನೇಸೋಟ ಮತ್ತು ವಿಸ್ಕಾನ್ಸಿನ್ ಭಾಗಗಳನ್ನು ಒಳಗೊಂಡಂತೆ ಹತ್ತಿರದ ರಾಜ್ಯಗಳಿಗೂ ಬೆಂಕಿಯ ಅಪಾಯ ಹೆಚ್ಚಿರುವುದರಿಂದ ಹವಾಮಾನ ಮುನ್ಸೂಚನೆಯನ್ನು ನೀಡಲಾಗಿದೆ.
ಇನ್ನು ನಿನ್ನೆ ಕಂಡ ಬಿಸಿಲಿಗೆ ಜನತೆ ಸ್ಥಳೀಯ ಉದ್ಯಾನವನಗಳಲ್ಲಿ ಆಡಲು, ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಲು, ಹೊರಗೆ ಹುಲ್ಲುಹಾಸಿನ ಮೇಲೆ ಓಡಾಡಲು ಮನೆಯಿಂದ ಹೊರಗೆ ಬಂದರು. ಚಿಕಾಗೋದಲ್ಲಿ ಚಳಿಗಾಲದಲ್ಲಿ ಬಳಸುವ ಲಘು ಜಾಕೆಟ್ ಶಾರ್ಟ್ಸ್ ಮತ್ತು ಟಿ - ಶರ್ಟ್‌ಗಳಲ್ಲೇ ಜನರು ಹೊರಗೆ ಬಂದು ಮಿಚಿಗನ್ ಸರೋವರದ ತೀರದಲ್ಲಿ ಕುಣಿದು ಕುಪ್ಪಳಿಸಿದರು.
ಒಟ್ಟಾರೆ ಚಿಕಾಗೋವು ನಿಧಾನವಾಗಿ ಚಳಿಗಾಲಕ್ಕೆ ವಿದಾಯ ಹೇಳುತ್ತಿದೆ. ಇಂದಿನ ತಾಪಮಾನವೂ ದಾಖಲೆ - ಮುರಿಯುವ ನಿರೀಕ್ಷೆಯಿದೆ ಎಂದು ಹವಾಮಾನಶಾಸ್ತ್ರಜ್ಞ ಮೈಕೆಲಾ ವುಡ್ ಹೇಳಿದ್ದಾರೆ.
ಇದನ್ನೂ ಓದಿ : ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ನಾಮನಿರ್ದೇಶನ ರೇಸ್‌ನಲ್ಲಿ ಟ್ರಂಪ್ಗೆ ಮುನ್ನಡೆ: ನಿಕ್ಕಿ ಹ್ಯಾಲೆ ವಿರುದ್ಧ ಭರ್ಜರಿ ಗೆಲುವು