ETV Bharat / international

ಶಾಲಾ ಕಟ್ಟಡ ಕುಸಿದು 22 ವಿದ್ಯಾರ್ಥಿಗಳ ಸಾವು: ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ - collapse of a school in Nigeria - COLLAPSE OF A SCHOOL IN NIGERIA

ನೈಜೀರಿಯಾಲ್ಲಿ ಶಾಲಾ ಕಟ್ಟಡ ಕುಸಿದು 22 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 154 ಸ್ಟುಡೆಂಟ್ಸ್​ ಅವಶೇಷಗಳಡಿ ಸಿಲುಕಿದ್ದು, ಇದರಲ್ಲಿ 132 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿ, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

NIGERIA-SCHOOL-COLLAPSE
Etv Bharಶಾಲಾ ಕಟ್ಟಡ ಕುಸಿದು 22 ವಿದ್ಯಾರ್ಥಿಗಳ ಸಾವು: ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನat (AP photo)
author img

By PTI

Published : Jul 13, 2024, 7:47 AM IST

ಅಬುಜಾ (ನೈಜೀರಿಯಾ): ಉತ್ತರ - ಮಧ್ಯ ನೈಜೀರಿಯಾದಲ್ಲಿ ಶುಕ್ರವಾರ ಬೆಳಗಿನ ಜಾವ ಭಾರಿ ದುರಂತವೊಂದು ಸಂಭವಿಸಿದೆ. ತರಗತಿ ನಡೆಯುತ್ತಿದ್ದ ವೇಳೆ ಎರಡು ಅಂತಸ್ತಿನ ಶಾಲಾ ಕಟ್ಟಡ ಕುಸಿದು 22 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇದರ ಅವಶೇಷಗಳಲ್ಲಿ ಸಿಲುಕಿರುವ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಜನರಿಗಾಗಿ ತೀವ್ರ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಬುಸಾ ಬುಜಿ ಸಮುದಾಯದಲ್ಲಿರುವ ಸೇಂಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ತರಗತಿಗಳಿಗೆ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಈ ಕಟ್ಟಡ ಕುಸಿತ ಕಂಡಿದೆ. ಒಟ್ಟು 154 ವಿದ್ಯಾರ್ಥಿಗಳು ಶಾಲಾ ಕಟ್ಟಡದ ಅವಶೇಷಗಳ ಅಡಿ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ 132 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪ್ರಸ್ಥಭೂಮಿ ಪೊಲೀಸ್ ವಕ್ತಾರ ಆಲ್ಫ್ರೆಡ್ ಅಲಾಬೊ ತಿಳಿಸಿದ್ದಾರೆ. 22 ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ರಕ್ಷಣಾ ಮತ್ತು ಆರೋಗ್ಯ ಕಾರ್ಯಕರ್ತರು ಹಾಗೂ ಭದ್ರತಾ ಪಡೆಗಳು ಧಾವಿಸಿದವು ಎಂದು ನೈಜೀರಿಯಾದ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ತ್ವರಿತ ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳು ಆರೋಗ್ಯ ಸಿಬ್ಬಂದಿಗೆ ಅಲ್ಲಿನ ಸರ್ಕಾರ ಸೂಚಿಸಿದೆ. ಉಚಿತ ಚಿಕಿತ್ಸೆಗೆ ಆದ್ಯತೆ ನೀಡುವಂತೆ ಸರ್ಕಾರವು ಆಸ್ಪತ್ರೆಗಳಿಗೆ ಸೂಚನೆ ನೀಡಿದೆ ಎಂದು ಅಲ್ಲಿನ ಮಾಹಿತಿ ಆಯುಕ್ತ ಮೂಸಾ ಆಶೋಮ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳಪೆ ಕಾಮಗಾರಿ ಮತ್ತು ನದಿ ದಡದ ಬಳಿ ಇರುವ ಸ್ಥಳದಿಂದಾಗಿ ದುರಂತ ಸಂಭವಿಸಿದೆ ಎಂದು ಅಲ್ಲಿನ ಪ್ರಾದೇಶಿಕ ಸರ್ಕಾರ ಹೇಳಿದೆ. ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಶಾಲೆಗಳನ್ನು ಮುಚ್ಚುವಂತೆ ಇದೇ ವೇಳೆ ಸೂಚನೆ ಕೂಡಾ ನೀಡಿದೆ. ಮಾಹಿತಿ ಗೊತ್ತಾಗುತ್ತಿದ್ದಂತೆ ಹತ್ತಾರು ಗ್ರಾಮಸ್ಥರು ಶಾಲೆಯ ಬಳಿ ಜಮಾಯಿಸಿದರು. ಮಕ್ಕಳನ್ನು ಕಳೆದುಕೊಂಡ ಪೋಷಕರು ದುಃಖದಲ್ಲಿದ್ದರೆ, ಕೆಲವರ ಆಕ್ರಂದನ ಮುಗಿಲು ಮುಟ್ಟಿತ್ತು. ಕೆಲವರು ಕಟ್ಟಡದ ಅವಶೇಷಗಳಡಿ ಸಿಲುಕಿ ಬದುಕುಳಿದವರ ನೆರವಿಗೆ ಮುಂದಾದರು.

ಆಫ್ರಿಕಾದ ಅತ್ಯಂತ ಜನನಿಬಿಡ ದೇಶವಾದ ನೈಜೀರಿಯಾದಲ್ಲಿ ಕಟ್ಟಡ ಕುಸಿತಗಳು ಸಾಮಾನ್ಯವಾಗುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಇಂತಹ ಡಜನ್‌ಗಿಂತಲೂ ಹೆಚ್ಚು ಘಟನೆಗಳು ದಾಖಲಾಗಿವೆ. ಕಟ್ಟಡದ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಲು ವಿಫಲವಾದ ಮತ್ತು ಕಳಪೆ ನಿರ್ವಹಣೆಯನ್ನು ತಡೆಗಟ್ಟಲು ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಅಲ್ಲಿನ ಜನರು ದೂಷಿಸಿದ್ದಾರೆ.

ಇದನ್ನು ಓದಿ: ನೇಪಾಳದಲ್ಲಿ ಭಾರೀ ಭೂಕುಸಿತ: ಏಳು ಭಾರತೀಯರು ಸೇರಿ 65 ಜನ ನಾಪತ್ತೆ; ಭರದಿಂದ ಸಾಗಿದ ರಕ್ಷಣಾ ಕಾರ್ಯ - Nepal Landslide

ETV Bharat Logo

Copyright © 2025 Ushodaya Enterprises Pvt. Ltd., All Rights Reserved.