ETV Bharat / international

ಸೆ. 15ಕ್ಕೆ ಪಾಕಿಸ್ತಾನ್​ ತೆಹ್ರೀಕ್​ - ಎ - ಇನ್ಸಾಫ್ ಪಕ್ಷದಿಂದ ಸಾರ್ವಜನಿಕ ರ‍್ಯಾಲಿ - PTI PARTY RALLY IN LAHORE

ಲಾಹೋರ್​ನ ಐಕಾನಿಕ್​ ಮಿನಾರ್​-ಎ-ಪಾಕಿಸ್ತಾನದಲ್ಲಿ ಸೆಪ್ಟೆಂಬರ್​​ 15 ರಂದು ಸಾರ್ವಜನಿಕ ರ‍್ಯಾಲಿ ಆಯೋಜಿಸುವುದಾಗಿ ಪಾಕಿಸ್ತಾನ್​ ತೆಹ್ರೀಕ್​-ಎ-ಇನ್ಸಾಫ್ ಪಕ್ಷ ಹೇಳಿದೆ.

Former Prime Minister of Pakistan Imran Khan
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (ANI)
author img

By ANI

Published : Aug 29, 2024, 10:08 AM IST

ಲಾಹೋರ್​(ಪಾಕಿಸ್ತಾನ): ಪಿಟಿಐ -ಪಾಕಿಸ್ತಾನ್​ ತೆಹ್ರೀಕ್​-ಎ-ಇನ್ಸಾಫ್​ ಪಕ್ಷ ಲಾಹೋರ್​ನ ಐಕಾನಿಕ್​ ಮಿನಾರ್​-ಎ-ಪಾಕಿಸ್ತಾನದಲ್ಲಿ ಮುಂದಿನ ಸೆಪ್ಟೆಂಬರ್​​ 15 ರಂದು ಸಾರ್ವಜನಿಕ ರ‍್ಯಾಲಿ ಆಯೋಜಿಸುವುದಾಗಿ ಘೋಷಿಸಿದೆ ಎಂದು ಪಾಕಿಸ್ತಾನದ ಎಆರ್​ಐ ನ್ಯೂಸ್ ವರದಿ ಮಾಡಿದೆ.

ಎಆರ್​ಐ ಮಾಧ್ಯಮ ಸಂಸ್ಥೆ ಪ್ರಕಾರ, ಸೆಪ್ಟೆಂಬರ್ 15 ರಂದು ಮಿನಾರ್-ಎ-ಪಾಕಿಸ್ತಾನದಲ್ಲಿ ಸಾರ್ವಜನಿಕ ಸಭೆ ನಡೆಸಲು ಅನುಮತಿ ಕೋರಿ ಪಿಟಿಐ ಪಕ್ಷದ ಪ್ರಧಾನ ಕಾರ್ಯದರ್ಶಿ ಒಮರ್ ಅಯೂಬ್ ಲಾಹೋರ್ ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದಾರೆ. ರ‍್ಯಾಲಿ ನಡೆಸಲು ಅನುಮತಿ ನೀಡುವಂತೆ ಪಿಟಿಐ ಪಕ್ಷ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿದೆ. ಒಮರ್​​ ಅಯೂಬ್​ ಅವರು ರ‍್ಯಾಲಿ ಅನುಮತಿಗಳಿಗೆ ಸಂಬಂಧಿತ ಆರ್ಟಿಕಲ್​​ ಮತ್ತು ಸುಪ್ರೀಂ ಕೋರ್ಟ್ ನಿರ್ಧಾರಗಳನ್ನು ಉಲ್ಲೇಖಿಸಿ ವಿನಂತಿ ಕಳುಹಿಸಿದ್ದಾರೆ.

ಇದಕ್ಕೂ ಮೊದಲು, ಲಾಹೋರ್‌ನಲ್ಲಿ ಆಗಸ್ಟ್ 27 ರಂದು ನಡೆಯಬೇಕಿದ್ದ ತನ್ನ ಪವರ್ ಶೋನ್ನು ಪಿಟಿಐ ಆಡಳಿತಾತ್ಮಕ ಸವಾಲುಗಳಿಂದಾಗಿ ರದ್ದುಗೊಳಿಸಿತ್ತು. ಸ್ಥಳೀಯ ಆಡಳಿತವು ರ‍್ಯಾಲಿಗೆ ಅನುಮತಿ ನೀಡದಿರುವುದು ಮುಂದೂಡಿಕೆಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಲಾಹೋರ್ ಉಚ್ಚ ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ಈ ಬೆಳವಣಿಗೆ ಕಂಡು ಬಂದಿದೆ.

ಪಕ್ಷದ ಮಾಹಿತಿ ಕಾರ್ಯದರ್ಶಿ ಶೌಕತ್ ಮಹಮೂದ್ ಬಸ್ರಾ ಪ್ರಕಾರ, 'ಸ್ಥಳೀಯ ಅಧಿಕಾರಿಗಳು ಅನುಮತಿ ನಿರಾಕರಿಸಿದ ನಂತರ ಪಕ್ಷವು ರ‍್ಯಾಲಿಗಳನ್ನು ಮುಂದೂಡಲು ನಿರ್ಧರಿಸಿದೆ. ಜತೆಗೆ, ನ್ಯಾಯಾಲಯದ ಆದೇಶವನ್ನು ಅನುಸರಿಸಲು ವಿಫಲವಾಗಿರುವ ಆಡಳಿತದ ವಿರುದ್ಧ ಮೊಕದ್ದಮೆ ಹೂಡುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್​ ಸರ್ಕಾರದ ವಕ್ತಾರೆಯಾಗಿ ಫತೇಮೆಹ್ ಮೊಹಜೆರಾನಿ ನೇಮಕ - Iran government spokesperson

ETV Bharat Logo

Copyright © 2024 Ushodaya Enterprises Pvt. Ltd., All Rights Reserved.