ETV Bharat / health

ವಿಶ್ವ ಆತ್ಮಹತ್ಯೆ ತಡೆ ದಿನ 2024: ಆತ್ಮಹತ್ಯೆಗಳಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ? - World Suicide Prevention Day

author img

By ETV Bharat Karnataka Team

Published : Sep 10, 2024, 4:54 AM IST

ಆತ್ಮಹತ್ಯೆ ಆಲೋಚನೆಗಳನ್ನು ತಡೆಯುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 10 ಅನ್ನು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದ ಇತಿಹಾಸ ಮತ್ತು ಮಹತ್ವ, ಈ ವರ್ಷದ ಥೀಮ್ ಕುರಿತ ಸಂಪೂರ್ಣ ವರದಿ ಇಲ್ಲಿದೆ ನೋಡಿ.

ವಿಶ್ವ ಆತ್ಮಹತ್ಯೆ ತಡೆ ದಿನ
ವಿಶ್ವ ಆತ್ಮಹತ್ಯೆ ತಡೆ ದಿನ (ETV Bharat)

ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರು ಸಣ್ಣಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವವರ ಮನಃ ಪರಿವರ್ತನೆ ಮಾಡಲು ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ 10 ಅನ್ನು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ದಿನದ ಇತಿಹಾಸ ಮತ್ತು ಮಹತ್ವ: ವಿಶ್ವ ಆತ್ಮಹತ್ಯೆ ತಡೆ ದಿನವನ್ನು (WSPD) 2003 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ (WHO)ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಸೂಸೈಡ್ ಪ್ರಿವೆನ್ಷನ್ ಪ್ರಾರಂಭಿಸಿತು. ಆತ್ಮಹತ್ಯೆಗಳನ್ನು ತಡೆಗಟ್ಟಬಹುದು ಎಂಬ ಸ್ಪಷ್ಟ ಸಂದೇಶವನ್ನು ಈ ದಿನ ನೀಡುತ್ತದೆ.

ಆತ್ಮಹತ್ಯೆಯು ಸಾಮಾಜಿಕ, ಭಾವನಾತ್ಮಕ ಮತ್ತು ಆರ್ಥಿಕ ಪರಿಣಾಮಗಳನ್ನು ಹೊಂದಿರುವ ಪ್ರಮುಖ ಸಾರ್ವಜನಿಕ ಸಮಸ್ಯೆಯಾಗಿದೆ. ಆತ್ಮಹತ್ಯೆಯು ಒಂದು ನಿರ್ಣಾಯಕ ಜಾಗತಿಕ ಸಮಸ್ಯೆಯಾಗಿ ಉಳಿದಿದ್ದು, ಇದು ವಿಶ್ವಾದ್ಯಂತ ಕುಟುಂಬ ಮತ್ತು ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ.

ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಸೂಸೈಡ್ ಪ್ರಿವೆನ್ಷನ್ (IASP) ಲಾಭರಹಿತ ಸಂಸ್ಥೆಯಾಗಿದ್ದು, ಇದು ಆತ್ಮಹತ್ಯೆ ಮತ್ತು ಆತ್ಮಹತ್ಯಾ ನಡವಳಿಕೆಯನ್ನು ತಡೆಗಟ್ಟಲು ಹಾಗೂ ಅದರ ಪರಿಣಾಮಗಳನ್ನು ನಿವಾರಿಸಲು ಸಮರ್ಪಿತವಾಗಿದೆ. ಎಸ್​ಎಎಸ್​ಪಿಯೂ ಆತ್ಮಹತ್ಯೆ ತಡೆಗಟ್ಟುವಲ್ಲಿ ಜಾಗತಿಕವಾಗಿ ಪ್ರಮುಖ ಪಾತ್ರ ವಹಿಸುತ್ತಿದೆ.

ಆತ್ಮಹತ್ಯೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜು: ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿ ವರ್ಷ 700,000 ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಪ್ರಪಂಚದಲ್ಲಿನ ಎಲ್ಲ ಆತ್ಮಹತ್ಯೆಗಳ ಪೈಕಿ ಸುಮಾರು ಶೇ. 77 ದಷ್ಟು ಆತ್ಮಹತ್ಯೆಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ (ಎಲ್ಎಂಐಸಿ) ಸಂಭವಿಸುತ್ತವೆ ಎಂದು ಅಂದಾಜಿಸಿದೆ. ಆತ್ಮಹತ್ಯೆ ಪ್ರಮಾಣವನ್ನು ಕಡಿಮೆ ಮಾಡುವುದು ಜಾಗತಿಕ ಪ್ರಾಮುಖ್ಯತೆ ಪಡೆದಿದೆ.

ಈ ವರ್ಷದ ಥೀಮ್ ಏನು?: ಈ ವರ್ಷದ ವಿಶ್ವ ಆತ್ಮಹತ್ಯೆ ತಡೆ ದಿನದ ಥೀಮ್ -'ಆತ್ಮಹತ್ಯೆ ಮೇಲಿನ ನಿರೂಪಣೆಯನ್ನು ಬದಲಾಯಿಸುವುದು - ಸಂಭಾಷಣೆಯನ್ನು ಪ್ರಾರಂಭಿಸುವುದು'( Changing the Narrative on Suicide -Start the Conversation) ಎಂಬುದಾಗಿದೆ.

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಉತ್ತೇಜಿಸಲು ಬಿಎಚ್​ಯು ಅಭಿಯಾನ: ಸೆಪ್ಟೆಂಬರ್ 4 ರಂದು, ಪ್ರತಿಷ್ಠಿತ ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU) ಆತ್ಮಹತ್ಯೆ ತಡೆ ದಿನಕ್ಕೆ ಸಂಬಂಧಿಸಿದಂತೆ ಒಂದು ವಾರದ ಅಭಿಯಾನವನ್ನು ಪ್ರಾರಂಭಿಸಿದೆ. ಆತ್ಮಹತ್ಯೆ ಕುರಿತು ಜಾಗೃತಿ ಮೂಡಿಸಲು ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಉತ್ತೇಜಿಸುವ ಗುರಿಯೊಂದಿಗೆ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಇದನ್ನು ಆರಂಭಿಸಲಾಗಿದೆ.

ಅಭಿಯಾನವು ಪೋಸ್ಟರ್-ಮೇಕಿಂಗ್, ಓಪನ್ ಮೈಕ್ ಸೆಷನ್‌ಗಳು, ಸ್ಲೋಗನ್ ಬರವಣಿಗೆ, ಸಂವಾದ, ನಾಟಕ ಮತ್ತು ಥೀಮ್‌ಗೆ ಹೊಂದಿಕೆಯಾಗುವ ಇತರ ಈವೆಂಟ್‌ಗಳು ಸೇರಿದಂತೆ ಹಲವಾರು ಚಟುವಟಿಕೆಗಳನ್ನು ಒಳಗೊಂಡಿದೆ.

ವಿಶ್ವದಲ್ಲೇ ಅತಿ ಹೆಚ್ಚು ಆತ್ಮಹತ್ಯೆಗಳು ಪ್ರಕರಣಗಳು ದಾಖಲಾಗಿರುವುದು ಭಾರತದಲ್ಲಿಯೇ: ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಅಂಶಗಳ ಪ್ರಕಾರ, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಆತ್ಮಹತ್ಯೆಗಳೊಂದಿಗೆ ಕುಖ್ಯಾತಿ ಗಳಿಸಿದೆ.

ಎನ್‌ಸಿಆರ್‌ಬಿ ಅಂಕಿ- ಅಂಶಗಳ ಪ್ರಕಾರ, ಭಾರತದಲ್ಲಿ 2022 ರಲ್ಲಿ 1.71 ಲಕ್ಷ ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು 2021ಕ್ಕೆ ಹೋಲಿಸಿದರೆ ಶೇಕಡಾ 4.2 ರಷ್ಟು ಮತ್ತು 2018ಕ್ಕೆ ಹೋಲಿಸಿದರೆ ಶೇಕಡಾ 27 ರಷ್ಟು ಹೆಚ್ಚಾಗಿದೆ. ಆತ್ಮಹತ್ಯೆಯಿಂದ ಸಾಯುವ ಸುಮಾರು 50 ರಿಂದ 90 ರಷ್ಟು ವ್ಯಕ್ತಿಗಳು ಖಿನ್ನತೆ, ಆತಂಕ ಮತ್ತು ಬೈಪೋಲಾರ್ ಡಿಸಾರ್ಡರ್‌ ನಂತಹ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸಿವೆ.

ಆತ್ಮಹತ್ಯೆಗೆ ಪ್ರಮುಖ ಕಾರಣಗಳು: ಕೌಟುಂಬಿಕ ಸಮಸ್ಯೆಗಳು, ಕೌಟುಂಬಿಕ ಹಿಂಸೆ, ಅನಾರೋಗ್ಯ, ಮಾದಕ ವ್ಯಸನ/ಮದ್ಯ ವ್ಯಸನ, ವಿವಾಹ ಸಂಬಂಧಿತ ಸಮಸ್ಯೆಗಳು, ಪ್ರೇಮ ವ್ಯವಹಾರಗಳು, ಸಾಲ, ಪರೀಕ್ಷೆಯಲ್ಲಿ ಅನುತ್ತೀರ್ಣ, ನಿರುದ್ಯೋಗ, ವೃತ್ತಿಪರ ಮತ್ತು ವೃತ್ತಿ ಸಮಸ್ಯೆಗಳು, ಆಸ್ತಿ ವಿವಾದ, ಆತ್ಮೀಯ ವ್ಯಕ್ತಿಯ ಸಾವು, ಬಡತನ, ಅಕ್ರಮ ಸಂಬಂಧಗಳು ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿವೆ.

ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು: ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿ 1,834 ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ನಂತರದಲ್ಲಿ ಮಧ್ಯಪ್ರದೇಶದಲ್ಲಿ 1,308 ಮತ್ತು ತಮಿಳುನಾಡಿನಲ್ಲಿ 1,246 ವಿದ್ಯಾರ್ಥಿಗಳ ಆತ್ಮಹತ್ಯೆಗಳು ಸಂಭವಿಸಿವೆ. 2021 ರಲ್ಲಿ ಒಟ್ಟು 13,089 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು 2020 ರಲ್ಲಿ 12,526 ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗಿಂತ ಹೆಚ್ಚಾಗಿದೆ. ಇವರಲ್ಲಿ 43.49% ವಿದ್ಯಾರ್ಥಿನಿಯರು ಮತ್ತು 56.51% ವಿದ್ಯಾರ್ಥಿಗಳಾಗಿದ್ದಾರೆ.

ಸೇನೆಗಳಲ್ಲಿ ಆತ್ಮಹತ್ಯೆ ಪ್ರಕರಣಗಳು: 2014 ಮತ್ತು 2021 ರ ನಡುವೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಒಟ್ಟು 787 ಸೈನಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸೇನೆಗಳಲ್ಲಿ ಆತ್ಮಹತ್ಯೆ ತಡೆಗಟ್ಟಲು ಸರ್ಕಾರದ ಕ್ರಮಗಳು: ಸರ್ಕಾರವು ನೀಡಿದ ಅನುದಾನದಿಂದ ಸೈನಿಕರ ಜೀವನ ಮಟ್ಟವನ್ನು ಗುಣಾತ್ಮಕ ಸುಧಾರಣೆ ಮಾಡಲಾಗಿದೆ. ವಿಶೇಷ ಚೇತನರ ಸಬಲೀಕರಣ ಇಲಾಖೆಯ (ಡಿಇಪಿಡಬ್ಲ್ಯೂಡಿ) 24x7 ಟೋಲ್-ಫ್ರೀ ಸಂಖ್ಯೆ 18005990019 ಅನ್ನು ಪ್ರಾರಂಭಿಸಿದೆ. ಇದರಿಂದ ಸೇನಾ ಸಿಬ್ಬಂದಿ ಸಮಾಲೋಚನೆಗಾಗಿ ಮನಶ್ಶಾಸ್ತ್ರಜ್ಞರನ್ನು ಸಂಪರ್ಕಿಸಬಹುದು. ಸೈನಿಕರು ಎದುರಿಸುತ್ತಿರುವ ಒತ್ತಡವನ್ನು ಕಡಿಮೆ ಮಾಡಲು ಬೆಳಗಿನ ಜಾವ ಯೋಗ ತರಗತಿ ಆಯೋಜಿಸಲು ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: ಶಂಕಿತ ವ್ಯಕ್ತಿಯಲ್ಲಿ ಎಂಪಾಕ್ಸ್​ ವೈರಸ್​ ದೃಢ: ಆದರೆ ಮಾರಕವಲ್ಲದ ಕ್ಲಾಡ್​​ -2 ಮಾದರಿ: ಕೇಂದ್ರ ಸರ್ಕಾರ - Mpox virus confirmed

ETV Bharat Logo

Copyright © 2024 Ushodaya Enterprises Pvt. Ltd., All Rights Reserved.