ETV Bharat / health

ಜನರನ್ನು ಆತಂಕಕ್ಕೆ ದೂಡುತ್ತಿವೆ ಸ್ಮಾರ್ಟ್​ವಾಚ್​ನಂತಹ ಸಾಧನಗಳು - smartwatches can cause anxiety - SMARTWATCHES CAN CAUSE ANXIETY

ಧರಿಸಬಹುದಾದ ಸಾಧನಗಳು ವಿಶೇಷವಾಗಿ ವೈದ್ಯಕೀಯ ದರ್ಜೆಯ ಸಾಧನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳವಣಿಗೆ ಕಾಣುತ್ತಿವೆ. ವಿಶೇಷವಾಗಿ ಯುವ ಪೀಳಿಗೆ ತಮ್ಮ ಆರೋಗ್ಯ ಮಾಹಿತಿ ದಾಖಲಿಸಲು ಇವುಗಳಿಗೆ ಪ್ರಾಶಸ್ತ್ಯ ನೀಡುತ್ತಾರೆ.

Wearable devices users experiencing anxiety
ಸಾಂದರ್ಭಿಕ ಚಿತ್ರ (GETTY IMAGE)
author img

By ETV Bharat Karnataka Team

Published : Aug 10, 2024, 5:55 PM IST

ನವದೆಹಲಿ: ಇತ್ತೀಚಿನ ದಿನದಲ್ಲಿ ಜಗತ್ತು ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಿದೆ. ಜನರು ತಮ್ಮ ಆರೋಗ್ಯದ ಗುರಿ ಸಾಧಿಸಲು ಸ್ಮಾರ್ಟ್​ವಾಚ್​ ಮೊರೆ ಹೋಗುತ್ತಾರೆ. ಆದರೆ, ಇದು ಗೊತ್ತಿಲ್ಲದೇ ಆತಂಕ ಹೆಚ್ಚಿಸುತ್ತದೆ.

ಧರಿಸಬಹುದಾದ ಸಾಧನಗಳು ವಿಶೇಷವಾಗಿ ವೈದ್ಯಕೀಯ ದರ್ಜೆಯ ಸಾಧನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳವಣಿಗೆ ಕಾಣುತ್ತಿವೆ. ವಿಶೇಷವಾಗಿ ಯುವ ಪೀಳಿಗೆಯ ಜನರು ತಮ್ಮ ಆರೋಗ್ಯ ಮಾಹಿತಿ ದಾಖಲಿಸಲು ಇವುಗಳ ಮೊರೆಹೋಗುತ್ತಿದ್ದಾರೆ.

ಜರ್ನಲ್ ಆಫ್ ದಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನ ಪ್ರಕಾರ, ಅನಿಯಮಿತ ಹೃದಯ ಬಡಿತ ಅಥವಾ ಹೃತ್ಕರ್ಣದ ಕಂಪನ ಹೊಂದಿರುವ ರೋಗಿಗಳು ಧರಿಸಬಹುದಾದ ಸಾಧನವನ್ನು ಬಳಸುತ್ತಾರೆ ಎಂದು ತಿಳಿದುಬಂದಿದೆ.

ಧರಿಸಬಹುದಾದ ಸಾಧನಗಳಲ್ಲಿ ಬಳಕೆದಾರರು ರೋಗಲಕ್ಷಣದ ಮೇಲ್ವಿಚಾರಣೆ, ಕಾಳಜಿ ಮತ್ತು ಹೆಚ್ಚಿನ ಚಿಕಿತ್ಸೆ ಬಗ್ಗೆ ಕಾಳಜಿಯ ದರ ಹೆಚ್ಚಿರುತ್ತದೆ ಎಂದು ವರದಿಯಾಗಿದೆ. ಶೇ 20ರಷ್ಟು ಧರಿಸಬಹುದಾದ ಸಾಧನಗಳ ಬಳಕೆದಾರರಲ್ಲಿ ಆತಂಕದ ಅನುಭವ ಕಂಡು ಬಂದಿದೆ. ಇದಕ್ಕೆ ಕಾರಣ ಅನಿಯಮಿತ ಹೃದಯ ಬಡಿತದ ನೋಟಿಫಿಕೇಶನ್​ಗಳಾಗಿದೆ. ಈ ಬಳಕೆದಾರರು ಇಸಿಜಿ, ಎಕೋಕಾರ್ಡಿಯೋಗ್ರಾಮ್ಸ್​, ಎಫ್​​ ಅಬ್ಲಷನ್​ನಂತಹ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.

ಆಪಲ್​ ಮತ್ತು ಫಿಟ್​ಬಿಟ್​ನಂತಹ ಧರಿಸಬಹುದಾದ ಸಾಧನಗಳು ಆರೋಗ್ಯ ನಿರ್ವಹಣೆಯಲ್ಲಿ ಜನಪ್ರಿಯತೆ ಪಡೆದಿವೆ. ಆದರೂ ಅವುಗಳು ಆತಂಕವನ್ನು ಮೂಡಿಸುತ್ತಿವೆ. ಕಾರಣ ಮಾಹಿತಿಯನ್ನು ಪರಿಶೀಲಿಸದೆ ನೀಡುತ್ತಿವೆ.

ಧರಿಸಬಹುದಾದ ಸಾಧನಗಳು ಆರೋಗ್ಯ ನಿರ್ವಹಣೆಗೆ ಆಕರ್ಷಕರ ಆಯ್ಕೆಯಾಗಿವೆ. ಆದಾಗ್ಯೂ, ಇವು ಕೆಲವು ಬಳಕೆದಾರರಲ್ಲಿ ಆತಂಕ ಮೂಡಿಸುತ್ತಿವೆ. ಅದರಲ್ಲೂ ಯುವ ಜನತೆಯು ಇಂತಹ ಪರಿಶೀಲಿಸದ ಮಾಹಿತಿಯ ಅಡ್ಡ ಪರಿಣಾಮಗಳನ್ನು ಅರಿತುಕೊಳ್ಳುವುದಿಲ್ಲ. ಅವರು ಎಲ್ಲವನ್ನೂ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಈ ಯಂತ್ರಗಳು ಅತಿ ಹೆಚ್ಚಿನ ಡೇಟಾವನ್ನು ಅರ್ಥೈಸಲು ಹೆಚ್ಚಿನ ವ್ಯಕ್ತಿಗಳಿಗೆ ಜ್ಞಾನ ಅಥವಾ ಸರಿಯಾದ ದೃಷ್ಟಿಕೋನ ಹೊಂದಿಲ್ಲ ಎಂದು ಫೋರ್ಟಿಸ್​ ಮೆಮೋರಿಯಲ್​ ಇನ್ಸುಟಿಟ್ಯೂಟ್​ ಹಿರಿಯ ನಿರ್ದೇಶಕ ವಿನಯ್​ ಅಗರ್ವಾಲ್​ ತಿಳಿಸಿದ್ದಾರೆ.

ಹೃದಯದ ಏರಿಳಿತ ಸಾಮಾನ್ಯ ಕಾಳಜಿ ವಿಷಯವಾಗಿದ್ದು, ಇದು ಆತಂಕ ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಅಧಿಕ ಸೂಕ್ಷ್ಮತೆ ಹೊಂದಿರುವ ಜನರು ಇದರಿಂದ ಆಘಾತಕ್ಕೆ ಒಳಗಾಗಿ ಇಸಿಜಿ, ಇಸಿಹೆಚ್ಒ, ಸಿಟಿ ಕಾರ್ನೊರಿ ಅಂಜಿಯೋಗ್ರಾಮನಂತಹ ವೈದ್ಯಕೀಯ ಸಲಹೆಗಳಿಗೆ ಮುಂದಾಗುತ್ತಾರೆ ಎಂದಿದ್ದಾರೆ.

ಈ ಸಾಧನಗಳು ಸರಿಯಿಲ್ಲ ಎಂದು ಹೇಳುವುದಿಲ್ಲ. ಬಳಕೆದಾರ ಅತಿಯಾದ ಬಳಕೆ ಜೊತೆಗೆ ಈ ಕುರಿತು ಜ್ಞಾನವನ್ನು ಹೊಂದಿರಬೇಕು ಎಂದು ತಜ್ಞರ ಎಚ್ಚರಿಕೆ ನೀಡಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: 2024ರಲ್ಲಿ ಸ್ಮಾರ್ಟ್​ವಾಚ್​ ಮಾರಾಟ ಶೇ 17ರಷ್ಟು ಹೆಚ್ಚಳ ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.