ನವದೆಹಲಿ: ಭಾರತೀಯ ರಕ್ಷಣಾ ಸಚಿವಾಲಯ ಹಾಗೂ ಅಮೆರಿಕದ ಸೇನಾ ಇಲಾಖೆ ಬುಧವಾರದಂದು ನವದೆಹಲಿಯಲ್ಲಿ ನಡೆದ ಎರಡನೇ ಭಾರತ-ಯುಎಸ್ ಡಿಫೆನ್ಸ್ ಆಕ್ಸಲರೇಶನ್ ಎಕೋಸಿಸ್ಟಮ್ (INDUS-X) ಶೃಂಗಸಭೆಯಲ್ಲಿ ಭಾಗವಹಿಸಿತು. ಮಿಲಿಟರಿ ಸಂಬಂಧ ಚರ್ಚೆ ನಡೆಸಿತು. ಉಭಯ ರಾಷ್ಟ್ರಗಳ ಸಹಭಾಗಿತ್ವದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳು, ಮಿಲಿಟರಿ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ವಿಸ್ತರಣೆ ಮಾಡುವ ಕುರಿತಂತೆ ಮಹತ್ವದ ಮಾತುಕತೆ ನಡೆಯಿತು.
ಬುಧವಾರ ನಡೆದ ಈ ಭಾರತ ಮತ್ತು ಅಮೆರಿಕ ನಡುವಿನ ಶೃಂಗಸಭೆಯಲ್ಲಿ, ಸುಧಾರಿತ ಮಿಲಿಟರಿ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳುವುದು ಹಾಗೂ ಸ್ಥಿತಿಸ್ಥಾಪಕತ್ವವುಳ್ಳ ರಕ್ಷಣಾ ಪೂರೈಕೆ ಸರಪಳಿಗಳನ್ನು ರಚಿಸುವ ಸಂಬಂಧ ಇರುವ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಮೂಲ INDUS-X ಸಹಯೋಗದ ಕಾರ್ಯಸೂಚಿಯಿಂದ ಪ್ರೇರಿತವಾದ ಹಲವಾರು ವಿಷಯಗಳ ಮೇಲೆ ಸಮಾಲೋಚನೆಗಳನ್ನು ನಡೆಸಲಾಯಿತು. ರಕ್ಷಣಾ ಕೈಗಾರಿಕಾ ಪಾಲುದಾರಿಕೆಗಳನ್ನು ಅಭಿವೃದ್ಧಿ ಪಡಿಸುವುದು, ಕೊಲಾಬರೇಟಿವ್ ಸಂಶೋಧನೆ ಮತ್ತು ಪರೀಕ್ಷಾ ಸೌಲಭ್ಯವನ್ನು ಹೆಚ್ಚಿಸುವುದು, ನಿರ್ಣಾಯಕ ರಕ್ಷಣಾ ತಂತ್ರಜ್ಞಾನಗಳನ್ನು ಬೆಂಬಲಿಸಲು ಖಾಸಗಿ ಬಂಡವಾಳವನ್ನು ಸೃಷ್ಟಿಸುವುದು ಮತ್ತು ದ್ವಿ-ಬಳಕೆಯ ತಂತ್ರಜ್ಞಾನಗಳನ್ನು ವಾಣಿಜ್ಯೀಕರಣಗೊಳಿಸುವುದು ಸೇರಿದಂತೆ ಹಲವು ವಿಚಾರಗಳ ಮೇಲೆ ಫಲಪ್ರದವಾದ ಮಾತುಕತೆ ನಡೆದವು ಎಂದು ಅಮೆರಿಕದ ರಕ್ಷಣಾ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಶೃಂಗಸಭೆಯು, ಜಂಟಿ ಸವಾಲುಗಳನ್ನು ಒಳಗೊಂಡಂತೆ INDUS-X ಅಡಿಯಲ್ಲಿ ಆದ್ಯತೆಯ ಪ್ರಯತ್ನಗಳ ಕುರಿತು ಕೆಲ ಘೋಷಣೆಗಳನ್ನು ಸಹ ಒಳಗೊಂಡಿತ್ತು. ಡಿಫೆನ್ಸ್ ಇನ್ನೋವೇಶನ್ ಯುನಿಟ್ (DIU) ಮತ್ತು ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ (iDEX) ಮೊದಲ ಎರಡು INDUS-X ಜಂಟಿ ಸವಾಲುಗಳ ಬಗ್ಗೆಯೂ ಚರ್ಚೆಯಲ್ಲಿ ಪ್ರಸ್ತಾಪ ಮಾಡಲಾಯಿತು.
ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ 'ಇಂಡಿಯಾ' ಮೈತ್ರಿ ಪಕ್ಕಾ: ಕಾಂಗ್ರೆಸ್ಗೆ 17 ಕ್ಷೇತ್ರ, 63 ಕ್ಷೇತ್ರಗಳಲ್ಲಿ ಎಸ್‌ಪಿ, ಮಿತ್ರಪಕ್ಷಗಳ ಸ್ಪರ್ಧೆ
ಮಿಲಿಟರಿ ಸೇವಾ ಪಾಲುದಾರರು ಮತ್ತು ಎರಡೂ ಸರ್ಕಾರಗಳಿಂದ ಬೆಂಬಲಿತವಾದ ಸ್ಪರ್ಧಾತ್ಮಕ ಪ್ರಕ್ರಿಯೆಯಲ್ಲಿ, 10 ಅಮೆರಿಕ ಮತ್ತು ಭಾರತೀಯ ಕಂಪನಿಗಳು, ಸಮುದ್ರದೊಳಗಿನ ಸಂವಹನ ಮತ್ತು ಕಡಲ ಗುಪ್ತಚರ, ಕಣ್ಗಾವಲುಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು USD 1 ಮಿಲಿಯನ್ ಆರ್ಡರ್ ಪಡೆದುಕೊಂಡಿವೆ.
ಇದನ್ನೂ ಓದಿ : ಕಾಂಗ್ರೆಸ್ ಬ್ಯಾಂಕ್ ಖಾತೆಗಳಿಂದ ₹ 65 ಕೋಟಿ ವಿತ್ಡ್ರಾಗೆ ಸೂಚನೆ: ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದ ಮಾಕೇನ್
ರಕ್ಷಣಾ ಸಚಿವಾಲಯ ಮತ್ತು ಯುಎಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ , ಹೂಡಿಕೆದಾರರು ಮತ್ತು ವಿಶ್ವವಿದ್ಯಾನಿಲಯಗಳ ನಡುವಿನ ಪಾಲುದಾರಿಕೆಯನ್ನು ಹೆಚ್ಚಿಸಲು 2023ರ ಜೂನ್ ನಲ್ಲಿ ದ್ವಿಪಕ್ಷೀಯ ಉಪಕ್ರಮವಾದ 'INDUS-X' ಅನ್ನು ಪ್ರಾರಂಭ ಮಾಡಲಾಗಿತ್ತು. ಇದರಡಿ ಹಲವು ಸಭೆಗಳು ನಡೆಯುತ್ತಿದ್ದು, ರಕ್ಷಣಾ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ಪಾಲುದಾರಿಕೆ ಹಾಗೂ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.