ಚಂಡೀಗಢ: ಎಲ್ಲ ವಯೋಮಾನದವರಿಗೂ ಪ್ರಯೋಜನಕಾರಿಯಾದ ವ್ಯಾಯಾಮ ಎಂದರೆ ಅದು ವ್ಯಾಯಾಮ. ಅದರಲ್ಲೂ ಗರ್ಭಿಣಿಯರಿಗೆ ಇದರಿಂದ ವಿಶೇಷ ಪ್ರಯೋಜನ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಸಂದರ್ಭದಲ್ಲಿ ಗರ್ಭಿಣಿಯರು ಭಾರಿ ವ್ಯಾಯಾಮ ಮಾಡಬಾರದು ಎಂಬ ಸಲಹೆ ನೀಡಿರುವ ಹಿನ್ನೆಲೆ ವಾಕಿಂಗ್ ತಾಯಿಯ ಆರೋಗ್ಯ ಮತ್ತು ಫಿಟ್ನೆಸ್ ನಿರ್ವಹಣೆ ಮಾಡುವಲ್ಲಿ ಉತ್ತಮ ಆಯ್ಕೆಯಾಗಿದೆ.
ಇದೀಗ ಮೂಡುತ್ತಿರುವ ಪ್ರಶ್ನೆ ಎಂದರೆ, ಗರ್ಭಿಣಿಯರು ಎಷ್ಟು ದೂರ ವಾಕ್ ಮಾಡಬಹುದು. ಎಷ್ಟು ಸಮಯದ ವಾಕ್ ಅವರನ್ನು ಚಟುವಟಿಕೆಯಿಂದ ಇರಿಸಲು ಸಹಾಯ ಎಂಬುದಾಗಿದೆ. ಈ ಕುರಿತು ಚಂಡೀಗಢದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆಯ ಸ್ತ್ರಿರೋಗ ತಜ್ಞೆ ಡಾ ಭಾರ್ತಿ ಜೋಶಿ ಈ ಟಿವಿ ಭಾರತ್ನೊಂದಿಗೆ ಮಾತನಾಡಿದ್ದಾರೆ.
ತಮ್ಮ ಆರೋಗ್ಯದ ಜೊತೆಗೆ ಮಗುವಿನ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಗರ್ಭಿಣಿಯರು ವಾಕ್ ಮಾಡುವುದು ಉತ್ತಮ. ಅವರು ಬೆಳಗ್ಗೆ ಮತ್ತು ಸಂಜೆ ವಾಕ್ ಮಾಡುವುದು ಅಗತ್ಯ. ವ್ಯಾಯಾಮಕ್ಕಿಂತ ವಾಕಿಂಗ್ ಅವರನ್ನು ಉತ್ಸಾಹದಿಂದ ಇರುವಲ್ಲಿ ಸಹಾಯ ಮಾಡುವ ಜೊತೆಗೆ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ಡಾ ಜೋಶಿ.
ಸಮಸ್ಯೆ ಕಡಿಮೆ: ವಾಕಿಂಗ್ ಗರ್ಭಿಣಿಯರಲ್ಲಿ ಬೆನ್ನು ನೋವು, ಕಾಲಿನ ಸೆಳೆತ ಮತ್ತು ಊತದಂತಹ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಗರ್ಭಿಣಿಯರಲ್ಲಿನ ಮಧುಮೇಹ ಅಪಾಯವನ್ನು ವಾಕಿಂಗ್ ಅಥವಾ ಜಾಗಿಂಗ್ ಕಡಿಮೆ ಮಾಡುತ್ತದೆ. ಜೊತೆಗೆ ಅಧಿಕ ರಕ್ತದೊತ್ತಡ ಮತ್ತು ಸಿಸೇರಿಯನ್ ಹೆರಿಗೆ ಅಪಾಯವನ್ನು ಕಡಿಮೆ ಮಾಡುವಲ್ಲಿ ವಾಕಿಂಗ್ ಸಹಾಯಕವಾಗಿದೆ ಎಂದಿದ್ದಾರೆ ವೈದ್ಯರು.
ಗರ್ಭಾವಸ್ಥೆಯ ಯಾವುದೇ ಹಂತದಲ್ಲಿ ವಾಕಿಂಗ್ ಮಾಡಬಹುದಾಗಿದ್ದು, ಇದು ಹೆಚ್ಚಿನ ಪ್ರಯೋಜನಕಾರಿಯಾಗಿದೆ. ಬೆಳಗ್ಗಿನ ಹೊತ್ತು ಮಾಲಿನ್ಯ ಕಡಿಮೆ ಇದ್ದು, ಈ ಸಮಯದಲ್ಲಿ ವಾಕ್ ಮಾಡುವುದು ಉತ್ತಮ. ಆರಂಭದಲ್ಲಿ ಗರ್ಭಿಣಿಯರು ತಮ್ಮ ಫಿಟ್ನೆಸ್ ಮಟ್ಟ ಅರಿತು ಅದಕ್ಕೆ ಅನುಗುಣವಾಗಿ ವಾಕಿಂಗ್ ರೂಢಿಸಿಕೊಳ್ಳಬೇಕು.
ಒಮ್ಮೆ ಗರ್ಭಾವಸ್ಥೆಯ ಸಂದರ್ಭದಲ್ಲಿ ವಾಕಿಂಗ್ ಅಭ್ಯಾಸ ಶುರು ಮಾಡಿದರೆ, ಅದನ್ನು ನಿಧಾನವಾಗಿ ಹೆಚ್ಚಿಸುತ್ತಾ ಬರಬೇಕು. ಆರಂಭದಲ್ಲಿ ನಿತ್ಯ 10 ರಿಂದ 15 ನಿಮಿಷ ವಾಕಿಂಗ್ ಆರಂಭಿಸಿದರೆ, ಅದನ್ನು ನಿತ್ಯ 5 ನಿಮಿಷಕ್ಕೆ ಹೆಚ್ಚಿಸಬೇಕು. ವಾಕಿಂಗ್ ಅಭ್ಯಾಸವಾದ ಬಳಿಕ ದಿನಕ್ಕೆ 30 ರಿಂದ 40 ನಿಮಿಷದ ವಾಕಿಂಗ್ ಮಾಡುವುದು ಸಾಕಾಗಲಿದೆ. ಗರ್ಭಾವಸ್ಥೆಯ ಆರಂಭ ಮತ್ತು ಕೊನೆಯ ತ್ರೈಮಾಸಿಕ ಹಂತದಲ್ಲಿ ನಿಧಾನದ ನಡಿಗೆ ಇರಲಿ. ಜೊತೆಗೆ ವಾಕಿಂಗ್ ಮಾಡುವ ಸ್ಥಳ ಸಮತಟ್ಟದ ನೆಲ ಮತ್ತು ಶುದ್ಧವಾಗಿರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ನಿಧಾನಗತಿಯ ನಡಿಗೆ ದಿನ: ಇದರ ಮಹತ್ವ ಮತ್ತು ಆರೋಗ್ಯದ ಲಾಭಗಳು ಅನೇಕ