ETV Bharat / health

ಒಂದೇ ರೀತಿ ಚಟ್ನಿ ತಿಂದು ಬೋರ್​ ಅನಿಸಿದ್ರೆ, ಟ್ರೈ ಮಾಡಿ ಟೇಸ್ಟಿ ಟೊಮೆಟೊ - ಕೊಬ್ಬರಿ ಚಟ್ನಿ - Tomato Coconut Chutney - TOMATO COCONUT CHUTNEY

ಅನೇಕ ಜನರು ಬೆಳಗಿನ ಉಪಾಹಾರಕ್ಕಾಗಿ ಕೊಬ್ಬರಿ ಚಟ್ನಿಯನ್ನು ಮಾಡುತ್ತಿರುತ್ತಾರೆ. ಯಾವಾಗಲೂ ಒಂದೇ ರೀತಿ ಚಟ್ನಿ ಅಲ್ಲದೆ, ಈ ಬಾರಿ ಕೊಬ್ಬರಿ ಮತ್ತು ಟೊಮೆಟೊ ಚಟ್ನಿ ಮಾಡಿ. ಇದರ ರುಚಿ ಸೂಪರ್ ಆಗಿ ಇರುತ್ತದೆ. ಹಾಗಾದರೆ ಈ ಚಟ್ನಿಯನ್ನು ಹೇಗೆ ತಯಾರಿಸಬೇಕೆಂಬ ವಿವರ ಇಲ್ಲಿದೆ ನೋಡಿ.

ಟೊಮೆಟೊ ಕೊಬ್ಬರಿ ಚಟ್ನಿ
ಟೊಮೆಟೊ ಕೊಬ್ಬರಿ ಚಟ್ನಿ (ETV Bharat)
author img

By ETV Bharat Karnataka Team

Published : Sep 11, 2024, 6:02 PM IST

ಬೆಳಗ್ಗೆಯ ಟಿಫನ್​ನಲ್ಲಿ ಕೊಬ್ಬರಿ ಚಟ್ನಿ ಸವಿಯಲು ಅನೇಕರು ಇಷ್ಟಪಡುತ್ತಾರೆ. ಇಂತಹವರು ಯಾವಾಗಲೂ ಒಂದೇ ರೀತಿಯ ಚಟ್ನಿ ಅಲ್ಲದೆ ಈ ಬಾರಿ ಸ್ವಲ್ಪ ವೆರೈಟಿ ಚಟ್ನಿ ಟ್ರೈ ಮಾಡಿ. ಅದಕ್ಕಾಗಿ ನಾವು ನಿಮಗೋಸ್ಕರ ಹೊಸ 'ಟೊಮೆಟೊ - ಕೊಬ್ಬರಿ ಚಟ್ನಿ' ರೆಸಿಪಿಯ ಪರಿಚಯ ಮಾಡಿಕೊಡುತ್ತಿದ್ದೇವೆ. ಕೆಲವೇ ಪದಾರ್ಥಗಳಿಂದ ಕಡಿಮೆ ಸಮಯದಲ್ಲಿ ಈ ಚಟ್ನಿಯನ್ನು ಸುಲಭವಾಗಿ ತಯಾರಿಸಬಹುದು. ಜೊತೆಗೆ ಇದರ ರುಚಿಯೂ ಅದ್ಭುತವಾಗಿರುತ್ತದೆ. ಹಾಗಾದರೆ ಈ ಚಟ್ನಿ ತಯಾರಿಸಲು ಬೇಕಾಗುವ ಪದಾರ್ಥಗಳು ಯಾವುವು? ತಯಾರಿ ಹೇಗೆ? ಎಂಬ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ..

ಬೇಕಾಗುವ ಪದಾರ್ಥಗಳು:

  • ಟೊಮೆಟೊ - 300 ಗ್ರಾಂ
  • ಎಣ್ಣೆ - 4 ಟೀ ಸ್ಪೂನ್
  • ಸಾಸಿವೆ - 1 ಟೀ ಸ್ಪೂನ್
  • ಜೀರಿಗೆ - 1 ಟೀ ಸ್ಪೂನ್
  • ಕಡಲೆಬೀಜ - 1 ಟೀ ಸ್ಪೂನ್
  • ಉದ್ದಿನ ಬೇಳೆ - 1 ಟೀ ಸ್ಪೂನ್
  • ಒಣ ಮೆಣಸಿನಕಾಯಿ - 6
  • ಹಸಿ ಮೆಣಸಿನಕಾಯಿ - 6
  • ಕರಿಬೇವಿನ ಎಲೆ - ಸ್ವಲ್ಪ
  • ಹಸಿ ಕೊಬ್ಬರಿ ತುಂಡುಗಳು - 1 ಕಪ್
  • ಉಪ್ಪು - ರುಚಿಗೆ ತಕ್ಕಷ್ಟು
  • ಹುಣಸೆಹಣ್ಣು - ಸ್ವಲ್ಪ

ಒಗ್ಗರಣೆಗೆ ಬೇಕಾಗುವ ಪಾದರ್ಥಗಳು:

  • ಎಣ್ಣೆ - 1 ಟೀ ಚಮಚ
  • ಜೀರಿಗೆ - 1 ಟೀ ಚಮಚ
  • ಸಾಸಿವೆ - 1 ಟೀ ಚಮಚ
  • ಕರಿಬೇವಿನ ಎಲೆಗಳು - ಸ್ವಲ್ಪ

ತಯಾರಿಸುವ ವಿಧಾನ:

  • ಮೊದಲು ಟೊಮೆಟೊ ಮತ್ತು ಹಸಿ ಕೊಬ್ಬರಿಯನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕಟ್​ ಮಾಡಿಟ್ಟುಕೊಳ್ಳಿ.
  • ಈಗ ಒಲೆಯ ಮೇಲೆ ಬಾಣಲೆ ಇಟ್ಟು ಎರಡು ಚಮಚ ಎಣ್ಣೆ ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದಾಗ ಸಾಸಿವೆ, ಜೀರಿಗೆ, ಕಡಲೆಬೀಜ, ಉದ್ದಿನಬೇಳೆ ಮತ್ತು ಒಣ ಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿದುಕೊಳ್ಳಬೇಕು.
  • ಚೆನ್ನಾಗಿ ಹುರಿದುಕೊಂಡ ನಂತರ ಅದಕ್ಕೆ ಖಾರವಾದ ಹಸಿ ಮೆಣಸಿನಕಾಯಿ ತುಂಡುಗಳನ್ನು ಹಾಕಿ ಮತ್ತೊಮ್ಮೆ ಫ್ರೈ ಮಾಡಿಕೊಳ್ಳಬೇಕು. ನಂತರ ಕರಿಬೇವಿನ ಎಲೆಗಳನ್ನು ಹಾಕಿ ಸ್ವಲ್ಪ ಹುರಿದುಕೊಳ್ಳಬೇಕು.
  • ಈಗ ಕತ್ತರಿಸಿದ ಕೊಬ್ಬರಿ ತುಂಡುಗಳನ್ನು ಹಾಕಿ ಮೂರು ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಬೇಕು.
  • ನಂತರ ಆ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪಕ್ಕದಲ್ಲಿ ಇರಿಸಿಕೊಳ್ಳಬೇಕು.
  • ಆ ನಂತರ ಅದೇ ಬಾಣಲೆಯಲ್ಲಿ ಎರಡು ಟೀ ಸ್ಪೂನ್​ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಆಯಿಲ್ ಸ್ವಲ್ಪ ಬಿಸಿಯಾದಾಗ .. ಕಟ್ ಮಾಡಿ ಇಟ್ಟುಕೊಂಡಿದ್ದ ಟೊಮೆಟೊ ತುಂಡುಗಳನ್ನು ಹಾಕಿ ಬೇಯಿಸಬೇಕು.
  • ಟೊಮೆಟೊ ತುಂಡುಗಳನ್ನು ಚೆನ್ನಾಗಿ ಬೇಯಿಸಿಕೊಂಡ ನಂತರ ಒಲೆ ಆಫ್ ಮಾಡಿ. ತದನಂತರ ಅದನ್ನು ಮೊದಲೇ ಮಿಕ್ಸಿ ಜಾರ್‌ಗೆ ಹಾಕಿ ಇಟ್ಟುಕೊಂಡಿದ್ದ ಕೊಬ್ಬರಿ ಮಿಶ್ರಣಕ್ಕೆ ಸೇರಿಸಿ.
  • ಹಾಗೆಯೇ ಉಪ್ಪು, ಹುಣಸೆಹಣ್ಣು, ಸ್ವಲ್ಪ ನೀರು ಹಾಕಿ ಮೆತ್ತಗೆ ಗ್ರೈಂಡ್​ ಮಾಡಬೇಕು. ಅನಂತರ ಚಟ್ನಿಗೆ ಒಗ್ಗರಣೆ ಹಾಕಿಕೊಳ್ಳಬೇಕು.
  • ಇದಕ್ಕಾಗಿ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಅದು ಬಿಸಿಯಾದ ನಂತರ ಜೀರಿಗೆ, ಸಾಸಿವೆ ಮತ್ತು ಕರಿಬೇವಿನ ಎಲೆ ಹಾಕಿ ಹುರಿಯಿರಿ.
  • ಒಗ್ಗರಣೆ ತಯಾರಾದ ನಂತರ ಗ್ರೈಂಡ್​ ಮಾಡಿಕೊಂಡ ಚಟ್ನಿಗೆ ಹಾಕಿ ಅಷ್ಟೇ.. ತುಂಬಾ ರುಚಿಕರವಾದ " ಟೊಮೆಟೊ - ಕೊಬ್ಬರಿ ಚಟ್ನಿ" ರೆಡಿ
  • ಈ ಚಟ್ನಿಯನ್ನು ದೋಸೆ, ವಡೆ ಅಷ್ಟೇ ಅಲ್ಲದೆ ಅನ್ನದೊಂದಿಗೆ ತಿಂದರೂ ಟೇಸ್ಟ್​​ ಸೂಪರ್​ ಆಗಿ ಇರುತ್ತದೆ. ತಪ್ಪದೇ ಟ್ರೈ ಮಾಡಿ

ಇದನ್ನೂ ಓದಿ: ಹೋಟೆಲ್​ ಸ್ಟೈಲ್ ರುಚಿಕರ​ ಶೇಂಗಾ ಚಟ್ನಿ ತಯಾರಿಸಲು ಇಲ್ಲಿವೆ ಟಿಪ್ಸ್​ - PEANUT CHUTNEY TIPS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.