ETV Bharat / international

ಇರಾನ್‌ ದೇಶದೊಳಗೆ ಇಸ್ರೇಲ್ ನಡೆಸಿದ ರಹಸ್ಯ ಕಾರ್ಯಾಚರಣೆಗಳು ಯಾವವು?: ಇಲ್ಲಿದೆ ಇಂಟ್ರೆಸ್ಟಿಂಗ್​​​​ ಮಾಹಿತಿ! - ISRAEL SECREAT OPERATIONS

ಇರಾನ್ ದೇಶದೊಳಗೆ ಇಸ್ರೇಲ್ ಕನಿಷ್ಠ 24 ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಪ್ರಮುಖ ವಿಜ್ಞಾನಿಗಳನ್ನು ಹತ್ಯೆ ಮಾಡಿದೆ. ಜೊತೆಗೆ ಡ್ರೋನ್ ದಾಳಿ ಮತ್ತು ಸೈಬರ್ ದಾಳಿಗಳನ್ನೂ ಕೂಡಾ ನಡೆಸಿದೆ. ಈ ದಾಳಿಗಳಿಗೆ ಇರಾನ್ ದೇಶವು, ಇಸ್ರೇಲ್ ಅನ್ನು ಹೊಣೆಗಾರರನ್ನಾಗಿ ಮಾಡಿದೆ. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ ನೋಡಿ...

ISRAEL  IRAN  ISRAEL SECREAT OPERATIONS  ISRAEL VS IRAN
ಇರಾನ್‌ ದೇಶದೊಳಗೆ ಇಸ್ರೇಲ್ ನಡೆದ ರಹಸ್ಯ ಕಾರ್ಯಾಚರಣೆ (ETV Bharat)
author img

By ETV Bharat Karnataka Team

Published : Jul 31, 2024, 10:42 PM IST

ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರನ್ನು ಟೆಹ್ರಾನ್‌ನಲ್ಲಿ ಹತ್ಯೆ ಮಾಡಲಾಗಿದೆ. ಮಂಗಳವಾರ ಇರಾನ್‌ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಹನಿಯೆಹ್ ಟೆಹ್ರಾನ್‌ಗೆ ಬಂದಿದ್ದರು ಎಂದು ವರದಿಯಾಗಿದೆ. ಈ ವೇಳೆ ಅವರ ಹತ್ಯೆ ಮಾಡಲಾಗಿದೆ. ಈ ಹತ್ಯೆ ಸಹಜವಾಗಿ ಇಸ್ರೇಲ್​ ಕೃತ್ಯ ಎಂದು ಇರಾನ್​ ಅನುಮಾನ ವ್ಯಕ್ತಪಡಿಸಿದೆ. ಆದರೆ ಈ ಬಗ್ಗೆ ಇಸ್ರೇಲ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2010ರಿಂದ ಇರಾನ್ ದೇಶದೊಳಗೆ ಇಸ್ರೇಲ್ ಕನಿಷ್ಠ 24 ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಖ್ಯಾತಿ ವಿಜ್ಞಾನಿಗಳನ್ನು ಹತ್ಯೆ ಮತ್ತು ಕೊಲೆ ಮಾಡಿದೆ. ಇದರ ಜೊತೆಗೆ ಡ್ರೋನ್ ದಾಳಿಗಳು ಮತ್ತು ಸೈಬರ್ ದಾಳಿಗಳನ್ನೂ ನಡೆಸಲಾಗಿದೆ. ಇಸ್ರೇಲ್ ನಡೆಸಿದ ಬಹುತೇಕ ದಾಳಿಗಳು ಟೆಹ್ರಾನ್‌ನ ವಿವಾದಾತ್ಮಕ ಪರಮಾಣು ಕಾರ್ಯಕ್ರಮಕ್ಕೆ ನಂಟು ಹೊಂದಿರುವುದು ಗೊತ್ತಿರುವ ವಿಚಾರ . 2022ರಲ್ಲಿ, ಇರಾನ್‌ನ ಹೆಚ್ಚುತ್ತಿರುವ ಸುಧಾರಿತ ಡ್ರೋನ್ ಕಾರ್ಯಕ್ರಮವನ್ನು ಗುರಿಯಾಗಿ ಇಸ್ರೇಲ್​ ದೇಶವು ಎರಡು ಬಾರಿ ಡ್ರೋನ್‌ ದಾಳಿ ಮಾಡಿತ್ತು. ಇದೇ ರೀತಿ ಇಸ್ರೇಲ್​ ಹಲವು ರಹಸ್ಯ ಕಾರ್ಯಾಚರಣೆಗಳನ್ನು ಕೈಗೊಂಡಿದೆ.

2010ರಿಂದ ಇರಾನ್ ಮೇಲೆ ಇಸ್ರೇಲ್ ನಡೆಸಿದ ಪ್ರಮುಖ ದಾಳಿಗಳ ಮಾಹಿತಿ:

  • ಜನವರಿ 12, 2010: ಟೆಹ್ರಾನ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಪ್ರಾಧ್ಯಾಪಕ ಮಸೌದ್ ಅಲಿ ಮೊಹಮ್ಮದಿ ಅವರು ಮೋಟಾರ್‌ಸೈಕಲ್‌ನಲ್ಲಿ ಸ್ಥಾಪಿಸಲಾದ ರಿಮೋಟ್-ನಿಯಂತ್ರಿತ ಬಾಂಬ್‌ನಿಂದ ಹತ್ಯೆ ಮಾಡಲಾಗಿತ್ತು. ಅಲಿ ಮೊಹಮ್ಮದಿ ಅವರು ಪರಮಾಣು ವಿಜ್ಞಾನಿಯಾಗಿದ್ದರು. ಈ ಕೊಲೆಗೆ ಇರಾನ್ ದೇಶವು, ಇಸ್ರೇಲ್ ಅನ್ನು ಹೊಣೆಗಾರರನ್ನಾಗಿ ಮಾಡಿದೆ.
  • ನವೆಂಬರ್ 29, 2010: ಟೆಹ್ರಾನ್‌ನ ಪರಮಾಣು ಇಂಜಿನಿಯರಿಂಗ್ ಫ್ಯಾಕಲ್ಟ್ಯಾಟ್ ಶಾಹಿದ್ ಬೆಹೆಶ್ತಿ ವಿಶ್ವವಿದ್ಯಾಲಯದ ಸದಸ್ಯ ಪ್ರೊಫೆಸರ್ ಮಜಿದ್ ಶರಿಯಾರಿ ಅವರು ಕೆಲಸಕ್ಕೆ ಹೋಗುತ್ತಿದ್ದಾಗ ಅವರ ಕಾರಿನಲ್ಲಿಯೇ ಕೊಲ್ಲಲಾಗಿತ್ತು. ಸ್ಫೋಟದಲ್ಲಿ ಅವರ ಪತ್ನಿ ಗಾಯಗೊಂಡಿದ್ದರು. ಇರಾನ್‌ನ ಪರಮಾಣು ಶಕ್ತಿ ಸಂಘಟನೆಯ ಮುಖ್ಯಸ್ಥ ಅಲಿ ಅಕ್ಬರ್ ಸಲೇಹಿ, ಶರಿಯಾರಿ ಅವರು ದೇಶದ ಅತಿದೊಡ್ಡ ಪರಮಾಣು ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದರು.
  • ಜುಲೈ 23, 2011: ಟೆಹ್ರಾನ್‌ನಲ್ಲಿ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ಬಂದೂಕುಧಾರಿಗಳಿಂದ ರಾಷ್ಟ್ರೀಯ ಭದ್ರತಾ ಸಂಶೋಧನಾ ಸೌಲಭ್ಯದಲ್ಲಿ ಕೆಲಸ ಮಾಡುತ್ತಿದ್ದ ಎಲೆಕ್ಟ್ರಿಕಲ್ ಇಂಜಿನಿಯರ್ ಡೇರಿಯೂಶ್ ರೆಜೈನೆಜಾದ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ಇರಾನ್, ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಅನ್ನು ದೂಷಿಸಿತ್ತು.
  • ಜನವರಿ 11, 2012: ಕೆಮಿಕಲ್ ಇಂಜಿನಿಯರಿಂಗ್ ಪದವೀಧರ ಮೊಸ್ತಫಾ ಅಹ್ಮದಿ ರೋಶನ್ ಅವರನ್ನು ಉತ್ತರ ಟೆಹ್ರಾನ್‌ನಲ್ಲಿ ಮೋಟರ್‌ಬೈಕ್‌ನಲ್ಲಿ ಬಂದ ಇಬ್ಬರು ಅವರ ಕಾರಿನ ಮೇಲೆ ಬಾಂಬ್ ಇರಿಸಿ ಕೊಲೆ ಮಾಡಿದ್ದರು. ರೋಷನ್ ಮತ್ತು ಚಾಲಕ ಸಾವನ್ನಪ್ಪಿದ್ದು, ಸ್ಥಳದಲ್ಲಿದ್ದ ಇತರ ಇಬ್ಬರು ಗಾಯಗೊಂಡಿದ್ದರ ಬಗ್ಗೆ ವರದಿಯಾಗಿತ್ತು. ಇರಾನ್ ಅಹ್ಮದಿ ರೋಶನ್ ಅವರನ್ನು ನಟಾಂಜ್ ಯುರೇನಿಯಂ ಎನ್‌ರಿಚ್‌ಮೆಂಟ್ ಸೌಲಭ್ಯದಲ್ಲಿ ಮೇಲ್ವಿಚಾರಕರಾಗಿ ನೇಮಿಸಿತ್ತು.
  • ಜನವರಿ 31, 2018: ಮೊಸ್ಸಾದ್ ತಂಡವು ಟೆಹ್ರಾನ್‌ನಲ್ಲಿ ಇರಾನ್‌ನ ಪರಮಾಣು ಕಾರ್ಯಕ್ರಮದ ಸಂಗ್ರಹಾಗಾರದ ಮೇಲೆ ದಾಳಿ ಮಾಡಿತ್ತು.
  • ಜುಲೈ 2, 2020: ಮತ್ತೊಂದು ಸ್ಫೋಟವು ಇರಾನ್‌ನ ನಟಾಂಜ್‌ನಲ್ಲಿರುವ ಮುಖ್ಯ ಪರಮಾಣು ಪುಷ್ಟೀಕರಣ ಸೈಟ್‌ಗೆ ವ್ಯಾಪಕ ಹಾನಿಯನ್ನುಂಟು ಮಾಡಿತ್ತು. ಇದರಿಂದ ಪರಮಾಣು ಕಾರ್ಯಕ್ರಮ ತಿಂಗಳುಗಳವರೆಗೆ ವಿಳಂಬವಾಗಿತ್ತು.
  • ನವೆಂಬರ್ 27, 2020: ಟೆಹ್ರಾನ್‌ನಿಂದ ಸುಮಾರು 40 ಮೈಲಿಗಳಷ್ಟು ಪೂರ್ವಕ್ಕೆ ರಸ್ತೆಬದಿಯ ದಾಳಿಯಲ್ಲಿ ಪ್ರಮುಖ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾದೆ ಅವರನ್ನು ಹತ್ಯೆ ಮಾಡಲಾಗಿತ್ತು. ಪಾಶ್ಚಿಮಾತ್ಯ ಮತ್ತು ಇಸ್ರೇಲ್​ ಗುಪ್ತಚರರು, ಫಕ್ರಿಜಾದೆ ಇರಾನ್‌ನ ರಹಸ್ಯ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮದ ಪಿತಾಮಹ ಎಂದು ಶಂಕಿಸಿದ್ದರು. ಫಕ್ರಿಜಾದೆ ಅವರನ್ನು ಹೆಚ್ಚಾಗಿ ಅಮೆರಿಕದ ಪರಮಾಣು ಬಾಂಬ್‌ನ ಪಿತಾಮಹ ಜೆ.ರಾಬರ್ಟ್ ಒಪೆನ್‌ಹೈಮರ್‌ಗೆ ಹೋಲಿಸಲಾಗುತ್ತದೆ.
  • ಜೂನ್ 23, 2021: ಇಸ್ರೇಲ್​ ಕ್ವಾಡ್‌ಕಾಪ್ಟರ್ ಡ್ರೋನ್​ನಿಂದ ಇರಾನ್‌ನ ಪರಮಾಣು ಕಾರ್ಯಕ್ರಮಕ್ಕಾಗಿ ಕರಾಜ್‌ನಲ್ಲಿ ಇಡಲಾಗಿದ್ದ ಸೆಂಟ್ರಿಫ್ಯೂಜ್‌ಗಳನ್ನು ನಾಶಪಡಿಸಿತ್ತು. ದಾಳಿ ಹಿನ್ನೆಲೆ ಇರಾನ್ ದೇಶವು ಇಸ್ರೇಲ್ ವಿರುದ್ಧ ಕಿಡಿಕಾರಿತ್ತು.
  • ಫೆಬ್ರವರಿ 14, 2022: ಆರು ಇಸ್ರೇಲಿ ಕ್ವಾಡ್‌ಕಾಪ್ಟರ್ ಡ್ರೋನ್‌ಗಳು ಪಶ್ಚಿಮ ಇರಾನ್‌ನ ಕೆರ್ಮಾನ್‌ಶಾಹ್ ಬಳಿಯ ನೆಲೆಯಲ್ಲಿ ನೂರಾರು ಡ್ರೋನ್‌ಗಳನ್ನು ನಾಶಪಡಿಸಿವೆ ಎಂದು ವರದಿಯಾಗಿತ್ತು.
  • ಮೇ 22, 2022: ಐಆರ್‌ಜಿಸಿ ಕರ್ನಲ್ ಹಸನ್ ಸಯ್ಯದ್ ಖೋಡೈ ಅವರನ್ನು ಟೆಹ್ರಾನ್‌ನಲ್ಲಿರುವ ಅವರ ಮನೆಯ ಹೊರಗೆ ಐದು ಬಾರಿ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಸದಸ್ಯ ಮಜಿದ್ ಮಿರಹ್ಮಾಡಿ, ಈ ಹತ್ಯೆಯು ಖಂಡಿತವಾಗಿಯೂ ಇಸ್ರೇಲ್‌ನ ಕೆಲಸ ಎಂದು ಆರೋಪಿಸಿದ್ದಾರೆ.
  • ಮೇ 31 ಮತ್ತು ಜೂನ್ 2, 2022: ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ವಿಜ್ಞಾನಿಗಳು, ಯಾಜ್ದ್‌ನಲ್ಲಿ ಒಬ್ಬರು ಮತ್ತು ಟೆಹ್ರಾನ್‌ನಲ್ಲಿ ಒಬ್ಬರನ್ನು ಹತ್ಯೆ ಮಾಡಲಾಗಿತ್ತು. ಏರೋಸ್ಪೇಸ್ ಇಂಜಿನಿಯರ್ ಆಗಿರುವ ಅಯೌಬ್ ಎಂಟೆಜಾರಿ, ಟೆಹ್ರಾನ್‌ನಲ್ಲಿ ಭೂವಿಜ್ಞಾನಿಯಾಗಿದ್ದ ಕಮ್ರಾನ್ ಅಘಮೊಲೇಯಿ ಜೂನ್ 2 ರಂದು ಕೊಲೆ ಮಾಡಲಾಗಿತ್ತು.
  • ಡಿಸೆಂಬರ್ 25, 2023: ಡಮಾಸ್ಕಸ್‌ನಲ್ಲಿ ಶಂಕಿತ ಇಸ್ರೇಲ್​ ವೈಮಾನಿಕ ದಾಳಿಯಲ್ಲಿ ಲೆವಂಟ್‌ನಲ್ಲಿ ಇರಾನ್‌ನ ಅತ್ಯಂತ ಪ್ರಭಾವಶಾಲಿ ಮಿಲಿಟರಿ ಕಮಾಂಡರ್ ಸಯ್ಯದ್ ರಾಜಿ ಮೌಸವಿ ಕೊಲ್ಲಲಾಗಿತ್ತು.
  • ಏಪ್ರಿಲ್ 01, 2024: ಡಮಾಸ್ಕಸ್‌ನಲ್ಲಿರುವ ಇರಾನಿನ ಕಾನ್ಸುಲೇಟ್ ಕಟ್ಟಡದ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಸಿರಿಯಾ ಮತ್ತು ಲೆಬನಾನ್‌ನಲ್ಲಿ ರಹಸ್ಯ ಕಾರ್ಯಾಚರಣೆಗಳಿಗಾಗಿ ಪ್ರಮುಖ ಕ್ರಾಂತಿಕಾರಿ ಗಾರ್ಡ್ ಕಮಾಂಡರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಮತ್ತು ಜಹೇದಿಯ ಉಪನಾಯಕ ಸೇರಿದಂತೆ ಆರು ಮಂದಿ ಸಾವನ್ನಪ್ಪಿದರು. ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ಈ ದಾಳಿಯನ್ನು ಎಲ್ಲಾ ಅಂತರರಾಷ್ಟ್ರೀಯ ಕಟ್ಟುಪಾಡುಗಳು ಮತ್ತು ಸಂಪ್ರದಾಯಗಳ ಉಲ್ಲಂಘನೆ ಎಂದು ಖಂಡಿಸಿದ್ದಾರೆ.

ಇದನ್ನೂ ಓದಿ: ಜನವಸತಿ ಪ್ರದೇಶಗಳಿಂದ ಹಮಾಸ್​ ದಾಳಿ: ಸಾವಿರಾರು ಪ್ಯಾಲೆಸ್ಟೈನಿಯರನ್ನು ಸ್ಥಳಾಂತರಗೊಳಿಸಿದ ಇಸ್ರೇಲ್ ಸೇನೆ - Israeli Hamas War

ETV Bharat Logo

Copyright © 2024 Ushodaya Enterprises Pvt. Ltd., All Rights Reserved.